You are currently viewing ಚುನಾವಣೆಯ ಮಾಯಾಲೋಕವನ್ನು ತೆರೆದು ತೋರುವ ಹೊತ್ತಗೆ… – ಯುವಮೋರ್ಚಾದ ಸೂರಜ್ ಜೈನ್ ಮಾರ್ನಾಡ್ ಅವರ ಮಾತು

ಚುನಾವಣೆಯ ಮಾಯಾಲೋಕವನ್ನು ತೆರೆದು ತೋರುವ ಹೊತ್ತಗೆ… – ಯುವಮೋರ್ಚಾದ ಸೂರಜ್ ಜೈನ್ ಮಾರ್ನಾಡ್ ಅವರ ಮಾತು

ಲೇಖಕ ರಮೇಶ ದೊಡ್ಡಪುರ ಅವರ ಬಿಜೆಪಿ 25+1, ಕರ್ನಾಟಕದಲ್ಲಿ ಕಮಲ ಅರಳಿದ ಕತೆ, ಪುಸ್ತಕವನ್ನು ಓದಿ ಮುಗಿಸಿದೆ.

2018 ರ ವಿಧಾನಸಭಾ ಚುನಾವಣೆ ಮತ್ತು 2019 ರ ಲೋಕಸಭಾ ಚುನಾವಣೆಯ ಸಂಪೂರ್ಣ ಚಿತ್ರಣ ಅಚ್ಚುಕಟ್ಟಾಗಿ ಮೂಡಿ ಬಂದಿದೆ.

ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರ ಚುನಾವಣಾ ಪ್ರವಾಸ, ತಂತ್ರಗಾರಿಕೆ, “ಗೋವಾ ಮಾದರಿ – ಉತ್ತರ ಪ್ರದೇಶ ಮಾದರಿ = ಕರ್ನಾಟಕ”, ರಾಜ್ಯಾಧ್ಯಕ್ಷರಾಗಿದ್ದ ಬಿ ಎಸ್ ಯಡಿಯೂರಪ್ಪನವರ ಐತಿಹಾಸಿಕ ದಾಖಲೆಯ “ಪರಿವರ್ತನಾ ಯಾತ್ರೆ”, ಸಿದ್ದರಾಮಯ್ಯ ನವರ ಲಿಂಗಾಯತ ಪ್ರತ್ಯೇಕ ಧರ್ಮದ ಮಾಸ್ಟರ್ ಸ್ಟ್ರೋಕ್, ಬಿ ಎಲ್ ಸಂತೋಷ್ ಅವರ ಸಂಘಟನಾ ನೈಪುಣ್ಯ, ಇಡೀ ದೇಶದ ಗಮನ ಸೆಳೆದ ಮಂಡ್ಯದ “ನಿಖಿಲ್ ಎಲ್ಲಿದಿಯಪ್ಪ” ಬೆಂಗಳೂರು ನಾಯಕತ್ವದ ಪೈಪೋಟಿ, ಹಾಸನದಲ್ಲಿ ಅರಳಿದ ಕಮಲ, ಚಕ್ರವರ್ತಿ ಸೂಲಿಬೆಲೆ ಯವರ ಟೀಮ್ ಮೋದಿ, ಸೀಟು ಹಂಚಿಕೆ, ಘಟಾನುಘಟಿಗಳು ನೆಲಕಚ್ಚಿದ ರೀತಿ, ಸಮೀಕ್ಷೆ ಮತ್ತು ಸಾಮಾಜಿಕ ಜಾಲತಾಣದ ಮಹತ್ವ, ತಂತ್ರಜ್ಞಾನದ ಬಳಕೆ ಹೀಗೆ ಎಲ್ಲ ಚಿತ್ರಣ ನೈಜವಾಗಿ ಮೂಡಿಬಂದಿದೆ.

ಕನ್ನಡದ ಮಟ್ಟಿಗೆ ಚುನಾವಣೆಯ ಮಾಹಿತಿಯನ್ನು ನಿಖರವಾಗಿ, ಅತ್ಯುತ್ತಮವಾಗಿ ಲೇಖಕರು ಒದಗಿಸಿದ್ದಾರೆ. ವಿಶೇಷ ಅಭಿನಂದನೆಗಳು ಲೇಖಕ ರಮೇಶ್ ದೊಡ್ಡಪುರ ಅವರಿಗೆ..

ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ಪುಸ್ತಕ ಅನೇಕ ಹೊಸ ಪುಟಗಳನ್ನು ತೆರೆದಿಡಲಿದೆ.

– ಸೂರಜ್ ಜೈನ್ ಮಾರ್ನಾಡ್ (ದಕ್ಷಿಣ ಕನ್ನಡ ಯುವಮೋರ್ಚಾದ ಜನರಲ್ ಸೆಕ್ರೆಟರಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫೇಸ್ಬುಕ್ ಖಾತೆಯ ಕೊಂಡಿ:

https://www.facebook.com/soorjain