{"title":"Anthology","description":"","products":[{"product_id":"jaise-the-waise-chale-aaye","title":"Jaise the Waise Chale Aaye","description":"\u003cp class=\"western\" lang=\"en-US\" align=\"justify\"\u003e\u003cspan style=\"color: #333333;\"\u003e\u003cspan style=\"font-family: Arial, serif;\"\u003e\u003cspan style=\"font-size: small;\"\u003eSold more than 50,000 copies The stories of Jihad of Bangla Hindus and their migration. This book comes at a time when the debate on CAA rages in the country with those opposing the Amendments to the Citizenship Act have chosen to neglect the sufferings of the persecuted minorities in the three neighboring Islamic countries. This timely work narrates untold stories of persecution of Hindus in Bangladesh. The authors have met these refugees who are living in Karnataka in person and accounted their stories of persecution, misery and sorrow. Each chapter narrates a gut wrenching story of Hindus who suffered at the hands of Jihadis there. Some of those who tormented them and targeted them were their neighbors, acquaintances for many years and residents of the same locality or village. Each story narrated by the victim shows the kind of torment they had to endure at the hands of the Jihadis, the loss of lives and property and the conditions under which they had to take a decision to leave their motherland and find refuge in India. The way they suffered through their journey from their hometowns to a refugee camp in India, the issues they faced here and way they rebuilt their lives has been poignantly explained. \u003c\/span\u003e\u003c\/span\u003e\u003c\/span\u003e\u003c\/p\u003e\n\u003cp class=\"western\" lang=\"en-US\" align=\"justify\"\u003e\u003cspan style=\"color: #333333;\"\u003e\u003cspan style=\"font-family: Arial, serif;\"\u003e\u003cspan style=\"font-size: small;\"\u003eThis book is a translation of the Kannada original. Get it here : \u003ca href=\"http:\/\/www.ayodhyabooks.com\/product\/utta-batteyalli-horatu-bandvaru\/\"\u003eUtta Batteyalli Horatu Bandavaru\u003c\/a\u003e\u003c\/span\u003e\u003c\/span\u003e\u003c\/span\u003e\u003c\/p\u003e\n\u003cp\u003e \u003c\/p\u003e","brand":"Ayodhya Publications Pvt Ltd","offers":[{"title":"Hindi","offer_id":41822400741460,"sku":"AP - 4","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/JaisetheWaiseChaleAaye4.1.png?v=1737021831"},{"product_id":"gandhada-maale","title":"Gandhada Maale","description":"\u003cp\u003eಹಾಲಿವುಡ್ ನಟ ಸಿಲ್ವೆಸ್ಟರ್ ಸ್ಟಲೋನ್, ಜಗತ್ತಿನಲ್ಲಿ ಅತಿ ಹೆಚ್ಚು ಐಕ್ಯು ಹೊಂದಿದ್ದ ವ್ಯಕ್ತಿ ವಿಲಿಯಂ ಸೈಡಿಸ್, ಕೊರಿಯದ ನಿರ್ಮಾತೃ ಪಾರ್ಕ್ ಚುಂಗ್ ಹೀ, ಕ್ಯಾನ್ಸರ್ ಇದ್ದೂ ಕೆನಡಾದ ಉದ್ದಗಲ ಮ್ಯಾರಥಾನ್ ಓಡಿದ ಟರ‍್ರಿ ಫಾಕ್ಸ್, ಮಾರಣಾಂತಿಕ ಹಲ್ಲೆಗೆ ಗುರಿಯಾದರೂ ಧೃತಿಗೆಡದೆ ಶ್ರೇಷ್ಠ ಸಂಗೀತಗಾರಳಾಗಿ ಹೆಸರು ಮಾಡಿದ ಜಾನಕೀಬಾಯಿ, ಕಮ್ಯುನಿಸ್ಟರ ಕಪಿಮುಷ್ಟಿಯಲ್ಲಿ ನಲುಗಿ ಬದುಕುಳಿದ ಪಾಲ್ದೆನ್ ಗ್ಯಾತ್ಸೋ ಮುಂತಾದ ಸ್ಫೂರ್ತಿದೇವತೆಗಳ ಚೇತೋಹಾರಿಯಾದ ಜೀವನಕಥೆಗಳಿರುವ ಹೊತ್ತಗೆ. ಬದುಕಿನಲ್ಲಿ ಭರವಸೆ ಕಳೆದುಕೊಂಡವರಿಗೆ ಕೊಡಬಹುದಾದ ಬೆಸ್ಟ್ ಗಿಫ್ಟ್.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41820783312980,"sku":"AP - 5","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/GandhadaMaale6.1.png?v=1738142737"},{"product_id":"mana-mechida-hudugi","title":"Mana Mechida Hudugi","description":"\u003cp\u003eಒಟ್ಟು ಹದಿನೇಳು ಪರಭಾಷಾ ಕಥೆಗಳ ಸುಂದರ ಕನ್ನಡಾನುವಾದ. ಮುನ್ನುಡಿ ಬರೆದಿರುವ ಕಥೆಗಾರ ಬೊಳುವಾರು ಮಹಮ್ಮದ್ ಕುಂಞಿ, ಮೂಲ ಲೇಖಕರಿಗೆ ಮತ್ತು ಅವರ ಬರಹಗಳಿಗೆ ಸಂಪೂರ್ಣ ಶರಣಾಗುತ್ತಲೇ ಓದುಗರ ಪ್ರೀತಿಯನ್ನು ಗೆಲ್ಲಬಲ್ಲ ರೋಹಿತ್ ಚಕ್ರತೀರ್ಥರ ಆಕರ್ಷಕ ನಿರೂಪಣೆಯ ರುಚಿಯನ್ನು ಅರಿಯಬೇಕಾದರೆ ಈ ಹದಿನಾಲ್ಕೂ ಕತೆಗಳನ್ನು ಏಕಾಂತದಲ್ಲಿ ಮೌನವಾಗಿ ಓದಬೇಕು ಎಂದಿದ್ದಾರೆ. ಕೃತಿಗೆ ವಿಮರ್ಶಕ ಅರವಿಂದ ಚೊಕ್ಕಾಡಿಯವರ ಬೆನ್ನುಡಿ ಇದೆ. ಟಾಲ್‌ಸ್ಟಾಯ್, ಓ ಹೆನ್ರಿ, ಮುರಕಮಿ, ಪೀಟರ್ ಬಿಷೆಲ್, ರೋಆಲ್ಡ್ ಡಾಹ್ಲ್, ಆರ್ಥರ್ ಕಾನನ್ ಡಾಯ್ಲ್, ಜ್ಯಾಕ್ ಲಂಡನ್, ಡಗ್ಲಾಸ್ ಆಡಮ್ಸ್ ಮುಂತಾದವರ ಅತ್ಯಂತ ವಿಶಿಷ್ಟ ಕಥೆಗಳು ಇಲ್ಲಿ ಒಟ್ಟುಗೂಡಿವೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41825702150228,"sku":"AP - 11","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/ManaMechidaHudugi1.1.png?v=1738393500"},{"product_id":"pinch-of-prapancha","title":"Pinch Of Prapancha","description":"\u003cp\u003eಇದುವರೆಗೆ ೬೦ಕ್ಕೂ ಹೆಚ್ಚು ದೇಶಗಳನ್ನು ಸಂದರ್ಶಿಸಿರುವ, ವೃತ್ತಿಯಲ್ಲಿ ಉದ್ಯಮಿ ಮತ್ತು ಬ್ಯಾಂಕಿಂಗ್ ಕ್ಷೇತ್ರ ಪರಿಣಿತ ಆಗಿರುವ ರಂಗಸ್ವಾಮಿ ಮೂಕನಹಳ್ಳಿ, ತಾವು ಸಂದರ್ಶಿಸಿದ ಹತ್ತು ದೇಶಗಳ ಬಗ್ಗೆ ಈ ಕೃತಿಯಲ್ಲಿ ವಿವರವಾಗಿ ಬರೆದಿದ್ದಾರೆ. ಪ್ರತಿ ದೇಶದ ಜನಜೀವನ, ಸಂಸ್ಕೃತಿ, ಆಹಾರಪದ್ಧತಿ, ಪ್ರೇಕ್ಷಣೀಯ ಸ್ಥಳಗಳು, ಶಿಷ್ಟಾಚಾರಗಳು, ಇತಿಹಾಸ ಮುಂತಾದ ಹಲವು ವಿಷಯಗಳ ವರ್ಣರಂಜಿತ ಪರಿಚಯ, ಪ್ರತಿ ಪುಟದಲ್ಲೂ ಅನನ್ಯ ಮಾಹಿತಿ, ಕೂತಲ್ಲೇ ಜಗತ್ತು ತೋರಿಸುವ ಅತ್ಯಾಕರ್ಷಕ ವಿಡಿಯೋಗಳು, ಪ್ರವಾಸ ಹೋಗುವಾಗ ಪೂರ್ವಸಿದ್ಧತೆ ಹೇಗಿರಬೇಕು ಎಂಬ ಸಲಹೆ, ಗೂಗಲ್ ದೇವರು ಕೊಡದ ಅಪರೂಪದ ಮಾಹಿತಿಗಳು.. ಮುಂತಾದ ಹಲವು ಸಂಗತಿಗಳು ತುಂಬಿರುವ ಪ್ರವಾಸ ಕಥನ ಇದು. ಸ್ಪೇನ್, ಪೋರ್ಚುಗಲ್, ಅಂದೋರಾ, ಲಿಚನ್‌ಸ್ಟೈ ನ್ , ಸ್ವಿಝರ್‌ಲ್ಯಾಂಡ್‌ನಂಥ ಯುರೋಪಿಯನ್ ದೇಶಗಳು, ಯುಎಇ ಎಂಬ ಮರಳುಗಾಡಿನ ಅಚ್ಚರಿ, ಮಲೇಷ್ಯ, ಶ್ರೀಲಂಕಾದಂಥ ಏಷ್ಯನ್ ದೇಶಗಳು - ಈ ಕೃತಿಯಲ್ಲಿ ಜಾಗ ಪಡೆದಿವೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41825702215764,"sku":"AP - 13","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/PinchOfPrapancha1.1.png?v=1738142742"},{"product_id":"endendu-baadada-mallige","title":"Endendu Baadada mallige","description":"\u003cp\u003eಕನ್ನಡ ಸಾಹಿತ್ಯದ ದಿಗ್ಗಜಗಳಾದ ದ.ರಾ. ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ತ.ಸು. ಶಾಮರಾಯರು, ಕೆ.ಎಸ್. ನರಸಿಂಹಸ್ವಾಮಿ ಮುಂತಾದವರ ಸಾಹಿತ್ಯದ ಅವಲೋಕನವನ್ನು ಮಾಡುವ ಎಂದೆಂದೂ ಬಾಡದ ಮಲ್ಲಿಗೆ ಕೃತಿಯಲ್ಲಿ ಇಡೀ ಕನ್ನಡ ಸಾಹಿತ್ಯ ಲೋಕದ ಒಂದು ಪರಿಚಯ ಸಿಗುತ್ತದೆ. ಜಿ.ಟಿ. ನಾರಾಯಣ ರಾವ್ ಮತ್ತು ಜಿ. ವೆಂಕಟಸುಬ್ಬಯ್ಯ ಅವರ ವಿಜ್ಞಾನ ಲೇಖನಗಳ ಪರಿಚಯ ಇಲ್ಲಿದೆ. ಸಂತೋಷಕುಮಾರ ಗುಲ್ವಾಡಿಯವರ ಪತ್ರಿಕೋದ್ಯಮ ಸಾಹಸಗಳ ಬಗ್ಗೆ ಬರಹವಿದೆ. ಕೆ.ಎಸ್. ನಿಸಾರ್ ಅಹಮದ್, ಸುಬ್ರಾಯ ಚೊಕ್ಕಾಡಿ ಮುಂತಾದ ಕವಿಗಳ ಬದುಕಿನ ಚಿತ್ರಗಳಿವೆ. ಪಾ.ವೆಂ. ಆಚಾರ್ಯ ಅವರೊಂದಿಗೆ ಕಾಲ್ಪನಿಕ ಸಂದರ್ಶನ, ಯು.ಆರ್. ಅನಂತಮೂರ್ತಿ ಅವರೊಂದಿಗೆ ವಾಸ್ತವ ಸಂದರ್ಶನ - ಎರಡೂ ಇಲ್ಲಿವೆ. ಇವುಗಳ ಜೊತೆಗೆ, ಪಾಶ್ಚಾತ್ಯ ಸಾಹಿತ್ಯ ಹಾಗೂ ಕಲಾ ಜಗತ್ತಿನ ಶೇಕ್ಸ್ಪಿಯರ್, ವಿಲಿಯಂ ಬಕ್, ಗ್ರಾಚೋ, ಜಾನ್ ಹಿಗ್ಗಿನ್ಸ್ ಭಾಗವತರ್ ಮುಂತಾದ ವ್ಯಕ್ತಿಗಳ ಬದುಕಿನ ಮತ್ತು ಸಾಧನೆಯ ವಿಶಿಷ್ಟ ವಿವರಗಳನ್ನು ಈ ಕೃತಿಯು ಒಳಗೊಂಡಿದೆ. ಇದರ ಹೊರತಾಗಿ, ಚಂದಮಾಮ ಮತ್ತು ಸಂದೇಶ ಎಂಬ ಎರಡು ಮಕ್ಕಳ ಮಾಸಪತ್ರಿಕೆಗಳ ಬಗ್ಗೆ ಅತ್ಯಂತ ವಿವರಣಾತ್ಮಕ ಲೇಖನಗಳಿವೆ. ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಕುರಿತು ಒಂದು ದೀರ್ಘ ಪ್ರಬಂಧವನ್ನು ಕೃತಿಯು ಒಳಗೊಂಡಿದೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41825703002196,"sku":"AP - 16","price":230.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/EndenduBaadadamallige1.1.png?v=1738142746"},{"product_id":"maanasollasa","title":"Maanasollasa","description":"\u003cp\u003eಬಾಲ್ಯವೆಂಬುದು ನೆನಪುಗಳ ಬುತ್ತಿ. ವ್ಯಕ್ತಿಯೊಬ್ಬ ತನ್ನ ಗತದಿನಗಳ ಸವಿನೆನಪುಗಳನ್ನು ಸ್ಮರಿಸಿಕೊಳ್ಳುವುದನ್ನು ನಾಸ್ಟಾಲ್ಜಿಯಾ ಎನ್ನುತ್ತಾರೆ. ಅಂಥ ಹಲವು ಸಿಹಿನೆನಪುಗಳ ಪ್ರಬಂಧಮಾಲೆಯೇ ಮಾನಸೋಲ್ಲಾಸ. ಇಲ್ಲಿ ಲೇಖಕರು ತಮ್ಮ ಹಳ್ಳಿಯ ಮನೆಯ ಅಟ್ಟದ ಬಗ್ಗೆ, ಬಾಲ್ಯಕಾಲದಲ್ಲಿ ಬೇಸಗೆ ರಜೆಯ ಸಂಜೆಗಳಲ್ಲಿ ಆಡುತ್ತಿದ್ದ ಆಟಗಳ ಬಗ್ಗೆ ವಿಸ್ತೃತವಾಗಿ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಹಿಂದೆಲ್ಲ ಮನೆಗಳ ದೇವರ ಪಟಗಳ ಹಿಂದಿನ ಜಾಗದಲ್ಲಿ ಗುಬ್ಬಚ್ಚಿಗಳು ಗೂಡು ಕಟ್ಟುತ್ತಿದ್ದವು. ಆದರೆ ಈಗ ಆ ಹಕ್ಕಿಗಳು ಕಾಣುವುದೇ ದುರ್ಲಭವಾಗಿದೆ ಎಂಬ ವಿಷಾದ ಒಂದು ಪ್ರಬಂಧದಲ್ಲಿದೆ. ಜೂನ್ ಒಂದರAದು ಶಾಲೆಯ ಪುನರರಾಂಭ ಆದಾಗ ಮಕ್ಕಳು ಪಡುತ್ತಿದ್ದ ಪಡಿಪಾಟಲು, ಮಳೆಗಾಲದ ಮಿತ್ರನಾದ ಕೊಡೆ, ಕೊಡೆಯ ಇತಿಹಾಸ, ಮೊದಲ ಮಳೆಯಲ್ಲಿ ಅಂಗಳದಲ್ಲಿ ಕಾಣಿಸಿಕೊಳ್ಳುವ ಕೆಂಪು ಬಣ್ಣದ ವೆಲ್ವೆಟ್ ಗುಬ್ಬಿ ಇತ್ಯಾದಿಗಳ ಬಗ್ಗೆ ಇಲ್ಲಿ ಆಪ್ತವೆನ್ನಿಸುವ ಬರಹಗಳಿವೆ. ಹಾಗೆಯೇ ರಮಾನಂದ ಸಾಗರ ಅವರ ರಾಮಾಯಣ, ಸಿದ್ಧಾರ್ಥ್ ಕಾಖ್ ಅವರ ಸುರಭಿ ಕಾರ್ಯಕ್ರಮಗಳ ಬಗ್ಗೆಯೂ ಮಾಹಿತಿ ಇದೆ. ಕೇವಲ ಮೂವತ್ತು ವರ್ಷಗಳ ಅವಧಿಯಲ್ಲೇ ಕಣ್ಮರೆಯಾಗಿಹೋಗಿರುವ ರೇಡಿಯೋ ಟ್ರಾನ್ಸಿಸ್ಟರ್, ಕಪ್ಪು ಬಿಳಿ ಟಿವಿ, ಫ್ಲಾಪಿ ಡಿಸ್ಕ್ಗಳು, ಸಿಡಿ ರಾಮ್‌ಗಳು, ಪೇಜರ್, ಟೈಪ್ ರೈಟರ್, ಟೆಲಿಗ್ರಾಫ್ ಮುಂತಾದ ಹತ್ತುಹಲವು ತಂತ್ರಜ್ಞಾನಗಳ ಮಧುರ ನೆನಪುಗಳು ಈ ಕೃತಿಯಲ್ಲಿ ತುಂಬಿಕೊಂಡಿವೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41825703034964,"sku":"AP - 17","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Maanasollasa1.1.png?v=1738142747"},{"product_id":"ota-benga","title":"Ota Benga","description":"\u003cp\u003eಓಟಾ ಬೆಂಗ\u003cbr\u003e\nಇದು ಹಲವು ವ್ಯಕ್ತಿಚಿತ್ರಗಳ ಸಂಗ್ರಹ. ಕೇವಲ ಸರಕಾರದ ಅತ್ಯಾಸೆಗಾಗಿ ಆಕಾಶಕ್ಕೆ ಹಾರಲು ಸಿದ್ಧನಾಗಬೇಕಾದ ಅಮಾಯಕ ಗಗನಯಾನಿಯ ಕತೆ, ತಮ್ಮ ದೇಶದ ಘನತೆ ಹೆಚ್ಚಿಸಿಕೊಳ್ಳಲು ನಾಯಿಯೊಂದನ್ನು ರಾಕೆಟ್ಟಿನಲ್ಲಿ ಅಂತರಿಕ್ಷಕ್ಕೆ ಕಳಿಸಿದ ಕತೆ, ಕಾಡಿನಲ್ಲಿ ತನ್ನ ಪಾಡಿಗೆ ತಾನಿದ್ದ ಹುಡುಗನನ್ನು ನಗರಕ್ಕೆ ಕರೆತಂದು ಪ್ರದರ್ಶನದ ಗೊಂಬೆಯಾಗಿಸಿ ಕಾಸುಮಾಡಿಕೊಂಡವರ ಕತೆ, ರೋಗಿಗಳನ್ನು ಪರೀಕ್ಷಿಸುವ ಮೊದಲು ವೈದ್ಯರು ಕೈತೊಳೆದಿರಬೇಕೆಂದ ವೈದ್ಯನೇ ಕೊನೆಗೆ ಕಣ್ಣೀರಿನಲ್ಲಿ ಕೈತೊಳೆಯಬೇಕಾದ ಕತೆ - ಹೀಗೆ ಹಲವು ವಿಚಿತ್ರ, ನೋವಿನ ಕತೆಗಳು ಇಲ್ಲಿವೆ. ಇಲ್ಲಿ ತನ್ನ ಏಳು ವರ್ಷಗಳ ಜೀವನವನ್ನು ಸಾಧನೆಯಿಂದ ಸಾರ್ಥಕಗೊಳಿಸಿಕೊಂಡ ಪುಟ್ಟಬಾಲಕನಿದ್ದಾನೆ, ಅರ್ಧ ತಾಸಿನ ಪ್ರಯೋಗಕ್ಕಾಗಿ ಹನ್ನೊಂದು ವರ್ಷಗಳನ್ನು ಪರದೇಶಿ ನೆಲದಲ್ಲಿ ದೈನೇಸಿಯಾಗಿ ಕಳೆದ ಖಗೋಳಜ್ಞ ಇದ್ದಾನೆ. ಬದುಕಿನ ವೈಚಿತ್ರ್ಯಗಳನ್ನು ಈ ಕೃತಿ ಸಶಕ್ತವಾಗಿ ಅನಾವರಣ ಮಾಡುತ್ತದೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41833807249492,"sku":"AP-34","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/OtaBenga1.1.png?v=1738142752"},{"product_id":"5-ajnatha-nagarikategalu","title":"5 Ajnatha Nagarikategalu","description":"\u003cp\u003e5 ಅಜ್ಞಾತ ನಾಗರಿಕತೆಗಳು\u003cbr\u003e\nಆಫ್ರಿಕದ ಒಲ್‌ಮೆಕ್, ಆಕ್ಸುಮ್, ಅಮೆರಿಕದ ಅನಸಾಝಿ, ಯುರೋಪಿನ ಕಾರ್ಥೇಜ್ ಮತ್ತು ವೈಕಿಂಗ್ - ಈ ಐದು ನಾಗರಿಕತೆಗಳನ್ನು ಈ ಕೃತಿಯು ಸಮಗ್ರವಾಗಿ ಪರಿಚಯಿಸುತ್ತದೆ. ನಾಗರಿಕತೆ ಎಂದಾಗೆಲ್ಲ ನೆನಪಿಗೆ ಬರುವ ಗ್ರೀಕ್, ರೋಮನ್, ಈಜಿಪ್ಟ್, ಬ್ಯಾಬಿಲೋನಿಯನ್ ಮುಂತಾದ ಹೆಸರುಗಳನ್ನು ಹೊರತುಪಡಿಸಿ ಜನಸಾಮಾನ್ಯರಿಗೆ ಗೊತ್ತೇ ಇಲ್ಲದ ನಾಗರಿಕತೆಗಳನ್ನು ಇಲ್ಲಿ ಪರಿಚಯಿಸಲಾಗಿದೆ. ನಾಗರಿಕತೆಗಳನ್ನು ಪರಿಚಯಿಸುವ ಪಠ್ಯಪುಸ್ತಕಗಳ ಸಿದ್ಧಮಾದರಿಯನ್ನು ಕೈಬಿಟ್ಟು ಇಲ್ಲಿ, ಅವನ್ನು ಕತೆಗಳಂತೆ ಹೇಳಲಾಗಿದೆ. ಆ ನಾಗರಿಕತೆಗಳಲ್ಲಿ ಆಳಿದ ರಾಜರ ಕತೆಗಳಲ್ಲದೆ ಜನಸಾಮಾನ್ಯರ ಬದುಕಿನ ವಿವರಗಳೂ ಇಲ್ಲಿವೆ. ಆ ಜನರ ಧೈರ್ಯಸಾಹಸಗಳು, ಛಲಬಿಡದೆ ಕಾರ್ಯ ಸಾಧಿಸುವ ಗುಣ ಸ್ಫೂರ್ತಿದಾಯಕ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41833807282260,"sku":"AP-32","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/5AjnathaNagarikategalu1.1.png?v=1738389985"},{"product_id":"eddelu-bharathiya","title":"Eddelu bharathiya","description":"\u003cp\u003e\u003cstrong\u003eಎದ್ದೇಳು ಭಾರತೀಯ\u003c\/strong\u003e ಭಾರತವು 800 ವರ್ಷಗಳ ಇಸ್ಲಾಮೀ ವಸಾಹತು ಹಾಗೂ 200 ವರ್ಷಗಳ ಕ್ರೆöÊಸ್ತ ವಸಾಹತು ದಾಳಿಗೆ ಒಳಗಾಯಿತು. ನಂತರದ ದಿನಗಳಲ್ಲಿ ಕಮ್ಯುನಿಸಮ್, ಸೋಷಲಿಸಮ್‌ನಂಥ ಹಲವು ಇಸಮ್‌ಗಳ ಪ್ರಯೋಗಶಾಲೆಯಾಯಿತು. ಈಗಂತೂ ವೋಕ್ ಮುಂತಾದ ವಿಭಜಕ ಸಿದ್ಧಾಂತಗಳು ಭಾರತವನ್ನು ತಮ್ಮ ಪ್ರಯೋಗಶಾಲೆಯಾಗಿ ಮಾಡಿಕೊಳ್ಳಲು ಹವಣಿಸುತ್ತಿವೆ. ಭಾರತದ ದುಸ್ಥಿತಿಗೆ ಒಂದು ಬದಿಯಿಂದ ಈ ಎಲ್ಲ ಹೊರಗಿನ ಬೌದ್ಧಿಕ, ರಾಜಕೀಯ ಆಕ್ರಮಣಗಳು ಕಾರಣವಾದರೂ ಇನ್ನೊಂದು ಬದಿಯಿಂದ ನಿದ್ರಿತಾವಸ್ಥೆಯಲ್ಲಿದ್ದ ಭಾರತೀಯರೂ ಕಾರಣವೆಂಬುದನ್ನು ಒಪ್ಪಲೇಬೇಕು. ನಿದ್ರಾವಸ್ಥೆಯಲ್ಲಿರುವ ಭಾರತೀಯರನ್ನು ಎಚ್ಚರಗೊಳಿಸಿ ಅವರಲ್ಲಿ ಕ್ಷಾತ್ರ ತುಂಬುವ ಕೆಲಸವನ್ನು ಶ್ರೀ ಅರವಿಂದರು, ಸ್ವಾಮಿ ವಿವೇಕಾನಂದರು, ದಯಾನಂದ ಸರಸ್ವತಿ ಮುಂತಾದವರಿಂದ ಮೊದಲ್ಗೊಂಡು ಸೀತಾರಾಮ್ ಗೋಯಲ್, ಕಾನ್ರಾಟ್ ಎಲ್ಟ್ಸ್ ವರೆಗಿನ ಹಲವರು ಮಾಡುತ್ತಲೇ ಬಂದಿದ್ದಾರೆ. ಈ ಎಲ್ಲ ಆಕ್ರಮಣ ಮತ್ತು ಪ್ರತಿರೋಧಗಳ ಸಂಕ್ಷಿಪ್ತ ಇತಿಹಾಸವನ್ನು ಮುಂದಿಟ್ಟು, ಭಾರತೀಯನನ್ನು ಮುಂದಿನ ಬೌದ್ಧಿಕ ಯುದ್ಧಕ್ಕೆ ಅಣಿಗೊಳಿಸುವ ಕೆಲಸವನ್ನು ಮಾಡುವ ಪುಟ್ಟ ಕೃತಿಯೇ ಪ್ರಖರ ಚಿಂತಕರಾದ ಡಾ. ಜಿ. ಬಿ. ಹರೀಶರ \"ಎದ್ದೇಳು ಭಾರತೀಯ\".\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41833807446100,"sku":"AP-38","price":60.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Eddelubharathiya1.1.png?v=1738142757"},{"product_id":"maatina-kale-talamaddhale","title":"Maatina Kale Talamaddhale","description":"\u003cp\u003e\u003cstrong\u003eತಾಳಮದ್ದಲೆ\u003c\/strong\u003e ಆಶು ಮಾತನ್ನು ಅವಲಂಬಿಸಿದ ಜಗತ್ತಿನ ಏಕೈಕ ಕಲಾಪ್ರಕಾರವಾದರೂ ತಾಳಮದ್ದಲೆಯ ಕುರಿತು ಬಂದಿರುವ ಕೃತಿಗಳು ಕಡಿಮೆ. ಯಕ್ಷಗಾನರಂಗದಲ್ಲಿ ಹಲವು ದಶಕಗಳಿಂದ ಗುರುತಿಸಿಕೊಂಡಿರುವ, ಸ್ವತಃ ಒಳ್ಳೆಯ ಅರ್ಥಧಾರಿಗಳಾಗಿದ್ದು ತಾಳಮದ್ದಲೆಗಾಗಿ ಮೀಸಲಾದ ಸಂಘಟನೆ ನಡೆಸುತ್ತಿರುವ ಶ್ರೀಧರ ಡಿ. ಎಸ್. ಈ ಕಲಾಪ್ರಕಾರದ ಸಮಗ್ರ ಚಿತ್ರಣ ಕೊಡುವ ಕೃತಿಯನ್ನು ರಚಿಸಿದ್ದಾರೆ. ಪ್ರಸಂಗ ರಚನೆ, ಅರ್ಥಧಾರಿಗೆ ಇರಬೇಕಾದ ಸಂಸ್ಕಾರ ಮತ್ತು ಸಿದ್ಧತೆ, ಭಾಗವತಿಕೆಯ ಮಹತ್ವ ಮತ್ತು ಔಚಿತ್ಯ, ತಾಳ-ಮದ್ದಲೆಗಳ ಸಹಯೋಗ, ಪ್ರೇಕ್ಷಕವರ್ಗ, ಸಂಘಟನೆ-ಸಂಯೋಜನೆಗಳ ಸವಾಲುಗಳು, ಯಕ್ಷಗಾನ ಹಾಗೂ ತಾಳಮದ್ದಲೆಯ ನಡುವಿನ ಕೊಡುಕೊಳ್ಳುವಿಕೆ - ಹೀಗೆ ತಾಳಮದ್ದಲೆಯ ಸುತ್ತಮುತ್ತಲಿನ ಎಲ್ಲ ವಿಚಾರಗಳನ್ನೂ ಭಾವಾತಿರೇಕವಿಲ್ಲದೆ ಅತ್ಯಂತ ಸಂಯಮದಿಂದ ಚರ್ಚಿಸುವ ಪ್ರಬುದ್ಧತೆಯನ್ನು ಈ ಕೃತಿಯಲ್ಲಿ ಕಾಣಬಹುದು. \u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41833807511636,"sku":"AP-35","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/MaatinaKaleTalamaddhale1.1.png?v=1738142759"},{"product_id":"beluru-shri-chennakeshavanige-bekilla-quran-patana","title":"Beluru Shri Chennakeshavanige Bekilla Quran Patana","description":"\u003cp\u003eವೃತ್ತಿಯಲ್ಲಿ ಶಸ್ತ್ರಚಿಕಿತ್ಸಕರಾಗಿರುವ ಡಾ. ಎನ್. ರಮೇಶ್ ಪ್ರತಿ ವರ್ಷ ತಮ್ಮೂರಿನ ಜಾತ್ರೋತ್ಸವದಲ್ಲಿ ನೋಡುವ ಒಂದು ಆಚರಣೆಯ ಬೆನ್ನುಬಿದ್ದು ಇತಿಹಾಸಕಾರನಾಗಿ ನಡೆಸಿರುವ ಸಂಶೋಧನೆಯ ಫಲವೇ ಈ ಕೃತಿ. ಬೇಲೂರಿನ ಇತಿಹಾಸಪ್ರಸಿದ್ಧ ಶ್ರೀ ಚೆನ್ನಕೇಶವ ದೇವಾಲಯದಲ್ಲಿ ಪ್ರತಿ ವರ್ಷ ಜಾತ್ರೆಯ ಸಮಯದಲ್ಲಿ ಖಾಜಿಯೊಬ್ಬರು ಮುಜರೆ ಮರ್ಯಾದೆ ಹೆಸರಿನಲ್ಲಿ ಕುರಾನ್ ಸಾಲುಗಳನ್ನು ಓದುವ ಕ್ರಮವಿದೆ. ಇದರ ಇತಿಹಾಸವೇನು, ಇದು ಯಾವಾಗ ಪ್ರಾರಂಭವಾಯಿತು, ಯಾರು ಪ್ರಾರಂಭಿಸಿದರು, ಯಾವ ಕಾರಣಕ್ಕಾಗಿ.. ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವಾಗಿ ವಿಸ್ತರಿಸಿಕೊಳ್ಳುವ ಈ ಕೃತಿಯು ಕೊನೆಯಲ್ಲಿ ಸತ್ಯದ ಅನಾವರಣವನ್ನೂ ಮಾಡಿದೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41833807544404,"sku":"AP-44","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/BeluruShriChennakeshavanigeBekillaQuranPatana1.1.png?v=1738142759"},{"product_id":"anuranana","title":"Anuranana","description":"\u003cp\u003eಗ.ನಾ. ಭಟ್ಟರ ಈ ಕೃತಿ ಸಂತೆಯ ಸಮಯಕ್ಕೆ ನೇಯ್ದ ಮೂರುಮೊಳ ಮಾಲೆಯಲ್ಲ. ಅವರ ಅಧ್ಯಯನಶೀಲತೆ, ತಾರ್ಕಿಕ ಮನಸ್ಥಿತಿ, ರಾಷ್ಟçದ ಬಗ್ಗೆ ಅವರಿಗಿರುವ ಕಳಕಳಿ ಎಲ್ಲವನ್ನೂ ಈ ಪ್ರಬಂಧಗುಚ್ಛ ಸ್ಪಷ್ಟವಾಗಿ ನಿರೂಪಿಸುತ್ತದೆ. ಇಲ್ಲಿ ಅಧ್ಯಾತ್ಮವಿದೆ, ಯೋಗವಿದೆ, ಬದುಕಿನ ಮೌಲ್ಯಗಳಿವೆ, ವ್ಯಕ್ತಿ ಚಿತ್ರಣಗಳಿವೆ. ನನಗೆ ತುಂಬಾ ಆಪ್ತವೆನಿಸಿದ್ದು ಅವರ ಬರವಣಿಗೆಯ ಶೈಲಿ. ಇದರಲ್ಲಿ ಅವರ ಒಳತುಡಿತ ಎದ್ದು ಕಾಣುತ್ತದೆ. ಹತ್ತು ಕೃತಿಗಳನ್ನು ತಿರುವಿ ಹಾಕುವುದಕ್ಕಿಂತ ಒಂದು 'ಅನುರಣನ' ಓದುವುದು ಲೇಸು. ಏಕೆಂದರೆ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಗ.ನಾ. ಭಟ್ಟರು ಸ್ಪರ್ಶಿಸದ ವಿಷಯಗಳಿಲ್ಲ. ತಮ್ಮ ಜಿಜ್ಞಾಸು ಮನಸ್ಸನ್ನು ಎಲ್ಲೆಡೆ ಹರಿಯಬಿಟ್ಟು ಹಲವನ್ನು ನಮ್ಮೆದುರು ಹರಡಿದ್ದಾರೆ,  ನಿಸ್ಸÀಂದೇಹವಾಗಿ ಇದು ಸಂಗ್ರಹ ಯೋಗ್ಯ ಕೃತಿ.\u003cbr\u003e\n- ರವೀಂದ್ರ ಜೋಶಿ\u003cbr\u003e\n ಹಿರಿಯ ಪತ್ರಕರ್ತ\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41833807741012,"sku":"AP-63","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Anuranana1.1.png?v=1738142762"},{"product_id":"jhenkara","title":"Jhenkara","description":"\u003cp\u003eವಿದ್ವಾಂಸ ಗ.ನಾ. ಭಟ್ಚರ ಕುರಿತು ನನ್ನಲ್ಲಿ ಆಸಕ್ತಿ, ಕುತೂಹಲ ಮತ್ತು ಗೌರವದ ಭಾವನೆ ಮೂಡಿ ಅದು ಗಟ್ಟಿಗೊಳ್ಳಲು ಕಾರಣ ಹಲವು.\u003cbr\u003e\nಭಟ್ಟರು ವೃತ್ತಿಯಲ್ಲಿದ್ದಾಗಲೂ, ವೃತ್ತಿ ಜೀವನದ ನಿವೃತ್ತಿಯ ನಂತರವೂ ಓದು, ಬರಹ, ಪ್ರವಚನ ಪ್ರವೃತ್ತಿಯನ್ನು ಅತ್ಯಾಸಕ್ತಿಯಿಂದ ಮುಂದುವರೆಸಿಕೊAಡು ಬರುತ್ತಿದ್ದಾರೆ. ನಿರಂತರ ಬರವಣಿಗೆ ಒಂದು ತಪಸ್ಸೇ ಸರಿ. ಝೇಂಕಾರ ತಲೆಬರಹದಲ್ಲಿ ಲೋಕಧ್ವನಿ ಪತ್ರಿಕೆಗೆ ಭಟ್ಟರು ಒಂದು ವರ್ಷಕಾಲ ಬರೆದ ಸಂಗ್ರಹಯೋಗ್ಯ ಲೇಖನಗಳು ಪುಸ್ತಕ ರೂಪದಲ್ಲಿ ಕೈಸೇರುತ್ತಿರುವುದು ಅತ್ಯಂತ ಖುಷಿಯ ಸಂಗತಿ. ಎಲ್ಲದಕ್ಕಿಂತ ಮುಖ್ಯವಾಗಿ ಲೋಕಧ್ವನಿ ಮತ್ತು ಗ.ನಾ. ಭಟ್ಟರು ಶಿರಸಿಯವರು, ಉತ್ತರಕನ್ನಡದವರು ಎಂಬುದು ನನ್ನ ಸಂತಸವನ್ನು ಇಮ್ಮಡಿಗೊಳಿಸಿದೆ.\u003cbr\u003e\nಗ.ನಾ. ಭಟ್ಟರು ಒದುವ ಆಸಕ್ತಿ ಇರವವರಿಗೆ ಭರಪೂರ ಹೂರಣ ಒದಗಿಸಿದ್ದಾರೆ. ಕೈಗೆತ್ತಿಕೊಂಡು ಓದಿದರೆ ಓದಿನ ಖುಷಿ ಓದುಗರಿಗೆ ದಕ್ಕುವುದು ಗ್ಯಾರಂಟಿ.\u003cbr\u003e\nಗ.ನಾ. ಭಟ್ಟರ ಲೇಖನಗಳನ್ನು ಪುಸ್ತಕ ರೂಪದಲ್ಲಿ ತಂದಿರುವ ಅಯೋಧ್ಯಾ ಪ್ರಕಾಶನಕ್ಕೂ ಅಭಿನಂದನೆಗಳು.\u003cbr\u003e\n-\tಹರಿಪ್ರಕಾಶ ಕೋಣೆಮನೆ\u003cbr\u003e\nಪ್ರಧಾನ ಸಂಪಾದಕ\/ಸಿಇಒ\u003cbr\u003e\nವಿಸ್ತಾರ ನ್ಯೂಸ್\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41833807773780,"sku":"AP-64","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Jhenkara1.1.png?v=1738142763"},{"product_id":"vachana-darshana","title":"Vachana Darshana","description":"\u003cp\u003e೧೨ನೆಯ ಶತಮಾನದಲ್ಲಿ ಕನ್ನಡದಲ್ಲಿ ಮೂಡಿಬಂದ ವಚನಸಾಹಿತ್ಯವು ವಾಙ್ಮಯ ಜಗತ್ತಿನ ಒಂದು ಅಚ್ಚರಿ. ದೇಶಾದ್ಯಂತ ನಡೆದ ಭಕ್ತಿಮಾರ್ಗದ ಪುನರುತ್ಥಾನದಲ್ಲಿ ವಚನಸಾಹಿತ್ಯದ ಪಾತ್ರವು ಮಹತ್ವದ್ದಾಗಿದೆ. ವಚನಗಳ ನಿಜವಾದ ಅರ್ಥವೇನು? ಇದನ್ನು ದರ್ಶನವೆಂದು ಏಕೆ ಕರೆಯಬೇಕು? ಪಾಶ್ಚಾತ್ಯ ಮನೋಧರ್ಮದಲ್ಲಿ ವಚನಗಳನ್ನು ಓದಿದರೆ ಮೂಡುವ ತಪ್ಪುಕಲ್ಪನೆಗಳೇನು? ವಚನಗಳನ್ನು ಅರ್ಥೈಸಿಕೊಳ್ಳುವ ಸರಿಯಾದ ದೃಷ್ಟಿಕೋನ ಯಾವುದು ಇತ್ಯಾದಿ ಹಲವು ಸಂಗತಿಗಳನ್ನು ಅತ್ಯಂತ ಸ್ಪಷ್ಟವಾದ ಭಾಷೆಯಲ್ಲಿ, ಯಾವುದೇ ಗೊಂದಲಗಳಿಗೆ ಎಡೆಕೊಡದಂತೆ ತಿಳಿಸಿಕೊಡುವ ಕೃತಿಯೇ 'ವಚನದರ್ಶನ'. ಈ ಕೃತಿಗೆ ಪ.ಪೂ. ಜಗದ್ಗುರು ಶ್ರೀ ಸದಾಶಿವಾನಂದ ಮಹಾಸ್ವಾಮಿಗಳು ಗೌರವ ಸಂಪಾದಕರಾಗಿದ್ದಾರೆ. ವೇದವಾಙ್ಮಯ, ಉಪನಿಷತ್ತುಗಳು, ದರ್ಶನಗಳು ಮೊದಲಾದ ಒಟ್ಟು ಭಾರತೀಯ ಜ್ಞಾನಪರಂಪರೆಯ ಜೊತೆ ವಚನಗಳನ್ನಿಟ್ಟು ಇಲ್ಲಿ ತುಲನಾತ್ಮಕವಾಗಿ ಅಧ್ಯಯನ ಮಾಡಲಾಗಿದೆ. ವಚನಪರಂಪರೆ, ಬೆಡಗಿನ ವಚನಗಳು, ಸಾಮಾಜಿಕ ಸಾಮರಸ್ಯ, ನೈತಿಕ ಮೌಲ್ಯಗಳು, ಕಲ್ಯಾಣರಾಜ್ಯ ಮುಂತಾದ ಹಲವು ಸಂಗತಿಗಳ ಕುರಿತು ಇಪ್ಪತ್ತು ವಿಷಯತಜ್ಞರು ವಿದ್ವತ್ಪೂರ್ಣ ಲೇಖನಗಳನ್ನು ಬರೆದಿದ್ದಾರೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41834732224596,"sku":"AP-58","price":299.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/VachanaDarshana1.1.png?v=1738217360"},{"product_id":"ragabharathi-volume-1-2","title":"Raagabharathi (Volume 1 \u0026 2)","description":"\u003cdiv class=\"\" data-block=\"true\" data-editor=\"8kec8\" data-offset-key=\"76tfm-0-0\"\u003e\n\u003cdiv data-offset-key=\"76tfm-0-0\" class=\"_1mf _1mj\"\u003e\u003cspan data-offset-key=\"76tfm-0-0\"\u003e\u003cspan data-text=\"true\"\u003eನಾಡಿನ ಬಹುಶ್ರುತ ಕವಿ-ವಿದ್ವಾಂಸರೂ ಏಕೈಕ ಶತಾವಧಾನಿಗಳೂ ಆದ ಡಾ|| ಆರ್. ಗಣೇಶ್ ಅವರ ಷಷ್ಠಬ್ದಿ ಪೂರ್ತಿ ಸುಸಂದರ್ಭದಲ್ಲಿ ಅವರ ಪ್ರಾತಿನಿಧಿಕ ಕನ್ನಡ ಬರೆಹಗಳ ಸಂಚಯ ‘ರಾಗಭಾರತೀ’ ಪ್ರಕಟವಾಗುತ್ತಿದೆ. \u003c\/span\u003e\u003c\/span\u003e\u003c\/div\u003e\n\u003c\/div\u003e\n\u003cdiv class=\"\" data-block=\"true\" data-editor=\"8kec8\" data-offset-key=\"23cfv-0-0\"\u003e\n\u003cdiv data-offset-key=\"23cfv-0-0\" class=\"_1mf _1mj\"\u003e\u003cspan data-offset-key=\"23cfv-0-0\"\u003e\u003cbr data-text=\"true\"\u003e\u003c\/span\u003e\u003c\/div\u003e\n\u003c\/div\u003e\n\u003cdiv class=\"\" data-block=\"true\" data-editor=\"8kec8\" data-offset-key=\"fg3g9-0-0\"\u003e\n\u003cdiv data-offset-key=\"fg3g9-0-0\" class=\"_1mf _1mj\"\u003e\u003cspan data-offset-key=\"fg3g9-0-0\"\u003e\u003cspan data-text=\"true\"\u003eಎರಡು ಸಂಪುಟಗಳಲ್ಲಿ ವಿಭಕ್ತವಾಗಿರುವ ಈ ಹೊತ್ತಗೆಯಲ್ಲಿ ಕವಿತೆ, ಕಥೆ, ಕಾದಂಬರಿ, ಲಲಿತ ಪ್ರಬಂಧ, ವ್ಯಕ್ತಿಚಿತ್ರ, ಕಲೆ, ಕನ್ನಡಸಾಹಿತ್ಯ, ಅವಧಾನ, ಸಂಸ್ಕೃತಸಾಹಿತ್ಯ, ಕಾವ್ಯಮೀಮಾಂಸೆ, ಛಂದಃಶಾಸ್ತ್ರ, ಅಧ್ಯಾತ್ಮ-ಸಂಸ್ಕೃತಿ-ಮೌಲ್ಯಮೀಮಾಂಸೆ ಮತ್ತು ಪುರಾಣ-ಇತಿಹಾಸ ಎಂಬ ಪ್ರಕಾರ-ವಿಷಯಗಳಿಗೆ ಸಂಬಂಧಿಸಿದ ಬರೆಹಗಳಿವೆ. ಈ ಎಲ್ಲ ಜ್ಞಾನಶಾಖೆಗಳ ತತ್ತ್ವ ಮತ್ತು ಪ್ರಯೋಗಗಳಲ್ಲಿ ನುರಿತವರಾದ ಗಣೇಶರ ಲೇಖನಗಳು ಭಾರತೀಯ ಸಂಸ್ಕೃತಿಯ ಬಗೆಗೆ ಆದರ-ಆಸಕ್ತಿಗಳು ಹೆಚ್ಚಾಗಿ ಮೂಡುತ್ತಿರುವ ನಮ್ಮೀ ಕಾಲದಲ್ಲಿ ಅಧಿಕೃತವಾದ ಮಾಹಿತಿಯನ್ನೂ ಎಲ್ಲರೂ ನೆಚ್ಚಬಹುದಾದ ಪರಿಪ್ರೇಕ್ಷೆ ಮತ್ತು ಒಳನೋಟಗಳನ್ನೂ ಒದಗಿಸಿ ಮರುದರ್ಶನ ಮಾಡಬಲ್ಲವು. ಇಲ್ಲಿಯ ಪುಟಗಳನ್ನು ತಿರುವಿಹಾಕುತ್ತಿದ್ದಂತೆ ನಮ್ಮ ಪಾರಂಪರಿಕ ಮೌಲ್ಯಗಳ ಬಗೆಗೆ ಯುಕ್ತವಾದ ಹೆಮ್ಮೆ ಮೂಡುತ್ತದೆ; ಇವುಗಳ ಅನುಸಂಧಾನದ ಮೂಲಕ ನಮ್ಮ ಜೀವನ ಎಷ್ಟು ಹಸನಾಗಬಲ್ಲುದೆಂಬ ಅರಿವೂ ಅಂಕುರಿಸುತ್ತದೆ.\u003c\/span\u003e\u003c\/span\u003e\u003c\/div\u003e\n\u003c\/div\u003e","brand":"Ayodhya Publications Pvt Ltd","offers":[{"title":"Kannada","offer_id":41845124759636,"sku":"AF-4","price":1999.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AF-04.png?v=1738153119"},{"product_id":"appa-bareda-patragalu","title":"Appa bareda patragalu","description":"\u003cp\u003eಒಂದಾನೊಂದು ಕಾಲದಲ್ಲಿ ಎಲ್ಲ ಮನುಷ್ಯಸಂಬಂಧಗಳನ್ನು ಬೆಸೆಯುತ್ತಿದ್ದ ಮಾಧ್ಯಮವೆಂದರೆ ಪತ್ರ. ಪತ್ರಸಂಸ್ಕೃತಿ ಎಂಬ ಶಬ್ದವೇ ಇದೆ. ಪತ್ರಗಳಲ್ಲಿ ಮನುಷ್ಯರ ಭಾವಪ್ರಪಂಚವನ್ನು ಕಾಣಬಹುದಿತ್ತು. ಕುಟುಂಬದ ಸದಸ್ಯರ ನಡುವೆ ಇದ್ದ ಸ್ನೇಹ-ಸಂಬಂಧಗಳನ್ನು ಪತ್ರಗಳು ಗಟ್ಟಿಗೊಳಿಸುತ್ತಿದ್ದವು. ತಂದೆ ಮತ್ತು ಮಗನ ಬಾಂಧವ್ಯ, ಪರಸ್ಪರ ಪ್ರೀತಿ-ಗೌರವ-ಕಾಳಜಿ ಇತ್ಯಾದಿಗಳನ್ನು ನವಿರಾಗಿ ತೋರುವ ಪತ್ರಗಳ ಗುಚ್ಛವೇ \"ಅಪ್ಪ ಬರೆದ ಪತ್ರಗಳು\". ಇವು ಕೇವಲ ಪತ್ರಗಳಲ್ಲ; ತಂದೆಮಕ್ಕಳ ನಡುವಿನ ಆತ್ಮೀಯ ಪಿಸುಮಾತುಗಳು. ಹೃದಯದ ಭಾಷೆ ಇಲ್ಲಿ ಹಾಳೆಗಳಲ್ಲಿ ಅನಾವರಣಗೊಂಡಿದೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41846538829908,"sku":"AP-54","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Appabaredapatragalu1.1.png?v=1738318084"},{"product_id":"jammamale","title":"Jammamale","description":"\u003cp\u003eಅತ್ತ ಸಮುದ್ರ, ಇತ್ತ ಮಲೆಘಟ್ಟ - ನಡುಮಧ್ಯೆ ಅರಳಿನಿಂತ ಹಚ್ಚಹಸುರಿನ ಗಿರಿಕಂದರಗಳ ಸ್ವರ್ಗಭೂಮಿ ಕೊಡಗು, ಕ್ಷಾತ್ರಕ್ಕೊಂದು ಅನ್ವರ್ಥ. ಮಿಲಿಟರಿ, ಕೋವಿ, ಬೇಟೆ, ಯುದ್ಧ, ಕಾಫಿ, ಹಾಕಿ, ಇಗ್ಗುತ್ತಪ್ಪ, ಕಾವೇರಿ, ಹುತ್ತರಿ, ಕ್ರೌರ್ಯ-ಹಿಂಸೆಗಳ ರಕ್ತಸಿಕ್ತ ಇತಿಹಾಸ, ಕೊಡವ ಭಾಷೆ-ಸಂಸ್ಕೃತಿ - ಹೀಗೆ ಎಲ್ಲವನ್ನೂ ತನ್ನೊಳಗೆ ಕಾಪಿಟ್ಟುಕೊಂಡು ಬಂದಿರುವ ಕೊಡಗು ಪ್ರವಾಸಿಗರ ಕಣ್ಣಿಗೆ ಕಾಣುವ ಬಗೆ ಬೇರೆ; ತನ್ನೊಳಗಿನ ಜನರೆದುರು ಅನಾವರಣಗೊಳ್ಳುವ ಪರಿಯೇ ಬೇರೆ. ಕೊಡಗಿನಲ್ಲಿ ಹುಟ್ಟಿ ಬೆಳೆದ ಪತ್ರಕರ್ತ ಸಂತೋಷ್ ತಮ್ಮಯ್ಯ ವಿಧಿಯ ಮಾಟದ ಕೊಡಗಿನ ಒಳಹೊರಗನ್ನು ಈ ಕೃತಿಯಲ್ಲಿ ಓದುಗರ ಮುಂದೆ ಬಿಚ್ಚಿಟ್ಟಿದ್ದಾರೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41846538862676,"sku":"Ap-61","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Jammamale1.1.png?v=1738319099"},{"product_id":"belaku-ondu-ilege-bandu","title":"Belaku-ondu-ilege-bandu","description":"\u003cp\u003eಬೆಳಕು ಒಂದು ಇಳೆಗೆ ಬಂದು...\u003c\/p\u003e\n\n\u003cp\u003eಖ್ಯಾತ ವಾಗ್ಮಿ, ಚಿಂತಕ, ಲೇಖಕ ಪ್ರಕಾಶ್ ಮಲ್ಪೆ ಅವರು ಬರೆದಿರುವ ಈ ವಿಶಿಷ್ಟ ಕೃತಿಯಲ್ಲಿ ಶ್ರೀರಾಮ, ಹನುಮಂತ ಮುಂತಾದ ಪೌರಾಣಿಕ ವ್ಯಕ್ತಿಗಳಿಂದ ಹಿಡಿದು ಡಾ. ಅಂಬೇಡ್ಕರ್, ಪಂಡಿತ ದೀನದಯಾಳು ಉಪಾಧ್ಯಾಯ, ಡಾ. ಹೆಡಗೆವಾರ್, ವರಕವಿ ದ.ರಾ. ಬೇಂದ್ರೆ, ಸರ್ದಾರ್ ವಲ್ಲಭಭಾಯಿ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿ ಮುಂತಾದ ದೇಶದ ಐತಿಹಾಸಿಕ ವ್ಯಕ್ತಿಗಳವರೆಗೆ ಜೀವನ ವಿವರಗಳಿವೆ. ಈ ಮಹಾಪುರುಷರ ಜೀವನದ ಘಟನೆಗಳನ್ನಷ್ಟೇ ಹೇಳಿದ್ದರೆ ಇದೊಂದು ಜೀವನವೃತ್ತಾಂತವಾಗುತ್ತಿತ್ತು. ಆದರೆ ಪ್ರಕಾಶರು ಬರೆದಿರುವ ವ್ಯಕ್ತಿಚಿತ್ರಣಗಳು, ಕೇವಲ ಬದುಕಿನ ಹಂತಗಳನ್ನಷ್ಟೇ ವಿವರಿಸದೆ ವ್ಯಕ್ತಿಗಳ ಬದುಕುಗಳ ಒಳಹೊಕ್ಕು ವ್ಯಕ್ತಿತ್ವ ಚಿತ್ರಣವನ್ನೂ ಮಾಡುತ್ತವೆ. ಹಾಗಾಗಿ ಇಲ್ಲಿ ಆಯಾ ವ್ಯಕ್ತಿಗಳ ಬದುಕಿನ ಅನೇಕ ಸಂದರ್ಭಗಳು, ಅವುಗಳಲ್ಲಿ ಆಯಾ ವ್ಯಕ್ತಿಗಳು ನಡೆದುಕೊಂಡ ರೀತಿ, ಅವರ ಆಲೋಚನಾ ಸರಣಿ, ಅವರಲ್ಲಿದ್ದ ವಿಶಿಷ್ಟ ಗುಣಗಳು, ಅನನ್ಯ ಸಾಮರ್ಥ್ಯಗಳು - ಇವೆಲ್ಲವೂ ಅತ್ಯಂತ ಸ್ಪಷ್ಟವಾಗಿ ಕಾಣಿಸಿಕೊಂಡಿವೆ. ಆ ದೃಷ್ಟಿಯಿಂದ ಇದೊಂದು ಜೀವನ ಮಾರ್ಗದರ್ಶಿ ಕೃತಿಯೂ ಆಗಿದೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41846540075092,"sku":"AP-118","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-118-1.1.png?v=1738324840"},{"product_id":"aranye-ninage-sharanu","title":"Aranye ninage sharanu","description":"","brand":"nysargika sampanmoola samrakshanaa samsthe","offers":[{"title":"Kannada","offer_id":41963998707796,"sku":"SKU- 4","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Aranyeninagesharanu.png?v=1743394903"},{"product_id":"sanchara-edu-olagina-payana","title":"Sanchara - Edu Olagina Payana","description":"\u003cp\u003e'ಸಂಚಾರ - ಇದು ಒಳಗಿನ ಪಯಣ' ಪುಸ್ತಕವು ನಮ್ಮನಿಮ್ಮ ಜೀವನಗಳಲ್ಲಿ ದಿನನಿತ್ಯ ನಡೆಯುವ, ಆದರೆ ನಮ್ಮ ಗಮನಕ್ಕೆ ಬರದೆ ಮರೆಯಾಗುವ ಹತ್ತುಹಲವು ಕುತೂಹಲಕಾರಿ ಘಟನೆಗಳನ್ನು ಮುಂದಿಟ್ಟು ಜೀವನಪಾಠ ಕಲಿಸುವ ಸುಂದರ ಹೊತ್ತಗೆ. ಜೀವನಮೌಲ್ಯಗಳ ಪಾಠವನ್ನು ಹೀಗೂ ಮಾಡಬಹುದೆಂಬ ಅತ್ಯುತ್ತಮ ಮಾದರಿ; ಪಾಠಪುಸ್ತಕವಾಗಬೇಕಾದ ರಸಪೂರ್ಣ ಬದುಕಿನ ಬುತ್ತಿ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":42030075576404,"sku":"AP-125","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-125-1-1.png?v=1745315222"},{"product_id":"bhoomigondu-yelle-yellide","title":"Bhoomigondu Yelle Yellide","description":"\u003cp\u003eಇದು ಪ್ರವಾಸಕಥನವಲ್ಲ. ಪ್ರವಾಸ ಮಾಡಿದಾಗ ಕಣ್ಣಿಗೆ ಕಂಡದ್ದನ್ನು ಹೇಗೆ ನೋಡಬಹುದು ಎಂಬ ಒಂದು ನೋಟ ಅಷ್ಟೆ. ಇದೂ ಒಂದು ನೋಟ ಅಷ್ಟೆ; ಇದೇ ಸಮಗ್ರ ಎಂದಾಗಲೀ ಪೂರ್ಣ ಎಂದಾಗಲೀ ಭಾವಿಸುವ ಸಂದರ್ಭ ಖಂಡಿತಾ ಇಲ್ಲ. ಪ್ರತಿಯೊಬ್ಬನದೂ ಒಂದು ನೋಟ ಇದ್ದೇ ಇರುತ್ತದೆ. ಪ್ರತಿಯೊಬ್ಬನ ನೋಟವೂ ಕಾಲಕ್ಕೆ ತಕ್ಕಂತೆ ಬದಲಾಗುತ್ತಲೂ ಇರುತ್ತದೆ. \u003cbr\u003eಸಂಘಟನೆಯ ಕಾರ್ಯದಲ್ಲಿ ಮನುಷ್ಯರ ಭೇಟಿಯೇ ಮುಖ್ಯ. ಸ್ಥಾನವನ್ನು ನೋಡಬೇಕೆಂಬ ಹಂಬಲದಿಂದ  ಹೊರಟಾಗ ಪ್ರಕೃತಿ ಮತ್ತು ಮನುಷ್ಯನಿರ್ಮಿತಿಗಳು ಮುಖ್ಯವಾಗುತ್ತವೆ. \u003cbr\u003eಮನುಷ್ಯರ ಭೇಟಿ ಎಷ್ಟು ಇಷ್ಟವೋ ಅಷ್ಟೇ ಇಷ್ಟ ಪ್ರಕೃತಿಯ ಮತ್ತು ಮನುಷ್ಯನ ಪ್ರಾಚೀನ ನಿರ್ಮಿತಿಯ ಜತೆಗಿರುವುದು. ಇಲ್ಲಿ ಇವೆರಡೂ ಹಂಬಲಗಳ ಸಂಮಿಲನವಿದೆ. ಇವೆರಡನ್ನೂ ಸಂತುಲನಗೈಯಲು ಪ್ರಯತ್ನಿಸಲಾಗಿದೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":42137670189140,"sku":"AP-104","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-104-1-1_6440f51e-3e20-42c4-8ad7-459e814c3933.png?v=1749285216"},{"product_id":"manomaya","title":"Manomaya","description":"\u003cp\u003eಮನಸ್ಸು ಅಂದರೆ ಏನೆಂದು ನಮ್ಮ ಬುದ್ಧಿಗೂ, ಮನಸ್ಸಿಗೂ ಗೊತ್ತಿಲ್ಲ ಎಂದು ಹೇಳಬಹುದು. ಮನಸ್ಸು ಏನು ಎಂದು ನಮ್ಮ ಮನಸ್ಸಿಗೇ ಗೊತ್ತಿಲ್ಲ ಎಂದರೆ ಅದೊಂದು ವಿರೋಧಾಭಾಸ. ಮನಸ್ಸು, ಅದರ ಕ್ರಿಯೆ, ಅದರ ಸ್ಥಾನ, ಅದಕ್ಕೂ, ಆತ್ಮಕ್ಕೂ, ಬುದ್ಧಿಗೂ ಇರುವ ಸಂಬಂಧದಬಗ್ಗೆ ಪೂರ್ವದ, ಪಶ್ಚಿಮದ ಅನೇಕಾನೇಕ ಚಿಂತಕರು ಕಳೆದ ಎರಡು ಮೂರು ಸಾವಿರ ವರ್ಷಗಳಲ್ಲಿ ಸತತವಾಗಿ ಆಲೋಚನೆಯನ್ನು ಮಾಡುತ್ತ ಬಂದಿದ್ದಾರೆ. ನಮ್ಮಲ್ಲಿಯೂ ಕೂಡ ಶಾಸ್ತçಗ್ರಂಥಗಳಲ್ಲಿ ವ್ಯವಸ್ಥಿತವಾಗಿ ಇದೆ. ಇಂಥ ಒಂದು ಚಿಂತನಧಾರೆಯನ್ನು ಪುಸ್ತಕರೂಪವಾಗಿ ತರುವ ಡಾ. ಸುಂಕಸಾಳರವರ ಈ ಪ್ರಯತ್ನ ತುಂಬ ಶ್ಲಾಘ್ಯವಾದದ್ದು.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":42137758040148,"sku":"AP-126","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-126Manomaya_cc75a362-550e-416b-81da-d2a551d0786a.png?v=1749285950"},{"product_id":"sahithyada-svatva","title":"Sahithyada Svatva","description":"\u003cp\u003eತನ್ನತನವನ್ನು ಸೂಚಿಸುವ `ಸ್ವ'ತ್ವ ಪದವು ಬಹುತೇಕರಿಗೆ ಅಪರಿಚಿತ. ಸ್ವದೇಶೀ, ಸ್ವಭಾಷಾ, ಸ್ವಭೂಷಾ, ಸ್ವಭಾವ, ಸ್ವಗುಣ ಇತ್ಯಾದಿ ಹಲವು ಪದಗಳ ಪ್ರಾರಂಭದ ಉಪಸರ್ಗವಾಗಿ ಇರುವುದು ‘ಸ್ವ'. ನಮ್ಮ ಸಾಹಿತ್ಯದ ಸ್ವತ್ವವನ್ನು ಮರೆತುಬಿಡುವುದೂ ಸಲ್ಲ, ಅದನ್ನು ಹುಡುಕಾಡುವ ನಿಟ್ಟಿನಲ್ಲಿ ಪರಕೀಯ ನೆಲದ ಸಾಹಿತ್ಯದ ಮೊರೆಹೋಗುವುದೂ ಸಲ್ಲ ಮತ್ತು ಇದೇ ನಿಟ್ಟಿನಲ್ಲಿ ನಮ್ಮ ನೆಲದ ನಂಟಿನಿAದ ಕಳಚಿಕೊಳ್ಳುವುದೂ ಸಲ್ಲ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":42137777373268,"sku":"AP-132","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-132Sahityadasvathva.png?v=1749287009"},{"product_id":"himadriya-madilalli-midiva-manasa","title":"Himadriya Madilalli Midiva Manasa","description":"\u003cp\u003e\u003cspan\u003e\u003cstrong\u003eಹಿಮಾಲಯ ನಿಗೂಢತೆ, ಅಚ್ಚರಿ ಮತ್ತು ಅನೇಕ ಪರಮ ರಹಸ್ಯಗಳನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿರುವ ತಾಣ. ಜಡಬದುಕಿಗೆ ಚೈತನ್ಯದ ಪರಮೌಷಧಿ ಒದಗಿಸುವ, ಸುಪ್ತಚೇತನವನ್ನು ಬಡಿದೆಬ್ಬಿಸುವ ಶಕ್ತಿ ಹಿಮಾಲಯಕ್ಕಿದೆ. ಪದಗಳ ಚೌಕಟ್ಟಿನಲ್ಲಿ, ವಾಕ್ಯಗಳ ಪರಿಧಿಯಲ್ಲಿ ಶಿವ ಮತ್ತು ಹಿಮಾಲಯವನ್ನು ಕಟ್ಟಿಕೊಡುವುದು ಅಸಾಧ್ಯ. ಅದು ಅವರ್ಣನೀಯ, ಅವ್ಯಕ್ತ ಭಾವನಾ ಲಹರಿಯಲ್ಲಿ ಮುಳುಗಿ ಏಳುವ, ಅಂತಃಶಕ್ತಿಯ ಜಾಗೃತಿಗೆ ಪ್ರೇರಣೆ ಒದಗಿಸಬಲ್ಲ ತೀರ್ಥಕ್ಷೇತ್ರಗಳ ಸಾಲಿನಲ್ಲಿ ಬರುವ ಅಲೌಕಿಕ ಶಕ್ತಿ ಹೊಂದಿರುವ ಪುಣ್ಯಭೂಮಿ. ಸಹಸ್ರಾರು ವರ್ಷಗಳ ಸನಾತನ ಪರಂಪರೆಗೆ, ಭರತ ಖಂಡದ ಅಂತಃಸತ್ವ ಇಂದಿಗೂ ಗಟ್ಟಿಯಾಗಿ ನಿಲ್ಲಲು ಹಿಮಾಲಯ ನೀಡಿದ ಕೊಡುಗೆ ಕಡಿಮೆಯೇನಲ್ಲ.\u003c\/strong\u003e\u003c\/span\u003e\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":42188410323028,"sku":"AP-128","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-128-1.10.png?v=1751002914"},{"product_id":"sahitavyaktha","title":"Sahitavyaktha","description":"\u003cp\u003eಹಿತದಿಂದ ಕೂಡಿದ್ದು 'ಸಹಿತ' ! ಸಹಿತದ ಭಾವ ಸಾಹಿತ್ಯ. ಹಿತದಿಂದ ಕೂಡಿದ, ರಸಯುಕ್ತವಾದ ಕೃತಿಯನ್ನು ಸಾಹಿತ್ಯವೆಂದು ಪರಿಭಾವಿಸುವ ಪರಂಪರೆ ನಮ್ಮದು... ಇಂಥ ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಯರತವಾಗಿರುವ ಅಭಾಸಾಪ ಆಯೋಜಿಸಿದ ವಿವಿಧ ವಿಷಯದ ಉಪನ್ಯಾಸಗಳ ಬರೆಹರೂಪವೇ ಈ 'ಸಹಿತವ್ಯಕ್ತ'!\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":42190072250452,"sku":"SKU-49","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Sahitavyakta1-1.png?v=1751089562"},{"product_id":"himadriya-madilalli-midiva-manasa-copy","title":"Sahitasvatva","description":"\u003cp\u003eಭಾರತದ 'ಸ್ವತ್ವ' ನಿತ್ಯನೂತನ ಬೆಳ್ಳಂಬೆಳಕು! ನಿಗಿಕೆಂಡ ಕೂಡಾ... ಇದರ ಮೇಲೆ ಮೊಘಲರ, ಬ್ರಿಟೀಷರ ಮತ್ತೀಗ ಕಮ್ಯೂನಿಸ್ಟರ ಅಪವ್ಯಾಖ್ಯಾನದ ಕರಿಬೂದಿ ಮುಸುಕಿದೆ...\u003cbr\u003eಆ ಆಸಿತ ಹಾರಿಸುವ, ಅಸ್ಮಿತೆ ಬೆಳಗಿಸುವ  ಸಾಹಿತ್ಯಕ ಪ್ರಯತ್ನ 'ಸಹಿತಸ್ವತ್ವ' ಪುಸ್ತಕ !\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":42190082113620,"sku":"SKU-48","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/sahitasatva1-1.png?v=1751090078"},{"product_id":"arivina-patha","title":"Arivina Patha","description":"\u003cp\u003e\u003cbr\u003eಬಿಡಿ ಬಿಡಿಯಾಗಿ ಪ್ರಕಟವಾದ ಲೇಖನಗಳನ್ನು ಒಂದು ಅನುಕ್ರಮಣಿಕೆಯಲ್ಲಿ ಜೋಡಿಸಿರುವುದರಿಂದ, ಓದುಗರಿಗೆ ಒಂದು ಚೌಕಟ್ಟಿನಲ್ಲಿ ವಿಷಯಗಳು ಗ್ರಹಿಸಲು ಅನುಕೂಲವಾಗುತ್ತದೆ. ಬರವಣಿಗೆ ಒಂದು ಸಾಮಾಜಿಕ ಹೊಣೆಗಾರಿಕೆ. ಹೀಗಾಗಿ ಪ್ರತೀಬಾರಿ ಲೇಖನಿಯನ್ನು ಕೈಗೆತ್ತಿಕೊಂಡಾಗಲೂ ಅದು ಓರ್ವ ಲೇಖಕನಾಗಿ ನಿರ್ವಹಿಸುತ್ತಿರುವ ಜವಾಬ್ದಾರಿ ಎನ್ನುವ ಅರಿವಿನೊಂದಿಗೆ ವಿಚಾರಗಳಿಗೆ ಲೇಖನದ ರೂಪ ಕೊಡಲಾಗಿದೆ. ಈ ಹಿನ್ನೆಲೆಯೊಳಗೆ ಇಲ್ಲಿರುವ ಬರಹಗಳು ರೂಪು ಪಡೆದಿದೆ. ಈ ಎಲ್ಲಾ ಲೇಖನಗಳ ನಡುವೆ ಒಂದು ಸಾಮಾನ್ಯ ಸೂತ್ರವಿದೆ. ರಾಷ್ಟ್ರೀ \u003cbr\u003eಯ ವಿಚಾರಗಳ ಕುರಿತಾದ ಬೇರೆ ಬೇರೆ ಆಯಾಮ ಚರ್ಚೆ ಇಲ್ಲಿದೆ. ಇಲ್ಲಿರುವುದು ಗತ ವಿಚಾರವೂ ಹೌದು, ವರ್ತಮಾನವೂ ಹೌದು. ನಮ್ಮ ಸುತ್ತಲಿನ ಘಟನೆಗಳಿಗೆ ಪ್ರತಿಕ್ರಿಯೆಯೂ ಇದೆ. ಉಳಿದಂತೆ ಸ್ವಾತಂತ್ರ್ಯ ಹೋರಾಟ, ಹೈದರಾಬಾದ್ ವಿಮೋಚನೆ, ಮಾತೃಭಾಷಾ ಶಿಕ್ಷಣ, ಪಠ್ಯ ಪುಸ್ತಕಗಳ ಪರಿಷ್ಕರಣೆ ಕುರಿತಂತೆ ಕೆಲವು ಲೇಖನಗಳಲ್ಲಿ ವಿವೇಚಿಸಲಾಗಿದೆ.\u003cbr\u003e\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":42201666158676,"sku":"AP-41","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-41-1-1.png?v=1751521097"},{"product_id":"sanchara-a-philosophical-journey","title":"Sanchara- A philosophical journey","description":"\u003cp\u003e\u003cbr\u003e\u003cbr\u003e\u003c\/p\u003e\n\u003cp\u003e\u003cstrong\u003eSanchara - A bunch of stories that quietly unravel the layers of human nature and inner conflict. Without preaching, it gently illuminates the values that shape character and enrich the soul.\u003c\/strong\u003e\u003c\/p\u003e","brand":"Ayodhya Publications Pvt Ltd","offers":[{"title":"English","offer_id":42232740315220,"sku":"AP-135","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-135-Sanchara-1.10.png?v=1752218450"},{"product_id":"mahakaala-volume-2","title":"Mahakaala - 2","description":"\u003cp\u003e\u003cbr\u003e\u003c\/p\u003e\n\u003cp\u003eನೇತಾಜಿ ಬಾಲ್ಯದಲ್ಲಿ ಹೇಗಿದ್ದರು?\u003c\/p\u003e\n\u003cp\u003eಅವರ ವ್ಯಕ್ತಿತ್ವಕ್ಕೆ ಶಿವಾಜಿಯ ಸ್ಪೂರ್ತಿ ಮೆರುಗು ಕೊಟ್ಟದ್ದು ಹೇಗೆ?\u003c\/p\u003e\n\u003cp\u003eಪ್ರತಿಷ್ಠಿತ ಬಂಗಾಳಿ ಕುಟುಂಬದಲ್ಲಿ ಜನಿಸಿದ, ಸದಾ ಶ್ರೀಮಂತಿಕೆಯಲ್ಲೇ ತೇಲಾಡಬಹುದಾಗಿದ್ದ ಯುವಕ ಸುಭಾಷ್ ಯಾಕೆ ಐಸಿಎಸ್ ಪರೀಕ್ಷೆ ಬರೆದರು? ಬರೆದು ತೇರ್ಗಡೆಯಾದ ಮೇಲೂ ಸಹ ಯಾಕೆ ಆ ಕೆಲಸಕ್ಕೆ ರಾಜೀನಾಮೆ ಕೊಟ್ಟರು? \u003c\/p\u003e\n\u003cp\u003eಗಾಂಧೀಜಿಗೂ ಅವರಿಗೂ ಯಾವ ಕಾರಣಕ್ಕೆ ಭಿನ್ನಾಭಿಪ್ರಾಯ ಬಂತು? ನೆಹರು ಮತ್ತು ಗಾಂಧೀಜಿಯ ಪರಿವಾರ ಕಾಂಗ್ರೆಸ್ಸಿನ ಒಳಗೆ ನೇತಾಜಿಯವರ ವಿರುದ್ಧ ಏನೇನು ಪಿತೂರಿಗಳನ್ನು ಮಾಡಿತು?\u003c\/p\u003e\n\u003cp\u003eಈ ಎಲ್ಲ ಘಟನಾವಳಿಗಳ ಸುತ್ತ ತಿರುಗುತ್ತದೆ 'ಮಹಾಕಾಲ'ದ ಎರಡನೇ ಭಾಗ 'ಸ್ಥಿತಿ'.\u003c\/p\u003e\n\u003cp\u003eಇದರಲ್ಲಿ ಕಾರ್ಯಕಾರಣ ಸಂಬಂಧಗಳ ಅನ್ವೇಷಣೆ ಇದೆ, ಜೊತೆಗೆ ಯಾವ ತರ್ಕಕ್ಕೂ ಸಿಕ್ಕದ ಮನುಷ್ಯರ ಆಕಾಂಕ್ಷೆ-ದುಗುಡ-ಅಸ್ಥಿರತೆಗಳ ಶೋಧನೆಯು ಘಟನೆಗಳ ಒಳಗೆ ಬೆರೆತು ಹೋಗಿದೆ. ಮೊದಲ ಬಾರಿಗೆ ಮಾನವೀಯ ನೆಲೆಯಲ್ಲಿ ನಮ್ಮ ಇತಿಹಾಸದ ಪೂರ್ವಜರನ್ನು ನಮ್ಮ ಕಾಲಕ್ಕೆ ಬರಮಾಡಿಕೊಳ್ಳುವ ಪ್ರಯತ್ನ ಇದು.\u003c\/p\u003e\n\u003cp\u003eಇಲ್ಲಿ ಕಥನವು ಉಯ್ಯಾಲೆಯಂತೆ 'ಸೃಷ್ಟಿ'ಯಿಂದ ಹಿಂದಕ್ಕೆ ಜೀಕಿಕೊಂಡು 'ಸ್ಥಿತಿ'ಯನ್ನು ಕಥನದ ಹಂದರದಲ್ಲಿ ಹಿಡಿಯಲು ಹವಣಿಸಿದೆ.\u003c\/p\u003e\n\u003cp\u003eತ್ರಿವಳಿ ಕಾದಂಬರಿಯ ಮೊದಲ ಭಾಗ ಭಾರೀ ಜನಪ್ರಿಯತೆಯನ್ನು ಗಳಿಸಿದ ನಂತರ, ಇದೀಗ ಅದರ ಎರಡನೆ ಭಾಗ ಪ್ರಕಟವಾಗುತ್ತಿದೆ. ನಿಮ್ಮ ಪ್ರತಿಯನ್ನು ಕಾಯ್ದಿರಿಸಿ! \u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":42377378955348,"sku":"AP-114","price":399.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-114-1.1.png?v=1755515288"},{"product_id":"mahakaala-volume-2-copy","title":"Surya Pakshi","description":"\u003cp\u003eಸೂರ್ಯ ಪಕ್ಷಿ - ಇದು ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಸಂಜಯ್ ಅವರ ಒಂದು ವಿಶಿಷ್ಟ ವಿಜ್ಞಾನ ಕೃತಿಯಾಗಿದೆ. ಇದನ್ನು ಪ್ರಾಣಿವಿಜ್ಞಾನ ಕ್ಷೇತ್ರದ ಒಂದು ಅಪೂರ್ವವಾದ ಕೃತಿ ಎನ್ನಬಹುದು. ಪ್ರಾಣಿವಿಜ್ಞಾನವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದ ಸಂಶೋಧಕರಿಗೂ ಗಮನಕ್ಕೆ ಬಾರದ ಅನೇಕ ವಿಶೇಷ, ಅಪರೂಪದ ಸಂಗತಿಗಳನ್ನು ಡಾ. ಸಂಜಯ್ ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಬಾಲ್ಯದಲ್ಲಿ ಲೇಖಕರು ಕಳೆದ ಗ್ರಾಮೀಣ ಪರಿಸರ ಹಾಗೂ ಸುತ್ತಲಿನ ಕಾಡುಗಳು ಅವರಲ್ಲಿ ಅಡಗಿದ್ದ ಸಂಶೋಧಕ ಪ್ರವೃತ್ತಿಯನ್ನು ಪ್ರೇರೇಪಿಸಿದ ಪರಿಣಾಮವನ್ನು ಈ ಕೃತಿಯ ಪುಟಪುಟಗಳನ್ನು ಕಾಣಬಹುದು. ಕನ್ನಡದಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಪ್ರಕೃತಿ ಬರಹಗಳನ್ನು ಹೋಲುವ, ಆದರೆ ಅದಕ್ಕೆ ತೀರ ಭಿನ್ನ ಧಾಟಿಯಲ್ಲಿ ಸಾಗುವ ಈ ಪರಿಸರ ಬರಹಗಳು ಕನ್ನಡಕ್ಕೊಂದು ಅನನ್ಯ ಸೇರ್ಪಡೆ ಎನ್ನಬಹುದು.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":42380786368596,"sku":"AP-133","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-_133-1.1.png?v=1755951815"},{"product_id":"idu-jeeva-iduve-jeevana","title":"Idu Jeeva Iduve Jeevana","description":"\u003cp\u003e“ಇದು ಜೀವ, ಇದುವೇ ಜೀವನ” ಎಂಬ ರವಿ ಬೆಳಗೆರೆಯ ಕೃತಿ, ಸರಳ ಜೀವನಶೈಲಿ ಹಾಗೂ ಆಧ್ಯಾತ್ಮಿಕ ಒಳನೋಟಕ್ಕಾಗಿ ಪ್ರಸಿದ್ಧರಾದ ಬೆಳಗೆರೆ ಕೃಷ್ಣಶಾಸ್ತ್ರಿ ಅವರ ಜೀವನಾಧಾರಿತ\u003cspan style=\"mso-spacerun: yes;\"\u003e  \u003c\/span\u003eನಿರೂಪಣೆ. ಈ ಕೃತಿಯಲ್ಲಿ ರವಿ ಬೆಳಗೆರೆ ಅವರು ಕೃಷ್ಣಶಾಸ್ತ್ರಿಗಳ ವೈಯಕ್ತಿಕ ಪಯಣ, ಅವರ ಉಪದೇಶಗಳು ಹಾಗೂ ಉದ್ದೇಶಪೂರ್ಣ ಮತ್ತು ವಿನಯಪೂರ್ಣ ಜೀವನದ ಮೌನಶಕ್ತಿಯನ್ನು ಆಳವಾಗಿ ಅನ್ವೇಷಿಸುತ್ತಾರೆ. ಇದು ಕೇವಲ ಜೀವಚರಿತ್ರೆಯಲ್ಲ; ಅರ್ಥಪೂರ್ಣವಾಗಿ ಬದುಕುವುದು ಎಂದರೇನು ಎಂಬುದನ್ನು ಪ್ರಶ್ನಿಸುವ ತಾತ್ವಿಕ ಕೃತಿ ಕೂಡ ಹೌದು. ಭೌತಿಕ ಆಕಾಂಕ್ಷೆಗಳಾಚೆಗೆ ಜೀವನದ ನಿಜವಾದ ಸಾರ್ಥಕತೆಯನ್ನು ಅರಿಯಲು ಈ ಪುಸ್ತಕ ಓದುಗರನ್ನು ಚಿಂತನೆಗೆ ಆಹ್ವಾನಿಸುತ್ತದೆ.\u003c\/p\u003e","brand":"Bhavana Prakashna","offers":[{"title":"Kannada","offer_id":42800563093588,"sku":"SKU-54","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/IduJeevaIduveJeevana.png?v=1767341135"}],"url":"https:\/\/www.ayodhyabooks.com\/collections\/anthology.oembed?page=2","provider":"Ayodhya Books","version":"1.0","type":"link"}