{"title":"Best Seller","description":"\u003cp\u003eExplore our collection of best-seller books, featuring the latest and most popular. Our curated selection includes chart-topping books and timeless classics, guaranteed to keep you hooked. Stay updated with the must-read books that everyone is talking about, and find your next favorite read today. Start your reading journey now and discover the books everyone is talking about!\u003c\/p\u003e","products":[{"product_id":"utta-batteyalli-horatu-bandvaru","title":"Utta Batteyalli Horatu Bandavaru","description":"\u003cp\u003e1968-71ರ ಅವಧಿಯಲ್ಲಿ ಪೂರ್ವ ಪಾಕಿಸ್ತಾನದಲ್ಲಿ ನಡೆದ ವ್ಯಾಪಕ ಹಿಂಸಾಚಾರದಲ್ಲಿ ನಲುಗಿ ಕಂಗೆಟ್ಟು ಭಾರತಕ್ಕೆ ಆಶ್ರಯಬೇಡಿ ಓಡಿಬಂದ ಹಿಂದೂಗಳ ಹೃದಯವಿದ್ರಾವಕ ಕಥೆ. ನೈಜಘಟನೆಗಳ ಸರಮಾಲೆ. ಈ ಕೃತಿ ಪ್ರಕಟವಾದ ತಿಂಗಳಲ್ಲೇ 50,000 ಪ್ರತಿ ಮಾರಾಟವಾಗಿ ದಾಖಲೆ ನಿರ್ಮಿಸಿತು. ಮಾತ್ರವಲ್ಲ, ಎರಡು ತಿಂಗಳಲ್ಲೇ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಿಗೆ ಅನುವಾದವಾಯಿತು.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41836942065748,"sku":"AP - 1","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/UttaBatteyalliHoratuBandvaru1.1.png?v=1738143198"},{"product_id":"mandooka-maharaja","title":"Mandooka Maharaja","description":"\u003cp\u003eಮಕ್ಕಳ ಕಥೆಗಳದು ಒಂದು ಮುಗ್ಧ ರಮ್ಯ ಪ್ರಪಂಚ. ಅಲ್ಲಿ ಏನು ಬೇಕಾದರೂ ಆಗಬಹುದು. ಕಾಗೆಯ ರೆಕ್ಕೆಗಳಿಗೆ ಬಣ್ಣ ಬರಬಹುದು. ಕಪ್ಪೆಯೇ ಕಾಡಿನ ರಾಜನಾಗಬಹುದು. ಆನೆಗೆ ರೆಕ್ಕೆಗಳು ಬಂದು ಅದು ಆಕಾಶದಲ್ಲಿ ಹಾರಬಹುದು. ಮನುಷ್ಯರು ಒಮ್ಮೆ ಆಕಾಶದೆತ್ತರಕ್ಕೂ ಇನ್ನೊಮ್ಮೆ ಬೆಂಕಿಕಡ್ಡಿಯ ಗಾತ್ರಕ್ಕೂ ಏರಿ ಇಳಿಯಬಹುದು. ಬದುಕಿದ್ದವರು ಕ್ಷಣಾರ್ಧದಲ್ಲಿ ಅದೃಶ್ಯರಾಗಬಹುದು; ಸತ್ತವರು ಬದುಕಬಹುದು. ಇದೊಂದು ವರ್ಣರಂಜಿತ ಚಿತ್ರಭ್ರಾಮಕ ಕಲ್ಪನಾಲೋಕ. \"ಮಂಡೂಕ ಮಹಾರಾಜ\"ದಲ್ಲಿ ಭಾರತದ ನೆರೆಹೊರೆಯ ದೇಶಗಳಲ್ಲಿ ಪ್ರಸಿದ್ಧವಾಗಿರುವ ನಕ್ಕುನಗಿಸುವಂಥ ಹಲವು ಜನಪದ ಕಥೆಗಳು ಸಂಗ್ರಹವಾಗಿವೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41823841321044,"sku":"AP - 9","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/MankookaMhaaraaj9.1.png?v=1738142739"},{"product_id":"ajji-helida-kategalu","title":"Ajji Helida Kategalu","description":"\u003cp\u003eಇಲ್ಲಿ ಮೋಸಗಾರರಿದ್ದಾರೆ, ಕಳ್ಳರು-ಸುಳ್ಳರು, ದಗಲಬಾಜಿಗಳು ಇದ್ದಾರೆ. ಕೇವಲ ಕೆಟ್ಟವರು ಮಾತ್ರವಲ್ಲ, ಸತ್ಯಸಂಧರು, ಪ್ರಾಮಾಣಿಕರು, ಕಷ್ಟಸಹಿಷ್ಣುಗಳು, ವಿಧೇಯರು ಕೂಡ ಇದ್ದಾರೆ. ಮನುಷ್ಯರಂತೆಯೇ ಪ್ರಾಣಿಪಕ್ಷಿಗಳಿವೆ. ಅವು ಮಾತಾಡುತ್ತವೆ, ಯೋಚಿಸುತ್ತವೆ, ಎದುರಾಗಲಿರುವ ಅಪಾಯಗಳನ್ನು ಉಪಾಯದಿಂದ ತಪ್ಪಿಸಿಕೊಳ್ಳುತ್ತವೆ. ಕೆಲವೊಮ್ಮೆ ಮನುಷ್ಯರು ಮತ್ತು ಪಶುಪಕ್ಷಿಗಳು ವಿನಾಕಾರಣ ಸಮಸ್ಯೆಗಳಲ್ಲಿ ಸಿಕ್ಕಿ ತೊಳಲಾಡುವುದೂ ಉಂಟು. ಪ್ರತಿ ಕಥೆಯೊಳಗೊಂದು ನೀತಿ ಇದೆ, ಬದುಕುವ ರೀತಿ ಇದೆ, ಪಾಠವಿದೆ, ಫಿಲಾಸಫಿಯಿದೆ. ಭಾರತ ಮತ್ತು ಅದರ ನೆರೆಹೊರೆಯ ಹಲವು ದೇಶಗಳಲ್ಲಿ ಪ್ರಚಲಿತವಿರುವ ಕಥೆಗಳನ್ನು ಇಲ್ಲಿ ಕನ್ನಡಕ್ಕೆ ತರಲಾಗಿದೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41825336688724,"sku":"AP - 8","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AjjiHelidaKategalu8.1.png?v=1738142740"},{"product_id":"mana-mechida-hudugi","title":"Mana Mechida Hudugi","description":"\u003cp\u003eಒಟ್ಟು ಹದಿನೇಳು ಪರಭಾಷಾ ಕಥೆಗಳ ಸುಂದರ ಕನ್ನಡಾನುವಾದ. ಮುನ್ನುಡಿ ಬರೆದಿರುವ ಕಥೆಗಾರ ಬೊಳುವಾರು ಮಹಮ್ಮದ್ ಕುಂಞಿ, ಮೂಲ ಲೇಖಕರಿಗೆ ಮತ್ತು ಅವರ ಬರಹಗಳಿಗೆ ಸಂಪೂರ್ಣ ಶರಣಾಗುತ್ತಲೇ ಓದುಗರ ಪ್ರೀತಿಯನ್ನು ಗೆಲ್ಲಬಲ್ಲ ರೋಹಿತ್ ಚಕ್ರತೀರ್ಥರ ಆಕರ್ಷಕ ನಿರೂಪಣೆಯ ರುಚಿಯನ್ನು ಅರಿಯಬೇಕಾದರೆ ಈ ಹದಿನಾಲ್ಕೂ ಕತೆಗಳನ್ನು ಏಕಾಂತದಲ್ಲಿ ಮೌನವಾಗಿ ಓದಬೇಕು ಎಂದಿದ್ದಾರೆ. ಕೃತಿಗೆ ವಿಮರ್ಶಕ ಅರವಿಂದ ಚೊಕ್ಕಾಡಿಯವರ ಬೆನ್ನುಡಿ ಇದೆ. ಟಾಲ್‌ಸ್ಟಾಯ್, ಓ ಹೆನ್ರಿ, ಮುರಕಮಿ, ಪೀಟರ್ ಬಿಷೆಲ್, ರೋಆಲ್ಡ್ ಡಾಹ್ಲ್, ಆರ್ಥರ್ ಕಾನನ್ ಡಾಯ್ಲ್, ಜ್ಯಾಕ್ ಲಂಡನ್, ಡಗ್ಲಾಸ್ ಆಡಮ್ಸ್ ಮುಂತಾದವರ ಅತ್ಯಂತ ವಿಶಿಷ್ಟ ಕಥೆಗಳು ಇಲ್ಲಿ ಒಟ್ಟುಗೂಡಿವೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41825702150228,"sku":"AP - 11","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/ManaMechidaHudugi1.1.png?v=1738393500"},{"product_id":"open-challenge","title":"Open Challenge","description":"\u003cp\u003eಪ್ರವೀಣ್ ಕುಮಾರ್ ಮಾವಿನಕಾಡು ಅವರ ವಿಶಿಷ್ಟ ವ್ಯಂಗ್ಯ, ಹಾಸ್ಯಪ್ರವೃತ್ತಿಯನ್ನು ಈ ಪುಸ್ತಕದ ಉದ್ದಕ್ಕೂ ನೋಡಬಹುದು. ಪ್ರಗತಿಪರರು, ಬುದ್ಧಿಜೀವಿಗಳು ಎಂದು ಕರೆಸಿಕೊಳ್ಳುವವರ ವೈಚಾರಿಕ ಶೂನ್ಯವನ್ನು ಎತ್ತಿತೋರಿಸುವ ಬರಹಗಳು ಇವು. ಅವರ ವಾದಗಳನ್ನೇ ಬಳಸಿಕೊಂಡು, ಆ ವಾದಗಳು ಯಾಕೆ ತರ್ಕಬದ್ಧವಾಗಿಲ್ಲ ಎಂದು ತೋರಿಸುತ್ತ, ವಿಚಾರವಾದಿಗಳ ದೊಡ್ಡ ದೊಡ್ಡ ಪ್ರಭಾವಳಿಯನ್ನೆಲ್ಲ ಕಿತ್ತೆಸೆಯುವಂಥ ಹರಿತವಾದ ಯೋಚನಾಲಹರಿ ಈ ಎಲ್ಲ ಬರಹಗಳ ವಿಶೇಷ ಅಂಶ. ಸೆಕ್ಯುಲರ್ವಾದಿಗಳ ಸುಳ್ಳು ಸಂಕಥನಗಳನ್ನು ಒಡೆಯುವ ದಾರಿಯಲ್ಲಿ ಓಪನ್ ಚಾಲೆಂಜ್ ಒಂದು ದೃಢ ಹೆಜ್ಜೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41825702182996,"sku":"AP - 12","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/OpenChallenge1.1.png?v=1738142741"},{"product_id":"ganitajnara-rasaprasangagalu","title":"Ganitajnara Rasaprasangagalu","description":"\u003cp\u003eಗಂಭೀರ ವದನದ ಗಣಿತಜ್ಞರ ಬದುಕಿನಲ್ಲಿ ನಡೆದುಹೋದ ಸಣ್ಣಪುಟ್ಟ, ಆದರೆ ಸ್ವಾರಸ್ಯಕರವಾದ ಸಂಗತಿಗಳನ್ನು ಇಲ್ಲಿ ಒಟ್ಟಾಗಿ ಸಂಗ್ರಹಿಸಿ ಕೊಡಲಾಗಿದೆ. ಉದಂತಕಥೆ, ದೃಷ್ಟಾಂತಕಥೆ ಎಂದೆಲ್ಲ ಕರೆಸಿಕೊಳ್ಳಬಹುದಾದ ಇಲ್ಲಿನ ಬಹಳಷ್ಟು ಕಥೆಗಳಲ್ಲಿ ದೊಡ್ಡ ಸಂದೇಶಗಳೇ ಹುದುಗಿವೆ. ಈ ಪ್ರಸಂಗಗಳನ್ನು ಓದುಗರು ಸುಮ್ಮನೇ ಓದಿ ನಕ್ಕು ಸಂತೋಷ ಪಡಬಹುದು, ಇಲ್ಲವೇ ಭಾಷಣಕಾರರು ತಮ್ಮ ಮಾತಿನ ಮಧ್ಯೆ ಉದಾಹರಣಾರ್ಥ ಬಳಸಬಹುದು. ಶಿಕ್ಷಕರು ಈ ಪ್ರಸಂಗಗಳನ್ನು ಬಳಸಿಕೊಂಡು ತಮ್ಮ ತರಗತಿಯ ಪಾಠಪ್ರವಚನವನ್ನು ರಸವತ್ತಾಗಿ ಮಾಡಿಕೊಳ್ಳಬಹುದು. ಗಣಿತದ ಹಿನ್ನೆಲೆ ಇರದವರಿಗೂ ಇಲ್ಲಿನ ಕಥೆಗಳು ಆಪ್ತವಾಗುತ್ತವೆ. ಬದುಕಿನಲ್ಲಿ ಎದುರಾಗುವ ಕೆಲವು ಸನ್ನಿವೇಶಗಳಲ್ಲಿ ಮನುಷ್ಯರು ಹೇಗೆ ವರ್ತಿಸುತ್ತಾರೆ ಎಂಬುದನ್ನು ಈ ಪ್ರಸಂಗಗಳು ಬಹಳ ಚೆನ್ನಾಗಿ ವಿವರಿಸುತ್ತವೆ. ಕೃತಿಯ ಕೊನೆಯಲ್ಲಿ ಐವತ್ತಕ್ಕೂ ಹೆಚ್ಚು ಗಣಿತಜ್ಞರ ಬದುಕಿನ ವಿವರಗಳನ್ನು ಕೊಡಲಾಗಿದೆ. ಇದು ಆಯಾ ವ್ಯಕ್ತಿಗಳ ಬಗ್ಗೆ ಆಸಕ್ತಿ ಇರುವವರಿಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಅನುಕೂಲ ಮಾಡುತ್ತದೆ. ಮಕ್ಕಳಲ್ಲಿ ಗಣಿತಾಸಕ್ತಿ ಅರಳಿಸಲು ಇದೊಂದು ಅತ್ಯುತ್ತಮ ಕೊಡುಗೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41825702936660,"sku":"AP - 14","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/GanitajnaraRasaprasangagalu1.1.png?v=1738142744"},{"product_id":"muttajjiya-paakshale","title":"Muttajjiya Paakshale","description":"\u003cp\u003eಮುತ್ತಜ್ಜಿಯ ಪಾಕಶಾಲೆ, ಅಯೋಧ್ಯಾ ಪ್ರಕಾಶನದ ೧೫ನೆಯ ಪ್ರಕಟಿತ ಕೃತಿ. ಸುಮಾರು ೬ ದಶಕಗಳ ಹಿಂದೆ ಸರಸ್ವತಮ್ಮ ಎಂಬವರು ಬರೆದಿಟ್ಟ ಅಡುಗೆ ರೆಸಿಪಿಗಳ ಸಂಗ್ರಹ ಇದು. ಮೂಲತಃ ತಮಿಳುನಾಡಿನವರಾದ, ವಿವಾಹವಾಗಿ ಕೋಲಾರದಲ್ಲಿ ನೆಲೆಸಿದ ಸರಸ್ವತಮ್ಮ ಬಹುಮುಖಪ್ರತಿಭೆ. ತುಂಬಿತುಳುಕುವ ಜೀವನೋತ್ಸಾಹವಿದ್ದ ಗಟ್ಟಿಗಿತ್ತಿ. ಅವರು ಮಾಡುತ್ತಿದ್ದ ಅಡುಗೆ-ತಿಂಡಿ ಇಡೀ ಕುಟುಂಬದ ಫೇವರಿಟ್. ಕುಟುಂಬದ ಚಿಕ್ಕಮಕ್ಕಳು ಈ ಕೋಲಾರಜ್ಜಿಯ ಕೈರುಚಿಯನ್ನು ಸವಿಯಲೆಂದೇ ಬೇಸಗೆ ರಜೆಗಳನ್ನು ಎದುರುನೋಡುತ್ತಿದ್ದರು. ಸರಸ್ವತಮ್ಮನವರು ತಮ್ಮ ಮಕ್ಕಳ ಕೈಯಲ್ಲಿ ಬರೆಸಿಟ್ಟ ರೆಸಿಪಿ ಪುಸ್ತಕ, ೬೦ ವರ್ಷಗಳ ನಂತರ ಇದೀಗ ಪುಸ್ತಕರೂಪ ಕಾಣುತ್ತಿದೆ. ಪಲ್ಯ, ಗೊಜ್ಜು, ಅನ್ನದ ವೈವಿಧ್ಯ, ಸಾರು-ಸಾಂಬಾರು, ಅಡುಗೆ ಪುಡಿಗಳು, ಖಾರದ ತಿನಿಸು, ಸಿಹಿಭಕ್ಷಗಳು... ಹೀಗೆ ಯಾವೊಂದನ್ನೂ ಬಿಡದೆ ಷಡ್ರಸಗಳ ಭೂರಿಭೋಜನವನ್ನು ಓದುಗ ಇಲ್ಲಿ ಸವಿಯಬಹುದು.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41825702969428,"sku":"AP - 15","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/MuttajjiyaPaakshale1.1.png?v=1738142745"},{"product_id":"tippu-nija-kanasugalu","title":"Tippu Nija Kanasugalu","description":"\u003cp\u003e\u003cstrong\u003eಟಿಪ್ಪು ನಿಜಕನಸುಗಳು\u003c\/strong\u003e ಕೃತಿಯಲ್ಲಿ ಇತಿಹಾಸದ ಹಲವು ಘಟನೆಗಳನ್ನು ಅತ್ಯಂತ ಶಕ್ತಿಶಾಲಿ ಸಂಭಾಷಣೆಗಲ್ಲಿ, ದೃಶ್ಯಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಟಿಪ್ಪುವಿನ ವ್ಯಕ್ತಿತ್ವದೊಳಗೆ ಸೂಕ್ಷ್ಮದರ್ಶಕವಿಟ್ಟು ನೋಡಿರುವಂತೆ ಆತನ ಬದುಕಿನ ಕತೆಯನ್ನು ಅತ್ಯಂತ ವಿಭಿನ್ನ ಶೈಲಿಯಲ್ಲಿ ಇಲ್ಲಿ ಹೇಳಲಾಗಿದೆ. ಕೃತಿಗೆ ಭಾರತದ ಮಹತ್ವದ ಸಾಹಿತಿಗಳಾದ ಡಾ. ಎಸ್. ಎಲ್. ಭೈರಪ್ಪ ಅವರ ಮುನ್ನುಡಿಯಿದೆ. ಕರ್ನಾಟಕದ ಪ್ರಖರ ಚಿಂತಕರೂ ವಾಗ್ಮಿಗಳೂ ಆಗಿರುವ ಚಕ್ರವರ್ತಿ ಸೂಲಿಬೆಲೆ ಬೆನ್ನುಡಿ ಬರೆದಿದ್ದಾರೆ. ನಾಟಕರಂಗದಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ತೊಡಗಿಸಿಕೊಂಡಿರುವ ಮತ್ತು ಮೈಸೂರು ರಂಗಾಯಣ ನಿರ್ದೇಶಕರಾದ ಅಡ್ಡಂಡ ಸಿ. ಕಾರ್ಯಪ್ಪ ಒಂದು ಅನನ್ಯ ಸಾಹಿತ್ಯಿಕ ಕೃತಿಯನ್ನು ಕನ್ನಡಕ್ಕೆ ಕೊಟ್ಟಿರುವುದರಲ್ಲಿ ಎರಡು ಮಾತಿಲ್ಲ. \u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41833807347796,"sku":"AP-36","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/TippuNijaKanasugalu1.1.png?v=1738143202"},{"product_id":"hindu-endarenu","title":"Hindu Endarenu ?","description":"\u003cstrong\u003eಹಿಂದೂ ಎಂದರೇನು?\u003c\/strong\u003e \r\n\r\nಹಿಂದೂ ಎಂಬ ಪದವು ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿದೆ. ಈ ಪದಕ್ಕೆ ಭಾರತೇತರ ಭಾಷೆಗಳ ನಿಘಂಟುಗಳಲ್ಲಿ ಹೀನಾರ್ಥವಿದೆ ಎಂದು ಕರ್ನಾಟಕದ ರಾಜಕಾರಣಿಯೊಬ್ಬರು ಹೇಳಿದ್ದು ಸುದ್ದಿಗೆ ಗ್ರಾಸವಾಗಿತ್ತು. ನಿಜಕ್ಕೂ ಹಿಂದೂ ಎಂಬ ಪದದ ಅರ್ಥವೇನು? ಅದಕ್ಕೆ ಅಸಭ್ಯ ಅಥವಾ ಅಸಹ್ಯ ಅರ್ಥವಿದೆಯೆ? ಅದನ್ನು ಆರ್ಯರು ಹುಟ್ಟುಹಾಕಿದರೆ? ಅಥವಾ ಹೊರಗಿನಿಂದ ಬಂದ ಪರದೇಶೀಯರು ಟಂಕಿಸಿದರೆ? ಹಿಂದೂ ಎಂಬ ಶಬ್ದ ಒಂದು ನದಿಗೆ ಅಥವಾ ಪ್ರಾಂತ್ಯಕ್ಕೆ ಸೀಮಿತವೆ? ಆ ಶಬ್ದವನ್ನು ತೀರ ಇತ್ತೀಚೆಗೆ ಸಾವರ್ಕರ್ ಸೃಷ್ಟಿಸಿದರೆ? ಇತ್ಯಾದಿ ಹತ್ತುಹಲವು ಪ್ರಶ್ನೆಗಳಿಗೆ ಉತ್ತರ ಕೊಡುವ ನಿಟ್ಟಿನಲ್ಲಿ ರಚನೆಯಾಗಿರುವ ಪುಟ್ಟ ಕೃತಿ \"ಹಿಂದೂ ಎಂದರೇನು?\" ಇದು ಬಹುಚರ್ಚಿತ ಪದದ ಅರ್ಥ-ವಿವರಣೆಗಳ ಜಿಜ್ಞಾಸೆಯನ್ನು ಎಲ್ಲ ಕೋನಗಳಿಂದ ಮಾಡುತ್ತದೆ.\r\n\r\n\u003cstrong\u003eಪುಸ್ತಕ ಬಿಡುಗಡೆ ದಿನಾಂಕ : 29-1-2023\r\n\r\nPre-Booking Started. \u003c\/strong\u003e","brand":"Ayodhya Publications Pvt Ltd","offers":[{"title":"Kannada","offer_id":41833807380564,"sku":"AP-37","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/HinduEndarenu1.1.png?v=1738142755"},{"product_id":"makkaligagi-swamy-siddheshwara-kategalu","title":"Makkaligagi Swamy Siddheshwara Kategalu","description":"\u003cp\u003e\u003cstrong\u003eಮಕ್ಕಳಿಗಾಗಿ ಸ್ವಾಮಿ ಸಿದ್ಧೇಶ್ವರರ ಕತೆಗಳು\u003c\/strong\u003e ವಿಜಯಪುರದ ಜ್ಞಾನಯೋಗಾಶ್ರಮದ ಮಹಾನ್ ಸಂತ ಸ್ವಾಮಿ ಸಿದ್ಧೇಶ್ವರರು ಪ್ರವಚನಗಳಿಗೆ ಪ್ರಸಿದ್ಧರು. ಅವರ ಮಾತುಗಳನ್ನು ಕೇಳಲು ಹತ್ತಾರು ಮೈಲಿಗಳಿಂದ ನಡೆದು ಅಥವಾ ಗಾಡಿಕಟ್ಟಿಸಿಕೊಂಡು ಬಂದು ಕೂರುತ್ತಿದ್ದ ಭಕ್ತರಿದ್ದರು. ಸಿದ್ಧೇಶ್ವರ ಸ್ವಾಮೀಜಿ ತಮ್ಮ ಪ್ರವಚನಗಳ ಮಧ್ಯದಲ್ಲಿ ಹತ್ತಾರು ಆಸಕ್ತಿದಾಯಕ, ಬುದ್ಧಿಪ್ರಚೋದಕ ಕತೆಗಳನ್ನು ಹೇಳುತ್ತಿದ್ದರು. ಅಂಥ ಕತೆಗಳಲ್ಲಿ ಮಕ್ಕಳಿಗೆ ತಿಳಿಹೇಳಬಹುದಾದ ಅತ್ಯಂತ ಸರಳ, ಸುಂದರ ನೀತಿಪಾಠವುಳ್ಳ ಒಟ್ಟು ೩೬ ಕತೆಗಳನ್ನು ಈ ಕೃತಿಯಲ್ಲಿ ಸಂಗ್ರಹಿಸಿಕೊಡಲಾಗಿದೆ. ರೋಹಿತ್ ಚಕ್ರತೀರ್ಥರ ನಿರೂಪಣೆಗೆ ಪ್ರಸಿದ್ಧ ಚಿತ್ರಕಲಾವಿದ ಚಿತ್ರಮಿತ್ರ ಅವರ ರೇಖಾಚಿತ್ರಗಳ ಸಾಂಗತ್ಯವಿದೆ. ಮಕ್ಕಳು ಮಾತ್ರವಲ್ಲದೆ ಹಿರಿಯರೂ ಓದಬಹುದಾದ, ಓದಿ ಮೆಲುಕು ಹಾಕಬಹುದಾದ ಸುಂದರ ನೀತಿಕತೆಗಳ ಗುಚ್ಛ ಇದು. \u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41833807413332,"sku":"AP-42","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/MakkaligagiSwamySiddheshwaraKategalu1.1.png?v=1738142756"},{"product_id":"yogadaa","title":"Yogadaa","description":"\u003cp\u003eತುಸು ಅತ್ತ ಸರಿದರೆ ಸಂಪೂರ್ಣವಾಗಿ ಧಾರ್ಮಿಕ-ಅಧ್ಯಾತ್ಮಿಕ ಗ್ರಂಥವಾಗಬಹುದಾದ, ತುಸು ಇತ್ತ ಸರಿದರೆ ಪೂರ್ಣವಾಗಿ ಸಾಮಾಜಿಕ-ಕೌಟುಂಬಿಕ ಕಾದಂಬರಿಯಾಗಬಹುದಾದ ಎರಡು ಅಪಾಯಗಳನ್ನು ಬಗಲಲ್ಲಿಟ್ಟುಕೊಂಡು, ಎರಡನ್ನೂ ಸರಿದೂಗಿಸಿಕೊಂಡು ಮುನ್ನಡೆದಿರುವ ಕೃತಿ \"ಯೋಗದಾ\". ಶ್ರೀಚಕ್ರ ಉಪಾಸನೆಯ ವಿಧಿವಿಧಾನಗಳನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿದ ಲೇಖಕಿ, ಆ ಉಪಾಸನೆಯ ಧಾರ್ಮಿಕಶ್ರದ್ಧೆಯ ಸುತ್ತ ಕೌಟುಂಬಿಕ ಏರಿಳಿತಗಳ ಕಥೆ ಹೆಣೆದಿದ್ದಾರೆ. ಶ್ರೀಚಕ್ರದ ಪೂಜೆ-ಉಪಾಸನೆಗಳು ಹರಿಯುವುದು ವಂಶವೃಕ್ಷದ ದಾರಿಯಲ್ಲಲ್ಲ; ಯಾರಿಗೆ ಅದರಲ್ಲಿ ಶ್ರದ್ಧೆ, ನಂಬಿಕೆ, ವಿಶ್ವಾಸ, ಸಮರ್ಪಣಭಾವಗಳಿರುತ್ತವೋ ಅಂಥವರಿಗೆ ಸೂಕ್ತ ಕಾಲದಲ್ಲಿ ಶ್ರೀಚಕ್ರಯಂತ್ರ ತಾನೇ ತಾನಾಗಿ ಮನೆಸೇರುತ್ತದೆಂಬ ಉದಾತ್ತ ಕಲ್ಪನೆಯೊಂದಿಗೆ ಕಥೆ ಸಾಗುತ್ತದೆ. ಭಾರತೀಯ ಸಂದರ್ಭದಲ್ಲಿ \"ಪರಂಪರಾನುಗತ\" ಎಂಬುದರ ಅರ್ಥವೇ ಹಾಗೆ. ಇಲ್ಲಿ ವಿದ್ಯೆ, ಪದವಿಗಳು - ರಾಜಪದವಿಯನ್ನೂ ಒಳಗೊಂಡು ಯಾವೊಂದೂ ಅನುವಂಶೀಯವಲ್ಲ. ಶ್ರೀರಾಮನಿಗೆ ಯುವರಾಜಪಟ್ಟವನ್ನು ಕಟ್ಟುವ ಮೊದಲು, ಅವನಿಗೆ ಸರಿಸಮನಾದ ವ್ಯಕ್ತಿಗಳು ರಾಜ್ಯದಲ್ಲಿ ಬೇರಾರಿದ್ದಾರೆಂಬುದನ್ನು ಪರಿಶೀಲಿಸುವ, ಪರೀಕ್ಷಿಸುವ ಕೆಲಸವನ್ನು ದಶರಥ ಮಾಡುತ್ತಾನೆ. ಹೀಗೆ ಯೋಗ, ಯೋಗ್ಯತೆಗಳಿದ್ದಾಗಷ್ಟೇ ಶ್ರೀಚಕ್ರವನ್ನು ಪೂಜಿಸುವ ಅರ್ಹತೆಯೊಂದು ಕೈಗೂಡುತ್ತದೆಂಬ ಸಂದೇಶವಿರುವ \"ಯೋಗದಾ\" ಶಕ್ತಿ ಆರಾಧನೆಯ ಹಲವು ಮುಖಗಳನ್ನು ತೋರಿಸುವ ಬಗೆ ಅಪೂರ್ವವಾದದ್ದು. \u003cstrong\u003e- ರೋಹಿತ್ ಚಕ್ರತೀರ್ಥ\u003c\/strong\u003e\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41833807806548,"sku":"AP-52","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Yogadaa1.1.png?v=1738143203"},{"product_id":"scientific-marvels","title":"Scientific Marvels","description":"\u003cp\u003eDive into the fascinating world of science with “Scientific Marvels,” a remarkable compilation of 25 captivating essays meticulously curated for young minds. From the profound impact of social media on society to the wonders of space exploration, from the significance of environmental conservation to the evolving landscape of technology in education, these essays offer a rich tapestry of knowledge that is both accessible and engaging. More than a collection of facts, these essays aim to ignite a lifelong passion for science and learning.\u003c\/p\u003e","brand":"Ayodhya Publications Pvt Ltd","offers":[{"title":"English","offer_id":41833808003156,"sku":"AP-82","price":299.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/ScientificMarvels1.1.png?v=1737798584"},{"product_id":"uddhavageethe","title":"Uddhavageethe","description":"\u003cp\u003eಭಗವಾನ್ ಶ್ರೀಕೃಷ್ಣನ ಅಂತಿಮ ಸಂದೇಶ: ಉದ್ಧವಗೀತೆ - ಮುರಳೀಧರ ಅನಂತಮೂರ್ತಿ\u003c\/p\u003e\n\n\u003cp\u003eಭಗವಾನ್ ಶ್ರೀಕೃಷ್ಣ ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಅರ್ಜುನನಿಗೆ ಗೈದ ಗೀತೋಪದೇಶ ಎಲ್ಲರಿಗೂ ಗೊತ್ತಿದೆ. ಆದರೆ ಶ್ರೀಕೃಷ್ಣನು ತನ್ನ ಇಳಿಗಾಲದಲ್ಲಿ ತನ್ನ ಶಿಷ್ಯ-ಸ್ನೇಹಿತ ಉದ್ಧವನಿಗೆ ಕೊಟ್ಟ ಸಂದೇಶದ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇಲ್ಲ. ತತ್ತ್ವದ ದೃಷ್ಟಿಯಲ್ಲಿ ಭಗವದ್ಗೀತೆಯಷ್ಟೇ ಮಹತ್ವಪೂರ್ಣವಾದ ಉದ್ಧವಗೀತೆ ಸಾರಪೂರ್ಣ, ವೈಚಾರಿಕತೆಯಿಂದ ಪರಿಪೂರ್ಣ. ಸುತ್ತಲಿನ ನಿಸರ್ಗವನ್ನು ನೋಡಲು ಹೊಸ ದೃಷ್ಟಿ ಕೊಡುವ ಈ ಗೀತೆ ಬುದ್ಧಿಗೆಷ್ಟೋ ಮನಸ್ಸಿಗೂ ಅಷ್ಟೇ ಹಿತಕಾರಿ. ಇದನ್ನು ಹರಿದಾಸರಾದ ಮುರಳೀಧರ ಎ. ಕನ್ನಡಕ್ಕೆ ತಂದಿದ್ದಾರೆ. ಶ್ರೀ ಮಲ್ಲಾರೆಡ್ಡಿಯವರ ಮುನ್ನುಡಿಯಿದೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41833808199764,"sku":"AP-78","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Uddhavageethe1.1.png?v=1738143206"},{"product_id":"ayodhya-sachitra-ramayana-kannada","title":"Ayodhya Sachitra Ramayana (Kannada)","description":"\u003cp\u003eಅಯೋಧ್ಯಾ ಪಬ್ಲಿಕೇಷನ್ಸ್ ಪ್ರೈ.ಲಿ,-ನ ಹೆಮ್ಮೆಯ ಪ್ರಕಟಣೆ 'ಅಯೋಧ್ಯಾ ಸಚಿತ್ರ ರಾಮಾಯಣ' ಮೂಲ ಶ್ರೀಮದ್ವಾಲ್ಮೀಕಿರಾಮಾಯಣಕ್ಕೆ ನಿಷ್ಠವಾಗಿದೆ.\u003c\/p\u003e\n\n\u003cp\u003eಇದು ಸುಮಾರು 120 ವರ್ಣಚಿತ್ರಗಳ ಮೂಲಕ ರಾಮಾಯಣ ಕತೆಯನ್ನು ನಿರೂಪಿಸುವ ಪ್ರಯತ್ನ.ಬರಹಕ್ಕೆ ಖ್ಯಾತ ಕಲಾವಿದ ಶ್ರೀ ನೀರ್ನಳ್ಳಿ ಗಣಪತಿ ಹೆಗಡೆ ಅವರ ಚಿತ್ರಗಳಿವೆ. ಮೂಲ ರಾಮಾಯಣದ ಯಾವ ಮುಖ್ಯ ವಿವರಣೆಯನ್ನೂ ಕೈಬಿಡದೆ ಅತ್ಯಂತ ಸರಳ ಭಾಷೆಯಲ್ಲಿ, ಚಿತ್ರವತ್ತಾಗಿ ಕತೆಯನ್ನು ನಿರೂಪಿಸಿರುವುದು ಇಲ್ಲಿನ ವಿಶೇಷ. ಆಕರ್ಷಕ ವರ್ಣಚಿತ್ರಗಳು, ಕಾಫಿ ಟೇಬಲ್ ಪುಸ್ತಕದ ಗಾತ್ರ, ನಯವಾದ ಹಾಳೆಗಳು ಈ ಕೃತಿಯ ವಿಶೇಷ. ಮಕ್ಕಳಷ್ಟೇ ಅಲ್ಲ ಹಿರಿಯರಿಗೂ ಇಷ್ಟವಾಗುವ ಚಿತ್ರ-ವಿವರಣೆ-ಗುಣಮಟ್ಟ.\u003c\/p\u003e\n\n\u003cp\u003eಪ್ರತಿಯೊಂದು ಮನೆಯಲ್ಲೂ ಇರಲೇಬೇಕಾದ ಸಂಗ್ರಹಯೋಗ್ಯ ಸಾರ್ವಕಾಲಿಕ ರಾಮಾಯಣ ಗ್ರಂಥವಿದು.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41834731536468,"sku":"AIR-01","price":499.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AyodhyaSachitraRamayana-1.1.png?v=1738148931"},{"product_id":"ayodhya-illustrated-ramayana-english","title":"Ayodhya Illustrated Ramayana (English)","description":"\u003cp\u003eAn attempt to present the complete Ramayana in a total of 120 illustrations. Each page in the work has an illustration with a corresponding description. The illustrations are created by Nirnalli Ganapathi, a famous artist from Karnataka. Story is entirely faithful to the original Ramayana by Maharshi Valmiki. This work is being published in Kannada, English, Telugu and Hindi in the first phase.\u003cbr\u003e\nWith the aim of bringing the Ramayana to little children and with an intent to develop creative thought in our children, this illustrated work of Ramayana is being published. We intend to publish this work in all Indian languages. It is our aspiration that all children of India should be able to read and visualize Srimad Valmiki Ramayana at a young age.\u003c\/p\u003e","brand":"Ayodhya Publications Pvt Ltd","offers":[{"title":"English","offer_id":41834731569236,"sku":"AIR-02","price":499.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AyodhyaIllustratedRamayana1.1.png?v=1737823290"},{"product_id":"kannadadalli-shri-shankara","title":"Kannadadalli Shri Shankara","description":"\u003cp\u003eಸಂಸ್ಕೃತದಲ್ಲಿ ಸ್ತೋತ್ರಸಾಹಿತ್ಯಕ್ಕೆ ವಿಶೇಷ ಸ್ಥಾನವಿದೆ. ಅಲ್ಲಿ ದೇವತಾಸ್ತುತಿಯೇ ಪ್ರಧಾನವಾದರೂ ಸಾಹಿತ್ಯಾಂಶಗಳಿಗೆ ಬಹಳಷ್ಟು ಅವಕಾಶವಿದೆ. ಅಂಥ ಎಲ್ಲ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ದೇವರ ಸ್ತುತಿಗಳನ್ನು ಭಕ್ತಿಭಾವಪೂರ್ಣವಾಗಿ ರಚಿಸಿ ಸ್ತೋತ್ರಸಾಹಿತ್ಯಕ್ಕೂ ಅಗ್ರಮಾನ್ಯತೆಯನ್ನೂ ಅನನ್ಯತೆಯನ್ನೂ ತಂದವರು ಶ್ರೀ ಶಂಕರಾಚಾರ್ಯರು. ಅವರ ಬಹಳಷ್ಟು ಸ್ತೋತ್ರಗಳು ಜನಮಾನಸದಲ್ಲಿ ನೆಲೆಯಾಗಿವೆ; ಜನಸಾಮಾನ್ಯರ ನಾಲಗೆಯಲ್ಲೂ ನಲಿಯುತ್ತಿವೆ. ಶ್ರೀಶಂಕರರ ಎಲ್ಲ ಸ್ತೋತ್ರಗಳ ಸರಳ ಭಾವಾನುವಾದ ಇರುವ 'ಕನ್ನಡದಲ್ಲಿ ಶ್ರೀ ಶಂಕರ' ಕನ್ನಡಸಾಹಿತ್ಯಕ್ಕೊಂದು ಅನನ್ಯ ಕೊಡುಗೆ.\u003c\/p\u003e\n\n\u003cp\u003eಗಣೇಶ, ಶಿವ, ದೇವಿ, ವಿಷ್ಣು ಮುಂತಾದ ಹಲವು ದೇವರ ಕುರಿತು ಶಂಕರರು ಅತ್ಯಂತ ಸುಂದರ, ಸರಳ, ಪದಲಾಲಿತ್ಯಪೂರ್ಣ, ಭಾವಸಮೃದ್ಧ, ಭಕ್ತಿಭಾವೋಜ್ಜ÷ಕೇವಲ ಸ್ತೋತ್ರಗಳನ್ನು ರಚಿಸಿದ್ದಾರೆ. ಇವು ಶಬ್ದಾರ್ಥ ಅಲಂಕಾರಗಳಿAದ ಹೊಳೆಯುತ್ತವೆ. ಆದಿ, ಅಂತ್ಯಪ್ರಾಸಗಳಿAದ ತುಂಬಿರುವುದರಿಂದ ಪಠಿಸಲು ಮತ್ತು ನೆನಪಿಡಲು ಕೂಡ ಸುಲಭವಾಗಿವೆ. ಶಂಕರರು ಸ್ತೋತ್ರಗಳ ಮೂಲಕ ವೇದಾಂತಸಾರವನ್ನೂ ಹೇಳುವ ಅತಿ ವಿಶಿಷ್ಟ ಪ್ರಯೋಗಗಳನ್ನು ಮಾಡಿದ್ದಾರೆ. ಸನಾತನಧರ್ಮದಲ್ಲಿ ಸಗುಣೋಪಾಸನೆಗೆ ಅವಕಾಶವಿಲ್ಲ; ಶೈವರು ಶಿವನನ್ನಲ್ಲದೆ ಅನ್ಯ ದೇವರುಗಳನ್ನು ಸ್ತುತಿಸಬಾರದು; ಬ್ರಹ್ಮದ ಉಪಾಸನೆಯ ಹೊರತಾಗಿ ಉಳಿದೆಲ್ಲ ದೇವತಾರೂಪಗಳ ಆರಾಧನೆ ನಿಷಿದ್ಧ ಮುಂತಾದ ಹತ್ತುಹಲವಾರು ಅತಾರ್ಕಿಕ ಆಕ್ಷೇಪಗಳಿಗೆ ಉತ್ತರದಂತಿದೆ ಆಚಾರ್ಯ ಶಂಕರರ ಸ್ತೋತ್ರವಾಙ್ಮಯ.\u003cbr\u003e\nಸ್ತೋತ್ರಗಳನ್ನು ಪಠಿಸಿದರೆ ಪುಣ್ಯಸಂಚಯವಂತೂ ಇದೆ. ಆದರೆ ಅದರ ಜೊತೆಗೆ, ಸ್ತೋತ್ರಗಳ ಅರ್ಥವನ್ನು ತಿಳಿದು ಪಠಿಸಿದರೆ ಮನಸ್ಸಿಗೂ ಆಹ್ಲಾದ; ದೇವರಿಗೆ ಭಕ್ತನ ಹೃದಯ ಇನ್ನಷ್ಟು ಹತ್ತಿರವಾದಂತೆ. ಹಾಗಾಗಿ ಆಚಾರ್ಯ ಶಂಕರ ರಚಯಿತ ಎಲ್ಲ ಸ್ತೋತ್ರಗಳ ಕನ್ನಡ ಅನುವಾದವಿರುವ ಈ ಕೃತಿಯು ಆ ಮಹಾಪುರುಷರ ಪ್ರಖರ ಪ್ರತಿಭೆಯನ್ನು ಕನ್ನಡಿಗರಿಗೂ ಕಾಣಿಸಲಿ. ಸಂಸ್ಕೃತದ ಪಕ್ವಫಲದ ರುಚಿಯನ್ನು ಕನ್ನಡದ ನಾಲಗೆಯೂ ಸವಿಯಲಿ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41834731896916,"sku":"AP-109","price":600.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/KannadadalliShriShankara1.1.png?v=1738142769"},{"product_id":"baladhya-hanuma","title":"Baladhya Hanuma","description":"\u003cp\u003eಹನುಮಂತನೆಂದರೆ ಯಾವ ಮಕ್ಕಳಿಗೆ ತಾನೇ ಇಷ್ಟವಿಲ್ಲ! ಧೈರ್ಯ, ಸಾಹಸ, ಬಲ, ದಾಸಭಾವ, ಉತ್ಸಾಹ ಮುಂತಾದ ಎಲ್ಲ ಗುಣಗಳಿಗೆ ಆತ ಸಂಕೇತ. ಹನುಮಂತನ ಬದುಕಿನ ಕತೆ ಎಲ್ಲರಿಗೂ ಸ್ಫೂರ್ತಿದಾಯಕ. ಹಣ್ಣೆಂದು ಭ್ರಮಿಸಿ ಸೂರ್ಯನನ್ನು ಹಿಡಿಯಹೋದ ಬಾಲ್ಯದಿಂದ ಹಿಡಿದು, ಲಂಕೆಯ ಯುದ್ಧದವರೆಗೆ ಹನುಮಂತನು ಬೆಳೆದ ಬಗೆಯು ಅಪೂರ್ವವಾದುದು. ಈ ಕತೆಯನ್ನು 80ಕ್ಕೂ ಹೆಚ್ಚು ದೊಡ್ಡ ಗಾತ್ರದ ಆಕರ್ಷಕ ವರ್ಣಚಿತ್ರಗಳ ಜೊತೆ ಓದುವುದೆಂದರೆ ಅದೊಂದು ವಿಶಿಷ್ಟ ಅನುಭವ ತಾನೆ? ಅಂಥ ಅನುಭವವನ್ನು ಕೊಡುವ ಕೃತಿಯೇ ಅಯೋಧ್ಯಾ ಪಬ್ಲಿಕೇಶನ್ ಪ್ರಕಟಿಸಿದ 'ಬಲಾಢ್ಯ ಹನುಮ'.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41834732027988,"sku":"AIR-09","price":499.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/BaladhyaHanuma1.1.png?v=1738142773"},{"product_id":"arogya-samhite","title":"Arogya Samhite","description":"\u003cp\u003eಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ -ಎಂಬ ಬಗ್ಗೆ ಪುಸ್ತಕಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಆರೋಗ್ಯ ಎಂದರೇನು? ಆರೋಗ್ಯವಂತರೆಂದು ಹೇಳಿಕೊಳ್ಳಲು ಕಾರಣವಾದ ಲಕ್ಷಣಗಳೇನು, ಮನಸ್ಸಿಗೂ ದೇಹಕ್ಕೂ ಇರುವ ಸಂಬಂಧ ಎಂಥದ್ದು , ನಾವು ಸೇವಿಸುವ ಆಹಾರ ಆರೋಗ್ಯಕ್ಕೆ ಹೇಗೆ ಜೋಡಿಸಿಕೊಂಡಿದೆ. ಆರೋಗ್ಯ ವರ್ಧನೆಗೆ ಕುಟುಂಬ-ಸಮಾಜದ ಕೊಡುಗೆ ಏನು, ಭಾರತೀಯ ದೃಷ್ಟಿಯಲ್ಲಿ ಆರೋಗ್ಯದ ಪರಿಕಲ್ಪನೆ ಏನು - ಇತ್ಯಾದಿ ಅನೇಕ ವಿಶಿಷ್ಟ ಮಾಹಿತಿಗಳನ್ನು ತುಂಬಿಕೊಂಡಿರುವ ಒಂದು ಅಪರೂಪದ ಕೃತಿಯನ್ನು ಹೆಸರಾಂತ ವೈದ್ಯ ಸಾಹಿತಿ ಡಾ ನಾ ಸೋಮೇಶ್ವರ ಬರೆದಿದ್ದಾರೆ. ಸರಳ ಮಾತುಗಳಲ್ಲಿ, ಪುಟ್ಟ ಪುಟ್ಟ ವಾಕ್ಯಗಳಲ್ಲಿ ಗಹನ ವಿಚಾರವನ್ನು ಇಲ್ಲಿ ಸುಲಲಿತವಾಗಿ ವಿವರಿಸಲಾಗಿದೆ.\u003cbr\u003e\nಇದು ಆರೋಗ್ಯವನ್ನು ಬಳಸುವವರ ಸ್ವಾಸ್ಥ್ಯ ಭಗವದ್ಗೀತೆ\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41834732126292,"sku":"AP-53","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/ArogyaSamhite1.1.png?v=1738142773"},{"product_id":"mighty-hanuman","title":"Mighty Hanuman","description":"\u003cp\u003eMighty Hanuman is a vibrant coffee-table book that tells the enchanting story of Hanuman, from his miraculous birth to his witness of the divine reunion of Shri Ram and Sita. Featuring over 80 colorful illustrations, this book captivates young readers with Hanuman's heroic adventures, imparting valuable life lessons along the way. Written in simple language, it invites children to embrace Hanuman as their very own superhero. The story, rich in action and values, concludes with the complete Hanuman Chalisa, encouraging little readers to chant and recite. This beautifully bound book is an ideal introduction to Bharatiya literature for young minds.\u003c\/p\u003e","brand":"Ayodhya Publications Pvt Ltd","offers":[{"title":"English","offer_id":41834732191828,"sku":"AIR-10","price":499.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/MightyHanuman1.1.png?v=1737876946"},{"product_id":"vachana-darshana","title":"Vachana Darshana","description":"\u003cp\u003e೧೨ನೆಯ ಶತಮಾನದಲ್ಲಿ ಕನ್ನಡದಲ್ಲಿ ಮೂಡಿಬಂದ ವಚನಸಾಹಿತ್ಯವು ವಾಙ್ಮಯ ಜಗತ್ತಿನ ಒಂದು ಅಚ್ಚರಿ. ದೇಶಾದ್ಯಂತ ನಡೆದ ಭಕ್ತಿಮಾರ್ಗದ ಪುನರುತ್ಥಾನದಲ್ಲಿ ವಚನಸಾಹಿತ್ಯದ ಪಾತ್ರವು ಮಹತ್ವದ್ದಾಗಿದೆ. ವಚನಗಳ ನಿಜವಾದ ಅರ್ಥವೇನು? ಇದನ್ನು ದರ್ಶನವೆಂದು ಏಕೆ ಕರೆಯಬೇಕು? ಪಾಶ್ಚಾತ್ಯ ಮನೋಧರ್ಮದಲ್ಲಿ ವಚನಗಳನ್ನು ಓದಿದರೆ ಮೂಡುವ ತಪ್ಪುಕಲ್ಪನೆಗಳೇನು? ವಚನಗಳನ್ನು ಅರ್ಥೈಸಿಕೊಳ್ಳುವ ಸರಿಯಾದ ದೃಷ್ಟಿಕೋನ ಯಾವುದು ಇತ್ಯಾದಿ ಹಲವು ಸಂಗತಿಗಳನ್ನು ಅತ್ಯಂತ ಸ್ಪಷ್ಟವಾದ ಭಾಷೆಯಲ್ಲಿ, ಯಾವುದೇ ಗೊಂದಲಗಳಿಗೆ ಎಡೆಕೊಡದಂತೆ ತಿಳಿಸಿಕೊಡುವ ಕೃತಿಯೇ 'ವಚನದರ್ಶನ'. ಈ ಕೃತಿಗೆ ಪ.ಪೂ. ಜಗದ್ಗುರು ಶ್ರೀ ಸದಾಶಿವಾನಂದ ಮಹಾಸ್ವಾಮಿಗಳು ಗೌರವ ಸಂಪಾದಕರಾಗಿದ್ದಾರೆ. ವೇದವಾಙ್ಮಯ, ಉಪನಿಷತ್ತುಗಳು, ದರ್ಶನಗಳು ಮೊದಲಾದ ಒಟ್ಟು ಭಾರತೀಯ ಜ್ಞಾನಪರಂಪರೆಯ ಜೊತೆ ವಚನಗಳನ್ನಿಟ್ಟು ಇಲ್ಲಿ ತುಲನಾತ್ಮಕವಾಗಿ ಅಧ್ಯಯನ ಮಾಡಲಾಗಿದೆ. ವಚನಪರಂಪರೆ, ಬೆಡಗಿನ ವಚನಗಳು, ಸಾಮಾಜಿಕ ಸಾಮರಸ್ಯ, ನೈತಿಕ ಮೌಲ್ಯಗಳು, ಕಲ್ಯಾಣರಾಜ್ಯ ಮುಂತಾದ ಹಲವು ಸಂಗತಿಗಳ ಕುರಿತು ಇಪ್ಪತ್ತು ವಿಷಯತಜ್ಞರು ವಿದ್ವತ್ಪೂರ್ಣ ಲೇಖನಗಳನ್ನು ಬರೆದಿದ್ದಾರೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41834732224596,"sku":"AP-58","price":299.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/VachanaDarshana1.1.png?v=1738217360"},{"product_id":"makkaligagi-sri-shridhara-swamy-kategalu","title":"Makkaligagi Sri Shridhara Swamy Kategalu","description":"\u003cp\u003eಶ್ರೀ ಶ್ರೀಧರ ಸ್ವಾಮಿಗಳು ನಿಜಕ್ಕೂ ದಂತಕಥೆ. ಅದೆಷ್ಟು ಪವಾಡಗಳನ್ನು ಮಾಡಿದರೋ, ಎಲ್ಲಾ ಶಕ್ತಿಯನ್ನೂ ತಮ್ಮ ಕಮಂಡಲದೊಳಗಿನ ತೀರ್ಥದಲ್ಲಿಯೇ ಇಟ್ಟುಕೊಂಡಿದ್ದರೋ ಏನೋ! ಕಾಯಿಲೆಯಿಂದ ಮುಕ್ತರಾದವರು, ಬಡತನದಿಂದ ಮೇಲೆ ಬಂದವರು, ಅಜ್ಞಾನದ ಕೂಪದಿಂದ ಮೇಲೆದ್ದವರು, ಕ್ರೂರತನ ಬಿಟ್ಟು ಕರುಣಾಮಯಿಗಳಾದವರು ಅದೆಷ್ಟು ಸಾವಿರ ಮಂದಿಯೋ. ಗುರು ಭಗವಾನರು ಎಲ್ಲರನ್ನೂ ಕೈ ಹಿಡಿದು ಕಾಪಾಡಿದರು. ಪರಮತವನ್ನು ಗೌರವಿಸುವುದರೊಂದಿಗೆ, ಸ್ವಧರ್ಮವನ್ನು ಎತ್ತಿ ಹಿಡಿದರು.ಸ್ವಾಮಿಗಳ ಜೀವನದಲ್ಲಿ ಹಿರಿಯರಿಗೆ ಮಾತ್ರವಲ್ಲದೆ ಮಕ್ಕಳಿಗೂ ಪಾಠವಿದೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41834732290132,"sku":"AP-85","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/MakkaligagiSriShridharaSwamyKategalu1.1.png?v=1738216135"},{"product_id":"ayodhya-sachitra-ramayanamu-telugu","title":"Ayodhya Sachitra Ramayanamu (Telugu)","description":"\u003cp\u003eసంపూర్ణ రామాయణాన్ని మొత్తం 120 దృష్టాంతాలలో ప్రదర్శించే ప్రయత్నం. పనిలోని ప్రతి పేజీకి సంబంధిత వివరణతో కూడిన దృష్టాంతం ఉంటుంది.\u003c\/p\u003e\n\n\u003cp\u003eకర్నాటకకు చెందిన ప్రముఖ కళాకారుడు నీర్నల్లి గణపతి ఈ చిత్రాలను రూపొందించారు. వాల్మీకి మహర్షి రాసిన అసలు రామాయణానికి పూర్తిగా కట్టుబడి ఉండే కథ.\u003c\/p\u003e\n\n\u003cp\u003eచిన్న పిల్లలకు రామాయణాన్ని తీసుకురావాలనే లక్ష్యంతో మరియు మన పిల్లలలో సృజనాత్మక ఆలోచనను పెంపొందించే ఉద్దేశ్యంతో, ఈ రామాయణ సచిత్ర రచన ప్రచురించబడుతోంది. చిన్నవయసులోనే పిల్లలందరూ శ్రీమద్ వాల్మీకి రామాయణాన్ని చదవడం, దృశ్యమానం చేయడం మా ఆకాంక్ష.\u003c\/p\u003e","brand":"Ayodhya Publications Pvt Ltd","offers":[{"title":"Telugu","offer_id":41845096677460,"sku":"AIR-04","price":499.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AyodhyaSachitraRamayanamu_Telugu_1.1.png?v=1738151523"},{"product_id":"kamasutra","title":"Kamasutra","description":"\u003cp\u003e\u003cstrong\u003eAuthor: Vatsyayana\u003c\/strong\u003e \u003cem\u003eTranslated By: Vishwanatha Hampiholi\u003c\/em\u003e ವಾತ್ಸ್ಯಾಯನ ಮಹರ್ಷಿ ವಿರಚಿತ 'ಕಾಮಸೂತ್ರ' ಹಲವು ನೂರು ವರ್ಷಗಳಿಂದ ಜನಪ್ರಿಯತೆಯನ್ನು ಕಾಯ್ದುಕೊಂಡು ಬಂದಿರುವ ಒಂದು ಚಿರಂತನ ಕೃತಿ. ಇದರ ಯಥಾವತ್ ಅನುವಾದ ಇದುವರೆಗೂ ಕನ್ನಡದಲ್ಲಿ ಬಂದಿರಲಿಲ್ಲ ಎನ್ನುವುದು ಸೋಜಿಗ. ಆ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಈಗ ಅಯೋಧ್ಯಾ ಪ್ರಕಾಶನ 'ವಾತ್ಸ್ಯಾಯನ ಕಾಮಸೂತ್ರ' ಹೊರತಂದಿದೆ. ಕಾಮಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ ಪಡೆದಿರುವ, ಸಂಸ್ಕೃತ ವಿದ್ವಾಂಸರಾದ ಡಾ. ವಿಶ್ವನಾಥ ಕೃ. ಹಂಪಿಹೊಳಿ ಇದನ್ನು ಮೂಲಕ್ಕೆ ನಿಷ್ಠವಾಗಿ ಅನುವಾದಿಸಿದ್ದಾರೆ. ಶತಾವಧಾನಿ ಡಾ. ಆರ್. ಗಣೇಶ್ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಒಂದು ದೀರ್ಘವಾದ ಪಾಂಡಿತ್ಯಪೂರ್ಣ ಪ್ರಸ್ತಾವನೆಯೂ ಇದೆ. ಅತ್ಯಂತ ಆಕರ್ಷಕ ಚಿತ್ರಗಳು ಕೃತಿಯ ಮೆರುಗನ್ನು ಹೆಚ್ಚಿಸಿವೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41846538600532,"sku":"AP-21","price":299.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Kamasutra1.1.png?v=1738314514"},{"product_id":"veer-savarkar-saahasa-yaathane-avamaana","title":"Veer Savarkar saahasa-yaathane-avamaana","description":"\u003cp\u003eಸರ್ವವನ್ನೂ ಸ್ವಾತಂತ್ರ್ಯ ಹೋರಾಟದಲ್ಲಿ ಕಳೆದುಕೊಂಡ, ಸಾವಿರಾರು ಯುವಕರಿಗೆ ಪ್ರೇರೇಪಣೆ ನೀಡಿ ಕ್ರಾಂತಿಕಾರಿಗಳನ್ನಾಗಿಸಿದ ವೀರ ಸಾವರ್ಕರ್ ಅವರನ್ನು ರಾಷ್ಟ್ರವಿರೋಧಿಗಳು ಇಂದಿಗೂ ಅಪಹಾಸ್ಯ ಮಾಡುತ್ತಿರುವುದು ವಿಪರ್ಯಾಸವೇ ಸರಿ.\u003c\/p\u003e\n\n\u003cp\u003eಸಾವರ್ಕರ್ ಅವರ ಹೋರಾಟ, ಅನುಭವಿಸಿದ ನೋವು, ಎದುರಿಸಿದ ಅವಮಾನ ಎನ್ನವನ್ನೂ ಈ ಪುಟ್ಟ ಕೃತಿಯು ತೆರೆದಿಡುತ್ತದೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41846538698836,"sku":"AP-31","price":20.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/ChakravarthiSulibele1.1.png?v=1738315300"},{"product_id":"mahakaala","title":"Mahakaala - 1","description":"\u003cp\u003eನೇತಾಜಿ ಸುಭಾಷ್ ಚಂದ್ರ ಬೋಸ್ -ಭಾರತೀಯ ಇತಿಹಾಸದ ಧ್ರುವತಾರೆ, ಅವರು ರಾಜಕೀಯವಾಗಿ ಕ್ರಿಯಾಶೀಲರಾಗಿದ್ದ ಅಲ್ಪ ಸಮಯದಲ್ಲೇ ತನ್ನ ಖಚಿತ ನಿರ್ಧಾರ, ನಿಶಿತಮತಿಗಳಿಂದ ಒಂದು ಹೊಸ ಸಂಚಲನವನ್ನೇ ಸೃಷ್ಟಿಸಿದರು. ನೇತಾಜಿ ಬದುಕಿನ ಅನೇಕ ಅದ್ಭುತ, ಅಪ್ರಕಟಿತ, ರೋಚಕ ಘಟನಾವಳಿಗಳನ್ನು ಪೋಣಿಸಿ ಕನ್ನಡದ ಹಿರಿಯ ಚಿಂತಕ ಡಾ. ಜಿ.ಬಿ. ಹರೀಶ ಬರೆದಿರುವ ಅನನ್ಯ ಕಾದಂಬರಿಯೇ -ಮಹಾಕಾಲ. ತ್ರಿವಳಿ ಸರಣಿಯ ಮೊದಲ ಸಂಪುಟದ ಹೆಸರು - ಸೃಷ್ಟಿ . ಇದು ಇದುವರೆಗೆ ಬಚ್ಚಿಟ್ಟ, ಮುಚ್ಚಿಟ್ಟ ಇತಿಹಾಸದ ಅಪೂರ್ವ ಅನಾವರಣ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41846539092052,"sku":"AP-66","price":399.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Mahakaala1.1.png?v=1738320655"},{"product_id":"kargil-tigers","title":"Kargil Tigers","description":"\u003cp\u003eKargil Tigers: Captivating stories of fearless war heroes\u003cbr\u003e\nStep into the heart-pounding saga of Kargil Tigers, a gripping book that unveils the heroic tales of India's bravehearts who stood tall during the 1999 Kargil War. This captivating narrative encapsulates the courage, unwavering determination, and selfless devotion of our soldiers as they faced adversity head-on. Meet the valiant fighters like Capt Vikram Bhatra, Rifleman Sanjay Kumar, Grenadier Yogendra Singh Yadav, and more, who etched their names in history with their remarkable feats. Immerse in this riveting account, meant to inspire and educate the young generation about the unparalleled spirit of our defenders.\u003c\/p\u003e","brand":"Ayodhya Publications Pvt Ltd","offers":[{"title":"English","offer_id":41846539223124,"sku":"AP-77","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/KargilTigers1.1.png?v=1738322877"},{"product_id":"miltry-thatha-kathe-heltare","title":"Miltry Thatha Kathe Heltare","description":"\u003cp\u003eಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀ ಬಾಬು ಕೃಷ್ಣಮೂರ್ತಿಯವರು ಐವತ್ತು ವರ್ಷಗಳ ಹಿಂದೆ ಬರೆದಿದ್ದ; ಬರೆದು ಬಹುಮಾನ ಪಡೆದಿದ್ದ 'ಮಿಲ್ಟ್ರಿ ತಾತ ಕತೆ ಹೇಳ್ತಾರೆ'. ಮಕ್ಕಳ ಸಾಹಿತ್ಯ ಜಗತ್ತಿನ ಈ ಅನನ್ಯ ಕೃತಿ, ಮಕ್ಕಳಲ್ಲಿ ಸ್ವಾತಂತ್ರ್ಯಯೋಧರ ಬಗ್ಗೆ ಪ್ರೀತ್ಯಭಿಮಾನ ಉಕ್ಕಿಸುವ ಈ ಪುಸ್ತಕ ಈಗ ಸರ್ವಾಂಗಸುಂದರವಾಗಿ ವರ್ಣಮಯವಾಗಿ ಪುನರ್ಮುದ್ರಣಗೊಂಡಿದೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41846539288660,"sku":"AP-70","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/MiltryThathaKatheHeltare1.1.png?v=1738323167"},{"product_id":"makkaligagi-sri-ramana-maharshi-kategalu","title":"Makkaligagi Sri Ramana Maharshi Kategalu","description":"\u003cp\u003eರಮಣರ ಜೀವನದ ಘಟನೆಗಳ ಬಗ್ಗೆ ವಿವಿಧೆಡೆ ದಾಖಲಾದ ಮಾಹಿತಿಯನ್ನು ಸಂಗ್ರಹಿಸಿ ಮಕ್ಕಳಿಗೆ ಹಿಡಿಸಬಹುದಾದಂತೆ ಕತೆಯ ರೂಪದಲ್ಲಿ ನೀಡಲಾಗಿದೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41846539812948,"sku":"AP-83","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/MakkaligagiSriRamanaMaharshiKategalu1.1.png?v=1738217730"},{"product_id":"makkaliggi-rani-ahalyabai-holkar-kathegalu","title":"Makkaliggi-Rani-Ahalyabayi-Holkar","description":"\u003cp\u003eಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಅಲ್ಲಿ ನಮ್ಮನ್ನು ಬೆರಗುಗೊಳಿಸುವ ಅನೇಕ ಪಾತ್ರಗಳು ಕಾಣಸಿಗುತ್ತವೆ.\u003cbr\u003e\nಅಂಥವರಲ್ಲಿ ರಾಣಿ ಅಹಲ್ಯಾಬಾಯಿ ಹೋಳ್ಕರ್ ಕೂಡ ಒಬ್ಬರು. ಒಂದೆಡೆ ಸಂಸಾರದ ಜವಾಬ್ದಾರಿಗಳನ್ನು ಸಂಭಾಳಿಸುತ್ತ,\u003cbr\u003e\nಇನ್ನೊಂದೆಡೆ ತನ್ನನ್ನೇ ನಂಬಿದ ಜನತೆ ಹಾಗೂ ಸಮಾಜದ ಒಳಿತಿಗಾಗಿ ಶ್ರಮಿಸಿದ ಅಹಲ್ಯಾ ಬಾಯಿಯ ಜೀವನವೇ\u003cbr\u003e\nಅನನ್ಯವಾಗಿದೆ. ಯುದ್ಧಭೂಮಿಯಲ್ಲಿ ವೀರ ನಾರಿಯಾಗಿ, ತನ್ನ ಜವಾಬ್ದಾರಿಗಳನ್ನು ನಿರ್ವಹಿಸುವ ವಿಚಾರದಲ್ಲಿ\u003cbr\u003e\nಕರ್ಮಯೋಗಿನಿಯಾಗಿ, ಪ್ರಜೆಗಳ ಒಳಿತಿಗಾಗಿ ಶ್ರಮಿಸಿದ ಮಾತೋಶ್ರೀ ಯಾಗಿ ಅವರು ಅನೇಕ ಸಂಘರ್ಷಗಳನ್ನು ಯಶಸ್ವಿಯಾಗಿ\u003cbr\u003e\nಎದುರಿಸಿದ್ದಾರೆ. ಇಂತಹ ಬಹುಮುಖ ವ್ಯಕ್ತಿತ್ವದ ಅಹಲ್ಯಾ ಬಾಯಿಯ ಜೀವನದ ಕಥೆಗಳು ಮಕ್ಕಳಿಗೆ ಖಂಡಿತ ಸ್ಪೂರ್ತಿ\u003cbr\u003e\nನೀಡುತ್ತವೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41846539976788,"sku":"AP-116","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Makkaliggi-Rani-Ahalyabayi-Holkar1.1.png?v=1738388728"},{"product_id":"rss-sthapakara-chintanegalu","title":"RSS Sthapakara Chintanegalu","description":"\u003cp\u003eಕರ್ಮಯೋಗವನ್ನು ರಾಷ್ಟ್ರನಿರ್ಮಾಣದೆಡೆಗೆ ಪ್ರವಹಿಸುವಂತೆ ಮಾಡಿದವರಲ್ಲಿ ಡಾ.ಕೇಶವ ಬಲಿರಾಂ ಹೆಡಗೇವಾರರು ಪ್ರಮುಖರು. ಪ್ರೇಮದಿಂದಲೂ, ಗೌರವದಿಂದಲೂ ಜನ ಅವರನ್ನು ಕರೆದದ್ದು ಡಾಕ್ಟರ್‌ಜೀ ಎಂದು. ಸಂಘಟನೆಯ ಶಕ್ತಿ ನಿಸ್ವಾರ್ಥವಾದಾಗ ಏನೆಲ್ಲ ಧನಾತ್ಮಕ ಪರಿಣಾಮ ಸಮಾಜದಲ್ಲಿ ಉಂಟಾಗಬಹುದು ಎಂಬುದಕ್ಕೆ ಡಾಕ್ಟರ್‌ಜೀ ದೂರದೃಷ್ಟಿಯೇ ಉದಾಹರಣೆ.\u003c\/p\u003e\n\n\u003cp\u003eಮನುಷ್ಯ ತನ್ನ ಕಣ್ಣಿಗೆ ಕಾಣುವ ಸಂಗತಿಗಳಿಂದ ಪ್ರೇರಿತನಾಗಿ ಯೋಚನೆ ಮಾಡುತ್ತಾನೆಯೇ ಹೊರತು ಹೊಸತಾಗಿ ಏನನ್ನೂ ಯೋಚಿಸಲಾರ. ಆದರೆ ಸಂಘದಂತಹ ಸಂಘಟನೆ 1925ಕ್ಕೂ ಮುಂಚೆ ಎಲ್ಲೂ ಇರಲಿಲ್ಲ. ಡಾಕ್ಟರ್‌ಜೀ ಸಂಘ ಸ್ಥಾಪನೆಯ ಕನಸು ಕಂಡಿದ್ದಾರೆ ಎಂದರೆ ಅದೊಂದು ಅಪ್ರತಿಮ ಸೃಷ್ಟಿ. ಆ ಕಾರಣದಿಂದಲೇ \"ಸಂಘ ಸ್ಥಾಪನೆ ದೈವ ಸಂಕಲ್ಪ ಹಾಗೂ ಸಂಘದ ಕಾರ್ಯ ದೈವ ಕಾರ್ಯ\" ಎನ್ನುವುದು.\u003c\/p\u003e\n\n\u003cp\u003eಸಂಘಕಾರ್ಯವನ್ನೇ ಜೀವನಕಾರ್ಯವನ್ನಾಗಿಸಿಕೊಂಡಿದ್ದ ಡಾಕ್ಟರ್‌ಜೀ ಬೈಠಕ್‌ಗಳಲ್ಲಿ, ಭಾಷಣಗಳಲ್ಲಿ ಹೇಳಿದ ಅಂಶಗಳು ಪುಸ್ತಕ ರೂಪದಲ್ಲಿದೆ. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರಿಗೆ ಮತ್ತು ತೊಡಲಿರುವವರಿಗೆ ಈ ಕೃತಿಯು ಪ್ರೇರಣಾದಾಯಿ.\u003c\/p\u003e","brand":"Saahithya Sangama","offers":[{"title":"Kannada","offer_id":41876829962324,"sku":"SKU-1","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/RSSStapakaraChintanegalu1.1.png?v=1739526892"},{"product_id":"saavarkar-vivaadaspada-vaarasike-2","title":"Savarkar Vivaadaspada Vaarasike - 2","description":"","brand":"Sahithya Prakashana","offers":[{"title":"Kannada","offer_id":41997300105300,"sku":"SKU-40","price":995.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/SaavarkarVivaadaspadaVaarasike-2.png?v=1744200607"},{"product_id":"sanchara-edu-olagina-payana","title":"Sanchara - Edu Olagina Payana","description":"\u003cp\u003e'ಸಂಚಾರ - ಇದು ಒಳಗಿನ ಪಯಣ' ಪುಸ್ತಕವು ನಮ್ಮನಿಮ್ಮ ಜೀವನಗಳಲ್ಲಿ ದಿನನಿತ್ಯ ನಡೆಯುವ, ಆದರೆ ನಮ್ಮ ಗಮನಕ್ಕೆ ಬರದೆ ಮರೆಯಾಗುವ ಹತ್ತುಹಲವು ಕುತೂಹಲಕಾರಿ ಘಟನೆಗಳನ್ನು ಮುಂದಿಟ್ಟು ಜೀವನಪಾಠ ಕಲಿಸುವ ಸುಂದರ ಹೊತ್ತಗೆ. ಜೀವನಮೌಲ್ಯಗಳ ಪಾಠವನ್ನು ಹೀಗೂ ಮಾಡಬಹುದೆಂಬ ಅತ್ಯುತ್ತಮ ಮಾದರಿ; ಪಾಠಪುಸ್ತಕವಾಗಬೇಕಾದ ರಸಪೂರ್ಣ ಬದುಕಿನ ಬುತ್ತಿ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":42030075576404,"sku":"AP-125","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-125-1-1.png?v=1745315222"},{"product_id":"childrens-6-story-books","title":"Children's 6 English Story Books","description":"\u003cdiv data-offset-key=\"dj4fg-0-0\" data-editor=\"9up5b\" data-block=\"true\" class=\"\"\u003e\n\u003cdiv class=\"_1mf _1mj\" data-offset-key=\"dj4fg-0-0\"\u003e\u003cstrong\u003e\u003cspan data-offset-key=\"dj4fg-0-0\"\u003e\u003cspan data-text=\"true\"\u003eWho doesn’t love a good story?\u003c\/span\u003e\u003c\/span\u003e\u003c\/strong\u003e\u003c\/div\u003e\n\u003cdiv class=\"_1mf _1mj\" data-offset-key=\"dj4fg-0-0\"\u003e\n\u003cstrong\u003e\u003cspan data-offset-key=\"dj4fg-0-0\"\u003e\u003cspan data-text=\"true\"\u003e\u003c\/span\u003e\u003c\/span\u003e\u003c\/strong\u003e\u003cbr\u003e\n\u003c\/div\u003e\n\u003c\/div\u003e\n\u003cdiv data-offset-key=\"61otp-0-0\" data-editor=\"9up5b\" data-block=\"true\" class=\"\"\u003e\n\u003cdiv class=\"_1mf _1mj\" data-offset-key=\"61otp-0-0\"\u003e\n\u003cspan data-offset-key=\"61otp-0-0\"\u003e\u003cspan data-text=\"true\"\u003eEspecially when it’s about great saints, leaders, and noble souls whose lives teach us timeless values.\u003c\/span\u003e\u003c\/span\u003e\u003cspan data-offset-key=\"bjvim-0-0\"\u003e\u003c\/span\u003e\n\u003c\/div\u003e\n\u003c\/div\u003e\n\u003cdiv data-offset-key=\"1vrh5-0-0\" data-editor=\"9up5b\" data-block=\"true\" class=\"\"\u003e\n\u003cdiv class=\"_1mf _1mj\" data-offset-key=\"1vrh5-0-0\"\u003e\u003cspan data-offset-key=\"1vrh5-0-0\"\u003e\u003cspan data-text=\"true\"\u003eAyodhya Publications brings you a beautiful collection of six inspiring books filled with stories of wisdom, courage, and kindness and also a science book.\u003c\/span\u003e\u003c\/span\u003e\u003c\/div\u003e\n\u003cdiv class=\"_1mf _1mj\" data-offset-key=\"1vrh5-0-0\"\u003e\n\u003cspan data-offset-key=\"1vrh5-0-0\"\u003e\u003cspan data-text=\"true\"\u003e\u003c\/span\u003e\u003c\/span\u003e\u003cbr\u003e\n\u003c\/div\u003e\n\u003c\/div\u003e\n\u003cdiv data-offset-key=\"7tul1-0-0\" data-editor=\"9up5b\" data-block=\"true\" class=\"\"\u003e\n\u003cdiv class=\"_1mf _1mj\" data-offset-key=\"7tul1-0-0\"\u003e\u003cspan data-offset-key=\"7tul1-0-0\"\u003e\u003cspan data-text=\"true\"\u003ePerfect for children and adults — to read, reflect, and grow.\u003c\/span\u003e\u003c\/span\u003e\u003c\/div\u003e\n\u003cdiv class=\"_1mf _1mj\" data-offset-key=\"7tul1-0-0\"\u003e\n\u003cspan data-offset-key=\"7tul1-0-0\"\u003e\u003cspan data-text=\"true\"\u003e\u003c\/span\u003e\u003c\/span\u003e\u003cbr\u003e\n\u003c\/div\u003e\n\u003c\/div\u003e\n\u003cdiv data-offset-key=\"c4ifd-0-0\" data-editor=\"9up5b\" data-block=\"true\" class=\"\"\u003e\n\u003cdiv class=\"_1mf _1mj\" data-offset-key=\"c4ifd-0-0\"\u003e\u003cspan data-offset-key=\"c4ifd-0-0\"\u003e\u003cspan data-text=\"true\"\u003eGift a book. Grow a reader. Build a culture of reading.\u003c\/span\u003e\u003c\/span\u003e\u003c\/div\u003e\n\u003cdiv class=\"_1mf _1mj\" data-offset-key=\"c4ifd-0-0\"\u003e\n\u003cspan data-offset-key=\"c4ifd-0-0\"\u003e\u003cspan data-text=\"true\"\u003e\u003c\/span\u003e\u003c\/span\u003e\u003cbr\u003e\n\u003c\/div\u003e\n\u003c\/div\u003e\n\u003cdiv data-offset-key=\"8f96g-0-0\" data-editor=\"9up5b\" data-block=\"true\" class=\"\"\u003e\n\u003cdiv class=\"_1mf _1mj\" data-offset-key=\"8f96g-0-0\"\u003e\u003cspan data-offset-key=\"8f96g-0-0\"\u003e\u003cspan data-text=\"true\"\u003eDon’t wait! Get your set today — read, share, and spark young minds!\u003c\/span\u003e\u003c\/span\u003e\u003c\/div\u003e\n\u003c\/div\u003e","brand":"Ayodhya Publications Pvt Ltd","offers":[{"title":"Default Title","offer_id":42361853149268,"sku":"Comb-3( Eng)","price":899.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Artboard1copy2_1.jpg?v=1755168038"},{"product_id":"thantrashastra-pravesha","title":"Thantrashastra Pravesha","description":"\u003cp\u003eತಂತ್ರ ಎಂದರೆ ಈಗಲೂ ಬುದ್ಧಿವಂತರಿಗೆ ಮಡಿ. ಅದರ ಹತ್ತಿರ ಹೋಗಲೂ ಭಯ ಮತ್ತು ದುರಹಂಕಾರ. ಇನ್ನು ಅದರ ಅರಿವು, ಉಪಾಸನೆ ದೂರದ ಮಾತು. ಈಗಲೇ ಹೀಗೆ ಎಂದರೆ ನೂರು  ವರ್ಷಗಳ ಹಿಂದೆ ಹೇಗಿತ್ತು ನಮ್ಮ ದೇಶದಲ್ಲಿ ತಂತ್ರಗಳ ಪರಿಸ್ಥಿತಿ ಯೋಚಿಸಿ. ತಂತ್ರ ಗ್ರಂಥ, ತಂತ್ರ ಸಾಧನೆಗಳು ಒಂದು ಕಡೆ ಕ್ರೈಸ್ತ ಮಿಶಿನರಿಗಳಿಂದ ಆಕ್ರಮಣಕ್ಕೆ, ಇನ್ನೊಂದು ಕಡೆ ಹಿಂದೂ ವಿದ್ವಾಂಸರಿಂದಲೂ ಅಪಹಾಸ್ಯ-ಅನುಮಾನಕ್ಕೆ ಒಳಗಾಗಿದ್ದವು. ಆಗ ತಂತ್ರಗಳ ನೈಜ ಮಹತ್ವ ಜಾನ್ ವುಡ್ರೋಫ್ ಗಮನಕ್ಕೆ ಬಂತು. ಕಲ್ಕತ್ತಾ ಹೈ ಕೋರ್ಟಿನ ನ್ಯಾಯಾಧೀಶರಾಗಿದ್ದ ಇವರು ತಂತ್ರಗಳ ಹಸ್ತಪ್ರತಿಗಳನ್ನು ಸಂಗ್ರಹಿಸಿದರು, ಸಂಸ್ಕೃತ ಕಲಿತರು. ಗುರುವಿನ ಮೂಲಕ ಸರಿಯಾದ ದೀಕ್ಷೆ ಪಡೆದರು. ಗುರುವಾಕ್ಯವನ್ನು ಇವರು ಮತ್ತು ಇವರ ಪತ್ನಿ ಅನುಸರಿಸಿ ಸಾಧನೆ ಮಾಡಿದರು. ತಂತ್ರಶಾಸ್ತ್ರದ ಎತ್ತರದ ಹಂತವಾದ ಪೂರ್ಣಾಭೀಷೆಕ ದೀಕ್ಷೆಯನ್ನು ಎರಡು ಸಲ ಪಡೆದರು. ಅಲ್ಲದೆ ಬೌದ್ಧಿಕವಾಗಿ ತಂತ್ರವನ್ನು ಒಂದು ಶಾಸ್ತ್ರವಾಗಿ ವಿಚಾರಪ್ರಪಂಚದಲ್ಲಿ ಸಮರ್ಥಿಸಿಕೊಂಡರು. ಅದರ ಬಗ್ಗೆ ಹಲವು ಗ್ರಂಥಗಳನ್ನು ಬರೆದರು. ಶತಮಾನ ಕಳೆದರೂ ತಂತ್ರದ ‘ಮಾನ’ ಉಳಿದಿರುವುದು ಈ ಮಹಾನುಭಾವನಿಂದ. ಯಾವುದೇ ಕನ್ನಡದ ಮಗು ತಂತ್ರ ಕುರಿತು ಓದಬೇಕಾದರೆ ಮೊದಲು ಓದಬೇಕಾದ ಪುಸ್ತಕ ನಿಮ್ಮ ಕೈಯಲ್ಲಿದೆ!\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":42772725301332,"sku":"AP-74","price":199.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-74-1.1.png?v=1766056977"}],"url":"https:\/\/www.ayodhyabooks.com\/collections\/best-seller.oembed?page=3","provider":"Ayodhya Books","version":"1.0","type":"link"}