{"title":"Fiction","description":"","products":[{"product_id":"the-god-father","title":"The god father","description":"\u003cp\u003eಹಿತವಾದುದೊಂದು ದೀಪ ಹಾಕಿಕೊಂಡು ಕುಳಿತು ಓದಲಿಕ್ಕೆ ಈ ಪುಸ್ತಕ ಕೈಗೆತ್ತಿಕೊಳ್ಳಿ. ಕಾದಂಬರಿಯ ಕೊನೆಯ ಪುಟ ಓದಿ ಮುಗಿಸುವ ತನಕ ನೀವು ಮಲಗಲಾರಿರಿ, 'ದಿ ಗಾಡ್ ಫಾದರ್' ಕಾದಂಬರಿಯ ಕಥಾವಸ್ತುವೇ ಅಂತಹುದು. ದೂರದಿಂದ ನಿಂತು ನೋಡಿದರೆ ಇದು ಭೂಗತದ ಆಗುಹೋಗುಗಳ ಕುರಿತಾದ ಕಾದಂಬರಿ ಅನ್ನಿಸುತ್ತದೆ. ಒಮ್ಮೆ ಒಳಹೊಕ್ಕು ನೋಡಿ: ಚಿನ್ನ ಮಾದಿರೆಡ್ಡಿಯ ಫ್ಯಾಮಿಲಿಯಲ್ಲಿ ನೀವೂ ಒಬ್ಬರಾಗಿಬಿಡುತ್ತೀರಿ, ಸಾವಿರಾರು ಕೂವಗಳಿರುವ ಭೂಗತದ ಹುತ್ತ ಈ ಕಾದಂಬರಿಯಲ್ಲಿ ಅನಾವರಣಗೊಳ್ಳುವ ವಿಧಾನವೇ ಅದ್ಭುತವಾಗಿದೆ.\u003cbr\u003e\u003cbr\u003eಯಾವ ವಿಷಯ ಆರಿಸಿಕೊಂಡರೂ ರವಿ ಬೆಳಗರೆ ಚೆನ್ನಾಗಿ ಬರೆಯುತ್ತಾರೆ. ಆದಕ್ಕೆ ಅವರ ಪ್ರತಿ ಬರಹವೂ ಸಾಕ್ಷಿಯೇ. ಆದರೆ ಭೂಗತ ಲೋಕದ ಬಗ್ಗೆ ಬರೆಯಲು ಕುಳಿತಾಗಲೆಲ್ಲ ಅವರು ಬೇರೆಯದೇ ಆದ ಶ್ರದ್ಧೆಯಿಟ್ಟುಕೊಂಡು ಕೆಲಸ ಮಾಡುತ್ತಾರೆ. ಆ ಕೌಶಲ್ಯ 'ದಿ ಗಾಡ್ ಫಾದರ್' ಕೃತಿಯ ಪ್ರತಿ ಸಾಲಿನಲ್ಲೂ\u003cbr\u003e\u003cbr\u003e- ಎಂ.ಕೆ.ಸತ್ಯ ಶ್ರೀನಿವಾಸ್, ಮೈಸೂರು\u003c\/p\u003e","brand":"Bhavana Prakashna","offers":[{"title":"Kannada","offer_id":42800562733140,"sku":"SKU-57","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/GodFather_7ca12966-8dce-4367-bdb7-afa965a7c295.png?v=1767340293"},{"product_id":"company-of-women","title":"Company of Women","description":"\u003cp\u003eರವಿ ಬೆಳಗೇರಿ ಅವರು ಬರೆದ “ದಿ ಕಂಪೆನಿ ಆಫ್ ವುಮೆನ್” ಕೃತಿಯು ಖುಷ್ವಂತ್ ಸಿಂಗ್ ರಚಿಸಿದ ಮೂಲ ಪಂಜಾಬಿ ಕಾದಂಬರಿಯ ಕನ್ನಡ ಅನುವಾದವಾಗಿದೆ. ಗಂಭೀರ ವಿಷಯವಸ್ತುವನ್ನು ಹಗುರ ಮತ್ತು ಸರಳ ಶೈಲಿಯಲ್ಲಿ ನಿರೂಪಿಸುವ ಮೂಲಕವೇ ಈ ಕಾದಂಬರಿಯು ಓದುಗರ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ. ಇದಕ್ಕೆ ಕಾರಣ ಖುಷ್ವಂತ್ ಸಿಂಗ್ ಅವರ ವಿನೂತನ, ನೇರ ಮತ್ತು ನವಿರಾದ ಬರವಣಿಗೆಯ ಶೈಲಿ. Company of Women ಮಹಿಳೆಯರೊಂದಿಗೆ ಮಾನವನ ಹೆಣೆಯಲ್ಪಟ್ಟ ಸಂಬಂಧಗಳನ್ನು ಭಾವನಾತ್ಮಕವೂ, ದಾರ್ಶನಿಕವೂ, ಕೆಲವೊಮ್ಮೆ ಕಠೋರವೂ ಆಗಿ ಪ್ರತಿಬಿಂಬಿಸುವ ಕೃತಿ. ಇದು ಮಹಿಳೆಯರ ಜೀವನದ ಅಂತರಂಗವನ್ನು ತೆರೆದಿಡುವ ಸಂವೇದನಾತ್ಮಕ ಮತ್ತು ಮನದಾಳಕ್ಕೆ ತಾಕುವ ಬರಹ.\u003c\/p\u003e","brand":"Bhavana Prakashna","offers":[{"title":"Kannada","offer_id":42800562831444,"sku":"SKU-60","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/CompanyofWomen.png?v=1767340649"},{"product_id":"samaadhana-baga-1","title":"Samaadhana baga 1","description":"\u003cp\u003eಸಮಾಧಾನ!\u003cbr\u003e\u003cbr\u003eನುಡಿಯಲು ಸುಲಭ. ಆದರೆ ಅದು ಯಾರಿಗಿದೆ? 'ಓ ಮನಸೇ' ಪತ್ರಿಕೆಯಲ್ಲಿ 'ಸಮಾಧಾನ' ಅಂಕಣ ಆರಂಭದಿಂದಲೂ ಹಿಟ್, ನೌಕರಿ ಇಲ್ಲದ ಹುಡುಗರ ಆಳಲಿನಿಂದ ಹಿಡಿದು, ಪ್ರಿಯತಮನ ವಂಚನೆಗೆ ಒಳಗಾದ ಹುಡುಗಿಯರ ತನಕ ಎಲ್ಲರಿಗೂ 'ಸಮಾಧಾನ' ಹೇಳಿದವನು ನಾನು, ವಯಸ್ಸಾದ ಹೆಣ್ಣು ಮಕ್ಕಳು ತಮ್ಮದೇ ಮಕ್ಕಳ ವಂಚನೆಗೆ, ಅಸಡ್ಡೆಗೆ, ತಿರಸ್ಕಾರಕ್ಕೆ ಒಳಗಾದಾಗ ಅವರಿಗೆ ಸಿಕ್ಕ ಮಗ ನಾನು. ಇದು ನನ್ನ ಅಹಂಕಾರವಲ್ಲ. ಮತ್ತೊಬ್ಬರಿಗೆ 'ಸಮಾಧಾನ' ಹೇಳುವುದು ನನ್ನ ಪ್ರವೃತ್ತಿ. ಎಂದೋ ಸಿಕ್ಕ ಇಬ್ಬರು ಗೆಳೆಯರು ಆತ್ಮೀಯವಾಗಿ ಒಂದು ಚಿಕ್ಕ ಟೀ ಅಂಗಡಿಯಲ್ಲಿ ಕುಳಿತು ಮಾತನಾಡುತ್ತಾರಲ್ಲ? ಹಾಗೆ, ನಾನು ಯಾರೊಂದಿಗೆ ಬೇಕಾದರೂ ಮಾತಾಡಬಲ್ಲೆ. ಸಮಾಧಾನ ಹೇಳಬಲ್ಲೆ. ಕೌನ್ಸೆಲಿಂಗ್ ನನಗೆ ಹುತ್ತಾ ಬಂದ ವಿದ್ಯೆ ಇದು ಅಹಂಕಾರದ ಮಾತಲ್ಲ. ಸಮಸ್ಯೆ ಯಾರಿಗೂ ಬರಬಹುದು. ಈ ಬೆದರಿಕೆಗೆ ನಾನೂ ಒಳಪಟ್ಟಿದ್ದೇನೆ. ಅನೇಕ ಸಲ ಸಮಾಧಾನವನ್ನು ಮತ್ತೊಬ್ಬರಿಂದ ಪಡೆದಿದ್ದೇನೆ. ಅದೇನು ದೊಡ್ಡ ಮಾತಲ್ಲ. ಆ ಕ್ಷಣಕ್ಕೆ ನಮಗೆ ತೋಚದೆ ಇದ್ದುದು ಇನ್ನೊಬ್ಬರಿಗೆ ತೋಚುತ್ತದೆ.\u003cbr\u003e\u003cbr\u003e\"ನನ್ನ ದೊಡ್ಡ ಅಣ್ಣನಿಂದ ಹಿಡಿದು ಕೊನೇ ಅಣ್ಣನ ತನಕ ಒಬ್ಬರಾದ ಮೇಲೊಬ್ಬರು ಎಳೆದೊಯ್ದು ನನ್ನನ್ನ ರೇಪ್ ಮಾಡುತ್ತಾರೆ. ನಾನು ಏನು ಮಾಡಲಿ?' ಎಂದು ಬರೆಯುವ ನೊಂದ ಅಮಾಯಕ-ನಿಸ್ಸಹಾಯಕ ಮಗುವಿಗೆ ಏನು ಸಮಾಧಾನ ಹೇಳಲಿ? ಆದರೂ ಹೇಳಿದ್ದೇನೆ.\u003cbr\u003e\u003cbr\u003e-ರವಿ ಬೆಳಗೆರೆ\u003c\/p\u003e","brand":"Bhavana Prakashna","offers":[{"title":"Kannada","offer_id":42800563060820,"sku":"SKU-63","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Samadana.png?v=1767341063"},{"product_id":"sahyadriya-sereyalli","title":"Sahyadriya Sereyalli","description":"\u003cp\u003eಸಮುದ್ರತೀರದಿಂದ ಕಾಣುವ ಈ ಪಶ್ಚಿಮಘಟ್ಟಗಳ ಸಾಲಿನ ದೃಶ್ಯವೇ ಅದ್ಭುತ! ಒಂದೆಡೆ ಹಸುರಾದ ಮರಗಿಡಗಳನ್ನು ಹೊತ್ತ  ಬೆಟ್ಟ. ಇನ್ನೊಂದೆಡೆಯಲ್ಲಿ ವಿಶಾಲವಾದ ಜಲರಾಶಿ. ಅದನ್ನು ನೋಡುತ್ತ ಕುಳಿತರೆ ಬೇರೆ ಯಾವ ಜಗತ್ತೂ ನೆನಪಿಗೆ ಬರುವುದಿಲ್ಲ. ಹೊರಗಡೆ ಕಾಣುವುದು ನಮ್ಮ ಅಂತರಂಗವೇ ಆಗಿದೆ. ಒಂದು ಕಡೆ ಪ್ರಕ್ಷುಬ್ಧವಾದ, ಚಂಚಲತೆಯಿಂದ ಕೂಡಿದ ಹೊಯ್ದಾಡುವ ತೆರೆಗಳು, ಇನ್ನೊಂದು ಕಡೆ, ಅಚಲವಾಗಿ, ಭೂಮಿಯನ್ನೇ ಸ್ಥಿರವಾಗಿ ಹಿಡಿದುಕೊಂಡಿರುವ ಪರ್ವತರಾಶಿ. ಒಂದು ಕಡೆ ಮನಸ್ಸಿನಲ್ಲೂ ಹೀಗೇ ಹೊಯ್ದಾಟ, ಅದೆಲ್ಲಕ್ಕೂ ಬೆನ್ನು ಮಾಡಿ ನಿಂತರೆ ಬೆಟ್ಟದಷ್ಟು ಗಟ್ಟಿತನ! ಯಾವುದು ಸತ್ಯ, ನಾವು ಯಾವುದರ ಕಡೆ ಮುಖ ಮಾಡಿ ನಿಂತಿದ್ದೇವೋ ಅದೇ ಸತ್ಯ!\"\u003cbr\u003e\"ಸಹ್ಯಾದ್ರಿಯ ಸೆರೆಯಲ್ಲಿ\" ಇದು ಸ್ವಾತಂತ್ರ್ಯಕ್ಕೂ ಪೂರ್ವದಲ್ಲಿ ನಡೆದ ಮಲೆನಾಡಿನ ಸಣ್ಣ ಹಳ್ಳಿಗಳ ಕೆಲವು ವ್ಯಕ್ತಿಗಳ ಜೀವನ, ಅವರ ಅಂತರಂಗದ ತುಮುಲಗಳ ಜೊತೆಯಲ್ಲಿ ಸಾಗುವ ಕಥೆ. ಆ ಕಾಲದ ಸಾಮಾಜಿಕ- ಸಾಂಸ್ಕೃತಿಕ ಪರಿಸರದ ಹಿನ್ನೆಲೆಯಲ್ಲಿ ಒಂದೆರಡು ವರ್ಷಗಳ ಕಾಲಘಟ್ಟದಲ್ಲಿ ನಡೆಯುವ ಬದಲಾವಣೆಗಳು, ಅದರಿಂದ ಅವರ ಜೀವನದಲ್ಲಿ ನಡೆದ ಘಟನೆಗಳ ಚಿತ್ರಣ. ಆತ್ಮೀಯರ ಅಗಲುವಿಕೆ. ಜೀವನಾನುಭವದಿಂದ ಬದಲಾಗುವ ಮನಸ್ಥಿತಿಗಳು, ಸ್ವಾತಂತ್ರ್ಯಸಂಗ್ರಾಮದ ಬಿಸಿ, ಹಳ್ಳಿಯ ಜನರ ನಂಬಿಕೆಗಳು, ಸಂಪ್ರದಾಯವನ್ನು ಮೀರುವ ಕ್ರಾಂತಿಕಾರಕ ಮನೋಭಾವ, ಪಟ್ಟಣದ ಜೀವನ. ನಾಟಕರಂಗದ ಅನುಭವಗಳು ಹೀಗೆ ಹತ್ತಾರು ಸ್ತರಗಳಲ್ಲಿ. ಮಲೆನಾಡಿನ ಹಳ್ಳಿಯಿಂದ ಬೊಂಬಾಯಿ-ಬೆಂಗಳೂರುಗಳ ತನಕ ಹರಿಯುತ್ತಾ ಆ ಕಾಲವನ್ನು ಅನ್ವೇಷಿಸುತ್ತದೆ ಈ ಕಾದಂಬರಿ.\u003c\/p\u003e","brand":"Ayodhya Publications Pvt Ltd","offers":[{"title":"Kannaada","offer_id":42876639903828,"sku":"AP-140","price":499.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-140_1-1.png?v=1769492959"}],"url":"https:\/\/www.ayodhyabooks.com\/collections\/fiction.oembed","provider":"Ayodhya Books","version":"1.0","type":"link"}