{"title":"Literature","description":"","products":[{"product_id":"baligondu-belakindi","title":"Baligondu belakindi","description":"\u003cp\u003eಹಿರಿಯ ಮಿತ್ರ ಸು. ನಾಗರಾಜರವರು ‘ವಿಕ್ರಮ’ ವಾರಪತ್ರಿಕೆಯ ಮೂಲಕ ಪ್ರತಿವಾರ ನಾಡಿನಾದ್ಯಂತ ಓದುಗರಿಗೆ ‘ಕಷಾಯ’ ಕುಡಿಸುತ್ತ ಆರೋಗ್ಯಕರ ಸಮಾಜ ನಿರ್ಮಾಣದ ಸದಾಶಯವನ್ನು ಹೊಂದಿರುವವರು. ನಿತ್ಯ ಜೀವನದಲ್ಲಿ ಗಮನಕ್ಕೆ ಬಂದ ಅನೇಕ ಸಂಗತಿಗಳನ್ನು ತಮ್ಮದೇ ಶೈಲಿಯಲ್ಲಿ ಸಾಮಾಜಿಕ-ಸಾಂಸ್ಕೃತಿಕ ಸಂಬಂಧಿತವಾಗಿ ವ್ಯಾಖ್ಯಾನಿಸಿ, ಲೇಖಬದ್ಧಗೊಳಿಸಿ ಉಳಿದವರಿಗೂ ಲಾಭವಾಗುವಂತೆ ಮಾಡಿದ್ದಾರೆ.\u003c\/p\u003e\n\u003cp\u003eಬಾಲ್ಯದಿಂದಲೂ ಸ್ವಯಂಸೇವಕರಾಗಿ ಸ್ಪಷ್ಟವಾದ ರಾಷ್ಟ್ರೀಯ ಚಿಂತನೆಯುಳ್ಳ ಇವರು, ಮನೆಯಲ್ಲಿ ದೊರೆತ ಸಂಸ್ಕಾರದಿಂದ ಬೆಳೆದ ದೃಷ್ಟಿ ವೈಶಾಲ್ಯತೆ ಹಾಗೂ ಕೆನರಾ ಬ್ಯಾಂಕ್ ಉದ್ಯೋಗ ನಿಮಿತ್ತ ವಿವಿಧ ಊರುಗಳಲ್ಲಿ ಕಾರ್ಯನಿರ್ವಹಿಸುವಾಗ ಹಲವು ಬಗೆಯ ವ್ಯಕ್ತಿಗಳ ಒಡನಾಟದಲ್ಲಿ ಪಡೆದ ಅನುಭವಗಳನ್ನು ವಿಶ್ಲೇಷಿಸಿ ಲೇಖಬದ್ಧಗೊಳಿಸಿರುವುದು ಈ ಪುಸ್ತಕದ ಓದುಗರಿಗೆ ಅನುಭವಕ್ಕೆ ಬರುವುದು ನಿಶ್ಚಿತ.\u003c\/p\u003e\n\u003cp\u003eಸಂಘ ಶತಾಬ್ದಿಯ ಸುಸಂದರ್ಭದಲ್ಲಿ ಪಂಚಪರಿವರ್ತನೆಯ ಚಿಂತನೆಯ ಮೂಲಕ ಸುಂದರ ಭಾರತ ನಿರ್ಮಿಸುವ ಸದಾಶಯಕ್ಕೆ ಸಾಹಿತ್ಯ ಸೇವೆಯ ಉದ್ದೇಶವುಳ್ಳ ಈ ಪುಸ್ತಕದ ಪ್ರತಿಯೊಂದು ಲೇಖನವೂ ಪೂರಕವಾಗಿದೆ. ‘ನಾಗರಿಕ ಪ್ರಜ್ಞೆ’ ಅತ್ಯವಶ್ಯಕ ಕರ್ತವ್ಯ ಎಂದು ಎಚ್ಚರಿಸಿದಲ್ಲಿ, ದುರಂತಕ್ಕೀಡಾದ ಕುಟುಂಬಕ್ಕೆ ‘ಬ್ಯಾಂಕಿನ ಸವಲತ್ತುಗಳು ಸದುಪಯೋಗವಾದಾಗ’ ಆಗುವ ಪರಿಣಾಮಗಳನ್ನು ವಿವರಿಸುತ್ತದೆ. ಲಿಂಗಜ್ಜನ ಸಹಜವಾದ, ಆದರೆ ಈ ದೇಶದ ಪರಹಿತ ಚಿಂತನೆಯ ಪ್ರತ್ಯಕ್ಷ ಉದಾಹರಣೆಯಾದ ‘ಹಿತಮಿತ ಮಾತೆಂದರೆ ಹೀಗಲ್ಲವೇ?’ ಲೇಖನ ಮನಮುಟ್ಟುವ ರೀತಿಯಲ್ಲಿ ಚಿತ್ರಿತವಾಗಿದೆ.\u003c\/p\u003e\n\u003cp\u003eಪುರಾಣ ಕಾಲದಿಂದ ಆರಂಭಿಸಿ ಚಾರಿತ್ರಿಕ ಹಾಗೂ ಸಮಕಾಲೀನ ವ್ಯಕ್ತಿಗಳು-ಘಟನೆಗಳನ್ನು ಆಧರಿಸಿ ಪುಟ್ಟ ಪುಟ್ಟ ಲೇಖನಗಳ ಮೂಲಕ ದೇಶಕಟ್ಟುವ ಕಾರ್ಯದಲ್ಲಿ ತೊಡಗಿರುವ ಸು. ನಾಗರಾಜರಂತಹ ಲೇಖಕ-ಸಾಹಿತಿಗಳ ಸಂತತಿ ಸಾವಿರವಾಗಲಿ ಎಂಬುದೇ ಈ ಬೆನ್ನುಡಿಯ ಸದಿಚ್ಛೆ.\u003c\/p\u003e\n\u003cp\u003e \u003c\/p\u003e\n\u003cp style=\"text-align: right;\"\u003e-ನ.ನಾಗರಾಜ\u003cbr\u003eಗೌರವ ಸಂಪಾದಕ\u003cbr\u003e‘ವಿಕ್ರಮ’ ವಾರಪತ್ರಿಕೆ\u003c\/p\u003e","brand":"Ayodhya Publications Pvt Ltd","offers":[{"title":"Kannaada","offer_id":42945945337940,"sku":"AP-148","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-148_-1-1.png?v=1771826801"},{"product_id":"baligondu-belakindi-copy","title":"Adikavi Appaccha's Stories for Children","description":"\u003cp\u003eಕೊಡಗಿನಲ್ಲಿ ಸಾಹಿತ್ಯಕ್ಕೆ ಬೆಲೆಯಿಲ್ಲ, ನೆಲೆಯಿಲ್ಲ ಎನ್ನುತ್ತಿದ್ದ ಕಾಲದಲ್ಲಿ ಸಾಹಿತ್ಯದ ಮೇಲೆ, ನಾಟಕದ ಮೇಲೆ ಅತೀವ ಆಸಕ್ತಿಯಿಂದ ಪ್ರೀತಿಯನ್ನು ಅಭಿಮಾನವನ್ನು ಬೆಳೆಸಿಕೊಂಡು ಕನ್ನಡ ಸಾಹಿತ್ಯವನ್ನು, ಕೊಡವ ಸಾಹಿತ್ಯವನ್ನು ಬೆಳೆಸಿದ ಮಹಾನ್ ಸಾಹಿತಿ ಇವರು.\u003cbr\u003eಶಾಲೆಗಳೇ ಇಲ್ಲದ ಕಾಲದಲ್ಲಿ ಅರ್ಚಕ ಕುಟುಂಬದ ಸಹವಾಸದಲ್ಲಿ, ತನ್ನ ಆರನೇ ವಯಸ್ಸಿನಲ್ಲಿಯೇ ಜೈಮಿನಿ ಭಾರತವನ್ನು ಕಂಠಪಾಠ ಮಾಡಿ ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿಯೇ ಸಾಬೀತು ಪಡಿಸಿದ ಅಪರೂಪದ ವ್ಯಕ್ತಿತ್ವ. ಅದರಿಂದಲೇ ಅಪ್ಪನೆರವಂಡ ಅಪ್ಪಚ್ಚ ಅವರನ್ನು ಆದಿಕವಿ ಎನ್ನುವರು. ಚಿಕ್ಕ ವಯಸ್ಸಿನಲ್ಲಿಯೇ ಬಡತನವನ್ನು ಲೆಕ್ಕಿಸದೆ ಓದುವ, ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳುವ ಮೂಲಕ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿರುವ ಅಪ್ಪಚ್ಚ ಅವರ ಜೀವನ ಮಕ್ಕಳಿಗೆ ಎಲ್ಲ ರೀತಿಯಿಂದಲೂ ಸ್ಫೂರ್ತಿ ನೀಡುವಂತದ್ದು.\u003cbr\u003e- ಲೇಖಕಿಯ ಮನದ ಮಾತು\u003c\/p\u003e","brand":"Ayodhya Publications Pvt Ltd","offers":[{"title":"Kannaada","offer_id":43735158358100,"sku":"AP-144","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-144-1-1.png?v=1773132337"},{"product_id":"arivina-mara","title":"Arivina Mara","description":"\u003cp\u003e“ಅರಿವಿನ ಮರ” ಕೃತಿ ಕೊವಿಡ್ ಕಾಲದಲ್ಲಿ ಆನ್ಲೈನ್ ಮೂಲಕ ನಡೆದ ಜ್ಞಾನಸುಧಾ ಉಪನ್ಯಾಸ ಮಾಲೆಯ ಉಪನ್ಯಾಸಗಳ ಸಂಗ್ರಹವಾಗಿದ್ದು, ಬರೆಹರೂಪದಲ್ಲಿ ಪ್ರಕಟವಾಗಿದೆ. ಈ ಕೃತಿಯನ್ನು ಶ್ರೀ ಯೋಗೀಶ್ ತೀರ್ಥಪುರ, ಡಾ. ವಿನೀತ್ ಕುಮಾರ್ ಟಿ.ವಿ. ಹಾಗೂ ಶ್ರೀ ಪಾಂಡುರಂಗ ನಾರಾಯಣ ಸಂಪಾದಿಸಿದ್ದಾರೆ. ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಅಧ್ಯಕ್ಷರು ಹಾಗೂ ಪರಮಪೂಜ್ಯರಾದ ಶ್ರೀ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಗಳು ಈ ಕೃತಿಗೆ ಶುಭಾಶಯ ಸಂದೇಶವನ್ನು ನೀಡಿದ್ದಾರೆ. ಅದೇ ರೀತಿ, ತುಮಕೂರಿನ ಹಿರೇಮಠ ಹಾಗೂ ತಪೋವನದ ಡಾ. ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ಬೆನ್ನುಡಿಯನ್ನು ಬರೆದು ಕೃತಿಯನ್ನು ಆಶೀರ್ವದಿಸಿದ್ದಾರೆ.\u003c\/p\u003e\n\u003cp\u003eಈ ಕೃತಿಯಲ್ಲಿ ಸಾಹಿತ್ಯ, ಶಿಕ್ಷಣ, ಜೀವನಮೌಲ್ಯಗಳು, ರಾಷ್ಟ್ರೀಯತೆ, ಯೋಗ ಮತ್ತು ಆರೋಗ್ಯ, ಕಲೆ, ಪ್ರಕೃತಿ ಹಾಗೂ ವಿಜ್ಞಾನ ಸೇರಿದಂತೆ ಹಲವಾರು ವಿಷಯಗಳನ್ನು ಒಳಗೊಂಡ ಕನ್ನಡ ಮತ್ತು ಇಂಗ್ಲೀಷ್ ಭಾಷೆಯ ವಿದ್ವತ್ಪೂರ್ಣ ಲೇಖನಗಳಿವೆ. ಚಿಂತಕರಾದ ನಾರಾಯಣ ಶೇವಿರೆ, ಡಾ. ನವೀನ್ ಭಟ್ ಗಂಗೋತ್ರಿ, ರಾಧಾಕೃಷ್ಣ ಕಲ್ಚಾರ್, ಡಾ. ಆರತಿ ಪಟ್ರಮೆ, ಮಂಜುನಾಥ್ ಅಜ್ಜಂಪುರ, ಡಾ. ಸುಧಾಕರ ಹೊಸಳ್ಳಿ, ಡಾ. ನಾ. ಸೋಮೇಶ್ವರ, ಗಣರಾಜ ಕುಂಬ್ಳೆ, ಡಾ. ನಾಗೇಂದ್ರ ಸಿಂಗ್ ಸೇರಿದಂತೆ ಅನೇಕ ಹಿರಿಯರ ಬರಹಗಳು ಈ ಕೃತಿಯಲ್ಲಿ ಸಂಗ್ರಹಗೊಂಡಿವೆ.\u003c\/p\u003e\n\u003cp\u003eಭೌತಶಾಸ್ತ್ರದ ವೈಶಿಷ್ಟ್ಯಪೂರ್ಣ ದೃಷ್ಟಿಕೋನ, ನೈಸರ್ಗಿಕ ಕೃಷಿ, ಯಕ್ಷಗಾನದ ಮಹತ್ವ, ನಿಜ ಇತಿಹಾಸದ ಘಟನೆಗಳು, ಷೋಡಶ ಸಂಸ್ಕಾರಗಳು, ಮಂಕುತಿಮ್ಮನ ಕಗ್ಗದ ಜೀವನದರ್ಶನ, ಸಂಸ್ಕೃತ ಭಾಷೆಯ ವೈಶಿಷ್ಟ್ಯ ಮುಂತಾದ ವಿಭಿನ್ನ ವಿಷಯಗಳನ್ನು ಒಳಗೊಂಡ ಸಮಗ್ರ ಕೃತಿ ಇದಾಗಿದೆ. 🌿📖\u003c\/p\u003e","brand":"Ayodhya Publications Pvt Ltd","offers":[{"title":"Kannaada","offer_id":45006320042068,"sku":"AP-146","price":299.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-146-1.png?v=1775125460"}],"url":"https:\/\/www.ayodhyabooks.com\/collections\/literature.oembed","provider":"Ayodhya Books","version":"1.0","type":"link"}