{"title":"Non Fiction","description":"","products":[{"product_id":"baligondu-belakindi-copy","title":"Adikavi Appaccha's Stories for Children","description":"\u003cp\u003eಕೊಡಗಿನಲ್ಲಿ ಸಾಹಿತ್ಯಕ್ಕೆ ಬೆಲೆಯಿಲ್ಲ, ನೆಲೆಯಿಲ್ಲ ಎನ್ನುತ್ತಿದ್ದ ಕಾಲದಲ್ಲಿ ಸಾಹಿತ್ಯದ ಮೇಲೆ, ನಾಟಕದ ಮೇಲೆ ಅತೀವ ಆಸಕ್ತಿಯಿಂದ ಪ್ರೀತಿಯನ್ನು ಅಭಿಮಾನವನ್ನು ಬೆಳೆಸಿಕೊಂಡು ಕನ್ನಡ ಸಾಹಿತ್ಯವನ್ನು, ಕೊಡವ ಸಾಹಿತ್ಯವನ್ನು ಬೆಳೆಸಿದ ಮಹಾನ್ ಸಾಹಿತಿ ಇವರು.\u003cbr\u003eಶಾಲೆಗಳೇ ಇಲ್ಲದ ಕಾಲದಲ್ಲಿ ಅರ್ಚಕ ಕುಟುಂಬದ ಸಹವಾಸದಲ್ಲಿ, ತನ್ನ ಆರನೇ ವಯಸ್ಸಿನಲ್ಲಿಯೇ ಜೈಮಿನಿ ಭಾರತವನ್ನು ಕಂಠಪಾಠ ಮಾಡಿ ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿಯೇ ಸಾಬೀತು ಪಡಿಸಿದ ಅಪರೂಪದ ವ್ಯಕ್ತಿತ್ವ. ಅದರಿಂದಲೇ ಅಪ್ಪನೆರವಂಡ ಅಪ್ಪಚ್ಚ ಅವರನ್ನು ಆದಿಕವಿ ಎನ್ನುವರು. ಚಿಕ್ಕ ವಯಸ್ಸಿನಲ್ಲಿಯೇ ಬಡತನವನ್ನು ಲೆಕ್ಕಿಸದೆ ಓದುವ, ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳುವ ಮೂಲಕ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿರುವ ಅಪ್ಪಚ್ಚ ಅವರ ಜೀವನ ಮಕ್ಕಳಿಗೆ ಎಲ್ಲ ರೀತಿಯಿಂದಲೂ ಸ್ಫೂರ್ತಿ ನೀಡುವಂತದ್ದು.\u003cbr\u003e- ಲೇಖಕಿಯ ಮನದ ಮಾತು\u003c\/p\u003e","brand":"Ayodhya Publications Pvt Ltd","offers":[{"title":"Kannaada","offer_id":43735158358100,"sku":"AP-144","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-144-1-1.png?v=1773132337"},{"product_id":"arivina-mara","title":"Arivina Mara","description":"\u003cp\u003e“ಅರಿವಿನ ಮರ” ಕೃತಿ ಕೊವಿಡ್ ಕಾಲದಲ್ಲಿ ಆನ್ಲೈನ್ ಮೂಲಕ ನಡೆದ ಜ್ಞಾನಸುಧಾ ಉಪನ್ಯಾಸ ಮಾಲೆಯ ಉಪನ್ಯಾಸಗಳ ಸಂಗ್ರಹವಾಗಿದ್ದು, ಬರೆಹರೂಪದಲ್ಲಿ ಪ್ರಕಟವಾಗಿದೆ. ಈ ಕೃತಿಯನ್ನು ಶ್ರೀ ಯೋಗೀಶ್ ತೀರ್ಥಪುರ, ಡಾ. ವಿನೀತ್ ಕುಮಾರ್ ಟಿ.ವಿ. ಹಾಗೂ ಶ್ರೀ ಪಾಂಡುರಂಗ ನಾರಾಯಣ ಸಂಪಾದಿಸಿದ್ದಾರೆ. ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಅಧ್ಯಕ್ಷರು ಹಾಗೂ ಪರಮಪೂಜ್ಯರಾದ ಶ್ರೀ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಗಳು ಈ ಕೃತಿಗೆ ಶುಭಾಶಯ ಸಂದೇಶವನ್ನು ನೀಡಿದ್ದಾರೆ. ಅದೇ ರೀತಿ, ತುಮಕೂರಿನ ಹಿರೇಮಠ ಹಾಗೂ ತಪೋವನದ ಡಾ. ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ಬೆನ್ನುಡಿಯನ್ನು ಬರೆದು ಕೃತಿಯನ್ನು ಆಶೀರ್ವದಿಸಿದ್ದಾರೆ.\u003c\/p\u003e\n\u003cp\u003eಈ ಕೃತಿಯಲ್ಲಿ ಸಾಹಿತ್ಯ, ಶಿಕ್ಷಣ, ಜೀವನಮೌಲ್ಯಗಳು, ರಾಷ್ಟ್ರೀಯತೆ, ಯೋಗ ಮತ್ತು ಆರೋಗ್ಯ, ಕಲೆ, ಪ್ರಕೃತಿ ಹಾಗೂ ವಿಜ್ಞಾನ ಸೇರಿದಂತೆ ಹಲವಾರು ವಿಷಯಗಳನ್ನು ಒಳಗೊಂಡ ಕನ್ನಡ ಮತ್ತು ಇಂಗ್ಲೀಷ್ ಭಾಷೆಯ ವಿದ್ವತ್ಪೂರ್ಣ ಲೇಖನಗಳಿವೆ. ಚಿಂತಕರಾದ ನಾರಾಯಣ ಶೇವಿರೆ, ಡಾ. ನವೀನ್ ಭಟ್ ಗಂಗೋತ್ರಿ, ರಾಧಾಕೃಷ್ಣ ಕಲ್ಚಾರ್, ಡಾ. ಆರತಿ ಪಟ್ರಮೆ, ಮಂಜುನಾಥ್ ಅಜ್ಜಂಪುರ, ಡಾ. ಸುಧಾಕರ ಹೊಸಳ್ಳಿ, ಡಾ. ನಾ. ಸೋಮೇಶ್ವರ, ಗಣರಾಜ ಕುಂಬ್ಳೆ, ಡಾ. ನಾಗೇಂದ್ರ ಸಿಂಗ್ ಸೇರಿದಂತೆ ಅನೇಕ ಹಿರಿಯರ ಬರಹಗಳು ಈ ಕೃತಿಯಲ್ಲಿ ಸಂಗ್ರಹಗೊಂಡಿವೆ.\u003c\/p\u003e\n\u003cp\u003eಭೌತಶಾಸ್ತ್ರದ ವೈಶಿಷ್ಟ್ಯಪೂರ್ಣ ದೃಷ್ಟಿಕೋನ, ನೈಸರ್ಗಿಕ ಕೃಷಿ, ಯಕ್ಷಗಾನದ ಮಹತ್ವ, ನಿಜ ಇತಿಹಾಸದ ಘಟನೆಗಳು, ಷೋಡಶ ಸಂಸ್ಕಾರಗಳು, ಮಂಕುತಿಮ್ಮನ ಕಗ್ಗದ ಜೀವನದರ್ಶನ, ಸಂಸ್ಕೃತ ಭಾಷೆಯ ವೈಶಿಷ್ಟ್ಯ ಮುಂತಾದ ವಿಭಿನ್ನ ವಿಷಯಗಳನ್ನು ಒಳಗೊಂಡ ಸಮಗ್ರ ಕೃತಿ ಇದಾಗಿದೆ. 🌿📖\u003c\/p\u003e","brand":"Ayodhya Publications Pvt Ltd","offers":[{"title":"Kannaada","offer_id":45006320042068,"sku":"AP-146","price":299.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-146-1.png?v=1775125460"}],"url":"https:\/\/www.ayodhyabooks.com\/collections\/non-fiction.oembed","provider":"Ayodhya Books","version":"1.0","type":"link"}