{"title":"R L Kashyap","description":"","products":[{"product_id":"rigvedada-antharanga","title":"Rigvedada Antharanga","description":"\u003cp\u003eಋಗ್ವೇದದ ಅಂತರಂಗ: ಋಗ್ವೇದದ ಕಿರುಪರಿಚಯ ಈ ಪುಸ್ತಕದಲ್ಲಿದೆ. 10,500 ಮಂತ್ರಗಳಲ್ಲಿ ಅಡಗಿದ ಜ್ಞಾನವನ್ನು 100 ಪುಟಗಳಲ್ಲಿ ಸಮರ್ಥವಾಗಿ ನಿರೂಪಿಸಲಾಗಿದೆ. ಇದು ಪ್ರಾಥಮಿಕ ಪರಿಚಯವೂ ಹೌದು. ಅಂತೆಯೇ ಋಗ್ವೇದದ ಗಾಢಚಿಂತನೆಯ ಪರಿಚಯವೂ ಹೌದು. ಲೇಖಕರು ಕಂಪ್ಯೂಟರ್ ವಿಜ್ಞಾನಿ ಆಗಿರುವುದರಿಂದ ವಿಷಯವನ್ನು ಸ್ಪಷ್ಟವಾಗಿ ಹಾಗೂ ಪ್ರಾಯೋಗಿಕವಾಗಿ ನಿರೂಪಿಸಿದ್ದಾರೆ. ವೇದದ ದೇವತೆಗಳು, ಅವರ ರಶ್ಮಿಗಳು ಹಾಗೂ ಅವರೊಂದಿಗೆ ಸಹಯೋಗ ಸಾಧಿಸುವ ವಿಚಾರಗಳು ಈ ಕಿರು ಪುಸ್ತಕದ ವಿಶಿಷ್ಟ ವಿಷಯಗಳಾಗಿವೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":47338029973588,"sku":null,"price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/RugVeda.png?v=1783580556"},{"product_id":"samavedada-antharanga","title":"Samavedada Antharanga","description":"\u003cp\u003eಸಾಮವೇದದ ಅಂತರಂಗ ಈ ಪುಸ್ತಕದಲ್ಲಿ 32 ಅಧ್ಯಾಯಗಳಿದ್ದು, ಮೂರು ಭಾಗಗಳಲ್ಲಿ ವಿಭಾಗಿಸಲಾಗಿದೆ. ಮೊದಲನೆಯ ಭಾಗದ 10 ಅಧ್ಯಾಯಗಳು, ಮಂತ್ರಗಳು, ಋಷಿಗಳು, ಅನುವಾದಕರು, ಉಪನಿಷತ್ತು ಮತ್ತು ಯಜ್ಞಯಾಗಾದಿಗಳೊಂದಿಗೆ ಸಂಬಂಧ ಇತ್ಯಾದಿಗಳ ಕುರಿತು ಸಾಮಾನ್ಯ ತಿಳುವಳಿಕೆಯನ್ನು ನೀಡುತ್ತವೆ.ಎರಡನೆಯ ಭಾಗವು, ಸಾಮವೇದದ ಹಾಗೂ ಸಂಗೀತದ ಕೆಲವು ಅಂಶಗಳ ಸಂಬಂಧವನ್ನು ವಿವರಿಸುತ್ತದೆ. ಈ ಗ್ರಂಥದಲ್ಲಿನ ವಿಷಯಗಳು ಹೊಸತು ಅಲ್ಲವಾದರೂ ಸಂಬಂಧಿತ ವಿಷಯಗಳ ಸಂಕ್ಷಿಪ್ತ ನಿರೂಪಣೆಯೇ ಈ ಪುಸ್ತಕದ ವಿಶೇಷತೆಯಾಗಿದೆ.ಈ ಪುಸ್ತಕದ 19ನೆಯ ಅಧ್ಯಾಯವು ವಿಶಿಷ್ಟವೂ ಕುತೂಹಲಕಾರಿಯೂ ಆಗಿದೆ. ಏಕೆಂದರೆ ಮುಂತೋಚ್ಚಾರಣೆಯ ಸಂದರ್ಭದಲ್ಲಿ ಸ್ವರೋಚ್ಚಾರಣೆಯಲ್ಲಿನ ತಪ್ಪುಗಳನ್ನು ಕಂಡುಹಿಡಿಯಲು ಸಾರ್ವತ್ರಿಕವಾಗಿ ಮುಂದುವರಿದ ಗಣಿತಶಾಸ್ತ್ರದ ತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ.13 ಅಧ್ಯಾಯಗಳನ್ನು ಹೊಂದಿರುವ ಮೂರನೆಯ ಭಾಗದಲ್ಲಿ, ಸಾಮವೇದ ಮಂತ್ರಗಳೊಂದಿಗೆ ಸಂಯೋಜಿಸಲಾಗಿರುವ ವಿವಿಧ ದೇವತೆಗಳ ಮನವ್ಯಾಗಾದಿ ರಶ್ಮಿಗಳು, ಮಂತ್ರಗಳು ಮತ್ತು ಅವುಗಳಿಗೆ ಸಂಬಂಧಿಸಿದ ಅರ್ಥಗಳನ್ನು ನೀಡಲಾಗಿದೆ. ಈ ಮಂತ್ರಗಳ ಹಿಂದೆ ಇರುವ ಅರ್ಥಗಳ ಸಾಂಕೇತಿಕತೆಯು ಒಂದು ಅವಿಭಾಜ್ಯ ಅಂಗವೆಂಬುದನ್ನು ತಿಳಿಸಲಾಗಿದೆ. ಈ ದೇವತೆಗಳೊಂದಿಗೆ ಸಂಯೋಜಿಸಲಾಗಿರುವ - ಸಂಕಲ್ಪ-ಶಕ್ತಿ, ವಿಚಾರಗಳಲ್ಲಿನ ಸ್ಪಷ್ಟತೆ, ಪ್ರೇರಣೆ - ಇವುಗಳನ್ನು ಈ ಮಂತ್ರಗಳ ಮೂಲಕ ವೃದ್ಧಿಗೊಳಿಸಿಕೊಳ್ಳಬಹುದು. ಈ ಪ್ರಕ್ರಿಯೆಯಲ್ಲಿ ಮಂತ್ರ-ಶಬ್ದಗಳ ಅರ್ಥವನ್ನು ಮತ್ತು ಅವುಗಳ ಅಂತರಾರ್ಥಗಳನ್ನು ಅರಿತುಕೊಳ್ಳುವುದು ತುಂಬ ಸಹಾಯಕಾರಿ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":47338245652564,"sku":null,"price":75.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/SamaVeda.png?v=1783584940"},{"product_id":"yajurvedada-antharanga","title":"Yajurvedada Antharanga","description":"\u003cp\u003eಯಜುರ್ವೇದದ ಅಂತರಂಗ: ಮಾನವನ ಅಂತಃಸಾಮರ್ಥ್ಯ ವರ್ಧಿಸಲು ಮತ್ತು ಜೀವನದ ಗುಣಮಟ್ಟವನ್ನು ಉನ್ನತಗೊಳಿಸಲು ಯಜುರ್ವೇದವು ನೀಡುವ ಬೆಳಕಿನ ಕುರಿತು ಪ್ರಬಂಧಗಳು ಇಲ್ಲಿವೆ. ಯಜ್ಞ ಎಂದರೇನು? ವೇದ ಯೋಗ ಎಂದರೇನು? ದೇವತೆಗಳನ್ನು ಆವಾಹಿಸುವ ಮಂತ್ರಗಳು ಯಾವುವು? ನಮಕ-ಚಮಕ ಮಂತ್ರಗಳ ಮೂಲಕ ಯಶಸ್ವಿ ಜೀವನ ಸಾಧಿಸುವುದು ಹೇಗೆ? ಇವೇ ಮುಂತಾದ ವಿಷಯಗಳು ಇಲ್ಲಿ ನಿರೂಪಣೆಗೊಂಡಿವೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":47338294902868,"sku":null,"price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/YajurVeda.png?v=1783585249"},{"product_id":"atharvavedada-antharanga","title":"Atharvavedada Antharanga","description":"\u003cp\u003eಅಥರ್ವ ವೇದದ ಅಂತರಂಗ: ಅಥರ್ವ ವೇದವು ವೇದಕಾಲದ ಜೀವನದ ಮತ್ತು ಸಮಗ್ರ ಮೌಲ್ಯಗಳ ಒಂದು ಮಹೋನ್ನತ ಚಿತ್ರಣವನ್ನು ನೀಡುತ್ತದೆ. ಎಲ್ಲ ಚಟುವಟಿಕೆಗಳನ್ನೂ - ಅವುಗಳಿಗೆ ಲೌಕಿಕ ಅಥವಾ ಆಧ್ಯಾತ್ಮಿಕ ಎಂಬ ಪಟ್ಟಪಟ್ಟಿ ಅಂಟಿಸದೇ - ಪರಮ ಚೈತನ್ಯವನ್ನು ಆಹ್ವಾನಿಸುವ ಕಲೆಯನ್ನು ಅದು ವಿವರಿಸುತ್ತದೆ. ಶಿಕ್ಷಣ, ಚಿಕಿತ್ಸೆಯ ಕಲೆ, ರಾಜ್ಯಡಳಿತ ಇತ್ಯಾದಿ ವಿಷಯಗಳನ್ನು ಕುರಿತಂತೆ ವೇದಕಾಲದ ದೃಷ್ಟಿಕೋನಗಳು ಮತ್ತು ಸಾಧನೆಗಳ ಕುರಿತು ಈ ಪುಸ್ತಕವು ಬೆಳಕನ್ನು ಚೆಲ್ಲುತ್ತದೆ.ಅಥರ್ವ ವೇದದಲ್ಲಿ ನಿರೂಪಿತ ವೈವಿಧ್ಯಮಯ ವಿಷಯಗಳ ನಿರೂಪಣೆ ಈ ಪುಸ್ತಕದಲ್ಲಿದೆ: ಪ್ರಜಾರಾಜ್ಯ ಪದ್ಧತಿ ಮತ್ತು ಆಡಳಿತ, ಜೀವನ ಸಂಗಾತಿಯ ಆಯ್ಕೆ ಮತ್ತು ವಿವಾಹ, ಕುಟುಂಬ ಜೀವನ, ವಾಸ್ತು, ಗೃಹ ಮತ್ತು ಗೃಹನಿರ್ಮಾಣ, ವೃತ್ತಿಗಳು ಮತ್ತು ಜಾತಿ, ಕಾಲ, ದಶಮಾಂಶ ಪದ್ಧತಿ ಮತ್ತು ಅನಂತತೆ, ಭೂಸೂಕ್ತ ಇತ್ಯಾದಿ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":47338327507028,"sku":null,"price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AtarvaVeda.png?v=1783585490"}],"url":"https:\/\/www.ayodhyabooks.com\/collections\/r-l-kashyap.oembed","provider":"Ayodhya Books","version":"1.0","type":"link"}