{"title":"Ravi Belagere","description":"","products":[{"product_id":"gandhi-hatye-mattu-godse","title":"Gandhi Hatye Mattu Godse","description":"\u003cp\u003e\u003cspan\u003eನೀವು ಕಾಣ್ಕಾಪು ಕಿತ್ತೆಸೆದು ಓದಿದ್ದೇ ಆದರೆ ನಮ್ಮ ಇತಿಹಾಸ ಪುರುಷರಲ್ಲಿದ್ದ ರಾಮ-ರಾವಣರಿಬ್ಬರ ಅಂಶಗಳೂ ನಿಮಗೆ ಕಾಣಿಸುತ್ತವೆ. ಗೋಡ್ಸೆಯಲ್ಲೊಬ್ಬ ದಿಟವಾದ ದೈವಭಕ್ತನಿದ್ದನೆಂಬುದು ಮನವರಿಕೆಯಾಗುತ್ತದೆ. ಅವನು ನಿಷ್ಠನಿದ್ದ, ಪ್ರಾಮಾಣಿಕನಿದ್ದ, ಶ್ರಮಜೀವಿಯಾಗಿದ್ದ, ಇವತ್ತಿನ ಎಲ್ಲ ಜಾತ್ಯತೀತರಿಗಿಂತಲೂ ಹೆಚ್ಚಿನ ಜಾತ್ಯತೀತ ಮನಸ್ಸಿನವನಾಗಿದ್ದ ಇತಿಹಾಸ ಓದಿಕೊಂಡವನಾಗಿದ್ದ ಸಜ್ಜನನಾಗಿದ್ದ ಎಂಬುದು ನಿಮಗೇ ಖಾತರಿಯಾಗುತ್ತದೆ. ಅವನು ದೇಶಭಕ್ತಿಯ ವಿಷಯದಲ್ಲಿ ಖಂಡಿತವಾಗ್ಯೂ ಗಾಂಧೀಜಿಗಿಂತ ಕಡಿಮೆಯವನಾಗಿರಲಿಲ್ಲ. ಆದರೆ ನಾಥರಾಮ ಗೋಡ್ಸೆ ಎಂಬ ಭಾವುಕನಿಗೆ ಬದಲಾದ ಕಾಲಮಾನವನ್ನು ಗುರುತಿಸುವುದು ಸಾಧ್ಯವಾಗಿರಲಿಲ್ಲ. ಗುರುಗೋವಿಂದ ಸಿಂಹ, ರಾಣಾಪ್ರತಾಪಸಿಂಹ, ಛತ್ರಪತಿ ಶಿವಾಜಿ ಮಹರಾಜ್ ರ ಕಾಲಕ್ಕೂ ದೇಶ ವಿಭಜನೆಯಾದ 1948ರ ಕಾಲಕ್ಕೂ ಬದುಕು ಬದಲಾಗಿದೆ, ನ್ಯಾಯದ ಪರಿಕಲ್ಪನೆ ಬದಲಾಗಿದೆ, ಜಾತಿ ಧರ್ಮಗಳ ಪರಿಕಲ್ಪನೆ ಬದಲಾಗಿದೆ ಎಂಬ ವಿವೇಕ ನಾಥೂರಾಮನಿಗಿರಲಿಲ್ಲ.\u003c\/span\u003e\u003c\/p\u003e","brand":"Bhavana Prakashna","offers":[{"title":"Kannada","offer_id":42691795058772,"sku":"SKU-48","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/GandhiHatyeMatthuGodse.png?v=1767339019"},{"product_id":"heli-hogu-karana","title":"Heli hogu karana","description":"\u003cp\u003eಕೆಲವು ಲಕ್ಷ ಜನ ಹುಡುಗರು ತಮ್ಮನ್ನು ತಾವು ಈ ಕಾದಂಬರಿಯ ನಾಯಕ ಹಿಮವಂತನೊಂದಿಗೆ ಐಡೆಂಟಿಫೈ ಮಾಡಿಕೊಂಡರು. ಹಾಗೆಯೇ ಅನೇಕ ಹುಡುಗಿಯರು ತಮ್ಮೊಳಗಿನ ಕೊಂಚ ಪ್ರಾರ್ಥನಾ-ಕೊಂಚ ಊರ್ಮಿಳಾರ ವ್ಯಕ್ತಿತ್ವಗಳ ಮಧ್ಯೆ ಜೀಕುತ್ತ ಖುಷಿಪಟ್ಟರು. ನಾಚಿಕೊಂಡರು. ನನ್ನನ್ನು ಸಣ್ಣಗೆ ಗದರಿಕೊಂಡರು. ಪತ್ರಿಕೆಯಲ್ಲಿ ವಾರ ಧಾರವಾಹಿಯಾಗಿ ಪ್ರಕಟಗೊಂಡ ಈ ಕಾದಂಬರಿ, ಪ್ರಕಟವಾಗುತ್ತಿದ್ದಷ್ಟು ದಿನವೂ ಇದು ಮನೆಮನೆಯ ಚರ್ಚೆಯಾಗಿತ್ತು. ಎಲ್ಲೋ ರಸ್ತೆಯಲ್ಲಿ ಹೋಗುತ್ತಿದ್ದವನನ್ನು ನಿಲ್ಲಿಸಿ 'ದಯವಿಟ್ಟು ಹಿಮವಂತನಿಗೆ ಮೋಸ ಮಾಡಬೇಡಿ ಸಾರ್. ಅವನಿಗೆ ಪ್ರಾರ್ಥನಾ ಸಿಗೋ ಹಂಗೆ ಮಾಡಿ' ಅಂತ ಗೋಗರೆದ ಹುಡುಗರು ಎಷ್ಟು ಜನವೋ ?\u003cbr\u003e\u003cbr\u003eನಿಜಕ್ಕೂ ಪ್ರಾರ್ಥನಾಳಷ್ಟು ನಿರ್ದಯಿ ಹುಡುಗೀರಿದ್ದಾರಾ?' ಅಂತ ಕೇಳಿದ ಹುಡುಗಿಯರು ಎಷ್ಟು ಜನವೋ?\u003cbr\u003e\u003cbr\u003e'ಬೇಗ ಈ ಧಾರಾವಾಹಿಯನ್ನು ಪುಸ್ತಕವನ್ನಾಗಿ ಪ್ರಕಟಿಸಿ: ಕೈಕೊಟ್ಟು ಹೋದ ನನ್ನ ಹುಡುಗಿಗೆ ಇದನ್ನ ತಲುಪಿಸಬೇಕಿದೆ' ಅಂದವರೂ ಇದ್ದಾರೆ.\u003cbr\u003e\u003cbr\u003eಇದು ಪ್ರೇಮ ಪುಸ್ತಕವಾ ?\u003cbr\u003e\u003cbr\u003eನೊಂದ ಮನದ ನಿಡುಸುಯ್ಯುವಿಕೆಯಾ ?\u003cbr\u003e\u003cbr\u003e\u003cstrong\u003e-ರವಿ ಬೆಳಗೆರೆ\u003c\/strong\u003e\u003c\/p\u003e","brand":"Bhavana Prakashna","offers":[{"title":"Kannada","offer_id":42800562634836,"sku":"SKU-22","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/HelihoguKarana.png?v=1767339366"},{"product_id":"rangavilasa-bangaleya-kolegalu","title":"Rangavilasa bangaleya kolegalu","description":"\u003cp\u003eಇದು ಕಾದಂಬರಿಯಲ್ಲ.\u003cbr\u003e\u003cbr\u003eಬೆಂಗಳೂರಿನಲ್ಲಿ 1956ರಲ್ಲಿ ಒಂದು ಘೋರ ಹತ್ಯಾಕಾಂಡ ನಡೆಯಿತು. ಅದು ಬೇಲೂರು ಶ್ರೀನಿವಾಸ ಅಯ್ಯಂಗಾರ್ ಅವರ ಇಡೀ ಮನೆತನದ, ಎಲ್ಲ ಸದಸ್ಯರ ಕೊಲೆ. ಒಂದೇ ರಾತ್ರಿಯಲ್ಲಿ ಆ ಬಂಗಲೆಯ ಸೊಂಟದೆತ್ತರದ ನಾಯಿಯಿಂದ ಹಿಡಿದು, ಅಯ್ಯಂಗಾರರ ಮನೆಯ ಹಸುಗೂಸಿನ ತನಕ ಎಲ್ಲರ ಕೊಲೆ ನಡೆದು ಹೋಯಿತು. ಕೇಜಿಗಟ್ಟಲೆ ಚಿನ್ನ, ಬೆಳ್ಳಿ, ಒಡವೆ ಲೂಟಿಯಾಯಿತು. ಇಡೀ ರಾಜ್ಯದಲ್ಲೇ ಸಂಚಲನ ಉಂಟುಮಾಡಿದ ಹತ್ಯಾ ಪ್ರಕರಣವದು. ಏಕೆಂದರೆ ಬೇಲೂರು ಶ್ರೀನಿವಾಸ ಅಯ್ಯಂಗಾರರು ಖ್ಯಾತ ಕ್ರಿಮಿನಲ್ ವಕೀಲರು, ಅಂದಿನ ಮೈಸೂರು ಪ್ರಜಾ ಪರಿಷತ್ನ ಸದಸ್ಯರೂ, ಸಮಾಜದಲ್ಲಿ ಗಣ್ಯರೂ, ಕಾನೂನಿನಲ್ಲಿ\u003cspan style=\"mso-spacerun: yes;\"\u003e  \u003c\/span\u003eಪಂಡಿತರೂ, ಶ್ರದ್ಧಾವಂತ ಬ್ರಾಹ್ಮಣರೂ ಆಗಿದ್ದರು. ಅವರಿಗೆ ಮನೆ ತುಂಬ ಮಕ್ಕಳು, ಎಲ್ಲಕೊಲೆಯಾಗಿ ಹೋದರೂ, ಒಬ್ಬ ಹುಡುಗಿ ಉಳಿದುಕೊಂಡು ಬಿಟ್ಟಳು. ಕೊಲೆಯ ಭೀಭತ್ಸ ಕಂಡ ಹುಡುಗಿ ಮಾನಸಿಕವಾಗಿ ಘಾಸಿಗೊಂಡಳಾ? ಆಕೆ ಕೆಲಕಾಲ ಗಂಡಸಿನ ವೇಷ ತೊಟ್ಟು ಓಡಾಡುತ್ತಿದ್ದಳಂತೆ ಎಂಬ ಮಾತೂ ಕೇಳಿ ಬಂತು.\u003cbr\u003e\u003cbr\u003eಹಳೆಯ ದಾಖಲೆಗಳನ್ನೆಲ್ಲ ತಡಕಿ ಶ್ರೀನಿವಾಸ ಅಯ್ಯಂಗಾರರ ಪೂರ್ವತಿಹಾಸ ಬಗೆದು, ಹಂತಕರ ಊರಿಗೂ ಹೋಗಿ, ಅಲ್ಲಿ ಇನ್ನೂ ಬದುಕಿರುವ ಅವರ ಸಂಬಂಧಿಗಳನ್ನು ಮಾತನಾಡಿಸಿ, ಎಲ್ಲಕ್ಕಿಂತ ಮುಖ್ಯವಾಗಿ ಹಂತಕರನ್ನು ಬಂಧಿಸಿ ಅವರು ನೇಣುಗಂಬವೇರುವಂತೆ ಮಾಡಿದ ದಕ್ಷ ಪೊಲೀಸ್ ಅಧಿಕಾರಿಯನ್ನೂ ಮಾತನಾಡಿಸಿ ಅಪಾರವಾದ ಇಂಟರೆಸ್ಟಿಂಗ್ ಹಾಗೂ ಥ್ರಿಲ್ಲಿಂಗ್ ವಿವರಗಳನ್ನು ಸಂಗ್ರಹಿಸಿ, ಕ್ರೋಢೀಕರಿಸಿ ಪ್ರಕಟಿಸಿದ ಪುಸ್ತಕವಿದು.\u003cbr\u003e\u003cbr\u003eಇಷ್ಟಾಗಿ ಕೊನೆಗೆ ಉಳಿಯುವ ಪ್ರಶ್ನೆಯೆಂದರೆ ಕ್ರಿಮಿನಲ್ ವಕೀಲರಾದ ಬೇಲೂರು ಶ್ರೀನಿವಾಸ ಅಯ್ಯಂಗಾರರೇ ಕೊಲೆ, ದರೋಡೆಗಳನ್ನು ಮಾಡಿಸುತ್ತಿದ್ದರಾ? ಒಂದು ಗುಕ್ಕಿನಲ್ಲಿ ಓದಿಕೊಳ್ಳಬಹುದಾದ ಪುಸ್ತಕವಿದು.\u003cbr\u003e\u003cbr\u003e-ರವಿ ಬೆಳಗೆರೆ\u003c\/p\u003e","brand":"Bhavana Prakashna","offers":[{"title":"Kannada","offer_id":42800562667604,"sku":"SKU-55","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/RangavilasaBangaleyaKolegalu.png?v=1767339634"},{"product_id":"himalayan-blunder","title":"Himalayan blunder","description":"\u003cp\u003e\"ಹಿಮಾಲಯನ್ ಬ್ಲಂಡರ್\" ಪುಸ್ತಕವು ರವಿ ಬೆಳಗೆರೆ ಅನುವಾದಿಸಿದ ಕರ್ನಲ್ ಜಾನ್ ದಳ್ವಿ ಅವರ ಪುಸ್ತಕವಾಗಿದ್ದು, ಇದು ಭಾರತ-ಚೀನಾ ಯುದ್ಧದ ಬಗ್ಗೆ ವಿವರಿಸುತ್ತದೆ. ಈ ಪುಸ್ತಕವು ಯುದ್ಧದ ವಿವರಣೆ, ಯುದ್ಧ ಕೈದಿಯಾಗಿದ್ದ ಅನುಭವ, ಬಿಡುಗಡೆ ಮತ್ತು ಅಂದಿನ ಸರ್ಕಾರಗಳು ಸೈನಿಕರನ್ನು ನಡೆಸಿಕೊಂಡ ರೀತಿ ಇತ್ಯಾದಿ ಅಂಶಗಳನ್ನು ಮನೋಜ್ಞವಾಗಿ ಚಿತ್ರಿಸುತ್ತ\u003cspan\u003eದೆ.\u003c\/span\u003e\u003c\/p\u003e","brand":"Bhavana Prakashna","offers":[{"title":"Kannada","offer_id":42800562700372,"sku":"SKU-56","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/HimalayanBlunder.png?v=1767339785"},{"product_id":"the-god-father","title":"The god father","description":"\u003cp\u003eಹಿತವಾದುದೊಂದು ದೀಪ ಹಾಕಿಕೊಂಡು ಕುಳಿತು ಓದಲಿಕ್ಕೆ ಈ ಪುಸ್ತಕ ಕೈಗೆತ್ತಿಕೊಳ್ಳಿ. ಕಾದಂಬರಿಯ ಕೊನೆಯ ಪುಟ ಓದಿ ಮುಗಿಸುವ ತನಕ ನೀವು ಮಲಗಲಾರಿರಿ, 'ದಿ ಗಾಡ್ ಫಾದರ್' ಕಾದಂಬರಿಯ ಕಥಾವಸ್ತುವೇ ಅಂತಹುದು. ದೂರದಿಂದ ನಿಂತು ನೋಡಿದರೆ ಇದು ಭೂಗತದ ಆಗುಹೋಗುಗಳ ಕುರಿತಾದ ಕಾದಂಬರಿ ಅನ್ನಿಸುತ್ತದೆ. ಒಮ್ಮೆ ಒಳಹೊಕ್ಕು ನೋಡಿ: ಚಿನ್ನ ಮಾದಿರೆಡ್ಡಿಯ ಫ್ಯಾಮಿಲಿಯಲ್ಲಿ ನೀವೂ ಒಬ್ಬರಾಗಿಬಿಡುತ್ತೀರಿ, ಸಾವಿರಾರು ಕೂವಗಳಿರುವ ಭೂಗತದ ಹುತ್ತ ಈ ಕಾದಂಬರಿಯಲ್ಲಿ ಅನಾವರಣಗೊಳ್ಳುವ ವಿಧಾನವೇ ಅದ್ಭುತವಾಗಿದೆ.\u003cbr\u003e\u003cbr\u003eಯಾವ ವಿಷಯ ಆರಿಸಿಕೊಂಡರೂ ರವಿ ಬೆಳಗರೆ ಚೆನ್ನಾಗಿ ಬರೆಯುತ್ತಾರೆ. ಆದಕ್ಕೆ ಅವರ ಪ್ರತಿ ಬರಹವೂ ಸಾಕ್ಷಿಯೇ. ಆದರೆ ಭೂಗತ ಲೋಕದ ಬಗ್ಗೆ ಬರೆಯಲು ಕುಳಿತಾಗಲೆಲ್ಲ ಅವರು ಬೇರೆಯದೇ ಆದ ಶ್ರದ್ಧೆಯಿಟ್ಟುಕೊಂಡು ಕೆಲಸ ಮಾಡುತ್ತಾರೆ. ಆ ಕೌಶಲ್ಯ 'ದಿ ಗಾಡ್ ಫಾದರ್' ಕೃತಿಯ ಪ್ರತಿ ಸಾಲಿನಲ್ಲೂ\u003cbr\u003e\u003cbr\u003e- ಎಂ.ಕೆ.ಸತ್ಯ ಶ್ರೀನಿವಾಸ್, ಮೈಸೂರು\u003c\/p\u003e","brand":"Bhavana Prakashna","offers":[{"title":"Kannada","offer_id":42800562733140,"sku":"SKU-57","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/GodFather_7ca12966-8dce-4367-bdb7-afa965a7c295.png?v=1767340293"},{"product_id":"sarpa-sambandha","title":"Sarpa sambandha","description":"\u003cp\u003eಹಾವುಗಳು ! ಅಬ್ಬಾ ಅವೆಂದರೆ ಯಾರಿಗಿರುವುದಿಲ್ಲ ಹೆದರಿಕೆ ! ಮೂಳೆಯಿಲ್ಲದ ಪ್ರಾಣಿ ಹರಿದಾಡುವುದನ್ನು ನೋಡಿದರೆ ಹೆದರಿ ಅಂಜಿ ನೀರಾಗಿರುತ್ತೇವೆ. ಅಂಥಹ ಸರ್ಪದ ಮೇಲೆ ಚ್ಯುತಿ ಬರದಂತೆ ಇಂಚಿಂಚು ಸಾರಾ ಸಗಟಾಗಿ ವಿವರಿಸಿ, ಪುಸ್ತಕದ ಪುಟ ಪುಟದಲ್ಲು ಒಂದು ತಿರುವು ಕೊಟ್ಟು, ಪುಟ ತಿರುಗಿಸುವಂತೆ ಮಾಡಿದ ಬೆಳೆಗೆರೆ ಅವರ ಆಲೋಚನಾ ಶಕ್ತಿ, ಲೇಖಕನ ಆಂತರ್ಯದಲ್ಲಡಗಿರುವ ಕಲ್ಪನಾ ಲೋಕದ ಸಾಮರ್ಥ್ಯವನ್ನು ಕಣ್ಣೆದುರಿಗಿರಿಸುತ್ತದೆ. ಅಗ್ನಿನಾಥನಂತಹ ಅಘೋರಿ ಸಾಧಕನೊಬ್ಬನು ಮಾಡಿದ ಸಾಹಸ , ಅವನ ಸಿಧ್ಧಿಗಳು, ಅಘೋರಿಗಳ ಜೀವನ ಇವೆಲ್ಲವನ್ನು ಅಣು ಅಣುವಾಗಿ ಬಿಚ್ಚಿಟ್ಟಿದ್ದಾರೆ.\u003c\/p\u003e","brand":"Bhavana Prakashna","offers":[{"title":"Kannada","offer_id":42800562765908,"sku":"SKU-58","price":400.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/SarpaSambanda.png?v=1767340387"},{"product_id":"arti","title":"Arti","description":"\u003cp\u003eರವಿ ಬೆಳಗೆರೆ! ಅವರು ಕನ್ನಡಿಗರ ಮನೆಮಾತು. ಅತ್ಯಂತ ಹೆಚ್ಚು ಬರೆದ, ಓದಿಸಿಕೊಳ್ಳುವ ಲೇಖಕ, ಪತ್ರಕರ್ತ, ಕಾದಂಬರಿಕಾರ, ಅನುವಾದಕ. ಅವರ ಒಂದು ಹೊಸ ಪುಸ್ತಕ ಬಿಡುಗಡೆಯಾಗುತ್ತದೆ ಅಂದರೆ ಸಾವಿರಾರು ಓದುಗರು ಕರ್ನಾಟಕದಾದ್ಯಂತ ಅದಕ್ಕಾಗಿ ಕಾಯುತ್ತಿದ್ದರು. ಅವರು ಒಂದು ವಿಷಯ, ಒಂದು ಸಂಗತಿ ಅಥವಾ ಒಂದು ಸಪ್ಟೆಕ್ಟ್ ಇಟ್ಟುಕೊಂಡು ಬರೆದವರಲ್ಲ. ಮನುಷ್ಯ ಸಂಬಂಧಗಳು ಅವರ ಆಸಕ್ತಿಯ ಪ್ರಥಮ ವಿಷಯ. ಆದರೆ ಅವರು ಅತ್ಯಂತ ಆಸಕ್ತಿಯಿಂದ ದೇಶ, ಇತಿಹಾಸ, ಯುದ್ಧಗಳ ಬಗ್ಗೆ ಬರೆದಿದ್ದಾರೆ. ಯುದ್ಧಗಳ ಪ್ರತ್ಯಕ್ಷ ವರದಿ ಮಾಡಿದ್ದಾರೆ. ಕಾರ್ಗಿಲ್ ಕದನ ಭೂಮಿ, ಅಫಘನಿಸ್ತಾನ ಮತ್ತು ಪುಲ್ವಾಮಾದ ಮಹಾ ಯುದ್ಧರಂಗದಲ್ಲಿ ಓಡಾಡಿದ್ದಾರೆ. ಅಂತೆಯೇ ಅವರ ಕಾದಂಬರಿಗಳಲ್ಲಿ ಪ್ರೀತಿ, ತಂತ್ರ, ಅಂಡರ್ವರ್ಲ್, ರಾಜಕಾರಣ, ಕಾಮ, ಟೆರರಿಸಂ ವಿಜೃಂಭಿಸಿವೆ. ಅವರ ತನಿಖಾ ವರದಿ ಪುಸ್ತಕವಾಗಿದೆ. ಮೂಲತಃ ರವಿ ಬೆಳಗೆರೆ ಕಥೆಗಾರರೆಂದೇ ಹೆಸರಾದವರು. ಅವರು ತಮ್ಮ ಇಷ್ಟದ ಕವಿ ಸಾಹಿರ್ ಲೂಧಿಯಾನವಿಯಿಂದ ಹಿಡಿದು ತೆಲುಗು ಲೇಖಕ ಗುಡಿಪಾಟು ವೆಂಕಟ ಚಲಂ ತನಕ ಅನೇಕರ ಜೀವನ ಕಥನ ಬರೆದಿದ್ದಾರೆ, ಅನುವಾದಿಸಿದ್ದಾರೆ. ರವಿ ಬೆಳಗೆರೆ ಬರೆದ 'ಅರ್ತಿ' ಸೈಕಿಯಾಟ್ರಿಕ್ ಸಪ್ಟೆಕ್ಸ್ನ ಕುರಿತಾಗಿದ್ದು, ಇದು ಸೈಕಾಲಜಿ ವಿದ್ಯಾರ್ಥಿಗಳಿಗೆ ಒಂದು ಉತ್ತಮ ಪುಸ್ತಕವಾಗಿರುತ್ತದೆ. ಈ ಪುಸ್ತಕ ಮೂವತ್ತೈದು ವರ್ಷಗಳ ನಂತರ ಮರು ಮುದ್ರಣಗೊಂಡಿದೆ. ಎಂದಿನಂತೆ ಒಪ್ಪಿಕೊಳ್ಳಿ.\u003cbr\u003e\u003cbr\u003e-ಭಾವನಾ ಬೆಳಗೆರೆ.\u003c\/p\u003e","brand":"Bhavana Prakashna","offers":[{"title":"Kannada","offer_id":42800562798676,"sku":"SKU-59","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Arti.png?v=1767340525"},{"product_id":"company-of-women","title":"Company of Women","description":"\u003cp\u003eರವಿ ಬೆಳಗೇರಿ ಅವರು ಬರೆದ “ದಿ ಕಂಪೆನಿ ಆಫ್ ವುಮೆನ್” ಕೃತಿಯು ಖುಷ್ವಂತ್ ಸಿಂಗ್ ರಚಿಸಿದ ಮೂಲ ಪಂಜಾಬಿ ಕಾದಂಬರಿಯ ಕನ್ನಡ ಅನುವಾದವಾಗಿದೆ. ಗಂಭೀರ ವಿಷಯವಸ್ತುವನ್ನು ಹಗುರ ಮತ್ತು ಸರಳ ಶೈಲಿಯಲ್ಲಿ ನಿರೂಪಿಸುವ ಮೂಲಕವೇ ಈ ಕಾದಂಬರಿಯು ಓದುಗರ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ. ಇದಕ್ಕೆ ಕಾರಣ ಖುಷ್ವಂತ್ ಸಿಂಗ್ ಅವರ ವಿನೂತನ, ನೇರ ಮತ್ತು ನವಿರಾದ ಬರವಣಿಗೆಯ ಶೈಲಿ. Company of Women ಮಹಿಳೆಯರೊಂದಿಗೆ ಮಾನವನ ಹೆಣೆಯಲ್ಪಟ್ಟ ಸಂಬಂಧಗಳನ್ನು ಭಾವನಾತ್ಮಕವೂ, ದಾರ್ಶನಿಕವೂ, ಕೆಲವೊಮ್ಮೆ ಕಠೋರವೂ ಆಗಿ ಪ್ರತಿಬಿಂಬಿಸುವ ಕೃತಿ. ಇದು ಮಹಿಳೆಯರ ಜೀವನದ ಅಂತರಂಗವನ್ನು ತೆರೆದಿಡುವ ಸಂವೇದನಾತ್ಮಕ ಮತ್ತು ಮನದಾಳಕ್ಕೆ ತಾಕುವ ಬರಹ.\u003c\/p\u003e","brand":"Bhavana Prakashna","offers":[{"title":"Kannada","offer_id":42800562831444,"sku":"SKU-60","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/CompanyofWomen.png?v=1767340649"},{"product_id":"indireya-maga-sanjaya","title":"Indireya Maga Sanjaya","description":"\u003cp\u003e\"ಇಂದಿರೆಯ ಮಗ ಸಂಜಯ\" ಪುಸ್ತಕವು ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರ ಮಗ ಸಂಜಯ ಗಾಂಧಿಯವರ ಜೀವನವನ್ನು ಕುರಿತು ಬರೆಯಲಾಗಿದೆ. ಈ ಪುಸ್ತಕವು ಸಂಜಯನ ಜೀವನ, ಸಮಾಜದ ಮೇಲೆ ಅವನ ಪ್ರಭಾವ, ಇಂದಿರಾ ಗಾಂಧಿಯವರ ರಾಜಕೀಯ ಜೀವನದ ಮೇಲೆ ಸಂಜಯನ ಪ್ರಭಾವ ಮತ್ತು ಅವನ ನಿಗೂಢ ಸಾವಿನ ಬಗ್ಗೆ ವಿವರವಾದ, ಅಚ್ಚರಿ ಹುಟ್ಟಿಸುವ ಮಾಹಿತಿಯನ್ನು ಒದಗಿಸುತ್ತದೆ\u003c\/p\u003e","brand":"Bhavana Prakashna","offers":[{"title":"Kannada","offer_id":42800562995284,"sku":"SKU-61","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/IndireyaMagaSanjaya.png?v=1767340797"},{"product_id":"neena-pakistana","title":"Neena Pakistana","description":"\u003cp\u003eಐವತ್ತು ವರ್ಷಗಳಿಂದ ನಮಗಿಂತ ಐದು ಪಟ್ಟು ದೊಡ್ಡದಾದ, ಅತ್ಯಾಧುನಿಕ ಶಸ್ತ್ರಾಸ್ತ್ರಗಳಿರುವ ಭಾರತ ದೇಶದ ವಿರುದ್ಧ ನಾವು ಹೋರಾಡುತ್ತಿದ್ದೇವೆ. ನಮ್ಮ ಶತ್ರುವಿನ ಹತ್ತಿರ ಎಲ್ಲವೂ ಇದೆ. ಆದರೆ ನಮ್ಮ ಬಳಿ ಇರುವಂತಹ ಒಂದು ಶಸ್ತ್ರ ಭಾರತದ ಬಳಿ ಇಲ್ಲ. ಅದು ಜೆಹಾದ್!\" ಅಂದವನು ಪಾಕಿಸ್ತಾನದ ಧರ್ಮಗುರು.\u003cbr\u003e\u003cbr\u003eಅದಕ್ಕೇ ಆ ದೇಶ ಇವತ್ತು ಸ್ವತಂತ್ರಗೊಂಡ ಐವತ್ತು ವರ್ಷಗಳ ನಂತರವೂ ಹಾಗಿದೆ. ಅಲ್ಲಿ ಬೆಳೆದಿರುವುದು ಅಪ್ಪಟ ಹಂತಕ ಫಸಲು. ಮತ್ತೇನನ್ನೂ ಉತ್ಪಾದನೆ ಮಾಡಲಾಗದ ಸ್ಥಿತಿಯಲ್ಲಿರುವ ಪಾಕಿಸ್ತಾನ್ ಇವತ್ತು ಕೇವಲ ಭಯೋತ್ಪಾದನೆ ಮಾಡುತ್ತಿದೆ. ಅದರ ಅಂತರ್ಯದಲ್ಲಿ ಹುಟ್ಟಿ ಬೆಳೆದ ಹಲವಾರು ಭಯೋತ್ಪಾದಕ ಸಂಘಟನೆಗಳ ಸಂಪೂರ್ಣ ಪರಿಚಯ ನೀಡುವುದು ಈ ಪುಸ್ತಕದ ಉದ್ದೇಶ. ಇದು 'ನೀನಾ ಪಾಕಿಸ್ತಾನ?' ಪುಸ್ತಕ ಸರಣಿಯ ಪೈಕಿ ಮೊದಲನೆಯದೂ ಹೌದು.\u003cbr\u003e\u003cbr\u003e-ರವಿ ಬೆಳಗೆರೆ.\u003c\/p\u003e","brand":"Bhavana Prakashna","offers":[{"title":"Kannada","offer_id":42800563028052,"sku":"SKU-62","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/NinaPakistana.png?v=1767340922"},{"product_id":"samaadhana-baga-1","title":"Samaadhana baga 1","description":"\u003cp\u003eಸಮಾಧಾನ!\u003cbr\u003e\u003cbr\u003eನುಡಿಯಲು ಸುಲಭ. ಆದರೆ ಅದು ಯಾರಿಗಿದೆ? 'ಓ ಮನಸೇ' ಪತ್ರಿಕೆಯಲ್ಲಿ 'ಸಮಾಧಾನ' ಅಂಕಣ ಆರಂಭದಿಂದಲೂ ಹಿಟ್, ನೌಕರಿ ಇಲ್ಲದ ಹುಡುಗರ ಆಳಲಿನಿಂದ ಹಿಡಿದು, ಪ್ರಿಯತಮನ ವಂಚನೆಗೆ ಒಳಗಾದ ಹುಡುಗಿಯರ ತನಕ ಎಲ್ಲರಿಗೂ 'ಸಮಾಧಾನ' ಹೇಳಿದವನು ನಾನು, ವಯಸ್ಸಾದ ಹೆಣ್ಣು ಮಕ್ಕಳು ತಮ್ಮದೇ ಮಕ್ಕಳ ವಂಚನೆಗೆ, ಅಸಡ್ಡೆಗೆ, ತಿರಸ್ಕಾರಕ್ಕೆ ಒಳಗಾದಾಗ ಅವರಿಗೆ ಸಿಕ್ಕ ಮಗ ನಾನು. ಇದು ನನ್ನ ಅಹಂಕಾರವಲ್ಲ. ಮತ್ತೊಬ್ಬರಿಗೆ 'ಸಮಾಧಾನ' ಹೇಳುವುದು ನನ್ನ ಪ್ರವೃತ್ತಿ. ಎಂದೋ ಸಿಕ್ಕ ಇಬ್ಬರು ಗೆಳೆಯರು ಆತ್ಮೀಯವಾಗಿ ಒಂದು ಚಿಕ್ಕ ಟೀ ಅಂಗಡಿಯಲ್ಲಿ ಕುಳಿತು ಮಾತನಾಡುತ್ತಾರಲ್ಲ? ಹಾಗೆ, ನಾನು ಯಾರೊಂದಿಗೆ ಬೇಕಾದರೂ ಮಾತಾಡಬಲ್ಲೆ. ಸಮಾಧಾನ ಹೇಳಬಲ್ಲೆ. ಕೌನ್ಸೆಲಿಂಗ್ ನನಗೆ ಹುತ್ತಾ ಬಂದ ವಿದ್ಯೆ ಇದು ಅಹಂಕಾರದ ಮಾತಲ್ಲ. ಸಮಸ್ಯೆ ಯಾರಿಗೂ ಬರಬಹುದು. ಈ ಬೆದರಿಕೆಗೆ ನಾನೂ ಒಳಪಟ್ಟಿದ್ದೇನೆ. ಅನೇಕ ಸಲ ಸಮಾಧಾನವನ್ನು ಮತ್ತೊಬ್ಬರಿಂದ ಪಡೆದಿದ್ದೇನೆ. ಅದೇನು ದೊಡ್ಡ ಮಾತಲ್ಲ. ಆ ಕ್ಷಣಕ್ಕೆ ನಮಗೆ ತೋಚದೆ ಇದ್ದುದು ಇನ್ನೊಬ್ಬರಿಗೆ ತೋಚುತ್ತದೆ.\u003cbr\u003e\u003cbr\u003e\"ನನ್ನ ದೊಡ್ಡ ಅಣ್ಣನಿಂದ ಹಿಡಿದು ಕೊನೇ ಅಣ್ಣನ ತನಕ ಒಬ್ಬರಾದ ಮೇಲೊಬ್ಬರು ಎಳೆದೊಯ್ದು ನನ್ನನ್ನ ರೇಪ್ ಮಾಡುತ್ತಾರೆ. ನಾನು ಏನು ಮಾಡಲಿ?' ಎಂದು ಬರೆಯುವ ನೊಂದ ಅಮಾಯಕ-ನಿಸ್ಸಹಾಯಕ ಮಗುವಿಗೆ ಏನು ಸಮಾಧಾನ ಹೇಳಲಿ? ಆದರೂ ಹೇಳಿದ್ದೇನೆ.\u003cbr\u003e\u003cbr\u003e-ರವಿ ಬೆಳಗೆರೆ\u003c\/p\u003e","brand":"Bhavana Prakashna","offers":[{"title":"Kannada","offer_id":42800563060820,"sku":"SKU-63","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Samadana.png?v=1767341063"},{"product_id":"idu-jeeva-iduve-jeevana","title":"Idu Jeeva Iduve Jeevana","description":"\u003cp\u003e“ಇದು ಜೀವ, ಇದುವೇ ಜೀವನ” ಎಂಬ ರವಿ ಬೆಳಗೆರೆಯ ಕೃತಿ, ಸರಳ ಜೀವನಶೈಲಿ ಹಾಗೂ ಆಧ್ಯಾತ್ಮಿಕ ಒಳನೋಟಕ್ಕಾಗಿ ಪ್ರಸಿದ್ಧರಾದ ಬೆಳಗೆರೆ ಕೃಷ್ಣಶಾಸ್ತ್ರಿ ಅವರ ಜೀವನಾಧಾರಿತ\u003cspan style=\"mso-spacerun: yes;\"\u003e  \u003c\/span\u003eನಿರೂಪಣೆ. ಈ ಕೃತಿಯಲ್ಲಿ ರವಿ ಬೆಳಗೆರೆ ಅವರು ಕೃಷ್ಣಶಾಸ್ತ್ರಿಗಳ ವೈಯಕ್ತಿಕ ಪಯಣ, ಅವರ ಉಪದೇಶಗಳು ಹಾಗೂ ಉದ್ದೇಶಪೂರ್ಣ ಮತ್ತು ವಿನಯಪೂರ್ಣ ಜೀವನದ ಮೌನಶಕ್ತಿಯನ್ನು ಆಳವಾಗಿ ಅನ್ವೇಷಿಸುತ್ತಾರೆ. ಇದು ಕೇವಲ ಜೀವಚರಿತ್ರೆಯಲ್ಲ; ಅರ್ಥಪೂರ್ಣವಾಗಿ ಬದುಕುವುದು ಎಂದರೇನು ಎಂಬುದನ್ನು ಪ್ರಶ್ನಿಸುವ ತಾತ್ವಿಕ ಕೃತಿ ಕೂಡ ಹೌದು. ಭೌತಿಕ ಆಕಾಂಕ್ಷೆಗಳಾಚೆಗೆ ಜೀವನದ ನಿಜವಾದ ಸಾರ್ಥಕತೆಯನ್ನು ಅರಿಯಲು ಈ ಪುಸ್ತಕ ಓದುಗರನ್ನು ಚಿಂತನೆಗೆ ಆಹ್ವಾನಿಸುತ್ತದೆ.\u003c\/p\u003e","brand":"Bhavana Prakashna","offers":[{"title":"Kannada","offer_id":42800563093588,"sku":"SKU-54","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/IduJeevaIduveJeevana.png?v=1767341135"}],"url":"https:\/\/www.ayodhyabooks.com\/collections\/ravi-belagere.oembed","provider":"Ayodhya Books","version":"1.0","type":"link"}