{"title":"self Help","description":"","products":[{"product_id":"baligondu-belakindi","title":"Baligondu belakindi","description":"\u003cp\u003eಹಿರಿಯ ಮಿತ್ರ ಸು. ನಾಗರಾಜರವರು ‘ವಿಕ್ರಮ’ ವಾರಪತ್ರಿಕೆಯ ಮೂಲಕ ಪ್ರತಿವಾರ ನಾಡಿನಾದ್ಯಂತ ಓದುಗರಿಗೆ ‘ಕಷಾಯ’ ಕುಡಿಸುತ್ತ ಆರೋಗ್ಯಕರ ಸಮಾಜ ನಿರ್ಮಾಣದ ಸದಾಶಯವನ್ನು ಹೊಂದಿರುವವರು. ನಿತ್ಯ ಜೀವನದಲ್ಲಿ ಗಮನಕ್ಕೆ ಬಂದ ಅನೇಕ ಸಂಗತಿಗಳನ್ನು ತಮ್ಮದೇ ಶೈಲಿಯಲ್ಲಿ ಸಾಮಾಜಿಕ-ಸಾಂಸ್ಕೃತಿಕ ಸಂಬಂಧಿತವಾಗಿ ವ್ಯಾಖ್ಯಾನಿಸಿ, ಲೇಖಬದ್ಧಗೊಳಿಸಿ ಉಳಿದವರಿಗೂ ಲಾಭವಾಗುವಂತೆ ಮಾಡಿದ್ದಾರೆ.\u003c\/p\u003e\n\u003cp\u003eಬಾಲ್ಯದಿಂದಲೂ ಸ್ವಯಂಸೇವಕರಾಗಿ ಸ್ಪಷ್ಟವಾದ ರಾಷ್ಟ್ರೀಯ ಚಿಂತನೆಯುಳ್ಳ ಇವರು, ಮನೆಯಲ್ಲಿ ದೊರೆತ ಸಂಸ್ಕಾರದಿಂದ ಬೆಳೆದ ದೃಷ್ಟಿ ವೈಶಾಲ್ಯತೆ ಹಾಗೂ ಕೆನರಾ ಬ್ಯಾಂಕ್ ಉದ್ಯೋಗ ನಿಮಿತ್ತ ವಿವಿಧ ಊರುಗಳಲ್ಲಿ ಕಾರ್ಯನಿರ್ವಹಿಸುವಾಗ ಹಲವು ಬಗೆಯ ವ್ಯಕ್ತಿಗಳ ಒಡನಾಟದಲ್ಲಿ ಪಡೆದ ಅನುಭವಗಳನ್ನು ವಿಶ್ಲೇಷಿಸಿ ಲೇಖಬದ್ಧಗೊಳಿಸಿರುವುದು ಈ ಪುಸ್ತಕದ ಓದುಗರಿಗೆ ಅನುಭವಕ್ಕೆ ಬರುವುದು ನಿಶ್ಚಿತ.\u003c\/p\u003e\n\u003cp\u003eಸಂಘ ಶತಾಬ್ದಿಯ ಸುಸಂದರ್ಭದಲ್ಲಿ ಪಂಚಪರಿವರ್ತನೆಯ ಚಿಂತನೆಯ ಮೂಲಕ ಸುಂದರ ಭಾರತ ನಿರ್ಮಿಸುವ ಸದಾಶಯಕ್ಕೆ ಸಾಹಿತ್ಯ ಸೇವೆಯ ಉದ್ದೇಶವುಳ್ಳ ಈ ಪುಸ್ತಕದ ಪ್ರತಿಯೊಂದು ಲೇಖನವೂ ಪೂರಕವಾಗಿದೆ. ‘ನಾಗರಿಕ ಪ್ರಜ್ಞೆ’ ಅತ್ಯವಶ್ಯಕ ಕರ್ತವ್ಯ ಎಂದು ಎಚ್ಚರಿಸಿದಲ್ಲಿ, ದುರಂತಕ್ಕೀಡಾದ ಕುಟುಂಬಕ್ಕೆ ‘ಬ್ಯಾಂಕಿನ ಸವಲತ್ತುಗಳು ಸದುಪಯೋಗವಾದಾಗ’ ಆಗುವ ಪರಿಣಾಮಗಳನ್ನು ವಿವರಿಸುತ್ತದೆ. ಲಿಂಗಜ್ಜನ ಸಹಜವಾದ, ಆದರೆ ಈ ದೇಶದ ಪರಹಿತ ಚಿಂತನೆಯ ಪ್ರತ್ಯಕ್ಷ ಉದಾಹರಣೆಯಾದ ‘ಹಿತಮಿತ ಮಾತೆಂದರೆ ಹೀಗಲ್ಲವೇ?’ ಲೇಖನ ಮನಮುಟ್ಟುವ ರೀತಿಯಲ್ಲಿ ಚಿತ್ರಿತವಾಗಿದೆ.\u003c\/p\u003e\n\u003cp\u003eಪುರಾಣ ಕಾಲದಿಂದ ಆರಂಭಿಸಿ ಚಾರಿತ್ರಿಕ ಹಾಗೂ ಸಮಕಾಲೀನ ವ್ಯಕ್ತಿಗಳು-ಘಟನೆಗಳನ್ನು ಆಧರಿಸಿ ಪುಟ್ಟ ಪುಟ್ಟ ಲೇಖನಗಳ ಮೂಲಕ ದೇಶಕಟ್ಟುವ ಕಾರ್ಯದಲ್ಲಿ ತೊಡಗಿರುವ ಸು. ನಾಗರಾಜರಂತಹ ಲೇಖಕ-ಸಾಹಿತಿಗಳ ಸಂತತಿ ಸಾವಿರವಾಗಲಿ ಎಂಬುದೇ ಈ ಬೆನ್ನುಡಿಯ ಸದಿಚ್ಛೆ.\u003c\/p\u003e\n\u003cp\u003e \u003c\/p\u003e\n\u003cp style=\"text-align: right;\"\u003e-ನ.ನಾಗರಾಜ\u003cbr\u003eಗೌರವ ಸಂಪಾದಕ\u003cbr\u003e‘ವಿಕ್ರಮ’ ವಾರಪತ್ರಿಕೆ\u003c\/p\u003e","brand":"Ayodhya Publications Pvt Ltd","offers":[{"title":"Kannaada","offer_id":42945945337940,"sku":"AP-148","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-148_-1-1.png?v=1771826801"},{"product_id":"success-mantra","title":"Success Mantra","description":"\u003cp\u003eಯಶಸ್ಸು ಅಂದರೆ ಏನು? ದುಡ್ಡೇ? ಹೆಸರೇ? ಕೀರ್ತಿಯೇ? ಪದವಿಯೇ? ಪ್ರಶಸ್ತಿಯೇ? ಸೌಕರ್ಯವೇ? ಒಬ್ಬೊಬ್ಬರಿಗೆ ಒಂದೊಂದು ಸರಿ ಅನಿಸಬಹುದು. ಇವೆಲ್ಲ ಬದುಕಿನ ಒಂದೊಂದು ಹಂತಗಳಾಗಿರಬಹುದೇ ಹೊರತು ಅಂತಿಮ ನಿಲ್ದಾಣಗಳಲ್ಲ. ಯಾವುದರಿಂದ ಮನಸ್ಸಿಗೆ ಸಂತೋಷ ಮತ್ತು ತೃಪ್ತಿ ಸಿಗುತ್ತದೋ, ಯಾವುದು ಹೆಚ್ಚು ಸಮಯ ನಮ್ಮೊಂದಿಗೆ ಉಳಿಯುತ್ತದೋ ಅದೇ ಯಶಸ್ಸು.ನಮ್ಮ ತರುಣ ಜನಾಂಗಕ್ಕೆ ಈ ನಿಟ್ಟಿನಲ್ಲಿ ಸ್ಪಷ್ಟ ಮಾರ್ಗದರ್ಶನದ ಅಗತ್ಯವಿದೆ. ಅವರಿಗೆ ಯಾವ ವಯಸ್ಸಿನಲ್ಲಿ ಏನು ಬೇಕೋ ಅದು ಸಿಗುತ್ತಿಲ್ಲ. ಒಳಗಿಂದಲೇ ಗಟ್ಟಿಯಾಗುತ್ತಿಲ್ಲ. ಹೊರಗಿನಿಂದ ಯಾವ ಬಣ್ಣ ಬಳಿದರೂ ತಿರುಳು ಸರಿಯಾಗಿಲ್ಲದಿದ್ದರೆ ಆ ಬಣ್ಣಕ್ಕೆ ಬೆಲೆಯಿಲ್ಲ.\u003c\/p\u003e\n\u003cp\u003e‘ಸಕ್ಸೆಸ್ ಮಂತ್ರ’ ಪುಸ್ತಕದ ಹಿಂದೆ ಇಂತಹ ಒಂದು ಕಾಳಜಿಯಿದೆ. ನಮ್ಮ ಮಕ್ಕಳು ನೆಮ್ಮದಿಯ ನಾಳೆಗಳನ್ನು ಕಾಣಬೇಕಾದರೆ — ಯಶಸ್ವೀ ಜೀವನ ನಡೆಸಬೇಕಾದರೆ — ಒಳಗಿನಿಂದ ಮತ್ತು ಹೊರಗಿನಿಂದ ಹೇಗೆ ಬೆಳೆಯಬೇಕು ಎಂಬ ಬಗ್ಗೆ ಇಲ್ಲಿ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಪುಟ್ಟ ಪುಟ್ಟ ಅಧ್ಯಾಯಗಳಿವೆ.ಇಚ್ಛಾಶಕ್ತಿ, ನಿರ್ಧಾರಶಕ್ತಿ, ಸಮಸ್ಯೆ ಪರಿಹಾರ, ಧನಾತ್ಮಕ ಚಿಂತನೆ, ತಾಳ್ಮೆ, ಭಾವಪೋಷಣೆ, ವಿವೇಕ, ಸಹಾನುಭೂತಿ, ಹೊಂದಾಣಿಕೆ ಇತ್ಯಾದಿಗಳ ಬಗ್ಗೆ, ಸಂವಹನ ಕಲೆ, ನಾಯಕತ್ವ, ಸಮಯ ನಿರ್ವಹಣೆ, ಸಂದರ್ಶನ ಕೌಶಲ್ಯ, ತಂಡ ಪ್ರಯತ್ನ, ವ್ಯಕ್ತಿತ್ವ ವಿಕಸನ ಮೊದಲಾದ ವಿಷಯಗಳ ಬಗ್ಗೆ ಇಲ್ಲಿ ಪ್ರೇರಣಾತ್ಮಕ ಲೇಖನಗಳಿವೆ. ಆಧುನಿಕ ಜಗತ್ತು ತೆರೆದಿಟ್ಟಿರುವ ಸಾವಿರಾರು ಉದ್ಯೋಗಾವಕಾಶಗಳ ಕುರಿತು ಕೂಡ ಒಂದು ಭಾಗವನ್ನು ಮೀಸಲಿಡಲಾಗಿದೆ.\u003c\/p\u003e\n\u003cp\u003eವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಹೆತ್ತವರು ಓದಲೇಬೇಕಾದ ಪುಸ್ತಕ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":43060146307156,"sku":"AP-151","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-151-1-1_4bf9b769-d911-4d55-b5be-d5c68a513729.png?v=1772269681"},{"product_id":"a-practical-guide-for-buying-and-using-health-insurance","title":"A Practical Guide for Buying and Using Health Insurance","description":"\u003cp\u003eHealth insurance is more than just a policy—it’s your safety net. One wrong decision can cost you lakhs, yet navigating health insurance in India often feels confusing and overwhelming.\u003cbr\u003eA Practical Guide for Buying \u0026amp; Using  Health Insurance simplifies complex terms, exclusions, waiting periods, and claim procedures into clear, easy-to-understand language. With real-life examples and practical tips, this book helps individuals and families choose the right policy, avoid costly mistakes, and use health insurance confidently when it matters most.\u003cbr\u003eFrom buying the right cover to renewals and claims, this book gives you clarity, confidence, and peace of mind—so a medical emergency doesn’t turn into a financial one.\u003c\/p\u003e","brand":"Ayodhya Publications Pvt Ltd","offers":[{"title":"English","offer_id":43142089769044,"sku":"AP-147","price":299.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-147-1-1_1.png?v=1772427747"},{"product_id":"aushanasa-chanakya","title":"Aushanasa Chanakya","description":"\u003cp data-start=\"194\" data-end=\"243\"\u003eಇತಿಹಾಸದ ದಿಕ್ಕನ್ನೇ ಬದಲಿಸಿದ ಮಹಾನ್ ಚಿಂತಕ \u003cstrong data-start=\"232\" data-end=\"242\"\u003eಚಾಣಕ್ಯ\u003c\/strong\u003e.\u003c\/p\u003e\n\u003cp data-start=\"245\" data-end=\"371\"\u003eರಾಷ್ಟ್ರರಕ್ಷಣೆ, ರಾಜಕೀಯ ದೂರದೃಷ್ಟಿ, ಗೂಢಚರ್ಯೆ ಮತ್ತು ಆರ್ಥಿಕ ವ್ಯವಸ್ಥೆಯ ಬಗ್ಗೆ ಅವರ ಅಪಾರ ಜ್ಞಾನವನ್ನು ಪರಿಚಯಿಸುವ ಕೃತಿ — \u003cstrong data-start=\"353\" data-end=\"370\"\u003e“ಔಶನಸ ಚಾಣಕ್ಯ”\u003c\/strong\u003e.\u003c\/p\u003e\n\u003cp data-start=\"373\" data-end=\"514\"\u003eಸಾರ್ಥ, ಮಗಧ ಮತ್ತು ತಕ್ಷಶಿಲೆಯ ರಾಜಕೀಯ ಹಿನ್ನಲೆಯಲ್ಲಿ ಚಾಣಕ್ಯರ ಚಿಂತನೆ ಹಾಗೂ ರಾಷ್ಟ್ರದ ಹಿತಕ್ಕಾಗಿ ಅವರು ತೋರಿದ ಆದರ್ಶಗಳನ್ನು ಈ ಕೃತಿ ಸ್ಪಷ್ಟವಾಗಿ ಚಿತ್ರಿಸುತ್ತದೆ.\u003c\/p\u003e\n\u003cp data-start=\"516\" data-end=\"609\"\u003eರಾಷ್ಟ್ರಭಕ್ತಿ, ಇತಿಹಾಸ ಮತ್ತು ರಾಜಕೀಯ ಚಿಂತನೆಗಳನ್ನು ಅರಿಯಲು ಆಸಕ್ತರಾಗಿರುವವರಿಗೆ ಇದು ಒಂದು ಅಮೂಲ್ಯ ಕೃತಿ.\u003c\/p\u003e\n\u003cp data-start=\"611\" data-end=\"620\"\u003eಇಂದೇ ಓದಿ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":43682744565844,"sku":"AP-157","price":499.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Aushanasa_Chanakya._1.png?v=1777880646"},{"product_id":"arivina-mara","title":"Arivina Mara","description":"\u003cp\u003e“ಅರಿವಿನ ಮರ” ಕೃತಿ ಕೊವಿಡ್ ಕಾಲದಲ್ಲಿ ಆನ್ಲೈನ್ ಮೂಲಕ ನಡೆದ ಜ್ಞಾನಸುಧಾ ಉಪನ್ಯಾಸ ಮಾಲೆಯ ಉಪನ್ಯಾಸಗಳ ಸಂಗ್ರಹವಾಗಿದ್ದು, ಬರೆಹರೂಪದಲ್ಲಿ ಪ್ರಕಟವಾಗಿದೆ. ಈ ಕೃತಿಯನ್ನು ಶ್ರೀ ಯೋಗೀಶ್ ತೀರ್ಥಪುರ, ಡಾ. ವಿನೀತ್ ಕುಮಾರ್ ಟಿ.ವಿ. ಹಾಗೂ ಶ್ರೀ ಪಾಂಡುರಂಗ ನಾರಾಯಣ ಸಂಪಾದಿಸಿದ್ದಾರೆ. ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಅಧ್ಯಕ್ಷರು ಹಾಗೂ ಪರಮಪೂಜ್ಯರಾದ ಶ್ರೀ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಗಳು ಈ ಕೃತಿಗೆ ಶುಭಾಶಯ ಸಂದೇಶವನ್ನು ನೀಡಿದ್ದಾರೆ. ಅದೇ ರೀತಿ, ತುಮಕೂರಿನ ಹಿರೇಮಠ ಹಾಗೂ ತಪೋವನದ ಡಾ. ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ಬೆನ್ನುಡಿಯನ್ನು ಬರೆದು ಕೃತಿಯನ್ನು ಆಶೀರ್ವದಿಸಿದ್ದಾರೆ.\u003c\/p\u003e\n\u003cp\u003eಈ ಕೃತಿಯಲ್ಲಿ ಸಾಹಿತ್ಯ, ಶಿಕ್ಷಣ, ಜೀವನಮೌಲ್ಯಗಳು, ರಾಷ್ಟ್ರೀಯತೆ, ಯೋಗ ಮತ್ತು ಆರೋಗ್ಯ, ಕಲೆ, ಪ್ರಕೃತಿ ಹಾಗೂ ವಿಜ್ಞಾನ ಸೇರಿದಂತೆ ಹಲವಾರು ವಿಷಯಗಳನ್ನು ಒಳಗೊಂಡ ಕನ್ನಡ ಮತ್ತು ಇಂಗ್ಲೀಷ್ ಭಾಷೆಯ ವಿದ್ವತ್ಪೂರ್ಣ ಲೇಖನಗಳಿವೆ. ಚಿಂತಕರಾದ ನಾರಾಯಣ ಶೇವಿರೆ, ಡಾ. ನವೀನ್ ಭಟ್ ಗಂಗೋತ್ರಿ, ರಾಧಾಕೃಷ್ಣ ಕಲ್ಚಾರ್, ಡಾ. ಆರತಿ ಪಟ್ರಮೆ, ಮಂಜುನಾಥ್ ಅಜ್ಜಂಪುರ, ಡಾ. ಸುಧಾಕರ ಹೊಸಳ್ಳಿ, ಡಾ. ನಾ. ಸೋಮೇಶ್ವರ, ಗಣರಾಜ ಕುಂಬ್ಳೆ, ಡಾ. ನಾಗೇಂದ್ರ ಸಿಂಗ್ ಸೇರಿದಂತೆ ಅನೇಕ ಹಿರಿಯರ ಬರಹಗಳು ಈ ಕೃತಿಯಲ್ಲಿ ಸಂಗ್ರಹಗೊಂಡಿವೆ.\u003c\/p\u003e\n\u003cp\u003eಭೌತಶಾಸ್ತ್ರದ ವೈಶಿಷ್ಟ್ಯಪೂರ್ಣ ದೃಷ್ಟಿಕೋನ, ನೈಸರ್ಗಿಕ ಕೃಷಿ, ಯಕ್ಷಗಾನದ ಮಹತ್ವ, ನಿಜ ಇತಿಹಾಸದ ಘಟನೆಗಳು, ಷೋಡಶ ಸಂಸ್ಕಾರಗಳು, ಮಂಕುತಿಮ್ಮನ ಕಗ್ಗದ ಜೀವನದರ್ಶನ, ಸಂಸ್ಕೃತ ಭಾಷೆಯ ವೈಶಿಷ್ಟ್ಯ ಮುಂತಾದ ವಿಭಿನ್ನ ವಿಷಯಗಳನ್ನು ಒಳಗೊಂಡ ಸಮಗ್ರ ಕೃತಿ ಇದಾಗಿದೆ. 🌿📖\u003c\/p\u003e","brand":"Ayodhya Publications Pvt Ltd","offers":[{"title":"Kannaada","offer_id":45006320042068,"sku":"AP-146","price":299.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-146-1.png?v=1775125460"},{"product_id":"rigvedada-antharanga","title":"Rigvedada Antharanga","description":"\u003cp\u003eಋಗ್ವೇದದ ಅಂತರಂಗ: ಋಗ್ವೇದದ ಕಿರುಪರಿಚಯ ಈ ಪುಸ್ತಕದಲ್ಲಿದೆ. 10,500 ಮಂತ್ರಗಳಲ್ಲಿ ಅಡಗಿದ ಜ್ಞಾನವನ್ನು 100 ಪುಟಗಳಲ್ಲಿ ಸಮರ್ಥವಾಗಿ ನಿರೂಪಿಸಲಾಗಿದೆ. ಇದು ಪ್ರಾಥಮಿಕ ಪರಿಚಯವೂ ಹೌದು. ಅಂತೆಯೇ ಋಗ್ವೇದದ ಗಾಢಚಿಂತನೆಯ ಪರಿಚಯವೂ ಹೌದು. ಲೇಖಕರು ಕಂಪ್ಯೂಟರ್ ವಿಜ್ಞಾನಿ ಆಗಿರುವುದರಿಂದ ವಿಷಯವನ್ನು ಸ್ಪಷ್ಟವಾಗಿ ಹಾಗೂ ಪ್ರಾಯೋಗಿಕವಾಗಿ ನಿರೂಪಿಸಿದ್ದಾರೆ. ವೇದದ ದೇವತೆಗಳು, ಅವರ ರಶ್ಮಿಗಳು ಹಾಗೂ ಅವರೊಂದಿಗೆ ಸಹಯೋಗ ಸಾಧಿಸುವ ವಿಚಾರಗಳು ಈ ಕಿರು ಪುಸ್ತಕದ ವಿಶಿಷ್ಟ ವಿಷಯಗಳಾಗಿವೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":47338029973588,"sku":null,"price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/RugVeda.png?v=1783580556"},{"product_id":"samavedada-antharanga","title":"Samavedada Antharanga","description":"\u003cp\u003eಸಾಮವೇದದ ಅಂತರಂಗ ಈ ಪುಸ್ತಕದಲ್ಲಿ 32 ಅಧ್ಯಾಯಗಳಿದ್ದು, ಮೂರು ಭಾಗಗಳಲ್ಲಿ ವಿಭಾಗಿಸಲಾಗಿದೆ. ಮೊದಲನೆಯ ಭಾಗದ 10 ಅಧ್ಯಾಯಗಳು, ಮಂತ್ರಗಳು, ಋಷಿಗಳು, ಅನುವಾದಕರು, ಉಪನಿಷತ್ತು ಮತ್ತು ಯಜ್ಞಯಾಗಾದಿಗಳೊಂದಿಗೆ ಸಂಬಂಧ ಇತ್ಯಾದಿಗಳ ಕುರಿತು ಸಾಮಾನ್ಯ ತಿಳುವಳಿಕೆಯನ್ನು ನೀಡುತ್ತವೆ.ಎರಡನೆಯ ಭಾಗವು, ಸಾಮವೇದದ ಹಾಗೂ ಸಂಗೀತದ ಕೆಲವು ಅಂಶಗಳ ಸಂಬಂಧವನ್ನು ವಿವರಿಸುತ್ತದೆ. ಈ ಗ್ರಂಥದಲ್ಲಿನ ವಿಷಯಗಳು ಹೊಸತು ಅಲ್ಲವಾದರೂ ಸಂಬಂಧಿತ ವಿಷಯಗಳ ಸಂಕ್ಷಿಪ್ತ ನಿರೂಪಣೆಯೇ ಈ ಪುಸ್ತಕದ ವಿಶೇಷತೆಯಾಗಿದೆ.ಈ ಪುಸ್ತಕದ 19ನೆಯ ಅಧ್ಯಾಯವು ವಿಶಿಷ್ಟವೂ ಕುತೂಹಲಕಾರಿಯೂ ಆಗಿದೆ. ಏಕೆಂದರೆ ಮುಂತೋಚ್ಚಾರಣೆಯ ಸಂದರ್ಭದಲ್ಲಿ ಸ್ವರೋಚ್ಚಾರಣೆಯಲ್ಲಿನ ತಪ್ಪುಗಳನ್ನು ಕಂಡುಹಿಡಿಯಲು ಸಾರ್ವತ್ರಿಕವಾಗಿ ಮುಂದುವರಿದ ಗಣಿತಶಾಸ್ತ್ರದ ತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ.13 ಅಧ್ಯಾಯಗಳನ್ನು ಹೊಂದಿರುವ ಮೂರನೆಯ ಭಾಗದಲ್ಲಿ, ಸಾಮವೇದ ಮಂತ್ರಗಳೊಂದಿಗೆ ಸಂಯೋಜಿಸಲಾಗಿರುವ ವಿವಿಧ ದೇವತೆಗಳ ಮನವ್ಯಾಗಾದಿ ರಶ್ಮಿಗಳು, ಮಂತ್ರಗಳು ಮತ್ತು ಅವುಗಳಿಗೆ ಸಂಬಂಧಿಸಿದ ಅರ್ಥಗಳನ್ನು ನೀಡಲಾಗಿದೆ. ಈ ಮಂತ್ರಗಳ ಹಿಂದೆ ಇರುವ ಅರ್ಥಗಳ ಸಾಂಕೇತಿಕತೆಯು ಒಂದು ಅವಿಭಾಜ್ಯ ಅಂಗವೆಂಬುದನ್ನು ತಿಳಿಸಲಾಗಿದೆ. ಈ ದೇವತೆಗಳೊಂದಿಗೆ ಸಂಯೋಜಿಸಲಾಗಿರುವ - ಸಂಕಲ್ಪ-ಶಕ್ತಿ, ವಿಚಾರಗಳಲ್ಲಿನ ಸ್ಪಷ್ಟತೆ, ಪ್ರೇರಣೆ - ಇವುಗಳನ್ನು ಈ ಮಂತ್ರಗಳ ಮೂಲಕ ವೃದ್ಧಿಗೊಳಿಸಿಕೊಳ್ಳಬಹುದು. ಈ ಪ್ರಕ್ರಿಯೆಯಲ್ಲಿ ಮಂತ್ರ-ಶಬ್ದಗಳ ಅರ್ಥವನ್ನು ಮತ್ತು ಅವುಗಳ ಅಂತರಾರ್ಥಗಳನ್ನು ಅರಿತುಕೊಳ್ಳುವುದು ತುಂಬ ಸಹಾಯಕಾರಿ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":47338245652564,"sku":null,"price":75.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/SamaVeda.png?v=1783584940"},{"product_id":"yajurvedada-antharanga","title":"Yajurvedada Antharanga","description":"\u003cp\u003eಯಜುರ್ವೇದದ ಅಂತರಂಗ: ಮಾನವನ ಅಂತಃಸಾಮರ್ಥ್ಯ ವರ್ಧಿಸಲು ಮತ್ತು ಜೀವನದ ಗುಣಮಟ್ಟವನ್ನು ಉನ್ನತಗೊಳಿಸಲು ಯಜುರ್ವೇದವು ನೀಡುವ ಬೆಳಕಿನ ಕುರಿತು ಪ್ರಬಂಧಗಳು ಇಲ್ಲಿವೆ. ಯಜ್ಞ ಎಂದರೇನು? ವೇದ ಯೋಗ ಎಂದರೇನು? ದೇವತೆಗಳನ್ನು ಆವಾಹಿಸುವ ಮಂತ್ರಗಳು ಯಾವುವು? ನಮಕ-ಚಮಕ ಮಂತ್ರಗಳ ಮೂಲಕ ಯಶಸ್ವಿ ಜೀವನ ಸಾಧಿಸುವುದು ಹೇಗೆ? ಇವೇ ಮುಂತಾದ ವಿಷಯಗಳು ಇಲ್ಲಿ ನಿರೂಪಣೆಗೊಂಡಿವೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":47338294902868,"sku":null,"price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/YajurVeda.png?v=1783585249"},{"product_id":"atharvavedada-antharanga","title":"Atharvavedada Antharanga","description":"\u003cp\u003eಅಥರ್ವ ವೇದದ ಅಂತರಂಗ: ಅಥರ್ವ ವೇದವು ವೇದಕಾಲದ ಜೀವನದ ಮತ್ತು ಸಮಗ್ರ ಮೌಲ್ಯಗಳ ಒಂದು ಮಹೋನ್ನತ ಚಿತ್ರಣವನ್ನು ನೀಡುತ್ತದೆ. ಎಲ್ಲ ಚಟುವಟಿಕೆಗಳನ್ನೂ - ಅವುಗಳಿಗೆ ಲೌಕಿಕ ಅಥವಾ ಆಧ್ಯಾತ್ಮಿಕ ಎಂಬ ಪಟ್ಟಪಟ್ಟಿ ಅಂಟಿಸದೇ - ಪರಮ ಚೈತನ್ಯವನ್ನು ಆಹ್ವಾನಿಸುವ ಕಲೆಯನ್ನು ಅದು ವಿವರಿಸುತ್ತದೆ. ಶಿಕ್ಷಣ, ಚಿಕಿತ್ಸೆಯ ಕಲೆ, ರಾಜ್ಯಡಳಿತ ಇತ್ಯಾದಿ ವಿಷಯಗಳನ್ನು ಕುರಿತಂತೆ ವೇದಕಾಲದ ದೃಷ್ಟಿಕೋನಗಳು ಮತ್ತು ಸಾಧನೆಗಳ ಕುರಿತು ಈ ಪುಸ್ತಕವು ಬೆಳಕನ್ನು ಚೆಲ್ಲುತ್ತದೆ.ಅಥರ್ವ ವೇದದಲ್ಲಿ ನಿರೂಪಿತ ವೈವಿಧ್ಯಮಯ ವಿಷಯಗಳ ನಿರೂಪಣೆ ಈ ಪುಸ್ತಕದಲ್ಲಿದೆ: ಪ್ರಜಾರಾಜ್ಯ ಪದ್ಧತಿ ಮತ್ತು ಆಡಳಿತ, ಜೀವನ ಸಂಗಾತಿಯ ಆಯ್ಕೆ ಮತ್ತು ವಿವಾಹ, ಕುಟುಂಬ ಜೀವನ, ವಾಸ್ತು, ಗೃಹ ಮತ್ತು ಗೃಹನಿರ್ಮಾಣ, ವೃತ್ತಿಗಳು ಮತ್ತು ಜಾತಿ, ಕಾಲ, ದಶಮಾಂಶ ಪದ್ಧತಿ ಮತ್ತು ಅನಂತತೆ, ಭೂಸೂಕ್ತ ಇತ್ಯಾದಿ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":47338327507028,"sku":null,"price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AtarvaVeda.png?v=1783585490"}],"url":"https:\/\/www.ayodhyabooks.com\/collections\/self-help.oembed","provider":"Ayodhya Books","version":"1.0","type":"link"}