{"title":"Socio-Political","description":"","products":[{"product_id":"utta-batteyalli-horatu-bandvaru","title":"Utta Batteyalli Horatu Bandavaru","description":"\u003cp\u003e1968-71ರ ಅವಧಿಯಲ್ಲಿ ಪೂರ್ವ ಪಾಕಿಸ್ತಾನದಲ್ಲಿ ನಡೆದ ವ್ಯಾಪಕ ಹಿಂಸಾಚಾರದಲ್ಲಿ ನಲುಗಿ ಕಂಗೆಟ್ಟು ಭಾರತಕ್ಕೆ ಆಶ್ರಯಬೇಡಿ ಓಡಿಬಂದ ಹಿಂದೂಗಳ ಹೃದಯವಿದ್ರಾವಕ ಕಥೆ. ನೈಜಘಟನೆಗಳ ಸರಮಾಲೆ. ಈ ಕೃತಿ ಪ್ರಕಟವಾದ ತಿಂಗಳಲ್ಲೇ 50,000 ಪ್ರತಿ ಮಾರಾಟವಾಗಿ ದಾಖಲೆ ನಿರ್ಮಿಸಿತು. ಮಾತ್ರವಲ್ಲ, ಎರಡು ತಿಂಗಳಲ್ಲೇ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಿಗೆ ಅನುವಾದವಾಯಿತು.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41836942065748,"sku":"AP - 1","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/UttaBatteyalliHoratuBandvaru1.1.png?v=1738143198"},{"product_id":"the-genocide-that-was-never-told","title":"The Genocide that was never told","description":"\u003cp\u003eSold more than 50,000 copies The stories of Jihad of Bangla Hindus and their migration. This book comes at a time when the debate on CAA rages in the country with those opposing the Amendments to the Citizenship Act have chosen to neglect the sufferings of the persecuted minorities in the three neighboring Islamic countries. This timely work narrates untold stories of persecution of Hindus in Bangladesh. The authors have met these refugees who are living in Karnataka in person and accounted their stories of persecution, misery and sorrow. Each chapter narrates a gut wrenching story of Hindus who suffered at the hands of Jihadis there. Some of those who tormented them and targeted them were their neighbors, acquaintances for many years and residents of the same locality or village. Each story narrated by the victim shows the kind of torment they had to endure at the hands of the Jihadis, the loss of lives and property and the conditions under which they had to take a decision to leave their motherland and find refuge in India. The way they suffered through their journey from their hometowns to a refugee camp in India, the issues they faced here and way they rebuilt their lives has been poignantly explained.\u003c\/p\u003e\n\u003cp\u003eThis book is a translation of the Kannada original. Get it here : \u003ca href=\"http:\/\/www.ayodhyabooks.com\/product\/utta-batteyalli-horatu-bandvaru\/\"\u003eUtta Batteyalli Horatu Bandavaru\u003c\/a\u003e\u003c\/p\u003e","brand":"Ayodhya Publications Pvt Ltd","offers":[{"title":"English","offer_id":41822401200212,"sku":"AP - 2","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/TheGenocidethatwasnevertold2.1.png?v=1737097020"},{"product_id":"jaise-the-waise-chale-aaye","title":"Jaise the Waise Chale Aaye","description":"\u003cp class=\"western\" lang=\"en-US\" align=\"justify\"\u003e\u003cspan style=\"color: #333333;\"\u003e\u003cspan style=\"font-family: Arial, serif;\"\u003e\u003cspan style=\"font-size: small;\"\u003eSold more than 50,000 copies The stories of Jihad of Bangla Hindus and their migration. This book comes at a time when the debate on CAA rages in the country with those opposing the Amendments to the Citizenship Act have chosen to neglect the sufferings of the persecuted minorities in the three neighboring Islamic countries. This timely work narrates untold stories of persecution of Hindus in Bangladesh. The authors have met these refugees who are living in Karnataka in person and accounted their stories of persecution, misery and sorrow. Each chapter narrates a gut wrenching story of Hindus who suffered at the hands of Jihadis there. Some of those who tormented them and targeted them were their neighbors, acquaintances for many years and residents of the same locality or village. Each story narrated by the victim shows the kind of torment they had to endure at the hands of the Jihadis, the loss of lives and property and the conditions under which they had to take a decision to leave their motherland and find refuge in India. The way they suffered through their journey from their hometowns to a refugee camp in India, the issues they faced here and way they rebuilt their lives has been poignantly explained. \u003c\/span\u003e\u003c\/span\u003e\u003c\/span\u003e\u003c\/p\u003e\n\u003cp class=\"western\" lang=\"en-US\" align=\"justify\"\u003e\u003cspan style=\"color: #333333;\"\u003e\u003cspan style=\"font-family: Arial, serif;\"\u003e\u003cspan style=\"font-size: small;\"\u003eThis book is a translation of the Kannada original. Get it here : \u003ca href=\"http:\/\/www.ayodhyabooks.com\/product\/utta-batteyalli-horatu-bandvaru\/\"\u003eUtta Batteyalli Horatu Bandavaru\u003c\/a\u003e\u003c\/span\u003e\u003c\/span\u003e\u003c\/span\u003e\u003c\/p\u003e\n\u003cp\u003e \u003c\/p\u003e","brand":"Ayodhya Publications Pvt Ltd","offers":[{"title":"Hindi","offer_id":41822400741460,"sku":"AP - 4","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/JaisetheWaiseChaleAaye4.1.png?v=1737021831"},{"product_id":"bjp-25-1","title":"BJP 25+1","description":"\u003cp\u003eವಿಜಯವಾಣಿಯಲ್ಲಿ ಹಿರಿಯ ಪತ್ರಕರ್ತರಾಗಿರುವ ರಮೇಶ ದೊಡ್ಡಪುರ ೨೦೧೮-೧೯ರಲ್ಲಿ ಲೋಕಸಭೆ ಮತ್ತು ವಿಧಾನಸಭೆಯ ಚುನಾವಣೆಯ ಸಮಯದಲ್ಲಿ ಬಿಜೆಪಿ ಬೀಟ್ ನೋಡಿಕೊಳ್ಳುತ್ತಿದ್ದರು. ಜನಸಾಮಾನ್ಯರಿಗೆ ಕಾಣದ ಹಲವು ಚುನಾವಣಾ ಸ್ವಾರಸ್ಯಗಳನ್ನು ಹೆಕ್ಕಿ, ಅವನ್ನು ತರ್ಕಬದ್ಧವಾಗಿ ಜೋಡಿಸಿ, ರಾಜಕೀಯರಂಗದ ಒಳಹೊರಗನ್ನು ತೆರೆದಿಡುವ ಕೆಲಸವನ್ನು ಈ ಕೃತಿಯಲ್ಲಿ ಮಾಡಿದ್ದಾರೆ. ರಾಜಕೀಯ ತಂತ್ರ-ಪ್ರತಿತOತ್ರಗಳು, ಚುನಾವಣಾ ಸಿದ್ಧತೆ, ಎಡೆಬಿಡದ ಪ್ರಯತ್ನ, ಎಸೆದ ಕಲ್ಲನ್ನೇ ಮೆಟ್ಟಿಲಿನ ಇಟ್ಟಿಗೆಯಾಗಿಸುವ ಚಾಣಾಕ್ಷತೆ.. ಒಟ್ಟಲ್ಲಿ ಇದು ಚುನಾವಣೆ ಎಂಬ ನಾಟಕದ ಪರದೆ ಹಿಂದಿನ ಕಸರತ್ತುಗಳ ನೈಜ ಅನಾವರಣ. \u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41823830507604,"sku":"AP - 7","price":199.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/BJP25_17.1.png?v=1738142738"},{"product_id":"open-challenge","title":"Open Challenge","description":"\u003cp\u003eಪ್ರವೀಣ್ ಕುಮಾರ್ ಮಾವಿನಕಾಡು ಅವರ ವಿಶಿಷ್ಟ ವ್ಯಂಗ್ಯ, ಹಾಸ್ಯಪ್ರವೃತ್ತಿಯನ್ನು ಈ ಪುಸ್ತಕದ ಉದ್ದಕ್ಕೂ ನೋಡಬಹುದು. ಪ್ರಗತಿಪರರು, ಬುದ್ಧಿಜೀವಿಗಳು ಎಂದು ಕರೆಸಿಕೊಳ್ಳುವವರ ವೈಚಾರಿಕ ಶೂನ್ಯವನ್ನು ಎತ್ತಿತೋರಿಸುವ ಬರಹಗಳು ಇವು. ಅವರ ವಾದಗಳನ್ನೇ ಬಳಸಿಕೊಂಡು, ಆ ವಾದಗಳು ಯಾಕೆ ತರ್ಕಬದ್ಧವಾಗಿಲ್ಲ ಎಂದು ತೋರಿಸುತ್ತ, ವಿಚಾರವಾದಿಗಳ ದೊಡ್ಡ ದೊಡ್ಡ ಪ್ರಭಾವಳಿಯನ್ನೆಲ್ಲ ಕಿತ್ತೆಸೆಯುವಂಥ ಹರಿತವಾದ ಯೋಚನಾಲಹರಿ ಈ ಎಲ್ಲ ಬರಹಗಳ ವಿಶೇಷ ಅಂಶ. ಸೆಕ್ಯುಲರ್ವಾದಿಗಳ ಸುಳ್ಳು ಸಂಕಥನಗಳನ್ನು ಒಡೆಯುವ ದಾರಿಯಲ್ಲಿ ಓಪನ್ ಚಾಲೆಂಜ್ ಒಂದು ದೃಢ ಹೆಜ್ಜೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41825702182996,"sku":"AP - 12","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/OpenChallenge1.1.png?v=1738142741"},{"product_id":"avikyatha-swarajya-kaligalu","title":"Avikyatha Swarajya Kaligalu","description":"\u003cp\u003eಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಬಾಲಗಂಗಾಧರ ತಿಲಕ್, ವೀರ ಸಾವರ್ಕರ್ ಮೊದಲಾದವರ ಹೆಸರುಗಳೇನೋ ನಮಗೆ ಗೊತ್ತು. ಆದರೆ, ಆಂಗ್ಲರೊಡ್ಡಿದ ಜೀವದಾನದ ಆಮಿಷವನ್ನು ಕಾಲಿನಲ್ಲಿ ಒದ್ದು, ಅವರ ಆಶ್ರಯದಲ್ಲಿ ಸೆರೆವಾಸವನ್ನು ಅನುಭವಿಸುವುದಕ್ಕೆ ಹೇಸಿ, ಪ್ರಾಣಾರ್ಪಣೆ ಮಾಡಿಕೊಂಡ ಕನ್ನಡದ ಕಲಿ ಸುರಪುರದ ವೆಂಕಟಪ್ಪನಾಯಕ; ಉದಾರತೆ ಮೆರೆದು ಕೊನೆಗೆ ತನ್ನ ಬಂಧುಗಳಿಂದಲೇ ದುರಂತ ಅಂತ್ಯಕ್ಕೀಡಾದ ರಾಣಿ ಅಬ್ಬಕ್ಕ, ತಾನಷ್ಟೇ ಅಲ್ಲದೆ ತನ್ನ ಪತ್ನಿ ಮತ್ತು ತಾಯಿಯನ್ನೂ ರಾಷ್ಟ್ರವಿಮೋಚನೆಯ ಪುಣ್ಯಕಾರ್ಯದಲ್ಲಿ ತೊಡಗಿಸಿದ ಮೈಲಾರ ಮಹದೇವ, ಸ್ವಕೀಯ ಸಂಸ್ಥಾನಗಳು ಪರಕೀಯರ ವಶವಾದಾಗ ಸೈನ್ಯ ಕಟ್ಟಿಕೊಂಡು ಸ್ವಕೀಯ ರಾಜ್ಯಸ್ಥಾಪನೆಯ ಸಾಹಸ ತೋರಿದ ಕರ್ನಾಟಕದ ನಿಜವಾದ ಹುಲಿ ಧೊಂಡಿಯ ವಾಘ, ತನ್ನ ನಾಡಿಗೊದಗಿದ ಆಂಗ್ಲಗುಲಾಮಿತನ ಮತ್ತು ಕ್ರೈಸ್ತಮತಾಂತರದ ಕುರಿತು ಹನ್ನೆರಡರ ಹರೆಯದಲ್ಲೇ ಸ್ಪಷ್ಟತೆ ಪಡೆದು ಹೋರಾಟಕ್ಕಿಳಿದ ಗಾಯಿಡಿನ್ ಲೂ, ಆಂಗ್ಲರಿಗೆ ಕಪ್ಪ ನೀಡಲೊಪ್ಪದೆ ಹೋರಾಡಿ ಸ್ವಕೀಯಹೇಡಿಗಳ ಸ್ವಾರ್ಥ ಮತ್ತು ಆಂಗ್ಲರ ವಂಚನೆಗೆ ಬಲಿಯಾಗಿ ವೀರಗತಿಯನ್ನು ಪಡೆದ ವೀರಪಾಂಡ್ಯ ಕಟ್ಟಬೊಮ್ಮನ್ - ಮೊದಲಾದ ನೂರಾರು ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆ ಇತಿಹಾಸ ಪುಸ್ತಕಗಳಲ್ಲಿ ದಾಖಲಾಗದೇ ಉಳಿದಿದೆ. ಅಂಥ ಅವಿಖ್ಯಾತ ಸ್ವರಾಜ್ಯ ಕಲಿಗಳ ತ್ಯಾಗ, ಬಲಿದಾನದ ಜೀವನಗಳ ರೋಮಾಂಚಕ ವಿವರಗಳನ್ನು ಅತ್ಯಂತ ಸಶಕ್ತವಾಗಿ ಕಟ್ಟಿಕೊಡುವ ಪುಸ್ತಕವೇ ನಾರಾಯಣ ಶೇವಿರೆ ಅವರು ಬರೆದ 'ಅವಿಖ್ಯಾತ ಸ್ವರಾಜ್ಯ ಕಲಿಗಳು'. ಇದರಲ್ಲಿ 75 ಸ್ವಾತಂತ್ರ್ಯ ಹೋರಾಟಗಾರರ ಜೀವನಕತೆಗಳನ್ನು ಸಂಕಲಿಸಲಾಗಿದೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41833807052884,"sku":"AP-22","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AvikyathaSwarajyaKaligalu1.1.png?v=1738142748"},{"product_id":"bidugadeya-minchu","title":"Bidugadeya Minchu","description":"\u003cp\u003e1947ರಲ್ಲಿ ನಾವು ಪಡೆದದ್ದು ಬಿಡುಗಡೆ ಮಾತ್ರ, ಸ್ವಾತಂತ್ರ್ಯವಲ್ಲ. ಹಲವು ಸಹಸ್ರ ವರ್ಷಗಳ ಸಂಘರ್ಷದ ಇತಿಹಾಸದಲ್ಲಿ ನಾವು ಶಕ, ಹೂಣರು, ಗ್ರೀಕರು, ಡಚ್ಚರು, ಪೋರ್ಚುಗೀಸರು ಮತ್ತು ಫ್ರೆಂಚರಂಥ ಹಲವು ವಿದೇಶೀ ಶಕ್ತಿಗಳಿಂದ ಬಿಡುಗಡೆ ಪಡೆದಿದ್ದೇವೆ. ಆದರೆ ಸ್ವಾತಂತ್ರ್ಯ ಪಡೆದೆವೇ ಎಂದರೆ ಯೋಚಿಸುವಂತಾಗುತ್ತದೆ. ಭಾರತ ನಿಜವಾದ ಸ್ವಾತಂತ್ರ್ಯ ಪಡೆಯಲು ಇರುವ ಅಡ್ಡಿ-ಆತಂಕಗಳೇನು? ನಿಜಸ್ವಾತಂತ್ರ್ಯ ಪಡೆದರೆ ಭಾರತ ಹೇಗೆ ಜಗತ್ತಿನಲ್ಲಿ ವಿಭಿನ್ನವಾಗಿ ನಿಲ್ಲುತ್ತದೆ? - ಎಂಬ ಸಂಗತಿಗಳನ್ನು ಇತಿಹಾಸ-ವರ್ತಮಾನಗಳ ಹಿನ್ನೆಲೆಯಲ್ಲಿ ಚರ್ಚಿಸುವ ಮೌಲಿಕ ಕೃತಿ 'ಬಿಡುಗಡೆಯ ಮಿಂಚು'. ಇತಿಹಾಸದಲ್ಲಿ ನಡೆದುಹೋದ ಘಟನೆಗಳನ್ನು ಪಠ್ಯಪುಸ್ತಕದ ಮಾದರಿಯಲ್ಲಿ ಹೇಳದೆ ಅಲ್ಲಿ ಭಾರತ ಪಡೆದ, ಕಳೆದುಕೊಂಡ ಮುಖ್ಯ ಸಂಗತಿಗಳನ್ನು ಈ ಪುಸ್ತಕವು ದಾಖಲಿಸುತ್ತದೆ. ಗಾಂಧೀಜಿಯವರ ಅಹಿಂಸಾವ್ರತವನ್ನೂ ಅಸಹಕಾರ ಚಳವಳಿಯನ್ನೂ ಇದು ಕಟುವಾಗಿ ವಿಮರ್ಶಿಸುತ್ತದೆ. ಓದುಗರಿಗೆ ಈ ಗ್ರಂಥವು ಇತಿಹಾಸದ ಬಗ್ಗೆ ಹೊಸ ಹೊಳಹುಗಳನ್ನು ಕಾಣಿಸುವುದರಲ್ಲಿ ಸಂಶಯವಿಲ್ಲ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41833807183956,"sku":"AP-29","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/BidugadeyaMinchu1.1.png?v=1738142751"},{"product_id":"hindu-endarenu","title":"Hindu Endarenu ?","description":"\u003cstrong\u003eಹಿಂದೂ ಎಂದರೇನು?\u003c\/strong\u003e \r\n\r\nಹಿಂದೂ ಎಂಬ ಪದವು ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿದೆ. ಈ ಪದಕ್ಕೆ ಭಾರತೇತರ ಭಾಷೆಗಳ ನಿಘಂಟುಗಳಲ್ಲಿ ಹೀನಾರ್ಥವಿದೆ ಎಂದು ಕರ್ನಾಟಕದ ರಾಜಕಾರಣಿಯೊಬ್ಬರು ಹೇಳಿದ್ದು ಸುದ್ದಿಗೆ ಗ್ರಾಸವಾಗಿತ್ತು. ನಿಜಕ್ಕೂ ಹಿಂದೂ ಎಂಬ ಪದದ ಅರ್ಥವೇನು? ಅದಕ್ಕೆ ಅಸಭ್ಯ ಅಥವಾ ಅಸಹ್ಯ ಅರ್ಥವಿದೆಯೆ? ಅದನ್ನು ಆರ್ಯರು ಹುಟ್ಟುಹಾಕಿದರೆ? ಅಥವಾ ಹೊರಗಿನಿಂದ ಬಂದ ಪರದೇಶೀಯರು ಟಂಕಿಸಿದರೆ? ಹಿಂದೂ ಎಂಬ ಶಬ್ದ ಒಂದು ನದಿಗೆ ಅಥವಾ ಪ್ರಾಂತ್ಯಕ್ಕೆ ಸೀಮಿತವೆ? ಆ ಶಬ್ದವನ್ನು ತೀರ ಇತ್ತೀಚೆಗೆ ಸಾವರ್ಕರ್ ಸೃಷ್ಟಿಸಿದರೆ? ಇತ್ಯಾದಿ ಹತ್ತುಹಲವು ಪ್ರಶ್ನೆಗಳಿಗೆ ಉತ್ತರ ಕೊಡುವ ನಿಟ್ಟಿನಲ್ಲಿ ರಚನೆಯಾಗಿರುವ ಪುಟ್ಟ ಕೃತಿ \"ಹಿಂದೂ ಎಂದರೇನು?\" ಇದು ಬಹುಚರ್ಚಿತ ಪದದ ಅರ್ಥ-ವಿವರಣೆಗಳ ಜಿಜ್ಞಾಸೆಯನ್ನು ಎಲ್ಲ ಕೋನಗಳಿಂದ ಮಾಡುತ್ತದೆ.\r\n\r\n\u003cstrong\u003eಪುಸ್ತಕ ಬಿಡುಗಡೆ ದಿನಾಂಕ : 29-1-2023\r\n\r\nPre-Booking Started. \u003c\/strong\u003e","brand":"Ayodhya Publications Pvt Ltd","offers":[{"title":"Kannada","offer_id":41833807380564,"sku":"AP-37","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/HinduEndarenu1.1.png?v=1738142755"},{"product_id":"eddelu-bharathiya","title":"Eddelu bharathiya","description":"\u003cp\u003e\u003cstrong\u003eಎದ್ದೇಳು ಭಾರತೀಯ\u003c\/strong\u003e ಭಾರತವು 800 ವರ್ಷಗಳ ಇಸ್ಲಾಮೀ ವಸಾಹತು ಹಾಗೂ 200 ವರ್ಷಗಳ ಕ್ರೆöÊಸ್ತ ವಸಾಹತು ದಾಳಿಗೆ ಒಳಗಾಯಿತು. ನಂತರದ ದಿನಗಳಲ್ಲಿ ಕಮ್ಯುನಿಸಮ್, ಸೋಷಲಿಸಮ್‌ನಂಥ ಹಲವು ಇಸಮ್‌ಗಳ ಪ್ರಯೋಗಶಾಲೆಯಾಯಿತು. ಈಗಂತೂ ವೋಕ್ ಮುಂತಾದ ವಿಭಜಕ ಸಿದ್ಧಾಂತಗಳು ಭಾರತವನ್ನು ತಮ್ಮ ಪ್ರಯೋಗಶಾಲೆಯಾಗಿ ಮಾಡಿಕೊಳ್ಳಲು ಹವಣಿಸುತ್ತಿವೆ. ಭಾರತದ ದುಸ್ಥಿತಿಗೆ ಒಂದು ಬದಿಯಿಂದ ಈ ಎಲ್ಲ ಹೊರಗಿನ ಬೌದ್ಧಿಕ, ರಾಜಕೀಯ ಆಕ್ರಮಣಗಳು ಕಾರಣವಾದರೂ ಇನ್ನೊಂದು ಬದಿಯಿಂದ ನಿದ್ರಿತಾವಸ್ಥೆಯಲ್ಲಿದ್ದ ಭಾರತೀಯರೂ ಕಾರಣವೆಂಬುದನ್ನು ಒಪ್ಪಲೇಬೇಕು. ನಿದ್ರಾವಸ್ಥೆಯಲ್ಲಿರುವ ಭಾರತೀಯರನ್ನು ಎಚ್ಚರಗೊಳಿಸಿ ಅವರಲ್ಲಿ ಕ್ಷಾತ್ರ ತುಂಬುವ ಕೆಲಸವನ್ನು ಶ್ರೀ ಅರವಿಂದರು, ಸ್ವಾಮಿ ವಿವೇಕಾನಂದರು, ದಯಾನಂದ ಸರಸ್ವತಿ ಮುಂತಾದವರಿಂದ ಮೊದಲ್ಗೊಂಡು ಸೀತಾರಾಮ್ ಗೋಯಲ್, ಕಾನ್ರಾಟ್ ಎಲ್ಟ್ಸ್ ವರೆಗಿನ ಹಲವರು ಮಾಡುತ್ತಲೇ ಬಂದಿದ್ದಾರೆ. ಈ ಎಲ್ಲ ಆಕ್ರಮಣ ಮತ್ತು ಪ್ರತಿರೋಧಗಳ ಸಂಕ್ಷಿಪ್ತ ಇತಿಹಾಸವನ್ನು ಮುಂದಿಟ್ಟು, ಭಾರತೀಯನನ್ನು ಮುಂದಿನ ಬೌದ್ಧಿಕ ಯುದ್ಧಕ್ಕೆ ಅಣಿಗೊಳಿಸುವ ಕೆಲಸವನ್ನು ಮಾಡುವ ಪುಟ್ಟ ಕೃತಿಯೇ ಪ್ರಖರ ಚಿಂತಕರಾದ ಡಾ. ಜಿ. ಬಿ. ಹರೀಶರ \"ಎದ್ದೇಳು ಭಾರತೀಯ\".\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41833807446100,"sku":"AP-38","price":60.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Eddelubharathiya1.1.png?v=1738142757"},{"product_id":"beluru-shri-chennakeshavanige-bekilla-quran-patana","title":"Beluru Shri Chennakeshavanige Bekilla Quran Patana","description":"\u003cp\u003eವೃತ್ತಿಯಲ್ಲಿ ಶಸ್ತ್ರಚಿಕಿತ್ಸಕರಾಗಿರುವ ಡಾ. ಎನ್. ರಮೇಶ್ ಪ್ರತಿ ವರ್ಷ ತಮ್ಮೂರಿನ ಜಾತ್ರೋತ್ಸವದಲ್ಲಿ ನೋಡುವ ಒಂದು ಆಚರಣೆಯ ಬೆನ್ನುಬಿದ್ದು ಇತಿಹಾಸಕಾರನಾಗಿ ನಡೆಸಿರುವ ಸಂಶೋಧನೆಯ ಫಲವೇ ಈ ಕೃತಿ. ಬೇಲೂರಿನ ಇತಿಹಾಸಪ್ರಸಿದ್ಧ ಶ್ರೀ ಚೆನ್ನಕೇಶವ ದೇವಾಲಯದಲ್ಲಿ ಪ್ರತಿ ವರ್ಷ ಜಾತ್ರೆಯ ಸಮಯದಲ್ಲಿ ಖಾಜಿಯೊಬ್ಬರು ಮುಜರೆ ಮರ್ಯಾದೆ ಹೆಸರಿನಲ್ಲಿ ಕುರಾನ್ ಸಾಲುಗಳನ್ನು ಓದುವ ಕ್ರಮವಿದೆ. ಇದರ ಇತಿಹಾಸವೇನು, ಇದು ಯಾವಾಗ ಪ್ರಾರಂಭವಾಯಿತು, ಯಾರು ಪ್ರಾರಂಭಿಸಿದರು, ಯಾವ ಕಾರಣಕ್ಕಾಗಿ.. ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವಾಗಿ ವಿಸ್ತರಿಸಿಕೊಳ್ಳುವ ಈ ಕೃತಿಯು ಕೊನೆಯಲ್ಲಿ ಸತ್ಯದ ಅನಾವರಣವನ್ನೂ ಮಾಡಿದೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41833807544404,"sku":"AP-44","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/BeluruShriChennakeshavanigeBekillaQuranPatana1.1.png?v=1738142759"},{"product_id":"bjp-nadedubanda-dari","title":"BJP nadedubanda dari","description":"\u003cp\u003eಸ್ವಾತಂತ್ರ್ಯ ಬಂದ ಬಳಿಕ ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷಕ್ಕೆ ಭಾರತ ದೇಶವನ್ನು ಮುನ್ನಡೆಸುವ, ಜಗತ್ತಿನಲ್ಲೇ ಸ್ವಾಭಿಮಾನ ಸಂಪನ್ನ, ಶಕ್ತಿಯುತ ರಾಷ್ಟ್ರವನ್ನಾಗಿ ರೂಪಿಸುವ ಎಲ್ಲ ಬಗೆಯ ಮುಕ್ತ ಅವಕಾಶಗಳೂ ಇದ್ದವು.\u003cbr\u003e\nಪಂ. ಜವಾಹರಲಾಲ್ ನೆಹರು, ಇಂದಿರಾಗಾಂಧಿಯವರು ಮನಸ್ಸು ಮಾಡಿದ್ದರೆ ಜಾಗತಿಕ ಸ್ಥಾನ-ಮಾನ, ಘನತೆ ಗೌರವ ತಂದುಕೊಡಬಹುದಿತ್ತು. ಆದರೆ ಕುಟುಂಬ ರಾಜಕೀಯ, ಸ್ವಜನಪಕ್ಷಪಾತ, ವಿರೋಧಿಗಳ ದಮನ, ಸ್ವಾರ್ಥಕೇಂದ್ರಿತ ಆಡಳಿತ - ಇವುಗಳಿಂದಾಗಿ, ಸ್ವಾತಂತ್ರ್ಯ ಬಂದು ಆರು ದಶಕಗಳೇ ಸಂದರೂ ಭಾರತ ದಾರಿದ್ರ್ಯಾ, ಅಜ್ಞಾನ, ಸ್ವಾಭಿಮಾನಶೂನ್ಯತೆಗಳಿಂದ ಮೇಲೆದ್ದು ನಿಲ್ಲಲೇ ಇಲ್ಲ. ಬಿಜೆಪಿಯ ಮೈತ್ರಿಕೂಟ ಎನ್‌ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ನಿಧಾನವಾಗಿಯಾದರೂ ಭಾರತ ಮೈಕೊಡವಿ ಮೇಲೆದ್ದು ಅಭಿವೃದ್ಧಿಪಥದತ್ತ ಧಾವಿಸತೊಡಗಿದೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಕಳೆದ ಹತ್ತು ವರ್ಷಗಳಲ್ಲಿ ಜಗತ್ತೇ ಭಾರತದತ್ತ ಬೆರಗುಗಣ್ಣಿಂದ ನೋಡುವಂತಾಗಿರುವುದನ್ನು ವಿರೋಧಿಗಳೂ ಒಪ್ಪಬೇಕಾಗುತ್ತದೆ.\u003cbr\u003e\nಬಿಜೆಪಿ ಈ ಎತ್ತರಕ್ಕೆ ಬೆಳೆದಿದ್ದಾದರೂ ಹೇಗೆ? ಯಾವುದೇ ಶ್ರಮವಿಲ್ಲದೆ ರಾತ್ರೋರಾತ್ರಿ ಬೆಳೆದು ನಿಂತಿತೆ?\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41833807970388,"sku":"AP-92","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/BJPnadedubandadari-1.1.png?v=1738142764"},{"product_id":"hindu-resurgence-the-modi-way","title":"Hindu Resurgence - The Modi Way","description":"\u003cp\u003eEmbark on a captivating journey through the pages of \"Hindu Resurgence,\" where author Swaraagni delves deep into India's spiritual renaissance under the visionary leadership of Narendra Modi.\u003c\/p\u003e\n\n\u003cp\u003eThis insightful exploration navigates monumental initiatives such as the resolution of the Ayodhya Ram Mandir dispute and the creation of spiritual corridors, reflecting Modi's unwavering commitment to upholding Sanatana Dharma's timeless values. From the Ujjain Mahakal corridor to global initiatives promoting Ayurveda and yoga, each chapter resonates with Modi's holistic approach to governance. With meticulous attention to detail, the author provides a fresh perspective on Modi's actions, rooted in compassion and inclusivity.\u003c\/p\u003e","brand":"Ayodhya Publications Pvt Ltd","offers":[{"title":"English","offer_id":41833808068692,"sku":"AP-105","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/HinduResurgence-TheModiWay1.1.png?v=1737800679"},{"product_id":"adaddu-agabekaddu","title":"Adaddu Agabekaddu","description":"\u003cp\u003eಆದದ್ದು-ಆಗಬೇಕಾದ್ದು - ಡಾ. ಅಜಕ್ಕಳ ಗಿರೀಶ ಭಟ್\u003c\/p\u003e\n\n\u003cp\u003eಅಯೋಧ್ಯಾ ಪಬ್ಲಿಕೇಶನ್ಸ್'ನ \"ಚಿಂತಕ-ಚಿಂತನ ಮಾಲೆ\"ಯ ಮೊದಲ ಕೃತಿಯಾಗಿ ಪ್ರಕಟವಾಗಿರುವ \"ಆದದ್ದು-ಆಗಬೇಕಾದ್ದು\" ಕನ್ನಡದ ಪ್ರಮುಖ ಮತ್ತು ಪ್ರಬುದ್ಧ ಚಿಂತಕರಲ್ಲೊಬ್ಬರಾದ ಡಾ. ಅಜಕ್ಕಳ ಗಿರೀಶ ಭಟ್ಟರ ಇದುವರೆಗಿನ ಎಲ್ಲ ಚಿಂತನೆ-ತತ್ತ್ವಜ್ಞಾನಗಳ ಸಂಗ್ರಹರೂಪವಾಗಿದೆ. ಈ ಕೃತಿಯಲ್ಲಿ ಅವರು ಭಾಷಾವಿಜ್ಞಾನ, ರಿಲಿಜನ್-ಧರ್ಮ ಸಂಘರ್ಷ, ಭಾರತೀಯ ಸಂಸ್ಕೃತಿಯ ಅನನ್ಯತೆ, ರಾಷ್ಟ್ರೀಯವಾದ-ರಾಷ್ಟ್ರೀಯತೆಯ ಸೂಕ್ಷ್ಮಗಳು, ಜಾಗತೀಕರಣದ ಲಾಭನಷ್ಟ, ಪ್ರಾದೇಶಿಕತೆ ಮತ್ತು ವೈಶ್ವಿಕತೆಯ ನೆಲೆಗಳು - ಹೀಗೆ ಹತ್ತುಹಲವು ಮಹತ್ವದ ಸಂಗತಿಗಳ ಬಗ್ಗೆ ಅತ್ಯಂತ ಆಳವಾದ, ವಿಸ್ತಾರವಾದ ಚರ್ಚೆಗಳನ್ನು ಮಾಡಿದ್ದಾರೆ. ಇಲ್ಲಿರುವ ಎಲ್ಲ ಬರಹಗಳು ಓದುಗರ ಜ್ಞಾನಪರಿಧಿಯನ್ನು ವಿಸ್ತರಿಸುತ್ತವೆ, ಅವರನ್ನು ಆಲೋಚನೆಗೆ ಹಚ್ಚುತ್ತವೆ, ಹಲವು ಗೊಂದಲಗಳನ್ನು ಪರಿಹರಿಸುತ್ತವೆ ಮತ್ತು ಹೊಸ ಚಿಂತಕರನ್ನು ಹುಟ್ಟಿಸುವಷ್ಟು ಸಶಕ್ತವಾಗಿವೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41834731864148,"sku":"AP-99","price":260.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AdadduAgabekaddu1.1.png?v=1738142768"},{"product_id":"naneke-islam-torede","title":"Naneke Islam Torede","description":"\u003cp\u003eನಾನೇಕೆ ಇಸ್ಲಾಂ ತೊರೆದೆ - ವಿನಯ್ ಶಿವಮೊಗ್ಗ\u003c\/p\u003e\n\n\u003cp\u003eಇಸ್ಲಾಂ ರಿಲಿಜನ್ ಒಳಗಿನ ಗೊಂದಲಗಳನ್ನು ಆ ಜಗತ್ತಿನ ಒಳಗಿನವರೇ ಹೇಳಿದರೆ ಹೇಗಿರುತ್ತದೆ ಎಂಬ ಪ್ರಶ್ನೆಗೆ ಉತ್ತರದಂತಿದೆ \"ನಾನೇಕೆ ಇಸ್ಲಾಂ ತೊರೆದೆ?\" ಕೃತಿ. ಮುಸ್ಲಿಮರಾಗಿ ಹುಟ್ಟಿ, ಅಲ್ಲಿನ ಹಲವು ಕಟ್ಟುಪಾಡುಗಳಿಗೆ ಬೇಸತ್ತು ಕೊನೆಗೆ ಅದನ್ನು ತೊರೆದು ಸ್ವತಂತ್ರರಾದ ಹಾಗೂ ಬೇರೆ ಜಾತಿಪಂಥಗಳಲ್ಲಿ ಹುಟ್ಟಿದ್ದರೂ ಮುಸ್ಲಿಮರಾಗಿ ಮತಾಂತರವಾಗಿ ನಂತರ ಅಲ್ಲಿನ ಹಿಂಸೆ-ಕ್ರೌರ್ಯಗಳ ಭೀಭತ್ಸವನ್ನು ಸಹಿಸಲಾಗದೆ ಮತ್ತೆ ಹೊರಬಂದ ಹಲವು ಮುಸ್ಲಿಂ ಮಹಿಳೆಯರು ಹೇಳಿಕೊಂಡ ಅನುಭವಗಳ ಸಂಗ್ರಹವಾಗಿ ಈ ಕೃತಿ ಮೂಡಿಬಂದಿದೆ. ಮಹಿಳೆಯರೇ ಪ್ರಧಾನಪಾತ್ರಗಳಲ್ಲಿ ಬರುವ ಪ್ರತಿ ಅಧ್ಯಾಯವೂ ಓದುಗರನ್ನು ಗಂಭೀರ ಚಿಂತನೆಗೆ ಹಚ್ಚುತ್ತದೆ. ಸ್ವತಂತ್ರ ಚಿಂತನೆಗೆ ಅವಕಾಶವೇ ಇಲ್ಲದ ಪರಿಸರದಲ್ಲಿ ಪಡಬಾರದ ಪಾಡುಪಟ್ಟು ಎಲ್ಲ ದುಃಖ-ಹಿಂಸೆಗಳನ್ನು ನುಂಗಿಕೊಂಡು ಕೊನೆಗೆ ಆ ಬಂಧನದಿಂದ ಕಳಚಿಕೊಂಡು ಹೊರಬಂದವರ ಕಥೆಗಳು ನಿಜಕ್ಕೂ ಹೊಸ ಜಗತ್ತನ್ನು ಅನಾವರಣ ಮಾಡುತ್ತವೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41834731995220,"sku":"AP-106","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/NanekeIslamTorede1.1.png?v=1738142772"},{"product_id":"the-modi-effect-reinventing-bharat","title":"The Modi Effect-Reinventing Bharat","description":"\u003cp\u003e\"The Modi Effect - Reinventing Bharat\" delves into the profound transformation of Bharat under Shri Narendra Modi's leadership since 2014. Edited by Dr. Manchal Mahesh, this collection of articles by esteemed figures, including Smt. Nirmala Sitharaman and Shri Annamalai, provides a comprehensive analysis of the government's impact on various sectors. From infrastructure and rural electrification to international diplomacy and technological advancements, the book examines significant strides with both quantitative data and qualitative assessments. It balances achievements with the challenges faced, highlighting Bharat's resilience and growth. As Bharat enters Modi 3.0, this book serves as a beacon for young readers, inspiring them to actively participate in the nation's progress. It is an essential read for understanding the ongoing transformation and future aspirations of Bharat.\u003c\/p\u003e","brand":"Ayodhya Publications Pvt Ltd","offers":[{"title":"English","offer_id":41834732060756,"sku":"AP-51","price":199.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-51-1.1.png?v=1753938278"},{"product_id":"samvidhana-badalayisiddu-yaru","title":"Samvidhana Badalayisiddu Yaru?","description":"\u003cp\u003eಬಾಬಾಸಾಹೇಬ್ ಡಾ. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನ ಅನಂತರದ ದಿನಗಳಲ್ಲಿ ನೆಹರು ಮತ್ತು ಅವರ ಉತ್ತರಾಧಿಕಾರಿಗಳ ಅವಧಿಯಲ್ಲಿ ಹಲವು ಬಾರಿ ಬದಲಾವಣೆಗೆ ಒಳಗಾಯಿತು. ಸಂವಿಧಾನವನ್ನು ಮನಸ್ಸಿಗೆ ಬಂದಂತೆ ಬದಲಾಯಿಸುವ ಕೆಲಸವೂ ನಡೆಯಿತು. ಆದರೆ ಇಂದು, ಸಂವಿಧಾನವನ್ನು ರಕ್ಷಿಸುವ ಹೊಣೆ ಹೊತ್ತ ಸರಕಾರ ಮತ್ತು ವ್ಯಕ್ತಿಗಳ ಮೇಲೆಯೇ 'ಸಂವಿಧಾನದ ಕೊಲೆಗಾರರು' ಎಂಬ ನರೇಟಿವ್ ಕಟ್ಟಲಾಗುತ್ತಿದೆ. ಸಂವಿಧಾನವನ್ನು ಬರೆದ ಡಾ. ಅಂಬೇಡ್ಕರರ ಆಶಯಗಳೇನಿತ್ತು? ಅವರು ಸಂಸತ್ತಿನಲ್ಲಿ ಮಾಡಿದ ಭಾಷಣಗಳ ಪೂರ್ಣಪಾಠ ಏನು? ಸಂವಿಧಾನ ರಚನೆಯ ಪ್ರಕ್ರಿಯೆ ಹೇಗಿತ್ತು? ಬಾಬಾಸಾಹೇಬರನ್ನು ಯಾವ್ಯಾವ ರೀತಿಯಲ್ಲಿ ದಮನಿಸಲು ಪ್ರಯತ್ನಿಸಲಾಯಿತು? ಸಂವಿಧಾನದ ತಿದ್ದುಪಡಿಯ ಹೆಸರಿನಲ್ಲಿ ಏನೇನು ಅಜೆಂಡಗಳನ್ನು ತುರುಕಲಾಯಿತು? ಬಾಬಾಸಾಹೇಬರ ಆಶಯವನ್ನು ರಕ್ಷಿಸುವ ಬಗೆ ಹೇಗೆ? - ಈ ಎಲ್ಲ ವಿಚಾರಗಳನ್ನು ಅತ್ಯಂತ ಸ್ಪಷ್ಟವಾಗಿ, ಅಧ್ಯಯನಪೂರ್ಣವಾಗಿ, ವಿಸ್ತೃತವಾಗಿ ಕಟ್ಟಿಕೊಟ್ಟಿರುವ ಕೃತಿಯೇ 'ಸಂವಿಧಾನ ಬದಲಾಯಿಸಿದ್ದು ಯಾರು?'. ಸಂವಿಧಾನರಚನೆಯ ವಜ್ರಮಹೋತ್ಸವ ಸಂದರ್ಭದಲ್ಲಿ ಇದು ಬಾಬಾಸಾಹೇಬ್ ಡಾ. ಅಂಬೇಡ್ಕರರ ವ್ಯಕ್ತಿತ್ವ-ಸಾಧನೆಗಳಿಗೆ ಅರ್ಪಿಸಿರುವ ಸಾರ್ಥಕ ಕೃತಿಯಾಗಿದೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41834732453972,"sku":"AP-113","price":299.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/SamvidhanaBadalayisidduYaru1.1.png?v=1738142776"},{"product_id":"avititta-ambedkar","title":"Avititta Ambedkar","description":"\u003cp\u003eಅವಿತಿಟ್ಟ ಅಂಬೇಡ್ಕರ್\u003c\/p\u003e\n\n\u003cp\u003eಡಾ. ಅಂಬೇಡ್ಕರ್ ಅವರು ಬಾಲ್ಯ ಜೀವನದಲ್ಲಿ ಅನುಭವಿಸಿದ ಅಪಮಾನಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ಆದರೆ ಸಂವಿಧಾನ ರಚನೆಯ ಸಂದರ್ಭದಲ್ಲಿ, ಸಂವಿಧಾನ ರಚನಾಕಾರ್ಯವನ್ನು ಯಶಸ್ವಿಯಾಗಿ ಮುಗಿಸಿ ಮಹಾನಾಯಕ ಎನಿಸಿಕೊಂಡ ನಂತರವೂ ಅವರಿಗಾದ ಅಪಾರ ಅವಮಾನಗಳ ಬಗ್ಗೆ ಹೆ‍ಚ್ಚಿನ ಮಾಹಿತಿ ಎಲ್ಲಿಯೂ ಲಭ್ಯವಿಲ್ಲ.\u003c\/p\u003e\n\n\u003cp\u003eಹಾಗಾದರೆ ಮಹಾ ನಾಯಕ ಬಾಬಾ ಸಾಹೇಬರನ್ನು ಜನಪ್ರಿಯರಾಗದಂತೆ ತಡೆಯಲು ಪ್ರಯತ್ನಿಸಿದವರು ಯಾರು, ಹೆಜ್ಜೆ ಹೆಜ್ಜೆಗೂ ಅವರನ್ನು ಅಪಮಾನಿಸಿದವರು ಯಾರು, ಕೊನೆಯ ದಿನಗಳಲ್ಲಿ ಅವರ ನಿಕಟವರ್ತಿಗಳಾಗಿ ಉಳಿದವರು ಯಾರು ಎನ್ನುವ ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಸಂಶೋಧಿತ ನಾಟಕ \"ಅವಿತಿಟ್ಟ ಅಂಬೇಡ್ಕರ್\".\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41846538567764,"sku":"AP-50","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AvitittaAmbedkar.png?v=1738314368"},{"product_id":"2035-political-crime-thriller","title":"2035 - Political Crime Thriller","description":"\u003cp\u003eಹೆಸರಿನಷ್ಟೇ ವಿಶಿಷ್ಟವಾದ ರಾಜಕೀಯ ಥ್ರಿಲ್ಲರ್ ಕಾದಂಬರಿ 2035. ರಾಜಕೀಯದ ಚದುರಂಗದಾಟ, ತಮ್ಮ ಬೇಳೆ ಬೇಯಿಸಿಕೊಳ್ಳಲು ಅಮಾಯಕರನ್ನು ದಾಳಗಳಾಗಿಸಿಕೊಳ್ಳುವ ಸ್ವಾರ್ಥಿಗಳ ನಯವಂಚನೆ, ಮೋಸದಾಟಕ್ಕೆ ಬಲಿಬೀಳುವ ಮುಗ್ಧ ಸಮಾಜ, ದುಷ್ಟರು ಮತ್ತು ಶಿಷ್ಟರ ಕೈಯಲ್ಲಿ ಬಗೆಬಗೆಯಲ್ಲಿ ಬಳಕೆಯಾಗುವ ಆಧುನಿಕ ತಂತ್ರಜ್ಞಾನಗಳು, ಜಗತ್ತು ಎಷ್ಟೇ ಆಧುನಿಕವಾದರೂ ಮನುಷ್ಯನಲ್ಲಿ ಮೂಲಭೂತವಾಗಿ ಅಡಗಿಕೊಂಡಿರುವ ಪಾಶವೀಪ್ರವೃತ್ತಿ... ಹೀಗೆ ಹತ್ತುಹಲವು ಆಯಾಮಗಳಲ್ಲಿ ತೆರೆದುಕೊಳ್ಳುವ ಕಥಾನಕವನ್ನು ಕಟ್ಟಿಕೊಟ್ಟಿದ್ದಾರೆ ಭರವಸೆಯ ಕಾದಂಬರಿಕಾರ ಧೀರಜ್ ಪೊಯ್ಯೆಕಂಡ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41846538731604,"sku":"AP-45","price":320.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/2035-PoliticalCrimeThriller1.1.png?v=1738315609"},{"product_id":"karnataka-kesari-shree-jagannatha-rao-joshi","title":"Karnataka kesari Shree Jagannatha rao joshi","description":"\u003cp\u003eಈ ಪುಸ್ತಕವು ಮಾನ್ಯ ಜಗನ್ನಾಥರಾಯರ ಜೀವನ ಚರಿತ್ರೆಯಲ್ಲ, ಬದಲಾಗಿ ಅವರ ಜೀವನದ ಕೆಲವು ಉಲ್ಲೇಖನೀಯ ಘಟನೆಗಳ ಸಂಗ್ರಹ. ಸಾಮಾನ್ಯ ಜನರೊಂದಿಗೆ ಬೆರೆಯುವ ಆತ್ಮೀಯ ಸಾಮರಸ್ಯಯುಕ್ತ ಸಹಜ ವ್ಯವಹಾರ. ತನ್ನ ಶಾರೀರಿಕ ದೌರ್ಬಲ್ಯದ ಬಗ್ಗೆಯೇ ಹಾಸ್ಯ ಚಟಾಕಿ ಹಾರಿಸುವುದರೊಂದಿಗೆ ಎಲ್ಲರಿಗೂ ನಗೆಗಡಲಲ್ಲಿ ತೇಲಿಸುವ ಗುಣ. ಹೀಗೆ ಯಾವನೇ ಒಬ್ಬ ವ್ಯಕ್ತಿಯಲ್ಲಿ ವಿವಿಧ ಪ್ರಕಾರಗಳ ವಿಶೇಷವಾಗಿ ಪರಸ್ಪರ ವಿರೋಧಾಭಾಸಗಳಿಂದ ಕೂಡಿದ ಗುಣಗಳ ಅದ್ಭುತ ಸಮುಚ್ಛಯವಿರುವ ದೃಶ್ಯ ನೋಡಲು ಸಿಗುವುದು ತುಂಬಾ ವಿರಳವಾದದ್ದು.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41846538797140,"sku":"AP-48","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/KarnatakakesariShreeJagannatharaojoshi1.1.png?v=1738316060"},{"product_id":"jammamale","title":"Jammamale","description":"\u003cp\u003eಅತ್ತ ಸಮುದ್ರ, ಇತ್ತ ಮಲೆಘಟ್ಟ - ನಡುಮಧ್ಯೆ ಅರಳಿನಿಂತ ಹಚ್ಚಹಸುರಿನ ಗಿರಿಕಂದರಗಳ ಸ್ವರ್ಗಭೂಮಿ ಕೊಡಗು, ಕ್ಷಾತ್ರಕ್ಕೊಂದು ಅನ್ವರ್ಥ. ಮಿಲಿಟರಿ, ಕೋವಿ, ಬೇಟೆ, ಯುದ್ಧ, ಕಾಫಿ, ಹಾಕಿ, ಇಗ್ಗುತ್ತಪ್ಪ, ಕಾವೇರಿ, ಹುತ್ತರಿ, ಕ್ರೌರ್ಯ-ಹಿಂಸೆಗಳ ರಕ್ತಸಿಕ್ತ ಇತಿಹಾಸ, ಕೊಡವ ಭಾಷೆ-ಸಂಸ್ಕೃತಿ - ಹೀಗೆ ಎಲ್ಲವನ್ನೂ ತನ್ನೊಳಗೆ ಕಾಪಿಟ್ಟುಕೊಂಡು ಬಂದಿರುವ ಕೊಡಗು ಪ್ರವಾಸಿಗರ ಕಣ್ಣಿಗೆ ಕಾಣುವ ಬಗೆ ಬೇರೆ; ತನ್ನೊಳಗಿನ ಜನರೆದುರು ಅನಾವರಣಗೊಳ್ಳುವ ಪರಿಯೇ ಬೇರೆ. ಕೊಡಗಿನಲ್ಲಿ ಹುಟ್ಟಿ ಬೆಳೆದ ಪತ್ರಕರ್ತ ಸಂತೋಷ್ ತಮ್ಮಯ್ಯ ವಿಧಿಯ ಮಾಟದ ಕೊಡಗಿನ ಒಳಹೊರಗನ್ನು ಈ ಕೃತಿಯಲ್ಲಿ ಓದುಗರ ಮುಂದೆ ಬಿಚ್ಚಿಟ್ಟಿದ್ದಾರೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41846538862676,"sku":"Ap-61","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Jammamale1.1.png?v=1738319099"},{"product_id":"naraadhamara-naduve","title":"Naraadhamara Naduve","description":"\u003cp\u003eಮಲಯಾಳಂ ಲೇಖಕ ಎಸ್. ಮಹಾದೇವನ್ ತಂಬಿಯವರ ಕಾದಂಬರಿಯನ್ನು ಡಾ. ಮೀನಾಕ್ಷಿ ರಾಮಚಂದ್ರ ಕನ್ನಡಕ್ಕೆ ತಂದಿದ್ದಾರೆ. ಗಾತ್ರದ ದೃಷ್ಟಿಯಿಂದ ಇದು ಸಣ್ಣ ಕೃತಿ. ಆದರೆ ಇದಕ್ಕೊಂದು ಐತಿಹಾಸಿಕ ಮಹತ್ವವಿದೆ. \"ಕಾಶ್ಮೀರ್ ಫೈಲ್ಸ್\"ನಂಥ ಸಿನೆಮಗಳು ತೆರೆಕಾಣುವುದಕ್ಕೆ ದಶಕದಷ್ಟು ಮೊದಲೇ ಮಲಯಾಳಂನಲ್ಲಿ ಪ್ರಕಟವಾಗಿ ಕನ್ನಡದಲ್ಲಿ ಭಾಷಾಂತರವಾಗಿದ್ದ ಕೃತಿ ಇದು. ಕಾಶ್ಮೀರ ಹೇಗೆ ನಮ್ಮ ಕೈತಪ್ಪುತ್ತಹೋಯಿತು ಎಂಬುದನ್ನು ಕೆಲವೇ ಕೆಲವು ಪುಟಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಲೇಖಕರು ಇಲ್ಲಿ ವಿವರಿಸಿದ್ದಾರೆ. ಹೇಳಬೇಕಾದ್ದೆಲ್ಲವೂ ಇಲ್ಲಿ ಸೂತ್ರರೂಪದಲ್ಲಿ ಬಂದುಹೋಗಿವೆ. ಇಲ್ಲಿ ಮೂರ್ನಾಲ್ಕು ಸಾಲುಗಳಲ್ಲಿ ಬಂದುಹೋಗಿರುವ ಹಿಂಸೆಯ ವಿವರಗಳನ್ನೇ ಬೇಕಿದ್ದರೆ ಒಂದಿಡೀ ಪುಸ್ತಕವಾಗಿ ಬರೆಯಬಹುದು. ಅಷ್ಟು ಸಾಂದ್ರವಾಗಿದೆ ಇಲ್ಲಿನ ಭಾಷೆ, ಕಥೆ.\u003cbr\u003e\nಇತ್ತೀಚೆಗೆ ಮಾಜಿ ಕಾಂಗ್ರೆಸ್ಸಿಗ ಗುಲಾಂ ನಬಿ ಆಜಾದ್ \"ಕಾಶ್ಮೀರದಲ್ಲಿರುವ ಮುಸಲ್ಮಾನರೆಲ್ಲ ಮೂಲತಃ ಹಿಂದುಗಳೇ\" ಎಂಬ ಮಾತು ಹೇಳಿದ್ದಾರೆ. ವೃದ್ಧನಾರೀ ಪತಿವ್ರತಾ ಎಂಬಂತಾಗಿದೆ! ಜೀವನವೆಲ್ಲ ಸುಳ್ಳು ಹೇಳಿ, ಇದೀಗ ಇಳಿವಯಸ್ಸಲ್ಲಿ ನಿಜ ಉಸುರಿದರೆ ಪ್ರಯೋಜನ ಏನು? ಆಜಾದ್ \"ಕಾಶ್ಮೀರದಲ್ಲಿದ್ದವರೆಲ್ಲ ಭಾರತೀಯರೇ. ಹೊರಗಿನಿಂದ ಯಾರೂ ಬರಲಿಲ್ಲ\" ಎಂಬ ಸುಳ್ಳನ್ನೂ ಆ ಮಾತಿನೊಂದಿಗೆ ಸೇರಿಸಿದ್ದಾರೆ. ಕಾಶ್ಮೀರವನ್ನು ನರಕ ಮಾಡಲು ಪಾಕಿಸ್ತಾನ, ಅಫಘಾನಿಸ್ತಾನಗಳಿಂದ ಸಾವಿರ-ಲಕ್ಷ ಸಂಖ್ಯೆಯಲ್ಲಿ ಹೊರಗಿನವರು ಬಂದು ತುಂಬಿಕೊಂಡರು; ಕಾಶ್ಮೀರಿ ಪಂಡಿತರನ್ನು ಈ ಪರಕೀಯರು ಇನ್ನಿಲ್ಲದಂತೆ ಕಾಡಿ ಒಕ್ಕಲೆಬ್ಬಿಸಿದರು; ಆಗ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರಕಾರವಾಗಲೀ ಕಾಶ್ಮೀರದಲ್ಲಿದ್ದ ಸ್ಥಳೀಯ ಸರಕಾರವಾಗಲೀ ಪಂಡಿತಜನಾಂಗದ ಪರವಾಗಿ ಒಂದಕ್ಷರದ ಬೆಂಬಲವನ್ನೂ ಸೂಚಿಸಲಿಲ್ಲ ಎಂಬುದು ಇತಿಹಾಸದ ಸತ್ಯ. ಕಾಶ್ಮೀರದ ಮಣ್ಣಿನಲ್ಲಿ ಲಕ್ಷಾಂತರ ಹಿಂದುಗಳ ಮಾರಣಹೋಮದ ನೋವಿನ ಕತೆಗಳಿವೆ. ಹಿಂದುಗಳ ಹೆಣಗಳ ಮೇಲೆ ಮಹಲುಗಳನ್ನು ಕಟ್ಟಿಕೊಂಡ ಇಲ್ಲಿನ ಮತಾಂಧರಿಗೆ ಪಶ್ಚಾತ್ತಾಪದ ಲವಲೇಶವೂ ಇಲ್ಲವೆಂಬುದು ರಾಷ್ಟ್ರೀಯ ದುರಂತಗಳಲ್ಲೊಂದು.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41846538993748,"sku":"AP-67","price":60.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/NaraadhamaraNaduve1.1.png?v=1738320239"},{"product_id":"karineera-veera","title":"Karineera Veera","description":"\u003cp\u003eಸಾವರ್ಕರ್ ಅವರು ಯಾಕೆ ವೀರ ಮಹಾ ವ್ಯಕ್ತಿತ್ವ, ಅವರ ಜೀವನದ ಒಳತಿರುವುಗಳೇನು ಎಂಬುದರ ಮೇಲೆ ಅಡ್ಡಂಡ ಕಾರ್ಯಪ್ಪ ಬರೆದ ಈ ನಾಟಕ ಬೆಳಕು ಚೆಲ್ಲಿದೆ. ರಂಗಭೂಮಿಯ ಕತ್ತಲೆಯಲ್ಲಿ ನಿಂತಿದ್ದ ಸಾವರ್ಕರ್ ಮೇಲೆ ಈ ನಾಟಕ ಬೆಳಕು ಹಾಯಿಸಿರುವ ರೀತಿ ಅಪರೂಪದ್ದು. ಪ್ರಸಿದ್ಧ ರಾಜಕೀಯ ವ್ಯಕ್ತಿಗಳಾದ ಗಾಂಧಿ, ನೆಹರೂ, ಸುಭಾಷ್, ವಾಜಪೇಯಿ, ಸಾವರ್ಕರ್ ಜೊತೆಗೆ ಚರಿತ್ರೆಕಾರ ಧನಂಜಯ್ ಕೀರ್ ‘ಕರಿನೀರ ವೀರ' ನಾಟಕದಲ್ಲಿ ಪಾತ್ರಗಳಾಗಿರುವುದು, ಜೊತೆಗೆ ಸಂಕೀರ್ಣ ವಿಷಯಗಳನ್ನು ಆರಿಸಿಕೊಂಡು ನಾಟಕ ರಚಿಸುವ ಕೌಶಲ ಇವರಿಗೆ ಸಿದ್ಧಿಸುತ್ತಿರುವುದರ ಸಾಕ್ಷಿ.\u003cbr\u003e\nಸಮಕಾಲೀನ ದೇಶಕಾಲಗಳ ಕಟಕಟೆಯಲ್ಲಿ ಇಲ್ಲಿನ ಪಾತ್ರಗಳ ಅಂತರ0ಗ ದರ್ಶನವಾಗುತ್ತದೆ. ಸಾಹಿತ್ಯದ ಕೇಂದ್ರ ಜೀವಾಳ ಮನುಷ್ಯನಾಗಿರುವುದರಿಂದ ಒಬ್ಬ ಮನುಷ್ಯನಾಗಿ ಸಾವರ್ಕರ್ ಅವರ ಜೀವನದ ಪ್ರಮುಖ ಮಜಲುಗಳನ್ನು ನಾಟಕೀಯಗೊಳಿಸುವಲ್ಲಿ ಕಾರ್ಯಪ್ಪ ಸಾಕಷ್ಟು ಸಫಲರಾಗಿದ್ದಾರೆ. ಕನ್ನಡದಲ್ಲಿ ನನಗೆ ತಿಳಿದಂತೆ ಇದು ಸಾವರ್ಕರ್ ಕೇಂದ್ರಿತ ಪ್ರಥಮ ನಾಟಕ. ಸಾವರ್ಕರ್ ಅವರ ರಮ್ಯಾದ್ಭುತ ಜೀವನವನ್ನು ರಂಗಪಠ್ಯವನ್ನಾಗಿ ರೂಪಿಸಿದ್ದಕ್ಕೆ ಕನ್ನಡ ರಂಗಭೂಮಿ ಪ್ರಿಯರ ಪರವಾಗಿ ನಾಟಕಕಾರರನ್ನು ಅಭಿನಂದಿಸುತ್ತೇನೆ.\u003cbr\u003e\n- ಡಾ. ಜಿ.ಬಿ. ಹರೀಶ್\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41846539026516,"sku":"AP-65","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/KarineeraVeera1.1.png?v=1738320357"},{"product_id":"gomamthaka","title":"Gomamthaka","description":"\u003cp\u003eಗೋಮಾಂತಕ: ಗೋವಾ ಹಿಂದುಗಳ ಮೇಲೆ ಕ್ರಿಶ್ಚಿಯನ್ ಕ್ರೌರ್ಯ - ಅಪ್ರಮೇಯ ಅಸ್ತಿತ್ವ\u003c\/p\u003e\n\n\u003cp\u003eಗೋವಾದಲ್ಲಿ ಮತಾಂತರದ ಹೆಸರಲ್ಲಿ ಕ್ರೈಸ್ತ ಮಿಷನರಿಗಳು ಮಾಡಿದ ಕ್ರೌರ್ಯ, ನಡೆಸಿದ ಹಿಂಸಾಚಾರ, ಮಾರಣಹೋಮದ ಕಟು ಚಿತ್ರಣವೇ ಈ ಪುಸ್ತಕ. 'ವಿಚಾರಣೆ' ಹೆಸರಿನಲ್ಲಿ ಹಿಂದುಗಳ ಮೇಲೆ ನಡೆದ ಆಕ್ರಮಣದ ಹಸಿ ವಿವರಗಳು, ಹಿಂಸೆಗೆ ಬಳಸುತ್ತಿದ್ದ ಯಂತ್ರಗಳ ವಿವರ ಮತ್ತು ಚಿತ್ರಗಳು ಮತ್ತು ಸ್ವಾತಂತ್ರ್ಯಾನಂತರ ಗೋವೆಯನ್ನು ಭಾರತಕ್ಕೆ ಸೇರಿಸಲು ನಡೆಸಬೇಕಾಗಿ ಬಂದ ಮತ್ತೊಂದು ರಕ್ತಸಿಕ್ತ ಹೋರಾಟದ ಪ್ರತ್ಯೇಕ ಅಧ್ಯಾಯ ಇರುವ ಈ ಕೃತಿಗೆ ಹಿರಿಯ ಇತಿಹಾಸಜ್ಞರಾದ ಸದ್ಯೋಜಾತ ಭಟ್ಟರು ಮುನ್ನುಡಿ ಬರೆದಿದ್ದಾರೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41846539059284,"sku":"AP-59","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Gomamthaka1.1.png?v=1738320565"},{"product_id":"mahakaala","title":"Mahakaala - 1","description":"\u003cp\u003eನೇತಾಜಿ ಸುಭಾಷ್ ಚಂದ್ರ ಬೋಸ್ -ಭಾರತೀಯ ಇತಿಹಾಸದ ಧ್ರುವತಾರೆ, ಅವರು ರಾಜಕೀಯವಾಗಿ ಕ್ರಿಯಾಶೀಲರಾಗಿದ್ದ ಅಲ್ಪ ಸಮಯದಲ್ಲೇ ತನ್ನ ಖಚಿತ ನಿರ್ಧಾರ, ನಿಶಿತಮತಿಗಳಿಂದ ಒಂದು ಹೊಸ ಸಂಚಲನವನ್ನೇ ಸೃಷ್ಟಿಸಿದರು. ನೇತಾಜಿ ಬದುಕಿನ ಅನೇಕ ಅದ್ಭುತ, ಅಪ್ರಕಟಿತ, ರೋಚಕ ಘಟನಾವಳಿಗಳನ್ನು ಪೋಣಿಸಿ ಕನ್ನಡದ ಹಿರಿಯ ಚಿಂತಕ ಡಾ. ಜಿ.ಬಿ. ಹರೀಶ ಬರೆದಿರುವ ಅನನ್ಯ ಕಾದಂಬರಿಯೇ -ಮಹಾಕಾಲ. ತ್ರಿವಳಿ ಸರಣಿಯ ಮೊದಲ ಸಂಪುಟದ ಹೆಸರು - ಸೃಷ್ಟಿ . ಇದು ಇದುವರೆಗೆ ಬಚ್ಚಿಟ್ಟ, ಮುಚ್ಚಿಟ್ಟ ಇತಿಹಾಸದ ಅಪೂರ್ವ ಅನಾವರಣ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41846539092052,"sku":"AP-66","price":399.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Mahakaala1.1.png?v=1738320655"},{"product_id":"emergency-samvidhanada-kolege-nadeda-sanchu","title":"Emergency-Samvidhanada kolege nadeda sanchu","description":"\u003cp\u003e1975 ರಲ್ಲಿ ಕಾಂಗ್ರೆಸ್ ಪಕ್ಷದ ಇಂದಿರಾ ಗಾಂಧಿ ಘೋಷಿಸಿದ ತುರ್ತು ಪರಿಸ್ಥಿತಿ ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಅಳಿಸಲಾರದ ಕಪ್ಪುಚುಕ್ಕೆ. ಇದು ಏಕಾಯಿತು, ಹೇಗಾಯಿತು ಇದರ ಪರಿಣಾಮಗಳೇನು, ಸಂವಿಧಾನದ ಸ್ವರೂಪಕ್ಕೆ ಆದ ಘಾಸಿಯ ಪ್ರಮಾಣ ಎಂಥದ್ದು, ಷಾ ಆಯೋಗದ ವರದಿಯಲ್ಲಿ ದಾಖಲಿಸಿದ ಸತ್ಯಗಳೇನು, ಅ ವರದಿಯನ್ನು 35 ವರ್ಷ ಮುಚ್ಚಿಡುವುದಕ್ಕೆ ಏನು ಕಾರಣ. ಇತ್ಯಾದಿ -ಕನ್ನಡದಲ್ಲಿ ಇದುವರೆಗೂ ಪ್ರಕಟವಾಗದ ಮಾಹಿತಿಗಳನ್ನು ಸಂಗ್ರಹ ರೂಪದಲ್ಲಿ ಕೊಡುವ ಕೃತಿ \" \" ಎಮರ್ಜೆನ್ಸಿ- ಸಂವಿಧಾನದ ಕೊಲೆಗೆ ನಡೆದ ಸಂಚು\" ಎಮರ್ಜೆನ್ಸಿ ಘೊಷಣೆಗೆ ಐವತ್ತು ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ ಅಯೋಧ್ಯಾ ಪಬ್ಲಿಕೇಶನ್ ಈ ಸಮಗ್ರ ಇತಿಹಾಸವನ್ನು ಎಳೆ ಎಳೆಯಾಗಿ ಬಿಡಿಸಿಡುವ ಕೆಲಸ ಮಾಡಿದೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41846539157588,"sku":"AP-68","price":299.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Emergency-Samvidhanadakolegenadedasanchu1.1.png?v=1738321004"},{"product_id":"daari-thappida-desha-pakistana","title":"Daari Thappida Desha Pakistana","description":"\u003cp\u003eದಾರಿ ತಪ್ಪಿದ ದೇಶ ಪಾಕಿಸ್ತಾನ ಕೃತಿಯು, ಕಳೆದ 75 ವರ್ಷಗಳಲ್ಲಿ ಪಾಕಿಸ್ತಾನ ಇಟ್ಟ ತಪ್ಪು ಹೆಜ್ಜೆಗಳು, ಮಾಡಿದ ಅತಾರ್ಕಿಕ ನಿರ್ಧಾರಗಳು ಹಾಗೂ ಮಾಡಿಕೊಂಡ ಐತಿಹಾಸಿಕ ಪ್ರಮಾದಗಳು ಹೇಗೆ ಆ ದೇಶವನ್ನಿಂದು ದಿವಾಳಿಯ ಅಂಚಿಗೆ ತಂದು ನಿಲ್ಲಿಸಿವೆ ಎಂಬುದನ್ನು ವಿವರವಾಗಿ ತಿಳಿಸಿಕೊಡುತ್ತದೆ. ರಾಜಕೀಯ ವಿಪ್ಲವ, ಅಪವಿತ್ರ ಮೈತ್ರಿ, ಮಿಲಿಟರಿ ಮೇಲುಗೈ, ಅವ್ಯಾಹತ ಭ್ರಷ್ಟಾಚಾರ, ನಿಲ್ಲದ ಭಯೋತ್ಪಾದನೆ ಹಾಗೂ ಭಾರತದ ಬಗ್ಗೆ ಇರುವ ಅಪರಿಮಿತವಾದ ದ್ವೇಷ - ಈ ಎಲ್ಲದರಿಂದ ನಲುಗಿಹೋಗುತ್ತಿರುವ ಪಾಕಿಸ್ತಾನದ ಸದ್ಯದ ಪರಿಸ್ಥಿತಿಯನ್ನು ತಿಳಿಸುತ್ತ, ಅದರ ಭವಿಷ್ಯದ ಬಗ್ಗೆಯೂ ಒಳನೋಟಗಳನ್ನು ಕೊಡುವ ಕೃತಿ ಇದು.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41846539255892,"sku":"AP-71","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/DaariThappidaDeshaPakistana1.1.png?v=1738323030"},{"product_id":"kanneera-kanive","title":"kanneera-kanive","description":"\u003cp\u003eರಾಹುಲ್ ಮ್ಯಾಗಝಿನ್, ಸ್ವರ್ಗಸದೃಶ ಕಾಶ್ಮೀರವೆಂಬ ತನ್ನ ತಾಯ್ನೆಲದಲ್ಲಿ ಮೂರು ಮಹಡಿಗಳ ಹದಿನೆಂಟು ಕೊಠಡಿಗಳ ವಿಶಾಲ ಭವ್ಯ ಮನೆಯಲ್ಲಿ ವಾಸವಿದ್ದರು. ಅದೊಂದು ದಿನ ಇದ್ದಕ್ಕಿದ್ದಂತೆ ಎಲ್ಲವೂ ಬದಲಾಗಿಹೋಯಿತು. ರಾಹುಲರಂತೆ ಕಾಶ್ಮೀರದ ತೊಟ್ಟಿಲಿನಿಂದ ಲಕ್ಷಾಂತರ ಪಂಡಿತರನ್ನು ಹೊರಹಾಕಿ ಬೀದಿಪಾಲು ಮಾಡಲಾಯಿತು. ತನ್ನದೇ ದೇಶದಲ್ಲಿ ಕಾಶ್ಮೀರಿ ಪಂಡಿತ ಅನಾಥನಂತೆ, ಅಬ್ಬೇಪಾರಿಯಾಗಿ ನಿಂತಿದ್ದ. ಆತನ ಬದುಕು ಅಕ್ಷರಶಃ ಧೂಳೀಪಟವಾಗಿತ್ತು. ಮುಸ್ಲಿಂ ಜೆಹಾದಿಗಳ ದರ್ಪಕ್ಕೆ ತತ್ತರಿಸಿದ ಒಂದು ಶಾಂತ, ಸಹೃದಯ, ವಿದ್ಯಾವಂತ ಸಮುದಾಯದ ಹೃದಯವಿದ್ರಾವಕ ಯಾತನೆಯನ್ನು ಅದರ ಪ್ರತ್ಯಕ್ಷದರ್ಶಿಯಾಗಿದ್ದ ರಾಹುಲ್ ಈ ಕೃತಿಯಲ್ಲಿ ಹಸಿಹಸಿಯಾಗಿ ವರ್ಣಿಸಿದ್ದಾರೆ. ಹೇಗೆ ಇಸ್ಲಾಮೀ ಕ್ರೌರ್ಯವು ಹಿಂದೂಗಳನ್ನು ಕಾಶ್ಮೀರದಲ್ಲಿ ಆಹುತಿ ತೆಗೆದುಕೊಂಡಿತು, ಹೇಗೆ ಸರಕಾರಗಳು ಈ ಹಿಂಸಾಚಾರವನ್ನು ನಿರ್ವಿಣ್ಣವಾಗಿ ನೋಡುತ್ತ ನಿಂತಿದ್ದವು, ಕಾಶ್ಮೀರಿ ಪಂಡಿತರು ತಮ್ಮ ಬದುಕುಗಳನ್ನು ಕಟ್ಟಿಕೊಳ್ಳಲು ಹೇಗೆ ಹೆಣಗಬೇಕಾಯಿತು ಎಂಬ ವಿವರಗಳನ್ನು 'ಕಣ್ಣೀರ ಕಣಿವೆ' ಕೃತಿಯು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ. 'And The Valley Remained Silent' ಕೃತಿಯನ್ನು ಉದಯಕುಮಾರ್ ಹಬ್ಬು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41846540107860,"sku":"AP-112","price":299.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/kanneera-kanive1.1.png?v=1738324696"},{"product_id":"ayodhya-rama","title":"Ayodhya-rama","description":"\u003cp\u003eವಾಲ್ಮೀಕಿ ಕಾವ್ಯದ ರಾಮನನ್ನೂ, ಐತಿಹಾಸಿಕ ಪುರುಷ ರಾಮನನ್ನೂ, ಕಲಿಯುಗದಲ್ಲಿ ಬಗೆಬಗೆಯ ಪರಿಸ್ಥಿತಿಗಳಿಗೆ ಒಡ್ಡಿಕೊಳ್ಳಬೇಕಾಗಿಬಂದ ರಾಮನನ್ನೂ ತೂಗುತ್ತ, ತೌಲನಿಕವಾಗಿ ನೋಡುತ್ತ, ಒಂದರ ಬೆಳಕಲ್ಲಿ ಇನ್ನೊಂದನ್ನು ಅವಲೋಕಿಸುತ್ತ ಸಾಗುವ ವಿಶಿಷ್ಟ ಪುಸ್ತಕ 'ಅಯೋಧ್ಯಾ ರಾಮ'. ರಾಮಾಯಣದ ಎಲ್ಲ ಪಾತ್ರಗಳನ್ನೂ ವಿಶ್ಲೇಷಿಸುವ, ಆದರೆ ಎಲ್ಲೂ ನ್ಯಾಯಾಧೀಶರ ತೀರ್ಪಿನಂಥ ನಿರ್ಣಯಗಳನ್ನು ಕೊಡದ, ಓದುಗರ ಬುದ್ಧಿಯಲ್ಲಿ ಹೊಸ ಹೊಸ ಚಿಂತನೆಗಳನ್ನು ಮೊಳೆಯಿಸುವ ಕೃತಿ 'ಅಯೋಧ್ಯಾ ರಾಮ'. ಬರೆದವರು ನಾರಾಯಣ ಶೇವಿರೆ ಎಂದ ಮೇಲೆ ಮತ್ತೇನೂ ಹೇಳಬೇಕಿಲ್ಲವಷ್ಟೆ?\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41846540140628,"sku":"AP-110","price":99.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Ayodhya-rama1.1.png?v=1738324286"},{"product_id":"rashtradharma","title":"Rashtradharma","description":"\u003cp\u003eಹಿಂದೆ ಸನಾತನ ಧರ್ಮದ ಬಗ್ಗೆ ಜನರಲ್ಲಿ ಒಂದು ಬಗೆಯ ಸ್ಪಷ್ಟತೆ ಇತ್ತು ಹಾಗೂ ರಿಲಿಜನ್ ಗಳ ವಿಷಯದಲ್ಲಿ ಅಸ್ಪಷ್ಟತೆ ಇತ್ತು. ಆದರೆ ಇಂದು ರಿಲಿಜನ್ ವಿಷಯದಲ್ಲಿ ಹೆಚ್ಚು ಸ್ಪಷ್ಟತೆ ಪಡೆಯಲು ಸಾಧ್ಯವಾಗಿದೆ, ಆದರೆ ಸನಾತನ ಅಥವಾ ಹಿಂದು ಧರ್ಮದ ಬಗ್ಗೆಯೇ ಹಲವು ಗೊಂದಲಗಳು, ಸಂದಿಗ್ಧಗಳು ನಿರ್ಮಾಣವಾಗಿವೆ.\u003c\/p\u003e\n\u003cp\u003eರಾಜಕಾರಣಿಗಳ ಹೇಳಿಕೆಗಳು, ಬುದ್ಧಿಜೀವಿಗಳ ಬರವಣಿಗೆಗಳು ಹಾಗೂ ನ್ಯಾಯಾಂಗವು ಕಾಲಕಾಲಕ್ಕೆ ಕೊಟ್ಟ ತೀರ್ಪುಗಳು - ಹೀಗೆ ಹಲವು ಸಂಗತಿಗಳು ಒಂದರೊಳಗೊಂದು ಸೇರಿಕೊಂಡು ಇಂದು ಸನಾತನ ಧರ್ಮದ ರೂಪರೇಖೆಗಳನ್ನು ಅರಿಯುವುದೇ ದುಸ್ತರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.\u003c\/p\u003e\n\u003cp\u003e ಇಂಥ ಸಂದರ್ಭದಲ್ಲಿ ಹಿಂದು ಧರ್ಮದ ವ್ಯಾಖ್ಯೆ ಮತ್ತು ವ್ಯಾಖ್ಯಾನವನ್ನು ಹೇಗೆ ಮಾಡಬಹುದು; ಅದರ ಗುಣಲಕ್ಷಣಗಳೇನು; ಯಾವುದು ಸನಾತನ ಧರ್ಮದ ಪರಿಧಿಗೆ ಬರುತ್ತದೆ ಯಾವುದು ಅಲ್ಲ - ಇಂಥ ಹತ್ತು ಹಲವು ಸಂಗತಿಗಳ ಬಗ್ಗೆ ಸ್ಪಷ್ಟತೆ ಕೊಡುವ ಕೆಲಸವನ್ನು ಡಾ. ಅಜಕ್ಕಳ ಗಿರೀಶ್ ಭಟ್ ಅವರ ಕೃತಿ 'ರಾಷ್ಟ್ರಧರ್ಮ' ಮಾಡುತ್ತದೆ.\u003c\/p\u003e\n\u003cp\u003eಇದು ಸನಾತನ ಧರ್ಮದ ಬಗ್ಗೆ ತಿಳಿಯಬಯಸುವವರು, ಅರೆಬರೆ ತಿಳಿದುಕೊಂಡವರು, ಮತ್ತು ಎಲ್ಲವನ್ನೂ ತಿಳಿದಿದ್ದೇವೆ ಎಂದು ಭಾವಿಸಿದವರು - ಹೀಗೆ ಸಮಸ್ತರೂ ಓದಿ ಮನನ ಮಾಡಿಕೊಳ್ಳಬೇಕಾದ ಕೃತಿ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41846540173396,"sku":"AP-121","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/rashtradharma1.1.png?v=1738323734"},{"product_id":"saamarasyada-pratimegalu","title":"Saamarasyada Pratimegalu","description":"\u003cp\u003eಒಡೆದು ಆಳುವುದು ವಿದೇಶೀಯರ ನೀತಿ. ನಮಗೆ ವಿಶ್ವವೇ ಪರಿವಾರದ ರೀತಿ. ಕೆಲವರಿಗೆ ಎದ್ದು ಬಂದ ಹೊಸ ವಿಚಾರಗಳೆಲ್ಲವೂ ಪ್ರೊಟೆಸ್ಟೆಂಟ್; ಇನ್ನು ಕೆಲವರಿಗೆ ಎಲ್ಲವೂ ಕೆಂಪು ಕ್ರಾಂತಿ. ಈ ಎರಡೂ ಕೂಡ ದಾರಿ ತಪ್ಪಿಸುತ್ತವೆ. ನಾವು ಬಿಡಲೇ ಬಾರದ ದಾರಿ ಸಮನ್ವಯ. ಬುದ್ಧ ಮತ್ತು ವಿವೇಕಾನಂದರನ್ನು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ನಿಲ್ಲಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆದಿದೆ. ಇಬ್ಬರು ಮಹಾನ್ ವ್ಯಕ್ತಿಗಳನ್ನು ಹೋಲಿಸುವುದಲ್ಲ, ಬದಲಾಗಿ ಅವರಲ್ಲಿಯ ಸಾಮ್ಯವನ್ನು ಓದುಗರ ಮುಂದಿಡುವ ಪ್ರಯತ್ನ ಈ ಪುಸ್ತಕದಲ್ಲಿದೆ. ವೈಯಕ್ತಿಕ ಬದುಕನ್ನು ಬದಿಗಿಟ್ಟು, ಸಮಾಜ ಉದ್ಧಾರದ ದಾರಿ ಹಿಡಿದ ಈರ್ವರ ಬದುಕು ಮತ್ತು ಅವರು ನೀಡಿದ ಸಂದೇಶಗಳು ಬದುಕಿಗೆ ದಾರಿದೀಪಗಳಾಗಿವೆ.\u003cbr\u003e- ‘ಅನುವಾದಕನ ಅರಿಕೆ'ಯಿಂದ\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41868413993044,"sku":"AP-119","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/SamarasyadaPratimegalu1.1.png?v=1739269272"},{"product_id":"rss-sthapakara-chintanegalu","title":"RSS Sthapakara Chintanegalu","description":"\u003cp\u003eಕರ್ಮಯೋಗವನ್ನು ರಾಷ್ಟ್ರನಿರ್ಮಾಣದೆಡೆಗೆ ಪ್ರವಹಿಸುವಂತೆ ಮಾಡಿದವರಲ್ಲಿ ಡಾ.ಕೇಶವ ಬಲಿರಾಂ ಹೆಡಗೇವಾರರು ಪ್ರಮುಖರು. ಪ್ರೇಮದಿಂದಲೂ, ಗೌರವದಿಂದಲೂ ಜನ ಅವರನ್ನು ಕರೆದದ್ದು ಡಾಕ್ಟರ್‌ಜೀ ಎಂದು. ಸಂಘಟನೆಯ ಶಕ್ತಿ ನಿಸ್ವಾರ್ಥವಾದಾಗ ಏನೆಲ್ಲ ಧನಾತ್ಮಕ ಪರಿಣಾಮ ಸಮಾಜದಲ್ಲಿ ಉಂಟಾಗಬಹುದು ಎಂಬುದಕ್ಕೆ ಡಾಕ್ಟರ್‌ಜೀ ದೂರದೃಷ್ಟಿಯೇ ಉದಾಹರಣೆ.\u003c\/p\u003e\n\n\u003cp\u003eಮನುಷ್ಯ ತನ್ನ ಕಣ್ಣಿಗೆ ಕಾಣುವ ಸಂಗತಿಗಳಿಂದ ಪ್ರೇರಿತನಾಗಿ ಯೋಚನೆ ಮಾಡುತ್ತಾನೆಯೇ ಹೊರತು ಹೊಸತಾಗಿ ಏನನ್ನೂ ಯೋಚಿಸಲಾರ. ಆದರೆ ಸಂಘದಂತಹ ಸಂಘಟನೆ 1925ಕ್ಕೂ ಮುಂಚೆ ಎಲ್ಲೂ ಇರಲಿಲ್ಲ. ಡಾಕ್ಟರ್‌ಜೀ ಸಂಘ ಸ್ಥಾಪನೆಯ ಕನಸು ಕಂಡಿದ್ದಾರೆ ಎಂದರೆ ಅದೊಂದು ಅಪ್ರತಿಮ ಸೃಷ್ಟಿ. ಆ ಕಾರಣದಿಂದಲೇ \"ಸಂಘ ಸ್ಥಾಪನೆ ದೈವ ಸಂಕಲ್ಪ ಹಾಗೂ ಸಂಘದ ಕಾರ್ಯ ದೈವ ಕಾರ್ಯ\" ಎನ್ನುವುದು.\u003c\/p\u003e\n\n\u003cp\u003eಸಂಘಕಾರ್ಯವನ್ನೇ ಜೀವನಕಾರ್ಯವನ್ನಾಗಿಸಿಕೊಂಡಿದ್ದ ಡಾಕ್ಟರ್‌ಜೀ ಬೈಠಕ್‌ಗಳಲ್ಲಿ, ಭಾಷಣಗಳಲ್ಲಿ ಹೇಳಿದ ಅಂಶಗಳು ಪುಸ್ತಕ ರೂಪದಲ್ಲಿದೆ. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರಿಗೆ ಮತ್ತು ತೊಡಲಿರುವವರಿಗೆ ಈ ಕೃತಿಯು ಪ್ರೇರಣಾದಾಯಿ.\u003c\/p\u003e","brand":"Saahithya Sangama","offers":[{"title":"Kannada","offer_id":41876829962324,"sku":"SKU-1","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/RSSStapakaraChintanegalu1.1.png?v=1739526892"},{"product_id":"mitraya-namaha","title":"Mitraya Namaha","description":"","brand":"Hindu Seva Prathisthana","offers":[{"title":"Kannada","offer_id":41963998642260,"sku":"SKU- 2","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/MitrayanaNamaha.png?v=1742989227"},{"product_id":"aa-hadimuru-dinagalu","title":"Aa Hadimuru Dinagalu","description":"","brand":"Vatikuteera trust","offers":[{"title":"Kannada","offer_id":41963998740564,"sku":"SKU- 5","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AaHadimuruDinagalu.png?v=1743395014"},{"product_id":"ajeya","title":"Ajeya","description":"","brand":"Rashtrotthana Sahitya","offers":[{"title":"Kannada","offer_id":41963998937172,"sku":"SKU- 11","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Ajeya.png?v=1743398028"},{"product_id":"samajika-krantisoorya-dr-babasaheb-ambedkar","title":"Samajika Krantisoorya Dr.Babasaheb Ambedkar","description":"","brand":"Rashtrotthana Sahitya","offers":[{"title":"Kannada","offer_id":41963998969940,"sku":"SKU- 12","price":500.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/SamajikaKrantisooryaDr.BabasahebAmbedkar.png?v=1743399893"},{"product_id":"prakshubdha-kashmira","title":"Prakshubdha kashmira","description":"","brand":"Rashtrotthana Sahitya","offers":[{"title":"Kannada","offer_id":41963999002708,"sku":"SKU- 13","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Prakshubdhakashmira.png?v=1743402266"},{"product_id":"desha-vibhajaneya-durantha-kathe","title":"Desha vibhajaneya durantha kathe","description":"","brand":"Saahithya Sindhu","offers":[{"title":"Kannada","offer_id":41963999068244,"sku":"SKU- 15","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Deshavibhajaneyaduranthakathe.png?v=1743402722"},{"product_id":"apratima-swathantraveera-saavarkar","title":"Apratima swathantraveera saavarkar","description":"","brand":"Rashtrotthana Sahitya","offers":[{"title":"Kannada","offer_id":41963999101012,"sku":"SKU- 16","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Apratimaswathantraveerasaavarkar.png?v=1743402617"},{"product_id":"ranaveelya","title":"Ranaveelya","description":"","brand":"Rashtrotthana Sahitya","offers":[{"title":"Kannada","offer_id":41963999133780,"sku":"SKU- 17","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Ranaveelya.png?v=1743401942"},{"product_id":"kargil-kampana","title":"Kargil kampana","description":"","brand":"Rashtrotthana Sahitya","offers":[{"title":"Kannada","offer_id":41963999199316,"sku":"SKU- 19","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Kargilkampana.png?v=1743401420"},{"product_id":"swatantra-mahasangrama-1857","title":"Swatantra mahasangrama 1857","description":"","brand":"Rashtrotthana Sahitya","offers":[{"title":"Kannada","offer_id":41963999264852,"sku":"SKU- 21","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Swatantramahasangrama1857.png?v=1743399690"},{"product_id":"yesuvina-matthondu-roopa","title":"Yesuvina matthondu roopa","description":"","brand":"VHP","offers":[{"title":"Kannada","offer_id":41963999330388,"sku":"SKU- 23","price":75.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Yesuvinamatthonduroopa.png?v=1743399478"},{"product_id":"spiritual-democracy","title":"Spiritual Democracy","description":"","brand":"Garuda Prakaashana","offers":[{"title":"Kannada","offer_id":41963999363156,"sku":"SKU- 24","price":399.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/SpiritualDemocracy.png?v=1743402809"},{"product_id":"kolminchu","title":"Kolminchu","description":"","brand":"Rashtrotthana Sahitya","offers":[{"title":"Kannada","offer_id":41963999395924,"sku":"SKU- 25","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Kolminchu.png?v=1743399285"},{"product_id":"yahudi","title":"Yahudi","description":"","brand":"Agrani Prakaashana","offers":[{"title":"Kannada","offer_id":41963999494228,"sku":"SKU- 28","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Yahudi.png?v=1743398982"},{"product_id":"ellarigoo-bekaada-ambedkar","title":"Ellarigoo Bekaada Ambedkar","description":"","brand":"Sahitya prakashana","offers":[{"title":"Kannada","offer_id":41963999592532,"sku":"SKU- 31","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0611\/5449\/2500\/files\/EllarigooBekaadaAmbedkar.png?v=1743397502"},{"product_id":"nammellara-tayi-bharata","title":"Nammellara Tayi Bharata","description":"","brand":"Rashtrotthana Sahitya","offers":[{"title":"Kannada","offer_id":41963999690836,"sku":"SKU- 33","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/NammellaraTayiBharata.png?v=1743397233"},{"product_id":"shivanigagi-kayuttha","title":"Shivanigagi Kayuttha","description":"","brand":"Sahitya prakashana","offers":[{"title":"Kannada","offer_id":41963999723604,"sku":"SKU- 34","price":475.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/ShivanigagiKayuttha.png?v=1743396830"},{"product_id":"saavarkar-vivaadaspada-vaarasike-1","title":"Savarkar Vismruthige Sarida gathagalada mardanigalu- 1","description":"","brand":"Sahithya Prakashana","offers":[{"title":"Kannada","offer_id":41997300039764,"sku":"SKU- 39","price":855.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/SaavarkarVivaadaspadaVaarasike-1.png?v=1744200539"},{"product_id":"saavarkar-vivaadaspada-vaarasike-2","title":"Savarkar Vivaadaspada Vaarasike - 2","description":"","brand":"Sahithya Prakashana","offers":[{"title":"Kannada","offer_id":41997300105300,"sku":"SKU-40","price":995.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/SaavarkarVivaadaspadaVaarasike-2.png?v=1744200607"}],"url":"https:\/\/www.ayodhyabooks.com\/collections\/socio-political.oembed?page=5","provider":"Ayodhya Books","version":"1.0","type":"link"}