{"title":"Sukumar Shambhol","description":null,"products":[{"product_id":"siddharama-charitra","title":"Siddharama Charitra","description":"\u003cp\u003eಮಹಾಕವಿ ರಾಘವಾಂಕನ 'ಸಿದ್ಧರಾಮ ಚಾರಿತ್ರ', ಸಿದ್ಧರಾಮನ ವೈಶಿಷ್ಟ್ಯವನ್ನು ಅಮೂಲಾಗ್ರವಾಗಿ ಒಳಗೊಂಡಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ. ಆದರೆ ಹಳಗನ್ನಡದ ಕೃತಿಯಾದ್ದರಿಂದ ಸಾಮಾನ್ಯರ ಗ್ರಹಿಕೆಗೆ ತಕ್ಕಮಟ್ಟಿಗೆ ಪ್ರಯಾಸದಾಯಕ ಎನ್ನಬಹುದಾಗಿದೆ. ಈ ವಿಚಾರವನ್ನು ಮನಗಂಡು,  ಶ್ರೀಯುತ ಸುಕುಮಾರ್ ಶಂಭೋಳ್ ರವರು 'ರಾಘವಾಂಕ ವಿರಚಿತ ಸಿದ್ಧರಾಮ ಚಾರಿತ್ರ’ ದ ಸರಳ ವ್ಯಾಖ್ಯಾನವನ್ನು ಮತ್ತು ಅದರಲ್ಲಿ ಉಲ್ಲೇಖಿಸಿರುವ ಸಿದ್ಧರಾಮನ  ಕೆಲವು ವಚನಗಳ ಸರಳಾರ್ಥವನ್ನು ಈ ಕೃತಿಯಲ್ಲಿ ಬರೆದಿದ್ದಾರೆ. ಶ್ರೀಯುತ ವಿಕ್ರಂ ಶ್ರೀನಿವಾಸ್ (ಕುಂಚನಾಮ: ಹರಿ-ಕೇದಾರ)ರವರ ವರ್ಣರಂಜಿತ ಚಿತ್ರಗಳನ್ನೂ ಒಳಗೊಂಡ ಈ ಚಿಕ್ಕ ಪುಸ್ತಕವನ್ನು  ಅಯೋಧ್ಯ ಪ್ರಕಾಶನ ಅತ್ಯಂತ ಸಂತಸದಿಂದ ಪ್ರಕಟಿಸುತ್ತಾ ಅಬಾಲವೃದ್ಧರಾದಿಯಾಗಿ ಎಲ್ಲರನ್ನೂ ತಲುಪುತ್ತದೆ ಎಂಬ ಆಶಯವನ್ನು ಹೊಂದಿದೆ. \u003c\/p\u003e\n\u003cp\u003e\u003cbr\u003eಈ ವಿಶಿಷ್ಟ ಕೃತಿಯ  ಮುದ್ರಣಕ್ಕಾಗಿ ವಿಶೇಷ ಆಸ್ಥೆ ಹಾಗೂ ಸಹಕಾರವನ್ನು ತೋರಿದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಹಬ್ಬು ಪೂಜಾರಿ ಪರಿವಾರ ಚಾರಿಟಬಲ್ ಟ್ರಸ್ಟ್, ಸಮಸ್ತ ಹಬ್ಬು ಪರಿವಾರ, ವಂಶಪರಂಪರಾಗತ ಅರ್ಚಕ ಗಣವೃಂದ  ವಹಿವಾಟುದಾರರು ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ದೇವಸ್ಥಾನ, ಸೊಲ್ಲಾಪುರ, ಮಹಾರಾಷ್ಟ್ರ  ಇವರಿಗೆ ಆಭಾರಪೂರ್ವಕ ಧನ್ಯವಾದಗಳು.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":48114161516628,"sku":"AP-176","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-176-1.png?v=1793951424"}],"url":"https:\/\/www.ayodhyabooks.com\/collections\/sukumar-shambhol.oembed","provider":"Ayodhya Books","version":"1.0","type":"link"}