You are currently viewing ವಿಚಾರವಾದಿಗಳನ್ನು ತರ್ಕಬದ್ಧವಾಗಿ ಪ್ರಶ್ನಿಸಿದ್ದಕ್ಕೇ ಬಂಧಿಸುವ ಬೆದರಿಕೆ ಹಾಕಿದ್ದರು!! – ‘ಓಪನ್ ಚಾಲೆಂಜ್’ ಕೃತಿಯ ಹಿನ್ನೆಲೆ ಕುರಿತು ಲೇಖಕ ಮಾವಿನಕಾಡು…

ವಿಚಾರವಾದಿಗಳನ್ನು ತರ್ಕಬದ್ಧವಾಗಿ ಪ್ರಶ್ನಿಸಿದ್ದಕ್ಕೇ ಬಂಧಿಸುವ ಬೆದರಿಕೆ ಹಾಕಿದ್ದರು!! – ‘ಓಪನ್ ಚಾಲೆಂಜ್’ ಕೃತಿಯ ಹಿನ್ನೆಲೆ ಕುರಿತು ಲೇಖಕ ಮಾವಿನಕಾಡು…

ನಿಮಗೂ ನೆನಪಿರಬಹುದು. ಚರ್ಚೆಯೊಂದರಲ್ಲಿ ಪ್ರಖ್ಯಾತ ವಿಚಾರವಾದಿಯೊಬ್ಬರ ‘ಮೊಂಡು’ ವಾದ ಯಾವ ಲೆವೆಲ್ಲಿಗೆ ಇಳಿದಿತ್ತೆಂದರೆ, ಕೊನೆಗೆ “ತಾಳಿ, ಕುಂಕುಮ, ಬಳೆ, ಉಂಗುರ ಇವೆಲ್ಲವನ್ನೂ ಧರಿಸುವುದೂ ಅಂಧ ಸಂಪ್ರದಾಯಗಳು” ಎಂದು ತೀರ್ಪು ಕೊಟ್ಟುಬಿಟ್ಟಿದ್ದರು!

ತಾಳಿ,ಕುಂಕುಮ,ಬಳೆ,ಉಂಗುರ ಎಲ್ಲವನ್ನೂ ತೊಟ್ಟ ಅವರ ಪತ್ನಿಯ ಜೊತೆಗೆ ಅವರೇ ಕುಳಿತ ಫೋಟೋ ಒಂದನ್ನು ಅವರ ಮುಂದೆ ಹಿಡಿದಾಗ ಅದರ ಹಿಂದಿನ ವೈಚಾರಿಕತೆಯ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ವ್ಯಕ್ತಿ ಸ್ವಾತಂತ್ರ್ಯ,ಕಾನೂನು ಮುಂತಾದವುಗಳನ್ನು ಮುಂದಿಟ್ಟುಕೊಂಡು ತಮ್ಮ ಪತ್ನಿಯ ಮೂಲಕ ನನ್ನ ಮೇಲೆ ದೂರು ದಾಖಲಿಸಲು ಯತ್ನಿಸಿದ್ದರು!

ವಿಚಾರವಾದಿ ಸಂಘದ ರಾಜ್ಯಾಧ್ಯಕ್ಷರ ಕತೆಯೇ ಹೀಗಾದರೆ ಇನ್ನು ಮರಿ-ಕಿರಿ ವಿಚಾರವಾದಿಗಳ ಕತೆ?

ಹೌದು. ಬಹುತೇಕ ವಿಚಾರವಾದಿಗಳು ಹೇಳುವ ಯಾವ ವಿಚಾರಗಳೂ ವೈಚಾರಿಕವಲ್ಲ.ಆದರೂ ಅವರುಗಳಿಗೆ ಸಮಾಜದಲ್ಲಿ,ಮಾಧ್ಯಮಗಳಲ್ಲಿ,ಸರ್ಕಾರದಲ್ಲಿ ಅನಗತ್ಯ ಪ್ರಾಮುಖ್ಯತೆ ನೀಡಲಾಗುತ್ತಿದೆ.ಈ ಸಂಪ್ರದಾಯವನ್ನು ಮುರಿಯಲೇಬೇಕು.ಕನ್ನಡ ನಾಡಿನ ಪ್ರತಿಯೊಬ್ಬ ಸಾಮಾನ್ಯನೂ ಅವರ ವೈಚಾರಿಕತೆಯ ಹಿಂದಿನ ದ್ವಂದ್ವಗಳನ್ನು ಸ್ಥಳದಲ್ಲೇ ಎದ್ದು ನಿಂತು ಪ್ರಶ್ನಿಸಬೇಕು.ನೈಜ ವಿಚಾರವಾದಿಗಳು ಮಾತ್ರ ಈ ಸಮಾಜದಲ್ಲಿ ಉಳಿಯಬೇಕು.ಕೇವಲ ಹಿಂದೂ ವಿರೋಧವನ್ನೇ ತಲೆಯಲ್ಲಿಟ್ಟುಕೊಂಡು ವಿಚಾರವಾದದ ಮುಖವಾಡ ಹೊತ್ತು ನಮ್ಮೆದುರು ಬರುವ ಎಲ್ಲ ಜೊಳ್ಳುಗಳೂ ಹಾರಿ ಹೋಗಬೇಕು.

ಆ ನಿಟ್ಟಿನಲ್ಲಿ ನಮ್ಮದೊಂದು ಪ್ರಯತ್ನ #ಓಪನ್_ಚಾಲೆಂಜ್

  • ಪ್ರವೀಣ್ ಕುಮಾರ್ ಮಾವಿನಕಾಡು

(ಪ್ರವೀಣ್ ಕುಮಾರ್ ಮಾವಿನಕಾಡು ಅವರ ‘ಓಪನ್ ಚಾಲೆಂಜ್’ ಕೃತಿಯನ್ನು ಅಯೋಧ್ಯಾ ಪ್ರಕಾಶನ ಪ್ರಕಟಿಸಿದೆ. ದೀಪಾವಳಿಗೆ ಪಟಾಕಿ ಸಿಡಿಸಬೇಡಿ, ನಾಗರಪಂಚಮಿಯಲ್ಲಿ ಹಾಲೆರೆಯಬೇಡಿ, ದೇವಸ್ಥಾನದಲ್ಲಿ ಚಿನ್ನದ ರಥ ಮಾಡಿಸುವ ಬದಲು ಬಡವರಿಗೆ ಆಸ್ಪತ್ರೆ ಕಟ್ಟಿಸಿ, ಬ್ರಾಹ್ಮಣಶಾಹಿಯನ್ನು ಪ್ರೋತ್ಸಾಹಿಸುವ ಮನುಸ್ಮೃತಿಯನ್ನು ಸುಟ್ಟುಹಾಕಿ ಎಂದೆಲ್ಲ ದಿನಬೆಳಗಾದರೆ ಕರೆ ಕೊಡುವ ಬುದ್ಧಿಜೀವಿಗಳನ್ನು ಈ ಕೃತಿಯಲ್ಲಿ ಚೆನ್ನಾಗೇ ತರಾಟೆಗೆ ತೆಗೆದುಕೊಂಡಿರುವ ಮಾವಿನಕಾಡು, ವಿಚಾರಶೂನ್ಯ ವಿಚಾರವಾದಿಗಳನ್ನು ತಮ್ಮ ತಣ್ಣಗಿನ ಬರಹಗಳ ಮೂಲಕವೇ ಬೆತ್ತಲಾಗಿಸಿದ್ದಾರೆ.)