You are currently viewing ವಿಡಂಬನೆಯ ಚತುರಕಲೆ ಪ್ರವೀಣ್’ಗೆ ಕರಗತ – ‘ಓಪನ್ ಚಾಲೆಂಜ್’ ಕುರಿತು ರಾಹುಲ್ ಹಜಾರೆ ವಿಶ್ಲೇಷಣೆ

ವಿಡಂಬನೆಯ ಚತುರಕಲೆ ಪ್ರವೀಣ್’ಗೆ ಕರಗತ – ‘ಓಪನ್ ಚಾಲೆಂಜ್’ ಕುರಿತು ರಾಹುಲ್ ಹಜಾರೆ ವಿಶ್ಲೇಷಣೆ

ರಾಜಕಾರಣವೆಂದರೆ ಕೊಳಕು, ಅಸ್ಪೃಶ್ಯ ಕ್ಷೇತ್ರ ಅನ್ನುವ ಯುವ ಪೀಳಿಗೆಯೊಂದು ಹುಟ್ಟಿಕೊಂಡಿದೆ. ರಾಜಕೀಯ ನಮಗೆ ಗೊತ್ತಿಲ್ಲದೇ ನಮ್ಮೊಳಗೆ ಪ್ರವಹಿಸುವ ಅಂತರ್ವಾಹಿನಿ. ಅದನ್ನು‌ ನಿರಂತರವಾಗಿ ಶುದ್ಧೀಕರಿಸಲೇಬೇಕಾದದ್ದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಟೀಕೆ, ವಿರೋಧಗಳನ್ನು ಸಹಜವಾಗಿ ಸ್ವೀಕರಿಸದೆ, ಎದುರಾಡಿದರೇ ತುಳಿದು ಬಿಡಬಲ್ಲ ನಾಯಕರು ಹುಟ್ಟಿಕೊಂಡಿರುವ ಈ ಕಾಲದಲ್ಲಿ, ವೈಯಕ್ತಿಕ ಬದುಕಿಗೆ ಧಕ್ಕೆಯೂ ಆಗದಂತೆ ತನ್ನ ನಿಲುವನ್ನು ದಾಟಿಸೋದು ಬರಹಗಾರನ ಜಾಣ್ಮೆ. ಹಾಸ್ಯದ ಪ್ರಕಾರವಾದರೂ ಹಾಸ್ಯದ ಹೊದಿಕೆಯೊಳಗೆ ಸಂದೇಶದ, ಕಾಳಜಿಯ ಹೂರಣ ತುಂಬಿ ಕಳಿಸುವ ಜವಾಬ್ದಾರಿಯುತವಾದ ಕೆಲಸವನ್ನು ವಿಡಂಬನೆ ಮಾಡುತ್ತದೆ.

ಈ ಹಿಂದೆ ಬೀಚಿಯವರು “ಉತ್ತರಭೂಪ”ದಲ್ಲಿ ವಿಡಂಬನಾತ್ಮಕ ಚಾಟಿ ಏಟನ್ನು ಕೊಡುತ್ತಿದ್ದರು. ಸಾಮಾಜಿಕ ಜಾಲತಾಣಗಳ ತುಂಬಾ ಅಂಥವರು ತುಂಬಿಕೊಂಡಿದ್ದರೂ ಪ್ರವೀಣ್ ವಿಭಿನ್ನವಾಗಿ ನಿಲ್ಲುತ್ತಾರೆ. ಸಮಾಜದ ಆಗು-ಹೋಗುಗಳನ್ನು ಚಿಕಿತ್ಸಕ ನೋಟದಿಂದ ನೋಡುವವರು ಪ್ರವೀಣ್. ಅಶ್ಲೀಲತೆಯ ಸೋಂಕು ತಗುಲದಂತೆ, ವೈಯಕ್ತಿಕ ಮಟ್ಟದ ಹೀಗಳಿಕೆಯಾಗದಂತೆ, ಅನಗತ್ಯ ಪ್ರಹಸನಗಳು ನುಸುಳದಂತೆ ಮತ್ತು ತಲುಪಬೇಕಾದವರಿಗೆ ಸರಿಯಾಗಿ ತಲುಪಿಸುವ ವಿಡಂಬನೆಯ ಚತುರ ಕಲೆ ಪ್ರವೀಣ್ ಅವರಿಗೆ ಕರಗತವಾಗಿದೆ

(ರಾಹುಲ್ ಯುವ ಲೇಖಕರು. ಸಂಯಮದ ವಿಶ್ಲೇಷಣೆ ಅವರ ವಿಶೇಷ. ರಾಹುಲ್ ಬರೆದ ‘ಅವನಿ’ ಕೃತಿ ಇತ್ತೀಚೆಗೆ ಪ್ರಕಟವಾಗಿದೆ)