You are currently viewing ‘ಓಪನ್ ಚಾಲೆಂಜ್’ ಮಾಡಿರುವ ಮಾವಿನಕಾಡು ಕುರಿತು ರಾಕೇಶ್ ಶೆಟ್ಟಿಯವರ ಮಾತುಗಳು..

‘ಓಪನ್ ಚಾಲೆಂಜ್’ ಮಾಡಿರುವ ಮಾವಿನಕಾಡು ಕುರಿತು ರಾಕೇಶ್ ಶೆಟ್ಟಿಯವರ ಮಾತುಗಳು..

ಪ್ರವೀಣ್ ಕುಮಾರ್ ಮಾವಿನಕಾಡು ಅವರ ಬರಹಗಳನ್ನು ಕಳೆದ 5 ವರ್ಷಗಳಿಂದ ಓದುತ್ತ ಬಂದಿದ್ದೇನೆ. ಕಿಟ್ಟೂ-ಮಟ್ಟೂ ಅಂತೊಂದು ಕಾರ್ಟೂನ್ ಸೀರಿಸ್ ಅನ್ನು ಅವರು ಫೇಸ್ಬುಕ್ಕಿನಲ್ಲಿ ಬರೆಯುವುದನ್ನು ಗಮನಿಸಿ, ನಿಲುಮೆಯಲ್ಲಿ (Satire News) #ಸುಳ್ಸುದ್ದಿ ಅಂತ ಬರೆಯಲು ಆಹ್ವಾನಿಸಿದ್ದೆ. ಕಚಗುಳಿಯಿಡುವಂತಹ ಆ ಸುಳ್ಸುದ್ದಿ  ಜನಪ್ರಿಯವಾಗಿತ್ತು.

ತಿಳಿಹಾಸ್ಯದ ಮೂಲಕವೇ ಬುದ್ದಿಜೀವಿಗಳ, ಕಮ್ಯುನಿಸ್ಟರ ಬಂಡವಾಳ ಬಯಲು ಮಾಡುವ Unique ಶೈಲಿ ಮಾವಿನಕಾಡು ಅವರದ್ದು. ವಿಡಂಬನೆಯ ಮೂಲಕವೇ ಗಂಭೀರವಾದ ವಿಷಯಗಳನ್ನು ಓದುಗರಿಗೆ ಮುಟ್ಟಿಸುವ ಅವರ ವಿಧಾನವೂ ಅಮೋಘವಾದದ್ದು. ಅವರ ವಿಡಂಬನೆಗಳನ್ನು ಮೆಚ್ಚಿ ಫೇಸ್ಬುಕ್ಕಿನ ಮಿತ್ರರು, ಪ್ರವೀಣ್ ಅವರನ್ನು ಫೇಸ್ಬುಕ್ಕಿನ ಹಾಸ್ಯಪ್ರಜ್ಞೆ ಎನ್ನುತ್ತಾರೆ. 

ಹೊಸದಿಗಂತ ಪತ್ರಿಕೆಯಲ್ಲಿ ಪ್ರವೀಣ್ ಅವರು ಬರೆಯುತ್ತಿರುವ ಹುಳಿಮಾವು ಅಂಕಣ ಅವರೊಳಗಿನ ಅಗಾಧ ಪ್ರತಿಭೆಯ ಗಂಭೀರ ಅಂಕಣಕಾರರೊಬ್ಬರನ್ನು ನಾಡಿಗೆ ಪರಿಚಯಿಸಿದೆ. ಪ್ರವೀಣ್ ಅವರು ಹೆಚ್ಚೆಚ್ಚು ಬರೆಯಲಿ, ಎತ್ತರೆತ್ತರಕ್ಕೆ ಬೆಳೆಯಲಿ.

ಆಲ್ ದಿ ಬೆಸ್ಟ್ ಪ್ರವೀಣ್!

– ರಾಕೇಶ್ ಶೆಟ್ಟಿ
(ಚಿಂತಕರು, ‘ನಿಲುಮೆ’ ಸ್ಥಾಪಕ ಸಂಚಾಲಕರು. ರಾಕೇಶ್ ಶೆಟ್ಟಿ ಅವರು ಬರೆದ ‘ಮುಚ್ಚಿಟ್ಟ ದಲಿತ ಚರಿತ್ರೆ’ ಕೃತಿ ಇತ್ತೀಚೆಗೆ ಲೋಕಾರ್ಪಣೆಯಾಗಿ ಅಲ್ಪಕಾಲದಲ್ಲೇ ಮೂರು ಮುದ್ರಣಗಳನ್ನು ಕಂಡಿದೆ.)