Ellarigoo Bekaada Ambedkar

150.00

Add to WishlistIn Wishlist
Add to Wishlist

ಎಲ್ಲರಿಗೂ ಬೇಕಾದ ಅಂಬೇಡ್ಕರ್’ ಗೊತ್ತೇ ಇರದ ಅವೆಷ್ಟೋ ಸಂಗತಿಗಳು. ಡಾ. ಜಿ.ಬಿ. ಹರೀಶ ಅವರ ಪ್ರಮುಖ ಕೃತಿ. ಡಾ. ಭೀಮರಾವ್ ಅಂಬೇಡ್ಕರ್ ಖಂಡಿತವಾಗಿಯೂ ಯಾವುದೋ ಒಂದು ವರ್ಗಕ್ಕೆ ಸೇರಿದವರಲ್ಲ. ಅಂಬೇಡ್ಕರ್ ಈ ದೇಶದ ಆಸ್ತಿ. ಈ ದೇಶ ಕಂಡ ಅಪ್ರತಿಮ ಚಿಂತಕ ಆದರೆ ಕಾಲಾಂತರದಲ್ಲಿ ಅಂಬೇಡ್ಕರ್ ಅವರನ್ನು ಒಂದು ವರ್ಗಕ್ಕೆ ಸೀಮಿತ ಮಾಡಿ ಅವರ ವ್ಯಕ್ತಿತ್ವವನ್ನು ಕುಬ್ಜವಾಗಿ ಮಾಡುವ ತಪ್ಪು ಕೆಲಸ ನಿರಂತರವಾಗಿ ನಡೆಯಿತು.

ಮುಖ್ಯವಾಗಿ ಅಂಬೇಡ್ಕರ್ ಓರ್ವ ರಾಷ್ಟ್ರವಾದಿಯಾಗಿದ್ದರು. ಅದೇ ಕಾರಣಕ್ಕೊಸ್ಕರವೇ ಅಥವಾ ರಾಷ್ಟ್ರೀಯ ಅಸ್ಮಿತೆಯನ್ನು ಕಾಯ್ದುಕೊಳ್ಳಲು ಈ ದೇಶದ ಸಂಸ್ಕೃತಿ ಸೊಗಡನ್ನು ಕಾಪಿಟ್ಟುಕೊಂಡು ಹೋಗಬೇಕೆಂಬುದನ್ನು ಬಲವಾಗಿ ಪ್ರತಿಪಾದನೆ ಮಾಡಿದ್ದರು. ಕಾರಣಾಂತರದಿಂದ ಈ ಸತ್ಯ ಹೊರಬರಗೊಡಲಿಲ್ಲ ಅದು ಅಂಬೇಡ್ಕರ್ ವ್ಯಕ್ತಿತ್ವಕ್ಕೆ ಮಾಡುವ ಅಪಚಾರವಲ್ಲದೆ ಮತ್ತೇನು ಅಲ್ಲ. ಅಂಬೇಡ್ಕರ್ ಅವರು ಈ ದೇಶದ ಇತಿಹಾಸ ಮತ್ತು ಸಂಸ್ಕೃತಿಯ ಜ್ಞಾನ ಮಾತ್ರವಲ್ಲ. ಆ ನಿಟ್ಟಿನಲ್ಲಿ ಜಾಗತಿಕವಾಗಿ ತೌಲನಿಕ ಅಧ್ಯಯನ ಮಾಡಿ ತಿಳಿವಳಿಕೆ ಹೊಂದಿದ್ದರು. ಈ ಎಲ್ಲಾ ವಿಷಯಗಳ ಕುರಿತು ಕನ್ನಡದಲ್ಲಿ ಇದೇ ಮೊದಲಬಾರಿಗೆ ಪುಸ್ತಕವೊಂದನ್ನು ಡಾ. ಜಿ.ಬಿ. ಹರೀಶ್ ಅವರು ಹೊರತರುತ್ತಿದ್ದಾರೆ. ಎಲ್ಲರಿಗೂ ಬೇಕಾದ ಅಂಬೇಡ್ಕರ್ ಇದೊಂದು ಪುಸ್ತಕ ಎನ್ನುವುದಕ್ಕಿಂತ ಹೆಚ್ಚಾಗಿ ಇತಿಹಾಸ, ಸಂಸ್ಕೃತಿ ಆಸಕ್ತರ ಪಾಲಿಗೊಂದು ಸಂಗ್ರಾಹ್ಯ ಹೊತ್ತಿಗೆ ಆಗಲಿದ್ದಾರೆ ಎನ್ನುತ್ತಾರೆ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ.

Additional information

Weight 140 g
Author(s)

Date of Release

Hard/PaperBack

Language

No. of Pages

Publication

Size

Reviews

There are no reviews yet.

Be the first to review “Ellarigoo Bekaada Ambedkar”

Your email address will not be published. Required fields are marked *

thirteen + 7 =