Adaddu Agabekaddu
₹260.00
ಆದದ್ದು-ಆಗಬೇಕಾದ್ದು – ಡಾ. ಅಜಕ್ಕಳ ಗಿರೀಶ ಭಟ್
ಅಯೋಧ್ಯಾ ಪಬ್ಲಿಕೇಶನ್ಸ್’ನ “ಚಿಂತಕ-ಚಿಂತನ ಮಾಲೆ”ಯ ಮೊದಲ ಕೃತಿಯಾಗಿ ಪ್ರಕಟವಾಗಿರುವ “ಆದದ್ದು-ಆಗಬೇಕಾದ್ದು” ಕನ್ನಡದ ಪ್ರಮುಖ ಮತ್ತು ಪ್ರಬುದ್ಧ ಚಿಂತಕರಲ್ಲೊಬ್ಬರಾದ ಡಾ. ಅಜಕ್ಕಳ ಗಿರೀಶ ಭಟ್ಟರ ಇದುವರೆಗಿನ ಎಲ್ಲ ಚಿಂತನೆ-ತತ್ತ್ವಜ್ಞಾನಗಳ ಸಂಗ್ರಹರೂಪವಾಗಿದೆ. ಈ ಕೃತಿಯಲ್ಲಿ ಅವರು ಭಾಷಾವಿಜ್ಞಾನ, ರಿಲಿಜನ್-ಧರ್ಮ ಸಂಘರ್ಷ, ಭಾರತೀಯ ಸಂಸ್ಕೃತಿಯ ಅನನ್ಯತೆ, ರಾಷ್ಟ್ರೀಯವಾದ-ರಾಷ್ಟ್ರೀಯತೆಯ ಸೂಕ್ಷ್ಮಗಳು, ಜಾಗತೀಕರಣದ ಲಾಭನಷ್ಟ, ಪ್ರಾದೇಶಿಕತೆ ಮತ್ತು ವೈಶ್ವಿಕತೆಯ ನೆಲೆಗಳು – ಹೀಗೆ ಹತ್ತುಹಲವು ಮಹತ್ವದ ಸಂಗತಿಗಳ ಬಗ್ಗೆ ಅತ್ಯಂತ ಆಳವಾದ, ವಿಸ್ತಾರವಾದ ಚರ್ಚೆಗಳನ್ನು ಮಾಡಿದ್ದಾರೆ. ಇಲ್ಲಿರುವ ಎಲ್ಲ ಬರಹಗಳು ಓದುಗರ ಜ್ಞಾನಪರಿಧಿಯನ್ನು ವಿಸ್ತರಿಸುತ್ತವೆ, ಅವರನ್ನು ಆಲೋಚನೆಗೆ ಹಚ್ಚುತ್ತವೆ, ಹಲವು ಗೊಂದಲಗಳನ್ನು ಪರಿಹರಿಸುತ್ತವೆ ಮತ್ತು ಹೊಸ ಚಿಂತಕರನ್ನು ಹುಟ್ಟಿಸುವಷ್ಟು ಸಶಕ್ತವಾಗಿವೆ.
Additional information
Weight | 200 g |
---|---|
Author(s) | |
Date of Release | |
Hard/PaperBack | |
ISBN | |
Language | |
No. of Pages | |
Publication | |
Size |
Reviews
There are no reviews yet.