Sale!

Independence Day Special Offer

699.00

Add to WishlistIn Wishlist
Add to Wishlist

ಸ್ವಾತಂತ್ರ್ಯೋತ್ಸವದ ಈ ಸಡಗರದ ಸಮಯದಲ್ಲಿ ನಮ್ಮ ಮಕ್ಕಳಿಗೆ ರಾಷ್ಟ ಭಕ್ತಿಯನ್ನು ಜಾಗೃತಗೊಳಿಸುವಂತ ಸಾಹಿತ್ಯವನ್ನು
ಉಡುಗೊರೆಯಾಗಿ ನೀಡೋಣ…

ಬಿಡುಗಡೆಯ ಮಿಂಚು

1947ರಲ್ಲಿ ನಾವು ಪಡೆದದ್ದು ಬಿಡುಗಡೆ ಮಾತ್ರ, ಸ್ವಾತಂತ್ರ್ಯವಲ್ಲ. ಹಲವು ಸಹಸ್ರ ವರ್ಷಗಳ ಸಂಘರ್ಷದ ಇತಿಹಾಸದಲ್ಲಿ ನಾವು ಶಕ, ಹೂಣರು, ಗ್ರೀಕರು, ಡಚ್ಚರು, ಪೋರ್ಚುಗೀಸರು ಮತ್ತು ಫ್ರೆಂಚರಂಥ ಹಲವು ವಿದೇಶೀ ಶಕ್ತಿಗಳಿಂದ ಬಿಡುಗಡೆ ಪಡೆದಿದ್ದೇವೆ. ಆದರೆ ಸ್ವಾತಂತ್ರ್ಯ ಪಡೆದೆವೇ ಎಂದರೆ ಯೋಚಿಸುವಂತಾಗುತ್ತದೆ. ಭಾರತ ನಿಜವಾದ ಸ್ವಾತಂತ್ರ್ಯ ಪಡೆಯಲು ಇರುವ ಅಡ್ಡಿ-ಆತಂಕಗಳೇನು? ನಿಜಸ್ವಾತಂತ್ರ್ಯ ಪಡೆದರೆ ಭಾರತ ಹೇಗೆ ಜಗತ್ತಿನಲ್ಲಿ ವಿಭಿನ್ನವಾಗಿ ನಿಲ್ಲುತ್ತದೆ? – ಎಂಬ ಸಂಗತಿಗಳನ್ನು ಇತಿಹಾಸ-ವರ್ತಮಾನಗಳ ಹಿನ್ನೆಲೆಯಲ್ಲಿ ಚರ್ಚಿಸುವ ಮೌಲಿಕ ಕೃತಿ ‘ಬಿಡುಗಡೆಯ ಮಿಂಚು’. ಇತಿಹಾಸದಲ್ಲಿ ನಡೆದುಹೋದ ಘಟನೆಗಳನ್ನು ಪಠ್ಯಪುಸ್ತಕದ ಮಾದರಿಯಲ್ಲಿ ಹೇಳದೆ ಅಲ್ಲಿ ಭಾರತ ಪಡೆದ, ಕಳೆದುಕೊಂಡ ಮುಖ್ಯ ಸಂಗತಿಗಳನ್ನು ಈ ಪುಸ್ತಕವು ದಾಖಲಿಸುತ್ತದೆ. ಗಾಂಧೀಜಿಯವರ ಅಹಿಂಸಾವ್ರತವನ್ನೂ ಅಸಹಕಾರ ಚಳವಳಿಯನ್ನೂ ಇದು ಕಟುವಾಗಿ ವಿಮರ್ಶಿಸುತ್ತದೆ. ಓದುಗರಿಗೆ ಈ ಗ್ರಂಥವು ಇತಿಹಾಸದ ಬಗ್ಗೆ ಹೊಸ ಹೊಳಹುಗಳನ್ನು ಕಾಣಿಸುವುದರಲ್ಲಿ ಸಂಶಯವಿಲ್ಲ.

ವೀರ್ ಸಾವರ್ಕರ್

ಸರ್ವವನ್ನೂ ಸ್ವಾತಂತ್ರ್ಯ ಹೋರಾಟದಲ್ಲಿ ಕಳೆದುಕೊಂಡ, ಸಾವಿರಾರು ಯುವಕರಿಗೆ ಪ್ರೇರೇಪಣೆ ನೀಡಿ ಕ್ರಾಂತಿಕಾರಿಗಳನ್ನಾಗಿಸಿದ ವೀರ ಸಾವರ್ಕರ್ ಅವರನ್ನು ರಾಷ್ಟ್ರವಿರೋಧಿಗಳು ಇಂದಿಗೂ ಅಪಹಾಸ್ಯ ಮಾಡುತ್ತಿರುವುದು ವಿಪರ್ಯಾಸವೇ ಸರಿ.
ಸಾವರ್ಕರ್ ಅವರ ಹೋರಾಟ, ಅನುಭವಿಸಿದ ನೋವು, ಎದುರಿಸಿದ ಅವಮಾನ ಎನ್ನವನ್ನೂ ಈ ಪುಟ್ಟ ಕೃತಿಯು ತೆರೆದಿಡುತ್ತದೆ.

ದ್ಯೇಯಜೀವಿ ಸಾಮ್ರಾಟ್

ಭಾರತದ ಇತಿಹಾಸ ಕಂಡ ವೀರಾಧಿವೀರರಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಕೂಡ ಪ್ರಮುಖರು. ಶಿವಾಜಿ ಇನ್ನೂ ಹದಿಹರೆಯದಲ್ಲೇ ಇವರು ಬಿಜಾಪುರ ಸುಲ್ತಾನರ ವಶದಲ್ಲಿದ್ದ ತೋಮಾ, ರಾಯಗಡ ಮತ್ತು ಕೊಂಡಾನ ಕೋಟೆಗಳನ್ನ ಜಯಿಸಿದ ವೀರರೆನಿಸಿದ್ದರು.
ಶಿವಾಜಿ ಮಹಾರಾಜ:
ಭಾರತವು ಒಂದು ಸನಾತನ ದೇಶ, ಇದು ಹಿಂದುಸ್ಥಾನ, ತುರ್ಕಸ್ಥಾನವಲ್ಲ, ಮತ್ತು ಇಲ್ಲಿ ನಮ್ಮ ರಾಜ್ಯವಿರಬೇಕು. ನಮ್ಮ ಧರ್ಮದ ವಿಕಾಸವಾಗಬೇಕು, ನಮ್ಮ ಜೀವನವೌಲ್ಯಗಳನ್ನು ಅಭಿವೃದ್ಧಿಪಡಿಸಬೇಕು.
ಶಿವಾಜಿ ಮಹಾರಾಜರು ಜೀವನಸಂಘರ್ಷ ಮಾಡಿದ್ದು ಈ ಕಲ್ಪನೆಯನ್ನು ಸಾಕಾರಗೊಳಿಸುವುದಕ್ಕಾಗಿಯೇ. ಅವರು ಮತ್ತೆ ಮತ್ತೆ ಹೇಳುತ್ತಿದ್ದರು, ‘‘ಈ ರಾಜ್ಯವಾಗಬೇಕೆಂಬುದು ಪರಮೇಶ್ವರನ ಇಚ್ಛೆ.

ಎದ್ದೇಳು ಭಾರತೀಯ

ಭಾರತವು 800 ವರ್ಷಗಳ ಇಸ್ಲಾಮೀ ವಸಾಹತು ಹಾಗೂ 200 ವರ್ಷಗಳ ಕ್ರೆöÊಸ್ತ ವಸಾಹತು ದಾಳಿಗೆ ಒಳಗಾಯಿತು. ನಂತರದ ದಿನಗಳಲ್ಲಿ ಕಮ್ಯುನಿಸಮ್, ಸೋಷಲಿಸಮ್‌ನಂಥ ಹಲವು ಇಸಮ್‌ಗಳ ಪ್ರಯೋಗಶಾಲೆಯಾಯಿತು. ಈಗಂತೂ ವೋಕ್ ಮುಂತಾದ ವಿಭಜಕ ಸಿದ್ಧಾಂತಗಳು ಭಾರತವನ್ನು ತಮ್ಮ ಪ್ರಯೋಗಶಾಲೆಯಾಗಿ ಮಾಡಿಕೊಳ್ಳಲು ಹವಣಿಸುತ್ತಿವೆ. ಭಾರತದ ದುಸ್ಥಿತಿಗೆ ಒಂದು ಬದಿಯಿಂದ ಈ ಎಲ್ಲ ಹೊರಗಿನ ಬೌದ್ಧಿಕ, ರಾಜಕೀಯ ಆಕ್ರಮಣಗಳು ಕಾರಣವಾದರೂ ಇನ್ನೊಂದು ಬದಿಯಿಂದ ನಿದ್ರಿತಾವಸ್ಥೆಯಲ್ಲಿದ್ದ ಭಾರತೀಯರೂ ಕಾರಣವೆಂಬುದನ್ನು ಒಪ್ಪಲೇಬೇಕು. ನಿದ್ರಾವಸ್ಥೆಯಲ್ಲಿರುವ ಭಾರತೀಯರನ್ನು ಎಚ್ಚರಗೊಳಿಸಿ ಅವರಲ್ಲಿ ಕ್ಷಾತ್ರ ತುಂಬುವ ಕೆಲಸವನ್ನು ಶ್ರೀ ಅರವಿಂದರು, ಸ್ವಾಮಿ ವಿವೇಕಾನಂದರು, ದಯಾನಂದ ಸರಸ್ವತಿ ಮುಂತಾದವರಿಂದ ಮೊದಲ್ಗೊಂಡು ಸೀತಾರಾಮ್ ಗೋಯಲ್, ಕಾನ್ರಾಟ್ ಎಲ್ಟ್ಸ್ ವರೆಗಿನ ಹಲವರು ಮಾಡುತ್ತಲೇ ಬಂದಿದ್ದಾರೆ. ಈ ಎಲ್ಲ ಆಕ್ರಮಣ ಮತ್ತು ಪ್ರತಿರೋಧಗಳ ಸಂಕ್ಷಿಪ್ತ ಇತಿಹಾಸವನ್ನು ಮುಂದಿಟ್ಟು, ಭಾರತೀಯನನ್ನು ಮುಂದಿನ ಬೌದ್ಧಿಕ ಯುದ್ಧಕ್ಕೆ ಅಣಿಗೊಳಿಸುವ ಕೆಲಸವನ್ನು ಮಾಡುವ ಪುಟ್ಟ ಕೃತಿಯೇ ಪ್ರಖರ ಚಿಂತಕರಾದ ಡಾ. ಜಿ. ಬಿ. ಹರೀಶರ “ಎದ್ದೇಳು ಭಾರತೀಯ”.

ಅವಿಖ್ಯಾತ ಸ್ವರಾಜ್ಯ ಕಲಿಗಳು

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಬಾಲಗಂಗಾಧರ ತಿಲಕ್, ವೀರ ಸಾವರ್ಕರ್ ಮೊದಲಾದವರ ಹೆಸರುಗಳೇನೋ ನಮಗೆ ಗೊತ್ತು. ಆದರೆ, ಆಂಗ್ಲರೊಡ್ಡಿದ ಜೀವದಾನದ ಆಮಿಷವನ್ನು ಕಾಲಿನಲ್ಲಿ ಒದ್ದು, ಅವರ ಆಶ್ರಯದಲ್ಲಿ ಸೆರೆವಾಸವನ್ನು ಅನುಭವಿಸುವುದಕ್ಕೆ ಹೇಸಿ, ಪ್ರಾಣಾರ್ಪಣೆ ಮಾಡಿಕೊಂಡ ಕನ್ನಡದ ಕಲಿ ಸುರಪುರದ ವೆಂಕಟಪ್ಪನಾಯಕ; ಉದಾರತೆ ಮೆರೆದು ಕೊನೆಗೆ ತನ್ನ ಬಂಧುಗಳಿಂದಲೇ ದುರಂತ ಅಂತ್ಯಕ್ಕೀಡಾದ ರಾಣಿ ಅಬ್ಬಕ್ಕ, ತಾನಷ್ಟೇ ಅಲ್ಲದೆ ತನ್ನ ಪತ್ನಿ ಮತ್ತು ತಾಯಿಯನ್ನೂ ರಾಷ್ಟ್ರವಿಮೋಚನೆಯ ಪುಣ್ಯಕಾರ್ಯದಲ್ಲಿ ತೊಡಗಿಸಿದ ಮೈಲಾರ ಮಹದೇವ, ಸ್ವಕೀಯ ಸಂಸ್ಥಾನಗಳು ಪರಕೀಯರ ವಶವಾದಾಗ ಸೈನ್ಯ ಕಟ್ಟಿಕೊಂಡು ಸ್ವಕೀಯ ರಾಜ್ಯಸ್ಥಾಪನೆಯ ಸಾಹಸ ತೋರಿದ ಕರ್ನಾಟಕದ ನಿಜವಾದ ಹುಲಿ ಧೊಂಡಿಯ ವಾಘ, ತನ್ನ ನಾಡಿಗೊದಗಿದ ಆಂಗ್ಲಗುಲಾಮಿತನ ಮತ್ತು ಕ್ರೈಸ್ತಮತಾಂತರದ ಕುರಿತು ಹನ್ನೆರಡರ ಹರೆಯದಲ್ಲೇ ಸ್ಪಷ್ಟತೆ ಪಡೆದು ಹೋರಾಟಕ್ಕಿಳಿದ ಗಾಯಿಡಿನ್ ಲೂ, ಆಂಗ್ಲರಿಗೆ ಕಪ್ಪ ನೀಡಲೊಪ್ಪದೆ ಹೋರಾಡಿ ಸ್ವಕೀಯಹೇಡಿಗಳ ಸ್ವಾರ್ಥ ಮತ್ತು ಆಂಗ್ಲರ ವಂಚನೆಗೆ ಬಲಿಯಾಗಿ ವೀರಗತಿಯನ್ನು ಪಡೆದ ವೀರಪಾಂಡ್ಯ ಕಟ್ಟಬೊಮ್ಮನ್ – ಮೊದಲಾದ ನೂರಾರು ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆ ಇತಿಹಾಸ ಪುಸ್ತಕಗಳಲ್ಲಿ ದಾಖಲಾಗದೇ ಉಳಿದಿದೆ. ಅಂಥ ಅವಿಖ್ಯಾತ ಸ್ವರಾಜ್ಯ ಕಲಿಗಳ ತ್ಯಾಗ, ಬಲಿದಾನದ ಜೀವನಗಳ ರೋಮಾಂಚಕ ವಿವರಗಳನ್ನು ಅತ್ಯಂತ ಸಶಕ್ತವಾಗಿ ಕಟ್ಟಿಕೊಡುವ ಪುಸ್ತಕವೇ ನಾರಾಯಣ ಶೇವಿರೆ ಅವರು ಬರೆದ ‘ಅವಿಖ್ಯಾತ ಸ್ವರಾಜ್ಯ ಕಲಿಗಳು’. ಇದರಲ್ಲಿ 75 ಸ್ವಾತಂತ್ರ್ಯ ಹೋರಾಟಗಾರರ ಜೀವನಕತೆಗಳನ್ನು ಸಂಕಲಿಸಲಾಗಿದೆ.

Additional information

Weight 596 g
Hard/PaperBack

Language

Publication

Size

Reviews

There are no reviews yet.

Be the first to review “Independence Day Special Offer”

Your email address will not be published. Required fields are marked *