Sale!

Jitvari – Idu Kaashi

210.00

Add to WishlistIn Wishlist
Add to Wishlist

ಕನ್ನಡದ ಮಟ್ಟಿಗೆ ಅಪರೂಪ ಎನಿಸುವ ಬಹುಮೂಲ ಅಧ್ಯಯನ ನಡೆಸಿ, ವಸ್ತುನಿಷ್ಠವಾಗಿ ಭಾರತೀಯ ಇತಿಹಾಸವನ್ನು ಸಾಮಾನ್ಯರಿಗೆ ಅರಿವಾಗುವಂತೆ ದಾಖಲಿಸುತ್ತ ಬಂದಿರುವ ಸದ್ಯೋಜಾತರ ಶಿಲೆ ಗಳಲ್ಲಡಗಿದ ಸತ್ಯ, ಸಾಸತ್ಯಾ, ಕಾಲಯಾನ, ಮಿಹಿರಕುಲಿ ಮತ್ತು ಮಾಗಧೇಯ ಕೃತಿಗಳು ವ್ಯಾಪಕ ಜನಮನ್ನಣೆ ಗಳಿಸಿದೆ. ಇದೀಗ ಆರನೇ ಕೃತಿ ‘ಜೀತ್ವರೀ- ಇದು ಕಾಶಿ’.

ಕಾಶಿಯ ಮೇಲೆ ನಡೆದ ದಾಳಿಗಳು ಹಲವು, ಆದರೆ ೧೬೯೬ರ ಸೆಪ್ಟೆಂಬರ್ ೫ರಂದು ಔರಂಗಜೇಬನ ಗುಲಾಮರು ವಿಶ್ವನಾಥ ಮಂದಿರವನ್ನು ಕೆಡವಿದರು. ಅರ್ಧಂಬರ್ಧ ಕೆಡವಿದ ಸ್ಥಳದಲ್ಲಿಯೇ ಜ್ಞಾನವಾಪಿ ಮಸೀದಿಯನ್ನು ಸಹ ನಿರ್ಮಿಸಿದರು. ಇದಿಷ್ಟೇ ಆಗಿದ್ದರೆ ಕಾಶಿ ಭಾರತೀಯ ಪರಂಪರೆಯ ಅಸ್ಮಿತೆಯ ಗುರುತಾಗಿ ಉಳಿಯುತ್ತಿತ್ತೆ?

ಮೋಕ್ಷದಾಯಿನಿ ನಗರ ಕಾಶಿಯ ಘಾಟ್‌ಗಳಲ್ಲಿ ಉರಿವ ಚಿತೆಯ ಅಗ್ನಿ ಇಂದಿಗೂ ಆರಿಯೇ ಇಲ್ಲ. ಲೋಕದ ಪಾಪವನ್ನೆಲ್ಲ ತೊಳೆವ ಗಂಗೆ ಕಾಲಾಂತರಗಳಿAದ ಹರಿಯುತ್ತಲೇ ಇದ್ದಾಳೆ. ಕಾಶಿಯಲ್ಲಿ ಅಧ್ಯಾತ್ಮ ಹುಡುಕಾಟಕ್ಕೆ ಬಂದು ಅಲ್ಲಿಯೇ ನೆಲೆಸಿದವರೆಷ್ಟೋ ಮಂದಿ.

ಇದಕ್ಕೂ ಮಿಗಿಲಾಗಿ ಕಾಶಿ ಎಂಬುದೇ ವಿದ್ಯಾನಗರಿ. ಬೇರೆಲ್ಲ ಪ್ರಾಂತ್ಯಗಳು ವಿದ್ಯಾದಾನ ಮಾಡುವ ಸಂಸ್ಥೆಗಳನ್ನು ನಿರ್ಮಿಸಿದ್ದರೆ, ಜಗತ್ತಿನ ಎಲ್ಲೆಡೆಯಿಂದ ಅತ್ಯುನ್ನತ ವಿದ್ಯಾರ್ಜನೆ ಮತ್ತು ಜ್ಞಾನ ಸಂಚಯನಕ್ಕಾಗಿ ವಿದ್ವಾಂಸರು ಆಗಮಿಸುತ್ತಿದ್ದ ತಾಣವಿದು. ಇಂದಿಗೂ ಉನ್ನತ ವ್ಯಾಸಂಗಕ್ಕಾಗಿ ಕಾಶೀಯಾತ್ರೆ ಹೊರಡುವ ಯೋಗ್ಯ ವರನಿಗೆ ವರೋಪಚಾರ ಮಾಡಿ ಕನ್ಯಾದಾನ ಮಾಡುವ ಪ್ರತೀತಿಯೂ ಇದೆ.

ಕಾಶಿ ಎಂದರೆ ಇದಿಷ್ಟೇ ಅಲ್ಲ, ಇನ್ನೂ ಬಹಳಷ್ಟು. ಅರಸಿದಷ್ಟೂ ನಿಗೂಢ, ತಿಳಿದಷ್ಟೂ ಅನೂಹ್ಯ.

Additional information

Weight 150 g
Author(s)

Date of Release

Hard/PaperBack

Language

No. of Pages

Publication

Size

HSN code

ISBN

Reviews

There are no reviews yet.

Be the first to review “Jitvari – Idu Kaashi”

Your email address will not be published. Required fields are marked *