Sale!

Kalayogi Ananda Coomaraswamy

225.00

Add to WishlistIn Wishlist
Add to Wishlist

ಭಾರತೀಯ ಸಾಹಿತ್ಯ, ಚಿತ್ರಕಲೆ, ಸಂಗೀತ, ಧರ್ಮ, ಆಧ್ಯಾತ್ಮ, ಇವುಗಳನ್ನು ಪಾಶ್ಚಾತ್ಯರಿಗೆ ಬಹಳ ಸಮರ್ಥವಾದ ಶೈಲಿಯಲ್ಲಿ ತಿಳಿಸಿಕೊಟ್ಟವರು ಡಾ. ಆನಂದ ಕುಮಾರಸ್ವಾಮಿ. ಹುಟ್ಟಿನಿಂದ ಅವರು ಶ್ರೀಲಂಕಾದವರಾದರೂ ಸಹ ಭಾರತೀಯತೆ, ಹಿಂದೂಧರ್ಮ ಅವರಿಗೆ ರಕ್ತಗತವಾಗಿತ್ತು. ಅವರು ದೀರ್ಘಕಾಲ ಅಮೆರಿಕದ ಬಾಸ್ಟನ್ ಮ್ಯೂಸಿಯಂನಲ್ಲಿ ಕೆಲಸ ಮಾಡಿ ನಟರಾಜನ ವಿಗ್ರಹ, ವೇದಗಳ ಅಂತರಾರ್ಥ, ಬುದ್ಧನು ಹೇಗೆ ವೇದಗಳ ಅಂತರಾರ್ಥವನ್ನು ತನ್ನ ಭಾಷೆಯಲ್ಲಿ ವಿವರಿಸಿದ ಎಂಬ ವಿಚಾರಗಳ ಬಗ್ಗೆ ವಿಸ್ತೃತವಾಗಿ ಬರೆದರು. ವಿಶ್ವಕ್ಕೆ ಭಾರತ ನೀಡಬಹುದಾದ ಕೊಡುಗೆಯೆಂದರೆ ಅದರ ಭಾರತೀಯತೆಯ ಆಗಿದೆ ಎಂಬುದನ್ನು ತಮ್ಮ ಆಚಾರ್ಯ ಕೃತಿ ‘ದಿ ಡಾನ್ಸ್ ಆಫ್ ಶಿವ’ ಇದರಲ್ಲಿ ಹೇಳಿದ್ದಾರೆ. ಮೊಘಲ್ ಚಿತ್ರಕಲೆಯ ಭಾಗವಾಗಿಬಿಟ್ಟಿದ್ದ ಶಿವ, ಕೃಷ್ಣ, ರಾಧೆ, ರಾಗಿಣಿ ಮುಂತಾದ ವಿಷಯಗಳಿಗೆ ಸಂಬಂಧಿಸಿದ ರಜಪೂತ ಚಿತ್ರಕಲೆಯನ್ನು ಪ್ರತ್ಯೇಕಿಸಿ ಪ್ರಪಂಚದ, ಭಾರತದ ಚಿತ್ರಕಲೆಯ ಇತಿಹಾಸದಲ್ಲಿ ಅದಕ್ಕೊಂದು ವಿಶಿಷ್ಟ ಸ್ಥಾನವನ್ನು ಕಲ್ಪಿಸಿಕೊಟ್ಟವರು ಆನಂದ ಕುಮಾರಸ್ವಾಮಿ. ನಲವತ್ತಕ್ಕಿಂತ ಹೆಚ್ಚಿನ ಪುಸ್ತಕಗಳು ಮತ್ತು 1000 ಸಂಶೋಧನ ಲೇಖನಗಳ ಮೂಲಕ ಅವರು ಹಿಂದು ಭಾರತೀಯ ಸಂಸ್ಕೃತಿಯನ್ನು ಅದರ ಬಗ್ಗೆ ಹೀನಾಯವಾಗಿ ಮಾತನಾಡುತ್ತಿದ್ದವರಿಗೆ ತಿಳಿಸಿಕೊಟ್ಟರು. ಅಕ್ಷರಶಃ ಪ್ರಪಂಚದ ಸಾವಿರಾರು ವಿದ್ವಾಂಸರ, ಕಲಾವಿದರ, ಕಲಾ ಶಿಕ್ಷಕರ ಅಜ್ಞಾನವನ್ನು ದೂರ ಮಾಡಿದರು. ಇಂತಹ ಅಪ್ಪಟ ಭಾರತೀಯ ಮನಸ್ಸಿನ ಬೌದ್ಧಿಕ ಕ್ಷತ್ರಿಯ ಆನಂದ ಕುಮಾರಸ್ವಾಮಿಯವರ ಬಗ್ಗೆ ಕನ್ನಡದಲ್ಲಿ ಸಮಗ್ರವಾಗಿ ಚಿತ್ರಣವನ್ನು ಕಟ್ಟಿಕೊಡುವ ಪುಸ್ತಕ ಇರಲಿಲ್ಲ. ಡಾಕ್ಟರ್ ಜಿಬಿ ಹರೀಶ ಅವರು ರಚಿಸಿರುವ ಕಲಾ ಯೋಗಿ ಆನಂದ ಕುಮಾರಸ್ವಾಮಿ ಈ ಕೊರತೆಯನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಿದೆ. ಪುಸ್ತಕಕ್ಕೆ ಪ್ರಖರ ರಾಷ್ಟ್ರೀಯವಾದಿ, ಭಾರತದ ಮೇರು ಕಾದಂಬರಿಕಾರ ಡಾ. ಭೈರಪ್ಪನವರ ಮುನ್ನುಡಿ ಇದೆ.

Additional information

Weight 200 g
Author(s)

Date of Release

Hard/PaperBack

Language

No. of Pages

Publication

Size

Reviews

There are no reviews yet.

Be the first to review “Kalayogi Ananda Coomaraswamy”

Your email address will not be published. Required fields are marked *