Kannadadalli Shri Shankara
₹600.00
ಸಂಸ್ಕೃತದಲ್ಲಿ ಸ್ತೋತ್ರಸಾಹಿತ್ಯಕ್ಕೆ ವಿಶೇಷ ಸ್ಥಾನವಿದೆ. ಅಲ್ಲಿ ದೇವತಾಸ್ತುತಿಯೇ ಪ್ರಧಾನವಾದರೂ ಸಾಹಿತ್ಯಾಂಶಗಳಿಗೆ ಬಹಳಷ್ಟು ಅವಕಾಶವಿದೆ. ಅಂಥ ಎಲ್ಲ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ದೇವರ ಸ್ತುತಿಗಳನ್ನು ಭಕ್ತಿಭಾವಪೂರ್ಣವಾಗಿ ರಚಿಸಿ ಸ್ತೋತ್ರಸಾಹಿತ್ಯಕ್ಕೂ ಅಗ್ರಮಾನ್ಯತೆಯನ್ನೂ ಅನನ್ಯತೆಯನ್ನೂ ತಂದವರು ಶ್ರೀ ಶಂಕರಾಚಾರ್ಯರು. ಅವರ ಬಹಳಷ್ಟು ಸ್ತೋತ್ರಗಳು ಜನಮಾನಸದಲ್ಲಿ ನೆಲೆಯಾಗಿವೆ; ಜನಸಾಮಾನ್ಯರ ನಾಲಗೆಯಲ್ಲೂ ನಲಿಯುತ್ತಿವೆ. ಶ್ರೀಶಂಕರರ ಎಲ್ಲ ಸ್ತೋತ್ರಗಳ ಸರಳ ಭಾವಾನುವಾದ ಇರುವ ‘ಕನ್ನಡದಲ್ಲಿ ಶ್ರೀ ಶಂಕರ’ ಕನ್ನಡಸಾಹಿತ್ಯಕ್ಕೊಂದು ಅನನ್ಯ ಕೊಡುಗೆ.
ಗಣೇಶ, ಶಿವ, ದೇವಿ, ವಿಷ್ಣು ಮುಂತಾದ ಹಲವು ದೇವರ ಕುರಿತು ಶಂಕರರು ಅತ್ಯಂತ ಸುಂದರ, ಸರಳ, ಪದಲಾಲಿತ್ಯಪೂರ್ಣ, ಭಾವಸಮೃದ್ಧ, ಭಕ್ತಿಭಾವೋಜ್ಜ÷ಕೇವಲ ಸ್ತೋತ್ರಗಳನ್ನು ರಚಿಸಿದ್ದಾರೆ. ಇವು ಶಬ್ದಾರ್ಥ ಅಲಂಕಾರಗಳಿAದ ಹೊಳೆಯುತ್ತವೆ. ಆದಿ, ಅಂತ್ಯಪ್ರಾಸಗಳಿAದ ತುಂಬಿರುವುದರಿಂದ ಪಠಿಸಲು ಮತ್ತು ನೆನಪಿಡಲು ಕೂಡ ಸುಲಭವಾಗಿವೆ. ಶಂಕರರು ಸ್ತೋತ್ರಗಳ ಮೂಲಕ ವೇದಾಂತಸಾರವನ್ನೂ ಹೇಳುವ ಅತಿ ವಿಶಿಷ್ಟ ಪ್ರಯೋಗಗಳನ್ನು ಮಾಡಿದ್ದಾರೆ. ಸನಾತನಧರ್ಮದಲ್ಲಿ ಸಗುಣೋಪಾಸನೆಗೆ ಅವಕಾಶವಿಲ್ಲ; ಶೈವರು ಶಿವನನ್ನಲ್ಲದೆ ಅನ್ಯ ದೇವರುಗಳನ್ನು ಸ್ತುತಿಸಬಾರದು; ಬ್ರಹ್ಮದ ಉಪಾಸನೆಯ ಹೊರತಾಗಿ ಉಳಿದೆಲ್ಲ ದೇವತಾರೂಪಗಳ ಆರಾಧನೆ ನಿಷಿದ್ಧ ಮುಂತಾದ ಹತ್ತುಹಲವಾರು ಅತಾರ್ಕಿಕ ಆಕ್ಷೇಪಗಳಿಗೆ ಉತ್ತರದಂತಿದೆ ಆಚಾರ್ಯ ಶಂಕರರ ಸ್ತೋತ್ರವಾಙ್ಮಯ.
ಸ್ತೋತ್ರಗಳನ್ನು ಪಠಿಸಿದರೆ ಪುಣ್ಯಸಂಚಯವಂತೂ ಇದೆ. ಆದರೆ ಅದರ ಜೊತೆಗೆ, ಸ್ತೋತ್ರಗಳ ಅರ್ಥವನ್ನು ತಿಳಿದು ಪಠಿಸಿದರೆ ಮನಸ್ಸಿಗೂ ಆಹ್ಲಾದ; ದೇವರಿಗೆ ಭಕ್ತನ ಹೃದಯ ಇನ್ನಷ್ಟು ಹತ್ತಿರವಾದಂತೆ. ಹಾಗಾಗಿ ಆಚಾರ್ಯ ಶಂಕರ ರಚಯಿತ ಎಲ್ಲ ಸ್ತೋತ್ರಗಳ ಕನ್ನಡ ಅನುವಾದವಿರುವ ಈ ಕೃತಿಯು ಆ ಮಹಾಪುರುಷರ ಪ್ರಖರ ಪ್ರತಿಭೆಯನ್ನು ಕನ್ನಡಿಗರಿಗೂ ಕಾಣಿಸಲಿ. ಸಂಸ್ಕೃತದ ಪಕ್ವಫಲದ ರುಚಿಯನ್ನು ಕನ್ನಡದ ನಾಲಗೆಯೂ ಸವಿಯಲಿ.
Additional information
Weight | 550 g |
---|---|
Author(s) | |
Date of Release | |
Hard/PaperBack | |
ISBN | |
Language | |
No. of Pages | |
Publication | |
Size |
Ambika S –
Full Translation of Shankara sthotras to Kannada