Mandiravalle Kattidevu
₹250.00
ಇಪ್ಪತ್ತನೆಯ ಶತಮಾನದ ಐತಿಹಾಸಿಕ ತಿರುವೊಂದರಲ್ಲಿ ರಾಮಜನ್ಮಭೂಮಿ ದೇವಾಲಯದ ತಾಣದಲ್ಲಿ ಕಳಂಕವಾಗಿ ನಿಂತಿದ್ದ ಬಾಬರೀ ಮಸೀದಿಯನ್ನು ದ್ವoಸ ಮಾಡಿದುದು ” ನ ಭೂತೋ… ” ಎನ್ನುವಂತಹುದು. ಈ ಕುರಿತ ಐತಿಹಾಸಿಕ ಘಟನಾವಳಿಯನ್ನು, ಹೋರಾಟವನ್ನು ಪತ್ರಕರ್ತ ರಮೇಶ್ ಕುಮಾರ್ ನಾಯಕ್ ತಮ್ಮ ” ಮಂದಿರವಲ್ಲೇ ಕಟ್ಟಿದೆವು!” ಕೃತಿಯಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ. ಅವರ ಬರವಣಿಗೆಯ ಶೈಲಿ ಓಡಿಸಿಕೊಂಡು ಹೋಗುತ್ತದೆ, ಓದಿಸಿಕೊಂಡೂ ಹೋಗುತ್ತದೆ. ರಾಮಜನ್ಮಭೂಮಿ ಮುಕ್ತಿಗಾಗಿ ನಡೆದ ಹೋರಾಟ, ಬಲಿದಾನಗಳು ನಮ್ಮ ಮನ ಮುಟ್ಟುತ್ತವೆ, ಹೃದಯವನ್ನೂ ತಟ್ಟುತ್ತವೆ. ಗತ -ಇತಿಹಾಸದ ವಿಹಂಗಮ ಹಿನ್ನೋಟದ ಪರಿಪ್ರೇಕ್ಷ್ಯದಲ್ಲಿ, ನವ – ಭಾರತದ ಕಳೆದ ಎಂಟು ದಶಕಗಳ ಸಂಕ್ರಮಣ ಕಾಲದ ಇತಿಹಾಸದ ಹೆಜ್ಜೆಗರುತುಗಳು ಇಲ್ಲಿ ಅರ್ಥಪೂರ್ಣವಾಗಿ ಪಡಿಮೂಡಿವೆ. ವಿಕೃತ ಇತಿಹಾಸವನ್ನು ಬರೆದಿಟ್ಟವರು ಚಿತ್ರಿಸಿದ “ಸೋತ ಭಾರತ ” ವು, ಇದೀಗ ನಿಜಕ್ಕೂ ” ವಿಜಿಗೀಷು ಭಾರತ ” ಎಂಬ ಹೆಮ್ಮೆಯ ಭಾವವನ್ನು ನಮ್ಮಲ್ಲಿ ಮೂಡಿಸುವಲ್ಲಿ ಈ ಕೃತಿ ಸಫಲ ವಾಗಿದೆ.
– ಮಂಜುನಾಥ ಅಜ್ಜಂಪುರ
ಅಂಕಣಕಾರ, ಲೇಖಕ
Additional information
Weight | 200 g |
---|---|
Author(s) | |
Date of Release | |
Hard/PaperBack | |
Language | |
No. of Pages | |
Publication | |
Size |
Reviews
There are no reviews yet.