Nava Jagatika Vyavasthe
Original price was: ₹325.00.₹299.00Current price is: ₹299.00.
Out of stock
ನೆಮ್ಮದಿಯ ಜೀವನ ನಡೆಸಬೇಕೆಂದರೆ ಇಂದು ಜಾಗತೀಕರಣದ ಮರು ವ್ಯಾಖ್ಯಾನ ಆಗಬೇಕು ಹಾಗೂ ಸುಸ್ಥಿರ ಅಭಿವೃದ್ಧಿ ಮಾದರಿಗಳು ಮತ್ತು ಸಾಮಾಜಿಕ ಮೌಲ್ಯಗಳ ಕುರಿತು ಚಿಂತನೆ ನಡೆಯಬೇಕು. ಈ ವಿಚಾರಗಳನ್ನು ಪೂರ್ವಾಗ್ರಹರಹಿತವಾಗಿ ಪ್ರಚುರಪಡಿಸುವುದರಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಿದೆ. ವ್ಯೂಹಾತ್ಮಕ ಬೆಳವಣಿಗೆಗಳು ಹಾಗೂ ವಿಶ್ವಾದ್ಯಂತ ಜನರ ಮೇಲೆ ಅದು ಬೀರಿದ ಪರಿಣಾಮದ ಆಧಾರದಲ್ಲಿ 2021ನೇ ವರ್ಷವು ಬಹಳ ಪ್ರಾಮುಖ್ಯತೆಯನ್ನು ಪಡೆಯಿತು. ನಾವು ಜೀವಿಸುವ ಪರಿಸರಕ್ಕೆ ಯಾವುದೇ ಸಂಬಂಧವಿಲ್ಲದ, ಅತ್ಯಂತ ದೂರದಲ್ಲಿ ಘಟಿಸಿದ ಘಟನೆಯೊಂದರ ಪರಿಣಾಮದಿಂದ ವಿಶ್ವದ ಯಾರೂ ಹೊರಗುಳಿಯಲು ಸಾಧ್ಯವೇ ಇಲ್ಲ ಎನ್ನುವುದನ್ನು ಈ ವರ್ಷ ಮನಗಾಣಿಸಿದೆ. ಚೀನಾದ ವುಹಾನ್‍ನಿಂದ ಹರಡಲು ಆರಂಭಿಸಿದ ಕೊರೋನಾ ವೈರಸ್, ಕತಾರ್‍ನಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ತಾಲಿಬಾನ್ ಭೇಟಿ, ಸಣ್ಣ ಆಫ್ರಿಕನ್ ದೇಶದೊಂದಿಗೆ ಚೀನಾ ಮಾಡಿಕೊಂಡ ನಿರಪದ್ರವಿಯಾದ ವ್ಯಾಪಾರ ಒಪ್ಪಂದ, ಟಿಬೆಟ್‍ನಲ್ಲಿ ನೀರ್ಗಲ್ಲುಗಳ ಕರಗುವಿಕೆ… ಪ್ರಾರಂಭದಲ್ಲಿ ಒಂದಕ್ಕೊಂದು ಸಂಬಂಧವಿಲ್ಲ ಎನ್ನುವಂತಿದ್ದ ಈ ಘಟನಾವಳಿಗಳು ನಂತರದ ಹಂತದಲ್ಲಿ ವಿಶ್ವಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದವು.
2021 ರಲ್ಲಿ ಸಂವಾದ ವರ್ಲ್ಡ್‌ನಲ್ಲಿ ಪ್ರಕಟವಾದ ಅತ್ಯುತ್ತಮ ಲೇಖನಗಳ ಸಂಕಲನವಾಗಿರುವ ಈ ಪುಸ್ತಕ, ನಮ್ಮ ಜೀವನದಲ್ಲಿ ಬದಲಾವಣೆಗಳನ್ನು ತರುವುದರ ಜೊತೆಗೆ ನಾವು ವಾಸಿಸುವ ಪ್ರಪಂಚದ ಮೇಲೆ ಪ್ರಭಾವ ಬೀರಿದ ಅತ್ಯಂತ ಮುಖ್ಯವಾದ ಅಂತರರಾಷ್ಟ್ರೀಯ ಘಟನೆಗಳು ಮತ್ತು ಸಮಸ್ಯೆಗಳನ್ನು ವಿಶ್ಲೇಷಿಸುತ್ತದೆ. ವಿಶ್ವಾದ್ಯಂತ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಅರಿವು ಮೂಡಿಸುವುದೇ ಸಂವಾದ ವರ್ಲ್ಡ್ ಪ್ರಾರಂಭದಿಂದಲೂ ಹೊಂದಿರುವ ಉದ್ದೇಶ. ಪರಿಣಾಮವಾಗಿ, ಈ ಪುಸ್ತಕವು ಅಂತರರಾಷ್ಟ್ರೀಯ ಸಂಬಂಧಗಳು ನಮ್ಮ ಜೀವನ ಮತ್ತು ಭವಿಷ್ಯಕ್ಕೆ ಸಂಬಂಧಿಸಿದೆ ಎಂಬ ಅಂಶವನ್ನು ಪ್ರದರ್ಶಿಸುತ್ತದೆ.
Additional information
Weight | 199 g |
---|---|
Publication | |
Author(s) | |
Hard/PaperBack | |
Language | |
HSN code | |
No. of Pages |
Reviews
There are no reviews yet.