Nene manave

320.00

Add to WishlistIn Wishlist
Add to Wishlist

ಇಂದು ಬೆಂಗಳೂರು ಚಹರೆ ಇಲ್ಲದ ನಗರ. ಹಳಬರಿಗೆ ಅದನ್ನು ಕಂಡರೆ ಹಳವಂಡ; ಹೊಸಬರಿಗೆ ಉದ್ಯೋಗ ಪರ್ವದ ಹೇಷಾರವ. ನಾಗರಿಕತೆಯ ಕುರುಡು ರಚನೆಗೆ ಹಳೆಯ ಚಿತ್ರ ಮಾಸಲಾಗಿದೆ, ಚಿತ್ರಪಟ ಹರಿದುಹೋಗಿದೆ. ಆದರೂ ವೃದ್ಧ ಕಲಾವಿದನ ಜಬ್ಬಲು ಬಟ್ಟೆ ಬರೆ ಒಂದು ಕಾಲಕ್ಕೆ ಆತ ಗೌರವಾನ್ವಿತವಾಗಿ ಬಾಳಿದ್ದನ್ನು ಸೂಚಿಸುವಂತೆ ಹಳೆಯ ಬೆಂಗಳೂರಿನ ಗೌರವಶಾಲಿ ಬಾಳು ಈ ಕೃತಿಯಲ್ಲಿ ರೇಖಾಂಕಿತವಾಗಿದೆ. ಯಾವುದೋ ಹಳೆಯ ನೆನಪು, ಒಂದು ನೆನಪಿನ ಪಕಳೆ, ಒಂದು ಹೂವಿನ ಅಂದ, ಮೂಗಿಗೆ ಹೀರಿಕೊಂಡ ಸೌರಭ ಎಲ್ಲವೂ ನರಸಿಂಹಮೂರ್ತಿಯವರಿಗೆ ಮುಖ್ಯ. ಹಳೆಯ ಸಿನಿಮಾ ಟೆಂಟುಗಳು, ಆ ಕಾಲದ ಸಿನಿಮಾ ನಟರು, ಬೆಂಗಳೂರಿನ ಕೆರೆ, ಹೊಲ, ಗದ್ದೆಬೆದ್ದಲಗಳು ಈ ಪುಸ್ತಕದಲ್ಲಿ ಮತ್ತೆ ಪುನರ್ಜನ್ಮ ಪಡೆದಿವೆ. ಈ ಕೃತಿಯ ಹೊರ ಮೈ ಬೆಂಗಳೂರಿನ ಅವರು ಕಂಡುAಡ ನೆನಪುಗಳಾದರೆ, ಅದರ ಒಳಮೈ ಶುದ್ಧವಾದ ಪ್ರಬಂಧ. ಹೀಗೆ ಅವರ ಈ ನೂತನ ಪುಸ್ತಕಕ್ಕೆ ಧರ್ಮಕ್ಷೇತ್ರಕ್ಕೆ ಕುರುಕ್ಷೇತ್ರದ ಕಳೆ ಬಂದಿದೆ. ಪರಿಸರ, ಪರಂಪರೆಯ ಕಾಳಜಿ ಪ್ರತಿ ಲೇಖನದಲ್ಲೂ ಎದ್ದು ಕಾಣುತ್ತದೆ.

ಕರ್ನಾಟಕದ ರಾಜಕೀಯ ಪರ್ವದ ಹೃದಯವಾಗಿರುವ ಬೆಂಗಳೂರಿನ ವನಪರ್ವ ಸಭಾಪರ್ವಗಳು ಇಲ್ಲಿ ಸುಂದರವಾಗಿ ಮೂಡಿವೆ. ನಗರವು ಮಹಾನಗರವಾಗಿ ಬೆಳೆಯುವಾಗ ಕಳೆದು ಹೋದ ಗ್ರಾಮಪರ್ವ-ಅರಣ್ಯಗಳ ನೆನಪು ಖಚಿತವಾಗಿ ಮೂಡಿದೆ. ಹೀಗಾಗಿ ನಮ್ಮ ನಾಡಿನ ಸಮಾಜಶಾಸ್ತç ನಗರಶಾಸ್ತçದ ಇತಿಹಾಸವನ್ನು ಅಭ್ಯಾಸ ಮಾಡುವ ಜಿಜ್ಞಾಸುಗಳಿಗೆ ನರಸಿಂಹಮೂರ್ತಿಯವರ ಈ ಪುಸ್ತಕವು ಅತ್ಯಂತ ಅನಿವಾರ್ಯ. ಯಾವ ಸಿದ್ಧಾಂತವನ್ನೂ ಪ್ರತಿಪಾದಿಸದೆ, ಯಾರನ್ನೂ ವಿರೋಧಿಸದೆ ತಾನು ಕಂಡ ಬೆಳದಿಂಗಳಿನAತಹ ಬೆಂಗಳೂರನ್ನು ಕಟ್ಟಿಕೊಟ್ಟಿರುವ ನರಸಿಂಹಮೂರ್ತಿಯವರ ಬತ್ತಳಿಕೆಯಲ್ಲಿ ಇನ್ನೂ ಸಾಕಷ್ಟು ನೆನಪಿನ ಬಾಣಗಳಿವೆ. ಅವುಗಳನ್ನು ಒಂದೊAದಾಗಿ ಸಹೃದಯರ ಮೇಲೆ ಪ್ರಯೋಗಿಸಲಿ. ಒಬ್ಬ ಸಹೃದಯನಾದ ಸನ್ಮಿತ್ರ ಇದಕ್ಕೂ ಬೇರೆ ಏನು ಹಾರೈಸಬಹುದು.

Additional information

Weight 320 g
Author(s)

Date of Release

Hard/PaperBack

Language

No. of Pages

Publication

Size

Reviews

There are no reviews yet.

Be the first to review “Nene manave”

Your email address will not be published. Required fields are marked *