New books special combo offer
₹750.00
6 New Book combo Offer
1) ಜಮ್ಮಾಮಲೆ / ಸಂತೋಷ್ ತಮ್ಮಯ್ಯ
2) ಮಕ್ಕಳ ಶಿಕ್ಷಣ / ನಾರಾಯಣ ಶೇವಿರೆ
3) ಕಡಿದ ದಾರಿ / ಹರೀಶ್ ಟಿ.ಜಿ.
4) ಅಪ್ಪ ಬರೆದ ಪತ್ರಗಳು / ಸಂಪಾದಕ: ಆನಂದ ಆ. ಶ್ರೀ.
5) ಕೃಷ್ಣಾರ್ಪಣಂ / ಡಾ. ಮಂಜುನಾಥ ಕರಬ
6) ಮಲೆನಾಡು ಗಿಡ್ಡ | ಎ. ಪಿ. ಚಂದ್ರಶೇಖರ್
Buy @ www.ayodhyabooks.com
WhatsApp: 9620916996
ಜಮ್ಮಾಮಲೆ / ಸಂತೋಷ್ ತಮ್ಮಯ್ಯ
ಅತ್ತ ಸಮುದ್ರ, ಇತ್ತ ಮಲೆಘಟ್ಟ – ನಡುಮಧ್ಯೆ ಅರಳಿನಿಂತ ಹಚ್ಚಹಸುರಿನ ಗಿರಿಕಂದರಗಳ ಸ್ವರ್ಗಭೂಮಿ ಕೊಡಗು, ಕ್ಷಾತ್ರಕ್ಕೊಂದು ಅನ್ವರ್ಥ. ಮಿಲಿಟರಿ, ಕೋವಿ, ಬೇಟೆ, ಯುದ್ಧ, ಕಾಫಿ, ಹಾಕಿ, ಇಗ್ಗುತ್ತಪ್ಪ, ಕಾವೇರಿ, ಹುತ್ತರಿ, ಕ್ರೌರ್ಯ-ಹಿಂಸೆಗಳ ರಕ್ತಸಿಕ್ತ ಇತಿಹಾಸ, ಕೊಡವ ಭಾಷೆ-ಸಂಸ್ಕೃತಿ – ಹೀಗೆ ಎಲ್ಲವನ್ನೂ ತನ್ನೊಳಗೆ ಕಾಪಿಟ್ಟುಕೊಂಡು ಬಂದಿರುವ ಕೊಡಗು ಪ್ರವಾಸಿಗರ ಕಣ್ಣಿಗೆ ಕಾಣುವ ಬಗೆ ಬೇರೆ; ತನ್ನೊಳಗಿನ ಜನರೆದುರು ಅನಾವರಣಗೊಳ್ಳುವ ಪರಿಯೇ ಬೇರೆ. ಕೊಡಗಿನಲ್ಲಿ ಹುಟ್ಟಿ ಬೆಳೆದ ಪತ್ರಕರ್ತ ಸಂತೋಷ್ ತಮ್ಮಯ್ಯ ವಿಧಿಯ ಮಾಟದ ಕೊಡಗಿನ ಒಳಹೊರಗನ್ನು ಈ ಕೃತಿಯಲ್ಲಿ ಓದುಗರ ಮುಂದೆ ಬಿಚ್ಚಿಟ್ಟಿದ್ದಾರೆ
ಮಕ್ಕಳ ಶಿಕ್ಷಣ / ನಾರಾಯಣ ಶೇವಿರೆ
‘ಮಕ್ಕಳ ಸ್ಕೂಲ್ ಮನೇಲಲ್ವೆ?’ ಎಂಬೊಂದು ಮಾತಿದೆ. ಶಿಕ್ಷಣ ಎಂದರೆ ಶಾಲೆ, ಕಾಲೇಜು, ಯೂನಿವರ್ಸಿಟಿ, ಕಪ್ಪುಗುಚ್ಚಿನ ಟೋಪಿ, ಸರ್ಟಿಫಿಕೇಟು ಎಂಬ ಸಿದ್ಧಮಾದರಿಯೊಂದು ನಮ್ಮ ಕಣ್ಮುಂದೆ ನಿಲ್ಲುತ್ತದೆ. ಆದರೆ ನಿಜವಾದ ಶಿಕ್ಷಣ ಎಂದರೇನು? ಅದರ ಮೂಲಭೂತ ಅಂಶಗಳೇನು? ಮಕ್ಕಳಿಗೆ ನಾವು ನಿಜಕ್ಕೂ ಕಲಿಸಬೇಕಿರುವುದೇನು? ಕಲಿಕೆಯ ಪ್ರಕ್ರಿಯೆ ಹೇಗೆ ನಡೆಯಬೇಕು? ಈ ಎಲ್ಲ ವಿಚಾರಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ ಬೀಜರೂಪದಲ್ಲಿ ಸಂಗ್ರಹಮಾಡಿ ಕೊಟ್ಟಿರುವ ಕೃತಿ “ಮಕ್ಕಳ ಶಿಕ್ಷಣ”. ಇದು ಕೇವಲ ಓದಿ ಕೆಳಗಿಡುವ ಪುಸ್ತಕವಲ್ಲ, ಓದಿ ಧ್ಯಾನಿಸಬೇಕಾದ ಪುಸ್ತಕ!
ಕಡಿದ ದಾರಿ / ಹರೀಶ್ ಟಿ.ಜಿ.
ಮಲೆನಾಡ ಮಧ್ಯದಲ್ಲಿ ಹುಟ್ಟಿಬೆಳೆದ ಹರೀಶರು ಈ ಕೃತಿಯ ಕಥೆಗಳಲ್ಲಿ ಪುಟಪುಟಗಳಲ್ಲೂ ಮಲೆನಾಡಿನ ಅಂತರಂಗವನ್ನು ಹರವಿಟ್ಟಿದ್ದಾರೆ. ಬ್ರಾಹ್ಮಣ ಮನೆಗಳ ಕಥೆಗಳಾದರೂ ಇವು ಇಡೀ ಮನುಷ್ಯಲೋಕದ ಕಥೆಗಳು. ಅಲ್ಲಿನ ಕನಸು, ಹತಾಶೆ, ಕ್ರೋಧ, ಆಕ್ರಂದನ, ಭರವಸೆ ಇತ್ಯಾದಿ ಎಲ್ಲ ಚಿತ್ರಣಗಳನ್ನು ಸಿನೆಮದ ದೃಶ್ಯಗಳಂತೆ ಕಣ್ಮುಂದೆ ಕಟ್ಟಿಕೊಡುವ ಈ ಕಥೆಗಳಲ್ಲಿ ಮಲೆನಾಡಿನ ಪ್ರಕೃತಿ, ಭಾಷೆ, ಸಂಸ್ಕೃತಿ, ಭಾವಾತಿರೇಕಗಳೆಲ್ಲವೂ ಪಾತ್ರಗಳಾಗಿ ಬಂದಿವೆ. ಅನಂತಮೂರ್ತಿಯವರ ನಂತರ ಮಲೆನಾಡು ಹಾಗೂ ಬ್ರಾಹ್ಮಣಕುಟುಂಬಗಳ ಕಥೆ-ವ್ಯಥೆಗಳನ್ನು ಸಶಕ್ತವಾಗಿ ಕಟ್ಟಿಕೊಡುತ್ತಿರುವ ಬಹುಮುಖ್ಯ ಕಥೆಗಾರ ಹರೀಶ್.
ಅಪ್ಪ ಬರೆದ ಪತ್ರಗಳು / ಸಂಪಾದಕ: ಆನಂದ ಆ. ಶ್ರೀ.
ಒಂದಾನೊಂದು ಕಾಲದಲ್ಲಿ ಎಲ್ಲ ಮನುಷ್ಯಸಂಬಂಧಗಳನ್ನು ಬೆಸೆಯುತ್ತಿದ್ದ ಮಾಧ್ಯಮವೆಂದರೆ ಪತ್ರ. ಪತ್ರಸಂಸ್ಕೃತಿ ಎಂಬ ಶಬ್ದವೇ ಇದೆ. ಪತ್ರಗಳಲ್ಲಿ ಮನುಷ್ಯರ ಭಾವಪ್ರಪಂಚವನ್ನು ಕಾಣಬಹುದಿತ್ತು. ಕುಟುಂಬದ ಸದಸ್ಯರ ನಡುವೆ ಇದ್ದ ಸ್ನೇಹ-ಸಂಬಂಧಗಳನ್ನು ಪತ್ರಗಳು ಗಟ್ಟಿಗೊಳಿಸುತ್ತಿದ್ದವು. ತಂದೆ ಮತ್ತು ಮಗನ ಬಾಂಧವ್ಯ, ಪರಸ್ಪರ ಪ್ರೀತಿ-ಗೌರವ-ಕಾಳಜಿ ಇತ್ಯಾದಿಗಳನ್ನು ನವಿರಾಗಿ ತೋರುವ ಪತ್ರಗಳ ಗುಚ್ಛವೇ “ಅಪ್ಪ ಬರೆದ ಪತ್ರಗಳು”. ಇವು ಕೇವಲ ಪತ್ರಗಳಲ್ಲ; ತಂದೆಮಕ್ಕಳ ನಡುವಿನ ಆತ್ಮೀಯ ಪಿಸುಮಾತುಗಳು. ಹೃದಯದ ಭಾಷೆ ಇಲ್ಲಿ ಹಾಳೆಗಳಲ್ಲಿ ಅನಾವರಣಗೊಂಡಿದೆ.
ಕೃಷ್ಣಾರ್ಪಣಂ / ಡಾ. ಮಂಜುನಾಥ ಕರಬ
ಗೋಕುಲದಲ್ಲಿ ಆಡಿಬೆಳೆದ ಕೃಷ್ಣನನ್ನು ಕಂಸನ ಮಥುರೆಗೆ ಕರೆದೊಯ್ದ ಅಕ್ರೂರ ತನ್ನ ಜೀವನದುದ್ದಕ್ಕೂ ಕೃಷ್ಣನ ಸಖನಾಗಿ, ಹಿರಿಯನಾಗಿ, ಹಿತೈಷಿಯಾಗಿ ಉಳಿದರೂ ಆತನಿಗೆ ಕೃಷ್ಣನ ಪೂರ್ತಿ ವ್ಯಕ್ತಿತ್ವದ ಅಳತೆ ಸಿಗಲಿಲ್ಲ. ಅಕ್ರೂರ ಯಾದವಕುಲದ ಉತ್ಥಾನದ ದಿನಗಳನ್ನು ಹೇಗೋ ಹಾಗೆಯೇ ಅದರ ಪರ್ಯಾವಸಾನದ ದಿನಗಳನ್ನೂ ಕಂಡ. ಅಧಿಕಾರ, ಹಣ ತರುವ ಜವಾಬ್ದಾರಿಯನ್ನೆಂತೋ ಅಂತೆಯೇ ಮದ, ದರ್ಪ, ಅಹಂಕಾರದ ಚರಮ ಬಿಂದುವನ್ನು ಕೂಡ ಕಂಡವನು ಅಕ್ರೂರ. ಯಕ್ಷಗಾನದ ಹಿನ್ನೆಲೆಯೂ ಇರುವ ಕನ್ನಡ ವಿದ್ವಾಂಸರಾದ ಕಾದಂಬರಿಕಾರರು ಇಡಿಯ ಕೃಷ್ಣಾವತಾರದ ಕತೆಯನ್ನು ಅಕ್ರೂರನ ಕಣ್ಣಿನಿಂದ ಕಾಣಿಸುವ ವಿಶಿಷ್ಟ ಪ್ರಯೋಗ ಮಾಡಿದ್ದಾರೆ.
ಮಲೆನಾಡು ಗಿಡ್ಡ | ಎ. ಪಿ. ಚಂದ್ರಶೇಖರ್
ಹೈನುಗಾರಿಕೆಯ ಹಾಡುಪಾಡನ್ನು ವಿವರಿಸುವ ಈ ಕೃತಿಯಲ್ಲಿ ರಾಜಕೀಯವಿದೆ, ವಿಜ್ಞಾನವಿದೆ, ಬದುಕಿನ ಕಷ್ಟಸುಖಗಳ ಒಳನೋಟಗಳಿವೆ, ಮಾನವೀಯ ಸಂಬಂಧಗಳ ಸಂಕೀರ್ಣತೆ ಇದೆ. ಅಲ್ಲಲ್ಲಿ ಹಾಸ್ಯವಿದೆ, ಹಾಸ್ಯದೊಳಗೇ ಕಟು ವಿಷಾದವೂ ಇದೆ. ಜೀವನಚರಿತ್ರೆಯಾಗಿ, ಕಾದಂಬರಿಯಾಗಿ, ವಿಜ್ಞಾನಕೃತಿಯಾಗಿ, ವೈದ್ಯ ಅನುಭವವಾಗಿ ಬಗೆ ಬಗೆಯಲ್ಲಿ ಈ ಕೃತಿಯು ತೆರೆದುಕೊಳ್ಳುತ್ತದೆ.
Additional information
Date of Release | |
---|---|
Hard/PaperBack | |
Language | |
Publication | |
Size |
Reviews
There are no reviews yet.