Sampige Bhagavata

270.00

Add to WishlistIn Wishlist
Add to Wishlist

ಪುರಾಣಗಳು ಲೌಕಿಕ – ಅಲೌಕಿಕ, ಪ್ರತ್ಯಕ್ಷ – ಪರೋಕ್ಷಗಳ ನಡುವೆ ಸಾಧಿತವಾಗಿರುವ ಪ್ರಜ್ಞಾವಾಹಿನಿಯ ಪ್ರತಿಮೆಗಳು, ಸಂಕೇತಗಳು, ಧ್ವನಿಗಳು; ಅವು ಪ್ರಕೃತಿಯ ನಿತ್ಯದ ಕನಸುಗಳು ಕೂಡ. ಪುರಾಣಗಳು ನಮಗೆ ಹತ್ತಿರವಾಗುವುದು ಅವುಗಳ ‘ಅರ್ಥ’ ದ ಹುಡುಕಾಟದಲ್ಲಿ ಅಲ್ಲ,ನಮ್ಮ ಅನುಭವಭಾವಕೋಶದ ವಿಸ್ತಾರದಲ್ಲಿ ಮೂಡುವ ಆ ಪ್ರತಿಮೆಗಳ ಮರುಹುಟ್ಟಿನಲ್ಲಿ.

ಭಾಗವತದೊಂದಿಗೆ ಲಕ್ಷ್ಮೀಶ ತೋಲ್ಪಾಡಿಯವರು ನಡೆಸಿರುವ ಸಹೃದಯ ಸಾಹಚರ್ಯ ಈ ಕೃತಿಯ ಪಂಕ್ತಿ ಪಂಕ್ತಿಯಲ್ಲೂ ಹರಳುಗಟ್ಟಿದೆ; ಶ್ರವಣ-ಮನನ-ನಿದಿಧ್ಯಾಸನಗಳ ಬೆಂಬಲವಿಲ್ಲದೆ ಇಂಥದೊಂದು ಸಾವಯವಶಿಲ್ಪ ಸಿದ್ಧವಾಗದಷ್ಟೆ. ‘ಭವನಿಮಜ್ಜನಚಾತುರ್ಯ’ ಮತ್ತು ‘ಲಘಿಮಾ ಕೌಶಲ’ ಗಳ ಸಂಲಗ್ನ ದಲ್ಲಿ ರಸಸಮಾವಿಷ್ಠವನ್ನೇ ಇಲ್ಲಿ ಕಂಡರಿಸಿ,ಪುರಾಣಪರಂಪರೆಯ ವ್ಯಾಖ್ಯಾನರಥಕ್ಕೆ ಹೊಸದಾದ ಜೀವಕಳೆಯನ್ನು ತುಂಬಿದ್ದಾರೆ.ಹೀಗೆಂದು ‘ಈ ಸನ್ನಿವೇಶದ ಭಾವ ಇದೇ, ಈ ಮಾತಿಗೆ ಇದೇ ಅರ್ಥ’ ಎನ್ನುವಂಥ ಪ್ರಭುಸಂಮಿತೆಯ ಆವೇಶ ಈ ಕೃತಿಯಲ್ಲಿ ಮೈದೊರಿಲ್ಲವೆಂಬುದು ಗಮನಾರ್ಹ ವಿವರವೇ ಸರಿ.ಮತ್ತಷ್ಟು ಪದರಗಳಲ್ಲಿ ಹುದುಗಿರುವ ರಸನಿಧಿಯನ್ನು ಅನ್ವೇಷಿಸಲು ಇಲ್ಲಿಯ ಸೊಲ್ಲುಗಳು ಆಲಂಬನ -ಉದ್ದೀಪನ ವಿಭಾವಗಳಾಗಿ ಒದಗಿ,ಎಲ್ಲೆಲ್ಲೂ ಹರಡಿಕೊಂಡಿರುವ ‘ಪುರಾಣ’ ಪ್ರಪಂಚದ ರಸಸಾಮ್ರಾಜ್ಯದ ವಿಸ್ತರಣಕ್ಕೆ ಅವಶ್ಯಕವಾದ ಬೀಜ ಮೊಳಕೆಯೊಡೆಯಲು ನಮ್ಮ ಭಾವ -ಬುದ್ಧಿಗಳಿಗೆ ಬಲವನ್ನು ತುಂಬಿ, ಅಂತರಂಗವನ್ನು ಫಲವತ್ತುಗೊಳಿಸುತ್ತವೆ.

Additional information

Weight 270 g
Date of Release

Hard/PaperBack

HSN code

Language

No. of Pages

Publication

Author(s)

Reviews

There are no reviews yet.

Be the first to review “Sampige Bhagavata”

Your email address will not be published. Required fields are marked *