Shree Krishnaavatarada Koneya Galigegalu

300.00

ಭಾಗವತವು, ಅದರಲ್ಲೂ ಈ “ಕೃಷ್ಣನ ಕೊನೆಯ ದಿನಗಳು” ಇಪ್ಪತ್ತು ಅಧ್ಯಾಯಗಳು ಉಚ್ಛಶ್ರೇಷ್ಠ ತತ್ವಜ್ಞಾನ ಗ್ರಂಥವಾಗಿರುವಂತೆ, ನವರಸಭರಿತವಾದ ಪ್ರತಿ ಅಧ್ಯಾಯ ರಸೋತ್ಕರವಾದ ಗದ್ಯ ಕಾವ್ಯವಾಗಿದೆ. ವ್ಯಾಸರ ಕಣ್ಣಾಗಿ ನಾರಾಯಣಾಚಾರ್ಯರು ಮಹಾಭಾರತದ ಕೆನೆಯನ್ನು ಈ ಗದ್ಯ ಕಾವ್ಯಕ್ಕೆ ಸುವರ್ಣರಸದಂತೆ ಲೇಪಿಸಿದ್ದಾರೆ. ಈ ಇಪ್ಪತ್ತು ಅಧ್ಯಾಯಗಳ ಹೃದಯಸ್ಪರ್ಶಿ ಗದ್ಯಗಾಥೆಯ ದರ್ಶನದ ಸಾರದಲ್ಲಿ ವ್ಯಕ್ತಿ-ವ್ಯಕ್ತಿಯ ಜೀವನದಲ್ಲಿ ನಡೆಯುವ ದೇವಾಸುರ ಸಂಗ್ರಾಮದ ಇಷ್ಟಾನಿಷ್ಟಗಳ ಗುಟ್ಟು ಅಡಗಿದೆ.
ಪೂಜ್ಯ ಆಚಾರ್ಯರ ಸಂಸ್ಕೃತ, ಕನ್ನಡ, ಇಂಗ್ಲಿಷ್, ತಮಿಳು ಚತುರ್ ಭಾಷಾ ಪೌಢಿಮೆ, ಕಲ್ಪನಾ ಪ್ರಾಗಲ್ಭ್ಯ, ಜೀವಂತ ಪಾತ್ರ ನಿರೂಪಣೆ, ಮುಖ್ಯವಾಗಿ ಅವರ ವೇದ ತತ್ವಜ್ಞಾನ ಪಾಂಡಿತ್ಯ, ರಾಮಾಯಣ, ಮಹಾಭಾರತ, ಭಾಗವತಗಳ ಮೇಲಿನ ಪ್ರಭುತ್ವ, ಗೌರೀಶಂಕರ ಶಿಖರದಷ್ಟು ಎತ್ತರದ ತತ್ವಜ್ಞಾನವನ್ನು ನಮ್ಮಂತಹ ನೆಲದ ಮೇಲೆ ಓಡಾಡುವ ಮಣ್ಣಿನ ಮನುಷ್ಯರಿಗೆ ಉಣ್ಣಿಸುವ ಔದಾರ್ಯಮಯ ಜ್ಞಾನಸಂಪತ್ತು ಇವುಗಳಿಗೆ ಆಗರವಾಗಿರುವ ಈ ಲೇಖಾಂಕ ಮಾಲೆಯ ಒಂದಿಷ್ಟು ಸವಿಯನ್ನು ಮೂಗಿಗೆ ಭಾರವೆನಿಸುವ ಈ ಮುನ್ನುಡಿ ನೀಡಿರಲಾರದು.

Additional information

Weight280 g
Author(s)

Date of Release

Hard/PaperBack

Language

No. of Pages

Publication

Size

Reviews

There are no reviews yet.

Be the first to review “Shree Krishnaavatarada Koneya Galigegalu”

Your email address will not be published. Required fields are marked *

3 × two =