Sale!

Summer holiday offer

Original price was: ₹920.00.Current price is: ₹799.00.

Add to WishlistIn Wishlist
Add to Wishlist

ಬೇಸಿಗೆ ರಜೆಯಲ್ಲಿ ಮಕ್ಕಳು ಹೊಸತೇನಾದರೂ ಕಲಿಯಬೇಕು ಎಂಬುದು ಪಾಲಕರ ಹಂಬಲ. ಈ ಬೇಸಿಗೆಯಲ್ಲಿ ನಾವು ನಮ್ಮ ಮಕ್ಕಳಿಗೆ ಓದಿನ ರುಚಿಯನ್ನು ತಿಳಿಸಿಕೊಟ್ಟರೆ ಹೇಗೆ? ಓದಲು ಪುಸ್ತಕ ಇಲ್ಲ ಎನ್ನುತ್ತೀರಾ? ನಮ್ಮ ಮಕ್ಕಳಿಗೆ ಕನ್ನಡ ಓದಲು ಬರೋಲ್ಲ ಎನ್ನುತ್ತೀರಾ? ಓದಿಸಿಕೊಂಡು ಹೋಗುವ ಪುಸ್ತಕಗಳ ಕೊರತೆ ಎನ್ನುತ್ತೀರಾ? ಅಂಥ ನೂರೆಂಟು ಸಮಸ್ಯೆಗಳಿಗೆ ಉತ್ತರವೆಂಬಂತೆ ನಿಮ್ಮ ಕೈಗಿಡುತ್ತಿದ್ದೇವೆ ಈ ಎಂಟು ಪುಸ್ತಕಗಳನ್ನು! ಇವು ಮಕ್ಕಳ ವಯೋಮಾನ, ಮನೋಧರ್ಮ, ಅಭಿರುಚಿ, ಆಸಕ್ತಿ, ಭಾಷಾಸಾಮರ್ಥ್ಯಗಳನ್ನೇ ಗಮನದಲ್ಲಿರಿಸಿಕೊಂಡು ರಚಿಸಿದ ಪುಸ್ತಕಗಳು. ಓದಿನ ರುಚಿ ಹತ್ತಿಸಲೆಂದೇ, ಓದಿನ ಸುಖವನ್ನು ಪರಿಚಯಿಸಲೆಂದೇ ಬರೆದ ಹೊತ್ತಗೆಗಳಿವು! ಈ ಕೃತಿಗಳನ್ನು ಮಕ್ಕಳಿಗಾಗಿ ಕೊಂಡು ಮನೆತುಂಬಿಸಿಕೊಳ್ಳುವ ಮೂಲಕ, ಮುಂದಿನ ತಲೆಮಾರಿಗೆ ಕನ್ನಡ ಭಾಷೆಯನ್ನು, ಓದಿನ ಸಂಸ್ಕೃತಿಯನ್ನು ದಾಟಿಸಿ, ಮಕ್ಕಳ ಬೇಸಿಗೆಯನ್ನು ಅರ್ಥಪೂರ್ಣಗೊಳಿಸಿ!

೧. ಅಜ್ಜಿ ಹೇಳಿದ ಕಥೆಗಳು ಹಾಗೂ ಮಂಡೂಕ ಮಹಾರಾಜ – ಎರಡೂ ಮಕ್ಕಳ ಕಥಾ ಸಂಕಲನಗಳು.

೨. ಫ್ರಾಂಕನ್‌ಸ್ಟೈನ್ – ಮೇರಿ ಷೆಲ್ಲಿ ಬರೆದ ಇಂಗ್ಲೀಷ್ ಕಾದಂಬರಿಯ ಸರಳ ಸಂಗ್ರಹಾನುವಾದ.

೩. ನಕ್ಕೋ ನಕ್ಕೋ ನಸ್ರುದ್ದೀನ್ ಹಾಗೂ 108 ಯಹೂದಿ ಕಥೆಗಳು – ಓದಿದಾಗ ತುಟಿಯಂಚಲ್ಲಿ ನಗೆ ಮೂಡಿಸುವ ಸರಳ ಸುಂದರ ಹಾಸ್ಯಕತೆಗಳು.

೪. ಗಣಿತಜ್ಞರ ರಸಪ್ರಸಂಗಗಳು – ಜಗತ್ತಿನ ಪ್ರಸಿದ್ಧ ಗಣಿತಜ್ಞರ ಬದುಕಿನಲ್ಲಿ ನಡೆದುಹೋದ ಹಾಸ್ಯಪ್ರಸಂಗಗಳ ಸಂಕಲನ.

೫. ಮಕ್ಕಳಿಗಾಗಿ ಸ್ವಾಮಿ ಸಿದ್ಧೇಶ್ವರರ ಕತೆಗಳು – ಶಿವೈಕ್ಯರಾಗಿರುವ ಶ್ರೀ ಸಿದ್ಧೇಶ್ವರ ಸ್ವಾಮಿಗಳು ತಮ್ಮ ಪ್ರವಚನಗಳಲ್ಲಿ ಸಾಂದರ್ಭಿಕವಾಗಿ ಹೇಳುತ್ತಿದ್ದ ವಿಶಿಷ್ಟ ಕತೆಗಳನ್ನು ಸಂಗ್ರಹಿಸಿ ಕೊಟ್ಟಿರುವ ಕೃತಿ.

೬. ಸಂಸ್ಕಾರಸಂಪದ – ಮನುಷ್ಯನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಒಟ್ಟು 16 ಸಂಸ್ಕಾರಗಳ ಪರಿಚಯ ಹಾಗೂ ಶ್ರೀರಾಮನ ವ್ಯಕ್ತಿತ್ವದ ಮೂಲಕ ಈ ಸಂಸ್ಕಾರಗಳ ಮಹತ್ವದ ಅನಾವರಣ.

Additional information

Weight 600 g
Hard/PaperBack

HSN code

Language

Publication

Size

Author(s)

,

Reviews

There are no reviews yet.

Be the first to review “Summer holiday offer”

Your email address will not be published. Required fields are marked *

4 + 9 =