Swatantra mahasangrama 1857
₹175.00
ಭಾರತದ ಈಚಿನ ಇತಿಹಾಸಕ್ಕೆ ನಿರ್ಣಾಯಕ ತಿರುವನ್ನಿತ್ತ ಘಟನೆಯೆಂದರೆ ನಾನಾಸಾಹೇಬ್ ಪೇಶ್ವೆ, ತಾತ್ಯಾಟೋಪೆ, ಝಾನ್ಸಿ ಲಕ್ಷ್ಮೀಬಾಯಿಯಂಥ ಅಸಂಖ್ಯ ದೇಶಭಕ್ತರಿಂದ ಸಂಚಾಲಿತವಾದ ೧೮೫೭ರ ಸ್ವಾತಂತ್ರ್ಯ ಸಂಗ್ರಾಮವೇ ಎಂಬುದು ನಿರ್ವಿವಾದ. ಪ್ಲಾಸೀ ಕದನದ (1757) ಕಾಲದಿಂದಲೇ ಆಗಿಂದಾಗ ನಡೆದಿದ್ದ ಸ್ವಾತಂತ್ರ್ಯಪರ ಹೋರಾಟ ಚರಮಸ್ಥಿತಿ ತಲಪಿದ್ದು 1857ರಲ್ಲಿ. ರಾಜಕೀಯ ದಾಸ್ಯವಿವೋಚನೆಗಾಗಿ ಮಾತ್ರವಲ್ಲದೆ ಭಾರತದ ಸಾಂಸ್ಕ್ರತಿಕ ಅಸ್ಮಿತೆಯ ಪುನಃಸ್ಥಾಪನೆಗಾಗಿಯೂ ನಡೆದ ಅಭೂತಪೂರ್ವ ಸಂಘರ್ಷ ಅದು. 1857ರಲ್ಲಿ ನಡೆದಂಥ ಪರಿಣಾಮಕಾರಿಯೂ ರಾಷ್ಟ್ರವ್ಯಾಪಿಯೂ ಆದ ಆ ಪ್ರಮಾಣದ ಸ್ವಾತಂತ್ರ್ಯಪರ ಸಂಘರ್ಷ ಹಿಂದೆ ನಡೆದಿರಲಿಲ್ಲ. ಗದ್ದೆ ಹೊಲಗಳಿಂದ ಅರಮನೆಗಳವರೆಗೆ, ಅಂಗಡಿಮುಂಗಟ್ಟುಗಳಿಂದ ಸಾಮ್ರಾಜ್ಯಾಧಿಕಾರ ಕೇಂದ್ರದವರೆಗೆ ಆ ಸಮರದ ವ್ಯಾಪ್ತಿಯಿತ್ತು. 19ನೇ ಶತಮಾನದ ಉತ್ತರಾರ್ಧ ಹಾಗೂ 20ನೇ ಶತಮಾನದ ಮಧ್ಯಭಾಗದವರೆಗಿನ ಒಂಭತ್ತು ದಶಕಗಳ ಪರ್ಯಂತ ದೇಶದ ಉದ್ದಗಲಗಳ ಸಹಸ್ರಾವಧಿ ಹೋರಾಟಗಾರರಿಗೆ ಗಾಢ ಪ್ರೇರಣೆ ನೀಡಿದ್ದು 1857ರ ಸಂಗ್ರಾಮವೇ. ಎಂಥ ಬಲಿಷ್ಠ ವಿದೇಶೀ ಶಕ್ತಿಯೂ ಭಾರತದ ನೈಜ ಸ್ವಾತಂತ್ರ್ಯಾಕಾಂಕ್ಷೆಯನ್ನು ಹತ್ತಿಕ್ಕಲಾರದೆಂಬುದನ್ನು ಬ್ರಿಟಿಷ್ ಪ್ರಭುತ್ವಕ್ಕೆ ಮಾತ್ರವಲ್ಲದೆ ಜಗತ್ತಿಗೆ ಮನವರಿಕೆ ಮಾಡಿಸಿದ್ದು ಆ ಘಟನಾವಳಿ. ರಾಷ್ಟ್ರಸ್ವತಂತ್ರ್ಯಕ್ಕಾಗಿ 1857ರಿಂದಾರಂಭಿಸಿ ನಡೆದ ಬಲಿದಾನ -ಹೌತಾತ್ಮ್ಯ ಸರಣಿ ಜಗತ್ತಿನ ಇತಿಹಾಸದಲ್ಲೇ ಅತುಲನೀಯ. 1857ರ ಸಮರದ ೧೫೦ನೇ ವರ್ಷದ ಪಾವನ ಸ್ಮರಣೆಯ (2007) ಸಂದರ್ಭದಲ್ಲಿ ಆ ಐತಿಹಾಸಿಕ ಘಟನಾವಳಿಯ ಹಿನ್ನೆಲೆ, ಉಗಮ, ರಕ್ತತರ್ಪಣ, ಅದಮ್ಯ ಜನಸ್ಪಂದನದ ವಿವಿಧ ಮುಖಗಳ, ಪ್ರಮುಖ ಪದಚಿಹ್ನೆಗಳ ಒಂದು ಸ್ಫೂರ್ತಿದಾಐಕ ವಾಕ್ಚಿತ್ರ – ಚಕ್ರವರ್ತಿ ಸೂಲಿಬೆಲೆ ಅವರ ಓಜಃಪೂರ್ಣ ಲೇಖನಿಯಿಂದ ಮೂಡಿರುವ ಈ ಅನುಪಮ ಇತಿಹಾಸಾವಲೋಕನ.
Additional information
Weight | 224 g |
---|---|
Author(s) | |
Hard/PaperBack | |
HSN code | |
Language | |
No. of Pages | |
Publication | |
Size |
Reviews
There are no reviews yet.