{"product_id":"gandhi-hatyeya-satya","title":"Gandhi Hatyeya Satya","description":"\u003cp\u003eಸತ್ಯದ ಮಹಾಸ್ಫೋಟ\u003c\/p\u003e\n\u003cp\u003eಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೇವೆ ಎಂದು ಅಧಿಕಾರಕ್ಕೆ ಹಪಹಪಿಸಿದ ಮಹಾನ್ ಮಹಾನ್ ನಾಯಕರ ಕಣ್ಣೆದುರೇ ಭಾರತ ದೇಶ ತುಂಡಾಯಿತು. ದೇವರಿಂದ ರಚಿತವಾದ ಭಾರತವನ್ನು ಮನುಷ್ಯ ಮಾತ್ರನು ತುಂಡರಿಸಲಾರ ಎಂದಿದ್ದ ಮಹಾತ್ಮ ಗಾಂಧೀಜಿಯೇ ವಿಭಜನೆಗೆ ಒಪ್ಪಿಗೆ ಕೊಟ್ಟಿದ್ದರು.\u003c\/p\u003e\n\u003cp\u003eಸ್ವಾತಂತ್ರ್ಯ ವೀರರ ಹಾಗೂ ನಾಡಿನ ಮಹಾಜನತೆಯ ಆಶೋತ್ತರಗಳೆಲ್ಲಾ ಕಮರಿಹೋಗಿ ಮಹಾ ದುರಂತವೊಂದು ಜರುಗಿಯೇ ಹೋಯಿತು. ವೇದಗಳ ತವರೂರು ಸಿಂಧ್, ಮಾತೃಭೂಮಿಯ ಸ್ವಾತಂತ್ರ್ಯಕ್ಕೆ ನೇಣಿನ ಕುಣಿಕೆಗೆ ಮುತ್ತಿಕ್ಕಿ ನೇಣುಗಂಬವನ್ನೇರಿದ ವೀರ ಭಗತ್ಸಿಂಗ್ನ ಜನ್ಮಸ್ಥಳ ಲಾಹೋರ್ ಪರಕೀಯವಾಯಿತು.\u003c\/p\u003e\n\u003cp\u003e‘ನೆಹರು ಮತ್ತು ಪಟೇಲ್ಗೆ ನಮ್ಮ ಕಡೆಯಿಂದ ಈ ಟ್ರೈನ್ ಸ್ವಾತಂತ್ರ್ಯದ ಉಡುಗೊರೆ’ ಎಂದು ರೈಲಿನ ಬೋಗಿಗೆ ಬೋರ್ಡ್ ತೂಗುಹಾಕಿ, ಹಿಂದೂ-ಸಿಖ್ಖರ ಹೆಣಗಳನ್ನು ರೈಲಿನಲ್ಲಿ ತುಂಬಿ ಪಾಕಿಸ್ತಾನ ಭಾರತಕ್ಕೆ ಕಳುಹಿಸಿತ್ತು. ಒಂದು ವರದಿಯಂತೆ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಅಮಾಯಕರು ಬಲಿಯಾದರು.\u003c\/p\u003e\n\u003cp\u003eಇದರೊಂದಿಗೆ ಗಾಂಧಿಹತ್ಯೆ! ಗಾಂಧಿ ಹತ್ಯೆಗೆ ಗೋಡ್ಸೆ ಒಂದು ನೆಪಮಾತ್ರ! ಆದರೆ ಹತ್ಯೆಗೆ ಕಾರಣವಾದದ್ದು ಮತಾಂಧರ ಘೋರ ಹಿಂಸಾಚಾರದಲ್ಲಿ ನೊಂದು-ಬೆಂದು ಅಳಿದುಳಿದ ಕೋಟಿ ಕೋಟಿ ನಿರಾಶ್ರಿತರ ಆಕ್ರೋಶಭರಿತ ಆರ್ತನಾದ! ಈ ಎಲ್ಲಾ ನೋವುಗಳ ಅಂತರಂಗದ ಬಹಿರಂಗವೇ ‘ಗಾಂಧಿ ಹತ್ಯೆಯ ಸತ್ಯ’ ನಾಟಕ, ಸತ್ಯದ ಮಹಾಸ್ಫೋಟ!!\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":47494379634772,"sku":"AP-167","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-167-1.png?v=1786453116","url":"https:\/\/www.ayodhyabooks.com\/products\/gandhi-hatyeya-satya","provider":"Ayodhya Books","version":"1.0","type":"link"}