{"product_id":"samavedada-antharanga","title":"Samavedada Antharanga","description":"\u003cp\u003eಸಾಮವೇದದ ಅಂತರಂಗ ಈ ಪುಸ್ತಕದಲ್ಲಿ 32 ಅಧ್ಯಾಯಗಳಿದ್ದು, ಮೂರು ಭಾಗಗಳಲ್ಲಿ ವಿಭಾಗಿಸಲಾಗಿದೆ. ಮೊದಲನೆಯ ಭಾಗದ 10 ಅಧ್ಯಾಯಗಳು, ಮಂತ್ರಗಳು, ಋಷಿಗಳು, ಅನುವಾದಕರು, ಉಪನಿಷತ್ತು ಮತ್ತು ಯಜ್ಞಯಾಗಾದಿಗಳೊಂದಿಗೆ ಸಂಬಂಧ ಇತ್ಯಾದಿಗಳ ಕುರಿತು ಸಾಮಾನ್ಯ ತಿಳುವಳಿಕೆಯನ್ನು ನೀಡುತ್ತವೆ.ಎರಡನೆಯ ಭಾಗವು, ಸಾಮವೇದದ ಹಾಗೂ ಸಂಗೀತದ ಕೆಲವು ಅಂಶಗಳ ಸಂಬಂಧವನ್ನು ವಿವರಿಸುತ್ತದೆ. ಈ ಗ್ರಂಥದಲ್ಲಿನ ವಿಷಯಗಳು ಹೊಸತು ಅಲ್ಲವಾದರೂ ಸಂಬಂಧಿತ ವಿಷಯಗಳ ಸಂಕ್ಷಿಪ್ತ ನಿರೂಪಣೆಯೇ ಈ ಪುಸ್ತಕದ ವಿಶೇಷತೆಯಾಗಿದೆ.ಈ ಪುಸ್ತಕದ 19ನೆಯ ಅಧ್ಯಾಯವು ವಿಶಿಷ್ಟವೂ ಕುತೂಹಲಕಾರಿಯೂ ಆಗಿದೆ. ಏಕೆಂದರೆ ಮುಂತೋಚ್ಚಾರಣೆಯ ಸಂದರ್ಭದಲ್ಲಿ ಸ್ವರೋಚ್ಚಾರಣೆಯಲ್ಲಿನ ತಪ್ಪುಗಳನ್ನು ಕಂಡುಹಿಡಿಯಲು ಸಾರ್ವತ್ರಿಕವಾಗಿ ಮುಂದುವರಿದ ಗಣಿತಶಾಸ್ತ್ರದ ತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ.13 ಅಧ್ಯಾಯಗಳನ್ನು ಹೊಂದಿರುವ ಮೂರನೆಯ ಭಾಗದಲ್ಲಿ, ಸಾಮವೇದ ಮಂತ್ರಗಳೊಂದಿಗೆ ಸಂಯೋಜಿಸಲಾಗಿರುವ ವಿವಿಧ ದೇವತೆಗಳ ಮನವ್ಯಾಗಾದಿ ರಶ್ಮಿಗಳು, ಮಂತ್ರಗಳು ಮತ್ತು ಅವುಗಳಿಗೆ ಸಂಬಂಧಿಸಿದ ಅರ್ಥಗಳನ್ನು ನೀಡಲಾಗಿದೆ. ಈ ಮಂತ್ರಗಳ ಹಿಂದೆ ಇರುವ ಅರ್ಥಗಳ ಸಾಂಕೇತಿಕತೆಯು ಒಂದು ಅವಿಭಾಜ್ಯ ಅಂಗವೆಂಬುದನ್ನು ತಿಳಿಸಲಾಗಿದೆ. ಈ ದೇವತೆಗಳೊಂದಿಗೆ ಸಂಯೋಜಿಸಲಾಗಿರುವ - ಸಂಕಲ್ಪ-ಶಕ್ತಿ, ವಿಚಾರಗಳಲ್ಲಿನ ಸ್ಪಷ್ಟತೆ, ಪ್ರೇರಣೆ - ಇವುಗಳನ್ನು ಈ ಮಂತ್ರಗಳ ಮೂಲಕ ವೃದ್ಧಿಗೊಳಿಸಿಕೊಳ್ಳಬಹುದು. ಈ ಪ್ರಕ್ರಿಯೆಯಲ್ಲಿ ಮಂತ್ರ-ಶಬ್ದಗಳ ಅರ್ಥವನ್ನು ಮತ್ತು ಅವುಗಳ ಅಂತರಾರ್ಥಗಳನ್ನು ಅರಿತುಕೊಳ್ಳುವುದು ತುಂಬ ಸಹಾಯಕಾರಿ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":47338245652564,"sku":null,"price":75.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/SamaVeda.png?v=1783584940","url":"https:\/\/www.ayodhyabooks.com\/products\/samavedada-antharanga","provider":"Ayodhya Books","version":"1.0","type":"link"}