You are currently viewing ಇವರುಗಳ ಕಥೆ ಓದುತ್ತ ಹೋದಾಗ ಮರುಕ ಹುಟ್ಟದೇ ಇರಲು ಅಸಾಧ್ಯ! – ‘ಉಟ್ಟ ಬಟ್ಟೆಯಲ್ಲಿ… ‘ ಕೃತಿಯ ಬಗ್ಗೆ ರೂಡಿ ದೀಕ್ಷಿತರ ವಿಮರ್ಶೆ

ಇವರುಗಳ ಕಥೆ ಓದುತ್ತ ಹೋದಾಗ ಮರುಕ ಹುಟ್ಟದೇ ಇರಲು ಅಸಾಧ್ಯ! – ‘ಉಟ್ಟ ಬಟ್ಟೆಯಲ್ಲಿ… ‘ ಕೃತಿಯ ಬಗ್ಗೆ ರೂಡಿ ದೀಕ್ಷಿತರ ವಿಮರ್ಶೆ

ಇತ್ತೀಚಿಗೆ ನಾನು ಓದಿದ ಪುಸ್ತಕ “ಉಟ್ಟಬಟ್ಟೆಯಲಿ ಹೊರಟು ಬಂದವರು”. ಹೆಸರೇ ಹೇಳುವಂತೆ , ಉಟ್ಟ ಬಟ್ಟೇಲಿ, ನಿಂತ ನೀರಲ್ಲಿ , ಪ್ರಾಣ ಉಳಿಸಿಕೊಳ್ಳಲು ಬಂದವರ ನೋವಿನ ಕಥೆ. ಬರಿ ಒಂದು ಕಥೆಯಲ್ಲ , ಹಲವಾರು ಕಥೆಗಳು.

ಈ ಪುಸ್ತಕ ಓದಿದ ಮೇಲೇನೆ ನಂಗೆ , ಟಿಬೆಟಿಯನ್ನರು ಬಿಟ್ಟು ಬೇರೆ ದೇಶದವರು  ಕೂಡ ಕರ್ನಾಟಕದಲ್ಲಿ ವಲಸೆ ಹೂಡಿದ್ದಾರೆ ಎಂದು ಗೊತ್ತಾಗಿದ್ದು. ಟಿಬೇಟ್ನವರು ಹೇಗೆ ಕನ್ನಡ ಕಲಿತು ಬೆರೆಯಲು ನೋಡಿದ್ದರೋ ಹಾಗೇನೇ ಇವರು ಕೂಡ ಕನ್ನಡ ಕಲಿತು ನಮ್ಮಲ್ಲಿ ಬೆರೆತುಹೋಗಿದ್ದಾರೆ.

ಈ ಬೇರೆ ದೇಶದವರು ಬೇರೆ ಯಾರು ಅಲ್ಲ , ಅಂದಿನ ಪೂರ್ವ ಪಾಕಿಸ್ತಾನದಿಂದ ಗುಳೆ ಹೋರಾಟ ಹಿಂದೂಗಳು. ಪೂರ್ವ ಪಾಕಿಸ್ತಾನದ ಹಿಂದೂಗಳು , ೧೯೭೧ ಯುದ್ಧಕ್ಕೆ ಮುಂಚೆಯೇ ಅಲ್ಲಿನ ಇಸ್ಲಾಂ ಮೂಲಭೂತವಾದಿಗಳ ಕಿರುಕುಳ ಹಾಗು ಕ್ರೌರ್ಯಕ್ಕೆ ಬೆದರಿ ಕಾಲ್ನಡಿಗೆಯಲ್ಲಿ ಭಾರತಕ್ಕೆ ವಸಲೆ ಬಂದು ನಿರಾಶ್ರಿತರಾದರು. ಬಂದವರನ್ನು ಭಾರತದ ಹಲವಾರು ಕಡೆ ಕ್ಯಾಂಪ್ಗಳಲ್ಲಿ ವಸತಿ ಕಲ್ಪಿಸಲಾಯಿತು. ಕರ್ನಾಟಕದ ಸಿಂಧನೂರ್ ನಲ್ಲಿ ಒಂದು ಕ್ಯಾಂಪ್ ಮಾಡಲಾಯಿತು. ಉಟ್ಟಬಟ್ಟೆಯಲಿ , ಈ ಕ್ಯಾಂಪ್ನಲ್ಲಿ ನೆಲೆಸಿದವರ ಕಥೆ.

ಇವರುಗಳ ಕಥೆ ಓದುತ್ತ ಹೋದಾಗ ಮರುಕ ಹುಟ್ಟದೇ ಇರಲು ಅಸಾಧ್ಯ. ಅಲ್ಲಿ ಜಮೀನ್ದಾರರು , ಇಲ್ಲಿ ಒಂದು ತುತ್ತು ಅನ್ನಕ್ಕೆ ಒದ್ದಾಡುವ ಪ್ರಸಂಗ. ಅಲ್ಲಿ ಸ್ವಂತ ಮನೆ ಮಸೀದಿ ಆಗೋಯ್ತು , ಇಲ್ಲಿ ತಲೆಮೇಲೊಂದು ಸುರು ಅಷ್ಟೇ. ಅಲ್ಲಿ ಮನೆಯಲ್ಲ ಆಳುಕಾಳುಗಳು , ಇಲ್ಲಿ ತಾವೇ ಆಳು. ಒಂದೇ ಸಲಕ್ಕೆ ಜೀವನ ಬುಡಮೇಲಾದಾಗ ಆಗುವ ನೋವು ತಳಮಳ , ಮುಂದೆ ಹೇಗೋ ತಿಳಿಯದ ಅತಂತ್ರ ಸ್ಥಿತಿ.

ಇಲ್ಲಿ ನೆಲೆಸಿ ಸುಮಾರು ೫೦ ವರುಷದ ಹತ್ತಿರವಾದರು , ಎಷ್ಟೋ ಜನಕ್ಕೆ ಭಾರತದ ಪೌರತ್ವ ಸಿಕ್ಕಿಲ್ಲ. ಇಲ್ಲಿಗೆ ಬಂದಾಗ ವಯಸ್ಸಿನ ತರುಣರು , ಈಗ ಜೀವನ ಯಾತ್ರೆ ಮುಗಿಸೋ ವಯಸ್ಸು , ಆದರೆ ಇನ್ನು ವಲಸಿಗ .. ಅಲ್ಲಿಯೂ ಇಲ್ಲ , ಇಲ್ಲಿಯೂ ಇಲ್ಲ ..

ಇನ್ನು ಕೆಲವರದ್ದು ಮುರಿದು ಹೋದ ಸಂಸಾರಗಳು. ಅಣ್ಣನ್ನಲ್ಲಿ , ತಮ್ಮನಿಲ್ಲಿ , ಭೇಟಿಯಾಗಿ ದಶಕಗಳೇ ಕಳೆದಿವೆ.  ಉಟ್ಟ ಬಟ್ಟೆಯಲ್ಲಿ ಈ ರೀತಿಯ ಹಲವು ಕಥೆಗಳು ಇವೆ. ನಾವೆಲ್ಲರೂ ಇದನ್ನ ಓದಬೇಕು.

ಪುಸ್ತಕದ ಲೇಖಕರು ರೋಹಿತ್ ಚಕ್ರತೀರ್ಥ , ವಿನಾಯಕ ಭಟ್ಟ , ಗೀರ್ವಾಣಿ , ವೃಷಾಂಕ ಭಟ್ಟ . ಅಯೋಧ್ಯಾ ಪ್ರಕಾಶನ ಇದನ್ನ ಪ್ರಕಟಿಸಿದೆ. ಬೆಲೆ ರೂ. ೧೨೦.

– ರೂಡಿ ದೀಕ್ಷಿತ್
(ಕನ್ನಡ ಪುಸ್ತಕಗಳ ಓದುಗ. ಓದಿದ ಪುಸ್ತಕಗಳ ಬಗ್ಗೆ ಸಂಕ್ಷಿಪ್ತವಾಗಿ ಪರಿಚಯಾತ್ಮಕ ಬರಹ ಬರೆದು ಜಾಲತಾಣದಲ್ಲಿ ಹಂಚಿಕೊಂಡು ಉಳಿದವರನ್ನೂ ಓದಿಗೆ ಹಚ್ಚುವ ಸಹೃದಯಿ. ವೃತ್ತಿಯಲ್ಲಿ ಇಂಜಿನಿಯರ್.)