೧೯೬೫ರ ಈ ಸಮರ ನಡೆದು ೬೦ ವರ್ಷಗಳಾದುವು. ಅದರಿಂದ ಈಗಿನ ಯುವಕರಿಗೆ ಅದರ ಬಗ್ಗೆ ಅಷ್ಟಾಗಿ ತಿಳಿದಿರಲಾರದು. ಆ ಸಮರದಲ್ಲಿ ಪ್ರಧಾನಿ ಶಾಸ್ತಿçಯವರು ತೋರಿದ ದಿಟ್ಟತನ ಮತ್ತು ನಮ್ಮ ಸೈನ್ಯ ತೋರಿದ ಶೌರ್ಯ ರೋಚಕವಾದುದು. ಪಾಕಿಸ್ತಾನ ಭಾರತದ ಜುಟ್ಟಿಗೆ (ಕಾಶ್ಮೀರಕ್ಕೆ) ಕೈಹಾಕಿತು. ತಕ್ಷಣ ನಮ್ಮ ಪ್ರಧಾನಿ ಲಾಲ್ ಬಹಾದುರ್ ಶಾಸ್ತಿçಯವರು ಸೈನ್ಯವನ್ನು ಪಾಕಿಸ್ತಾನದೊಳಕ್ಕೇ ನುಗ್ಗಿಸಿ ಪಾಕ್ನ ಕೊರಳನ್ನು (ಲಾಹೋರನ್ನು) ಹಿಡಿದು ಹಿಸುಕಿದರು. ಉಸಿರು ಗಟ್ಟಿದ ಪಾಕಿಸ್ತಾನ ಭಾರತದ ಜುಟ್ಟಿಗೆ ಹಾಕಿದ್ದ ಕೈಯನ್ನು ಹಿಂದಕ್ಕೆ ತೆಗೆದುಕೊಂಡಿತು. ಅದನ್ನು ಪ್ರತಿಯೊಬ್ಬ ಭಾರತೀಯನೂ ತಿಳಿದಿರಲೇಬೇಕು. ಈ ಕೃತಿ ಹಿರಿಯರಿಗೆ ಆ ಯುದ್ಧದ ನೆನಪನ್ನು ಮತ್ತು ಕಿರಿಯರಿಗೆ ಆ ಯುದ್ಧದ ರೋಚಕತೆಯ ಅನುಭವವನ್ನು ತರುತ್ತದೆ. - ಲೇಖಕರ ನುಡಿ