"ಆಕೂತ"ದ ಬರಹಗಳು ನಮ್ಮನ್ನು ಯೋಚನೆಗೆ ಹಚ್ಚುತ್ತವೆ. ಭಾಷಾಗೊಂದಲದಂಥ ದಿನನಿತ್ಯದ ಸಮಸ್ಯೆಯನ್ನು ಮುಂದಿಟ್ಟುಕೊಂಡೂ ಲೇಖಕ ನಾರಾಯಣ ಶೇವಿರೆಯವರು ಅದರ ಪದರಗಳನ್ನು ಬಿಚ್ಚಿ ವಾಸ್ತವವನ್ನು ಕಾಣಿಸುತ್ತಾರೆ. ನಾವು ಯೋಚಿಸಬೇಕಾದ ನಿಜಸಮಸ್ಯೆ ಏನು ಎಂಬುದರ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತಾರೆ. ಹಳ್ಳಿ-ನಗರಗಳ ಸಂಬಂಧ, ಆಹಾರದ ಮಹತ್ವ, ಭಾಷಾಸಾಮರಸ್ಯ, ವ್ಯಕ್ತಿತ್ವವರ್ಧನೆ, ರಿಲಿಜನ್ ತಂದೊಡ್ಡುವ ಸಮಸ್ಯೆಗಳ ಗಂಭೀರತೆ, ಕೃಷಿ, ಸಂಪ್ರದಾಯ - ಹೀಗೆ ಹಲವು ವಿಷಯಗಳನ್ನು ಮುಟ್ಟಿ ತಟ್ಟುವ, ಹಲವುಪಟ್ಟು ಹಿಗ್ಗಿಸಿ ಸ್ಪಷ್ಟಗೊಳಿಸುವ, ಅವುಗಳೊಳಗಿನ ಸೂಕ್ಷ್ಮಗಳನ್ನು ಕಾಣಿಸುವ ಬರಹಗಳು ಇಲ್ಲಿವೆ.