ಇಲ್ಲಿ ಮೋಸಗಾರರಿದ್ದಾರೆ, ಕಳ್ಳರು-ಸುಳ್ಳರು, ದಗಲಬಾಜಿಗಳು ಇದ್ದಾರೆ. ಕೇವಲ ಕೆಟ್ಟವರು ಮಾತ್ರವಲ್ಲ, ಸತ್ಯಸಂಧರು, ಪ್ರಾಮಾಣಿಕರು, ಕಷ್ಟಸಹಿಷ್ಣುಗಳು, ವಿಧೇಯರು ಕೂಡ ಇದ್ದಾರೆ. ಮನುಷ್ಯರಂತೆಯೇ ಪ್ರಾಣಿಪಕ್ಷಿಗಳಿವೆ. ಅವು ಮಾತಾಡುತ್ತವೆ, ಯೋಚಿಸುತ್ತವೆ, ಎದುರಾಗಲಿರುವ ಅಪಾಯಗಳನ್ನು ಉಪಾಯದಿಂದ ತಪ್ಪಿಸಿಕೊಳ್ಳುತ್ತವೆ. ಕೆಲವೊಮ್ಮೆ ಮನುಷ್ಯರು ಮತ್ತು ಪಶುಪಕ್ಷಿಗಳು ವಿನಾಕಾರಣ ಸಮಸ್ಯೆಗಳಲ್ಲಿ ಸಿಕ್ಕಿ ತೊಳಲಾಡುವುದೂ ಉಂಟು. ಪ್ರತಿ ಕಥೆಯೊಳಗೊಂದು ನೀತಿ ಇದೆ, ಬದುಕುವ ರೀತಿ ಇದೆ, ಪಾಠವಿದೆ, ಫಿಲಾಸಫಿಯಿದೆ. ಭಾರತ ಮತ್ತು ಅದರ ನೆರೆಹೊರೆಯ ಹಲವು ದೇಶಗಳಲ್ಲಿ ಪ್ರಚಲಿತವಿರುವ ಕಥೆಗಳನ್ನು ಇಲ್ಲಿ ಕನ್ನಡಕ್ಕೆ ತರಲಾಗಿದೆ.