ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ -ಎಂಬ ಬಗ್ಗೆ ಪುಸ್ತಕಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಆರೋಗ್ಯ ಎಂದರೇನು? ಆರೋಗ್ಯವಂತರೆಂದು ಹೇಳಿಕೊಳ್ಳಲು ಕಾರಣವಾದ ಲಕ್ಷಣಗಳೇನು, ಮನಸ್ಸಿಗೂ ದೇಹಕ್ಕೂ ಇರುವ ಸಂಬಂಧ ಎಂಥದ್ದು , ನಾವು ಸೇವಿಸುವ ಆಹಾರ ಆರೋಗ್ಯಕ್ಕೆ ಹೇಗೆ ಜೋಡಿಸಿಕೊಂಡಿದೆ. ಆರೋಗ್ಯ ವರ್ಧನೆಗೆ ಕುಟುಂಬ-ಸಮಾಜದ ಕೊಡುಗೆ ಏನು, ಭಾರತೀಯ ದೃಷ್ಟಿಯಲ್ಲಿ ಆರೋಗ್ಯದ ಪರಿಕಲ್ಪನೆ ಏನು - ಇತ್ಯಾದಿ ಅನೇಕ ವಿಶಿಷ್ಟ ಮಾಹಿತಿಗಳನ್ನು ತುಂಬಿಕೊಂಡಿರುವ ಒಂದು ಅಪರೂಪದ ಕೃತಿಯನ್ನು ಹೆಸರಾಂತ ವೈದ್ಯ ಸಾಹಿತಿ ಡಾ ನಾ ಸೋಮೇಶ್ವರ ಬರೆದಿದ್ದಾರೆ. ಸರಳ ಮಾತುಗಳಲ್ಲಿ, ಪುಟ್ಟ ಪುಟ್ಟ ವಾಕ್ಯಗಳಲ್ಲಿ ಗಹನ ವಿಚಾರವನ್ನು ಇಲ್ಲಿ ಸುಲಲಿತವಾಗಿ ವಿವರಿಸಲಾಗಿದೆ.
ಇದು ಆರೋಗ್ಯವನ್ನು ಬಳಸುವವರ ಸ್ವಾಸ್ಥ್ಯ ಭಗವದ್ಗೀತೆ