ಅಥರ್ವ ವೇದದ ಅಂತರಂಗ: ಅಥರ್ವ ವೇದವು ವೇದಕಾಲದ ಜೀವನದ ಮತ್ತು ಸಮಗ್ರ ಮೌಲ್ಯಗಳ ಒಂದು ಮಹೋನ್ನತ ಚಿತ್ರಣವನ್ನು ನೀಡುತ್ತದೆ. ಎಲ್ಲ ಚಟುವಟಿಕೆಗಳನ್ನೂ - ಅವುಗಳಿಗೆ ಲೌಕಿಕ ಅಥವಾ ಆಧ್ಯಾತ್ಮಿಕ ಎಂಬ ಪಟ್ಟಪಟ್ಟಿ ಅಂಟಿಸದೇ - ಪರಮ ಚೈತನ್ಯವನ್ನು ಆಹ್ವಾನಿಸುವ ಕಲೆಯನ್ನು ಅದು ವಿವರಿಸುತ್ತದೆ. ಶಿಕ್ಷಣ, ಚಿಕಿತ್ಸೆಯ ಕಲೆ, ರಾಜ್ಯಡಳಿತ ಇತ್ಯಾದಿ ವಿಷಯಗಳನ್ನು ಕುರಿತಂತೆ ವೇದಕಾಲದ ದೃಷ್ಟಿಕೋನಗಳು ಮತ್ತು ಸಾಧನೆಗಳ ಕುರಿತು ಈ ಪುಸ್ತಕವು ಬೆಳಕನ್ನು ಚೆಲ್ಲುತ್ತದೆ.ಅಥರ್ವ ವೇದದಲ್ಲಿ ನಿರೂಪಿತ ವೈವಿಧ್ಯಮಯ ವಿಷಯಗಳ ನಿರೂಪಣೆ ಈ ಪುಸ್ತಕದಲ್ಲಿದೆ: ಪ್ರಜಾರಾಜ್ಯ ಪದ್ಧತಿ ಮತ್ತು ಆಡಳಿತ, ಜೀವನ ಸಂಗಾತಿಯ ಆಯ್ಕೆ ಮತ್ತು ವಿವಾಹ, ಕುಟುಂಬ ಜೀವನ, ವಾಸ್ತು, ಗೃಹ ಮತ್ತು ಗೃಹನಿರ್ಮಾಣ, ವೃತ್ತಿಗಳು ಮತ್ತು ಜಾತಿ, ಕಾಲ, ದಶಮಾಂಶ ಪದ್ಧತಿ ಮತ್ತು ಅನಂತತೆ, ಭೂಸೂಕ್ತ ಇತ್ಯಾದಿ.