"ಅತೀತ” ಮತ್ತು “ತಳಿ”, ಎರಡೂ ನಾಟಕಗಳ ವಸ್ತು; ಗಂಡಿನ ಅಹಂಕಾರ ಮತ್ತು ಹೆಣ್ಣಿನ ಅಸಹಾಯಕತೆ. ಹೆಣ್ಣು; ಪ್ರಕೃತಿ! ಆಕೆಗೆ ಎಲ್ಲವೂ ಸ್ವಂತ; ಪುರುಷನಿಗೆ ಎಲ್ಲವೂ ಸರಕೇ! ಲೂಟಿ, ಲಂಪಟತನ, ಭಂಡಬದುಕು; ಪಶ್ಚಿಮದ ಬಳುವಳಿ! ಅದೇ ನಾಗರೀಕತೆ ಅಂತ ಆಗಿ ಸಾರ, ಸ್ವಾದ ನೇಪಥ್ಯಕ್ಕೆ ಜಾರಿ, ಬಣ್ಣ, ಆಕಾರ ಮುನ್ನಲೆಗೆ ಬಂದು ಒಂದು ಅಪ್ರಯೋಜಕ, ಅಸಹಾಯಕ, ನಿರಂತರ ನಿರುತ್ಸಾಹದ, ಭಂಡ, ನಪುಂಸಕ ತಳಿಯ ಸೃಷ್ಟಿ! “ಹೆಣ್ಣು” ಮುನ್ನಲೆಗೆ ಬಂದು “ಪ್ರಕೃತಿ” ವಿಜೃಂಭಿಸಿದರೆ, ಪ್ರಾಯಶಃ ಇದು ಮತ್ತೆ ಗಂಡುಭೂಮಿ ಆದೀತೇನೋ.