ಪುರಾಣಗಳು ಹದಿನೆಂಟು ಎಂಬುದು ಗೊತ್ತು, ಆದರೆ ಅವು ಯಾವುವು, ಅವುಗಳ ವಿಷಯ ಯಾವುದು - ಗೊತ್ತಿಲ್ಲ. ಭಗವದ್ಗೀತೆ ಪರಮ ಪವಿತ್ರ ಗ್ರಂಥವೆಂದು ಗೊತ್ತು, ಆದರೆ ಅದರ ಅಧ್ಯಾಯಗಳ ಸಾರಾಂಶ - ಗೊತ್ತಿಲ್ಲ. ಹದಿನಾರು ಸಂಸ್ಕಾರಗಳಿವೆಯೆಂದೇನೋ ಗೊತ್ತು - ಆದರೆ ಯಾವ ವಯಸ್ಸಲ್ಲಿ ಯಾವ ಸಂಸ್ಕಾರ ನಡೆಯಬೇಕೆಂಬುದರ ಬಗ್ಗೆ - ಗೊತ್ತಿಲ್ಲ. ಹೀಗೆ ಹಿಂದುಗಳಿಗೆ ಗೊತ್ತಿರುವ ಸಂಗತಿಗಳಿಗಿಂತ ಗೊತ್ತಿಲ್ಲದ ವಿಷಯಗಳೇ ಅಧಿಕವಿದ್ದೀತು. ಸನಾತನ ಸಂಸ್ಕೃತಿಯಲ್ಲಿರುವ ವಿಷಯಬಾಹುಳ್ಯವೂ ಇದಕ್ಕೊಂದು ಕಾರಣ. ಹೀಗೆ ಸನಾತನಿಗಳಿಗೆ ಗೊತ್ತಿರಲೇಬೇಕಾದ, ಸದಾ ಓದಿ ಮನನ ಮಾಡಿಕೊಳ್ಳಬೇಕಾದ ಅತ್ಯಂತ ಅಗತ್ಯ, ಉಪಯುಕ್ತ ಮಾಹಿತಿಗಳನ್ನು ಒಂದೆಡೆ ಸೇರಿಸಿಕೊಡುವ ಪ್ರಯತ್ನವೇ 'ಬೊಗಸೆಯಲ್ಲಿ ಪರಂಪರೆ'. ಪ್ರತಿಯೊಬ್ಬ ಹಿಂದು ತಿಳಿದಿರಬೇಕಾದ ಹಲವು ಧಾರ್ಮಿಕ ಸಂಗತಿಗಳನ್ನು ಈ ಕಿರುಪುಸ್ತಕವು ಸಂಕ್ಷಿಪ್ತವಾಗಿ, ಆದರೆ ಮುಖ್ಯವಿಷಯವು ಬಿಟ್ಟುಹೋಗದಂತೆ ಓದುಗರಿಗೆ ಕೊಡುತ್ತದೆ. ಸಂಗ್ರಹಯೋಗ್ಯ ಪುಸ್ತಿಕೆ.