Ayodhya Publications Pvt Ltd
Endendu Baadada mallige
Endendu Baadada mallige
Couldn't load pickup availability
ಕನ್ನಡ ಸಾಹಿತ್ಯದ ದಿಗ್ಗಜಗಳಾದ ದ.ರಾ. ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ತ.ಸು. ಶಾಮರಾಯರು, ಕೆ.ಎಸ್. ನರಸಿಂಹಸ್ವಾಮಿ ಮುಂತಾದವರ ಸಾಹಿತ್ಯದ ಅವಲೋಕನವನ್ನು ಮಾಡುವ ಎಂದೆಂದೂ ಬಾಡದ ಮಲ್ಲಿಗೆ ಕೃತಿಯಲ್ಲಿ ಇಡೀ ಕನ್ನಡ ಸಾಹಿತ್ಯ ಲೋಕದ ಒಂದು ಪರಿಚಯ ಸಿಗುತ್ತದೆ. ಜಿ.ಟಿ. ನಾರಾಯಣ ರಾವ್ ಮತ್ತು ಜಿ. ವೆಂಕಟಸುಬ್ಬಯ್ಯ ಅವರ ವಿಜ್ಞಾನ ಲೇಖನಗಳ ಪರಿಚಯ ಇಲ್ಲಿದೆ. ಸಂತೋಷಕುಮಾರ ಗುಲ್ವಾಡಿಯವರ ಪತ್ರಿಕೋದ್ಯಮ ಸಾಹಸಗಳ ಬಗ್ಗೆ ಬರಹವಿದೆ. ಕೆ.ಎಸ್. ನಿಸಾರ್ ಅಹಮದ್, ಸುಬ್ರಾಯ ಚೊಕ್ಕಾಡಿ ಮುಂತಾದ ಕವಿಗಳ ಬದುಕಿನ ಚಿತ್ರಗಳಿವೆ. ಪಾ.ವೆಂ. ಆಚಾರ್ಯ ಅವರೊಂದಿಗೆ ಕಾಲ್ಪನಿಕ ಸಂದರ್ಶನ, ಯು.ಆರ್. ಅನಂತಮೂರ್ತಿ ಅವರೊಂದಿಗೆ ವಾಸ್ತವ ಸಂದರ್ಶನ - ಎರಡೂ ಇಲ್ಲಿವೆ. ಇವುಗಳ ಜೊತೆಗೆ, ಪಾಶ್ಚಾತ್ಯ ಸಾಹಿತ್ಯ ಹಾಗೂ ಕಲಾ ಜಗತ್ತಿನ ಶೇಕ್ಸ್ಪಿಯರ್, ವಿಲಿಯಂ ಬಕ್, ಗ್ರಾಚೋ, ಜಾನ್ ಹಿಗ್ಗಿನ್ಸ್ ಭಾಗವತರ್ ಮುಂತಾದ ವ್ಯಕ್ತಿಗಳ ಬದುಕಿನ ಮತ್ತು ಸಾಧನೆಯ ವಿಶಿಷ್ಟ ವಿವರಗಳನ್ನು ಈ ಕೃತಿಯು ಒಳಗೊಂಡಿದೆ. ಇದರ ಹೊರತಾಗಿ, ಚಂದಮಾಮ ಮತ್ತು ಸಂದೇಶ ಎಂಬ ಎರಡು ಮಕ್ಕಳ ಮಾಸಪತ್ರಿಕೆಗಳ ಬಗ್ಗೆ ಅತ್ಯಂತ ವಿವರಣಾತ್ಮಕ ಲೇಖನಗಳಿವೆ. ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಕುರಿತು ಒಂದು ದೀರ್ಘ ಪ್ರಬಂಧವನ್ನು ಕೃತಿಯು ಒಳಗೊಂಡಿದೆ.
Other Details
Details | Value |
---|---|
Author(s) | Rohith Chakrathirtha |
Hard_Paperback | Paperback |
ISBN | 978-81-948893-4-2 |
Publication | Ayodhya Publications Pvt Ltd |
Size | 5.5" X 8.5" |
Pages | 184 |
