ಹಾಲಿವುಡ್ ನಟ ಸಿಲ್ವೆಸ್ಟರ್ ಸ್ಟಲೋನ್, ಜಗತ್ತಿನಲ್ಲಿ ಅತಿ ಹೆಚ್ಚು ಐಕ್ಯು ಹೊಂದಿದ್ದ ವ್ಯಕ್ತಿ ವಿಲಿಯಂ ಸೈಡಿಸ್, ಕೊರಿಯದ ನಿರ್ಮಾತೃ ಪಾರ್ಕ್ ಚುಂಗ್ ಹೀ, ಕ್ಯಾನ್ಸರ್ ಇದ್ದೂ ಕೆನಡಾದ ಉದ್ದಗಲ ಮ್ಯಾರಥಾನ್ ಓಡಿದ ಟರ‍್ರಿ ಫಾಕ್ಸ್, ಮಾರಣಾಂತಿಕ ಹಲ್ಲೆಗೆ ಗುರಿಯಾದರೂ ಧೃತಿಗೆಡದೆ ಶ್ರೇಷ್ಠ ಸಂಗೀತಗಾರಳಾಗಿ ಹೆಸರು ಮಾಡಿದ ಜಾನಕೀಬಾಯಿ, ಕಮ್ಯುನಿಸ್ಟರ ಕಪಿಮುಷ್ಟಿಯಲ್ಲಿ ನಲುಗಿ ಬದುಕುಳಿದ ಪಾಲ್ದೆನ್ ಗ್ಯಾತ್ಸೋ ಮುಂತಾದ ಸ್ಫೂರ್ತಿದೇವತೆಗಳ ಚೇತೋಹಾರಿಯಾದ ಜೀವನಕಥೆಗಳಿರುವ ಹೊತ್ತಗೆ. ಬದುಕಿನಲ್ಲಿ ಭರವಸೆ ಕಳೆದುಕೊಂಡವರಿಗೆ ಕೊಡಬಹುದಾದ ಬೆಸ್ಟ್ ಗಿಫ್ಟ್.