ದ ಹೆರಿಟೇಜ್ ಎಜ್ಯುಕೇಶನ್ ಸರ್ಟಿಫಿಕೇಟ್ ಕೋರ್ಸ್ (HECC) - ಇದು ಭಾರತೀಯ ಧರ್ಮ, ಸಂಸ್ಕೃತಿ, ಪರಂಪರೆಯ ಕುರಿತು ಇರುವ ಒಂದು ವರ್ಷ ಅವಧಿಯ ಆನ್ಲೈನ್ ಕೋರ್ಸ್ ಆಗಿದ್ದು, 13 ವರ್ಷ ಅಥವಾ ಮೇಲ್ಪಟ್ಟ ಯಾರೂ ಸೇರಬಹುದು. ಕೋರ್ಸಿನಲ್ಲಿ ಭಾರತೀಯ ತತ್ತ್ವಶಾಸ್ತ್ರ, ಇತಿಹಾಸ, ಸಾಹಿತ್ಯ, ಮಾನವಶಾಸ್ತ್ರ ಇತ್ಯಾದಿ ಹಲವು ವಿಷಯಗಳನ್ನು ಅಧ್ಯಯನ ಮಾಡಲು ಅವಕಾಶವಿದ್ದು, ಇದು ಭಾರತೀಯ ಸಂಸ್ಕೃತಿ-ಪರಂಪರೆಗಳ ಬಗ್ಗೆ ಸಮಗ್ರದೃಷ್ಟಿ ಕೊಡುವ ಒಂದು ವಿಶಿಷ್ಟ ಅವಕಾಶವಾಗಿದೆ. ಒಂದು ವರ್ಷ ಅವಧಿಯ ಈ ಕೋರ್ಸಿನಲ್ಲಿ ಮೂರು ಹಂತಗಳಿವೆ.
ಪ್ರಥಮ ಹಂತ
ಪೇಪರ್ 1: ಭಾರತೀಯ ಧರ್ಮದ ಮೂಲತತ್ತ್ವಗಳು
ಆಕರ: ಹಿಂದೂಧರ್ಮ - ಅದರ ಸಾರಸರ್ವಸ್ವ (ಸ್ವಾಮಿ ನಿರ್ವೇದಾನಂದ)
ಪೇಪರ್ 2: ಭಾರತದ ಶ್ರೇಷ್ಠ ಗ್ರಂಥಗಳು
ಆಕರ: ಭಾರತೀಯ ಆಧ್ಯಾತ್ಮಿಕ ಪರಂಪರೆ (ಸ್ವಾಮಿ ಪ್ರಭವಾನಂದ) - ಅಧ್ಯಾಯ 1 ಮತ್ತು 2
ದ್ವಿತೀಯ ಹಂತ
ಪೇಪರ್ 3: ತತ್ತ್ವಶಾಸ್ತ್ರ ಪರಂಪರೆ
ಆಕರ: ಭಾರತೀಯ ಆಧ್ಯಾತ್ಮಿಕ ಪರಂಪರೆ (ಸ್ವಾಮಿ ಪ್ರಭವಾನಂದ) - ಅಧ್ಯಾಯ 3 ಮತ್ತು 4
ಪೇಪರ್ 4: ಹಿಂದೂ ದೇವ-ದೇವಿಯರು
ಆಕರ: ಹಿಂದೂ ದೇವ-ದೇವಿಯರು (ಸ್ವಾಮಿ ಹರ್ಷಾನಂದ)
ಹಿಂದೂ ಹಬ್ಬಗಳು ಮತ್ತು ಉತ್ಸವಗಳು (ಸ್ವಾಮಿ ಹರ್ಷಾನಂದ)
ತೃತೀಯ ಹಂತ
ಪೇಪರ್ 5: ತತ್ತ್ವಜ್ಞಾನಿಗಳು ಮತ್ತು ಜ್ಞಾನ
ಆಕರ: ಭಾರತೀಯ ಆಧ್ಯಾತ್ಮಿಕ ಪರಂಪರೆ (ಸ್ವಾಮಿ ಪ್ರಭವಾನಂದ) - ಅಧ್ಯಾಯ 5
ಪೇಪರ್ 6: ಹಿಂದೂ ಧರ್ಮ ಪಥ
ಆಕರ: ನಾ ಹೇಗೆ ಹಿಂದುವಾದೆ (ಡೇವಿಡ್ ಫ್ರಾಲಿ)
ಧರ್ಮ ಎಂದರೇನು? (ಸ್ವಾಮಿ ವಿವೇಕಾನಂದ)