Ayodhya Publications Pvt Ltd
kanneera-kanive
kanneera-kanive
Couldn't load pickup availability
ರಾಹುಲ್ ಮ್ಯಾಗಝಿನ್, ಸ್ವರ್ಗಸದೃಶ ಕಾಶ್ಮೀರವೆಂಬ ತನ್ನ ತಾಯ್ನೆಲದಲ್ಲಿ ಮೂರು ಮಹಡಿಗಳ ಹದಿನೆಂಟು ಕೊಠಡಿಗಳ ವಿಶಾಲ ಭವ್ಯ ಮನೆಯಲ್ಲಿ ವಾಸವಿದ್ದರು. ಅದೊಂದು ದಿನ ಇದ್ದಕ್ಕಿದ್ದಂತೆ ಎಲ್ಲವೂ ಬದಲಾಗಿಹೋಯಿತು. ರಾಹುಲರಂತೆ ಕಾಶ್ಮೀರದ ತೊಟ್ಟಿಲಿನಿಂದ ಲಕ್ಷಾಂತರ ಪಂಡಿತರನ್ನು ಹೊರಹಾಕಿ ಬೀದಿಪಾಲು ಮಾಡಲಾಯಿತು. ತನ್ನದೇ ದೇಶದಲ್ಲಿ ಕಾಶ್ಮೀರಿ ಪಂಡಿತ ಅನಾಥನಂತೆ, ಅಬ್ಬೇಪಾರಿಯಾಗಿ ನಿಂತಿದ್ದ. ಆತನ ಬದುಕು ಅಕ್ಷರಶಃ ಧೂಳೀಪಟವಾಗಿತ್ತು. ಮುಸ್ಲಿಂ ಜೆಹಾದಿಗಳ ದರ್ಪಕ್ಕೆ ತತ್ತರಿಸಿದ ಒಂದು ಶಾಂತ, ಸಹೃದಯ, ವಿದ್ಯಾವಂತ ಸಮುದಾಯದ ಹೃದಯವಿದ್ರಾವಕ ಯಾತನೆಯನ್ನು ಅದರ ಪ್ರತ್ಯಕ್ಷದರ್ಶಿಯಾಗಿದ್ದ ರಾಹುಲ್ ಈ ಕೃತಿಯಲ್ಲಿ ಹಸಿಹಸಿಯಾಗಿ ವರ್ಣಿಸಿದ್ದಾರೆ. ಹೇಗೆ ಇಸ್ಲಾಮೀ ಕ್ರೌರ್ಯವು ಹಿಂದೂಗಳನ್ನು ಕಾಶ್ಮೀರದಲ್ಲಿ ಆಹುತಿ ತೆಗೆದುಕೊಂಡಿತು, ಹೇಗೆ ಸರಕಾರಗಳು ಈ ಹಿಂಸಾಚಾರವನ್ನು ನಿರ್ವಿಣ್ಣವಾಗಿ ನೋಡುತ್ತ ನಿಂತಿದ್ದವು, ಕಾಶ್ಮೀರಿ ಪಂಡಿತರು ತಮ್ಮ ಬದುಕುಗಳನ್ನು ಕಟ್ಟಿಕೊಳ್ಳಲು ಹೇಗೆ ಹೆಣಗಬೇಕಾಯಿತು ಎಂಬ ವಿವರಗಳನ್ನು 'ಕಣ್ಣೀರ ಕಣಿವೆ' ಕೃತಿಯು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ. 'And The Valley Remained Silent' ಕೃತಿಯನ್ನು ಉದಯಕುಮಾರ್ ಹಬ್ಬು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.
Other Details
Details | Value |
---|---|
Author(s) | Rahul Magazine, Udaykumar Habbu |
Hard_Paperback | Paperback |
ISBN | 9789348731883 |
Publication | Ayodhya Publications Pvt Ltd |
Size | 5.5" X 8.5" |
Pages | 252 |
