ಗೋಕುಲದಲ್ಲಿ ಆಡಿಬೆಳೆದ ಕೃಷ್ಣನನ್ನು ಕಂಸನ ಮಥುರೆಗೆ ಕರೆದೊಯ್ದ ಅಕ್ರೂರ ತನ್ನ ಜೀವನದುದ್ದಕ್ಕೂ ಕೃಷ್ಣನ ಸಖನಾಗಿ, ಹಿರಿಯನಾಗಿ, ಹಿತೈಷಿಯಾಗಿ ಉಳಿದರೂ ಆತನಿಗೆ ಕೃಷ್ಣನ ಪೂರ್ತಿ ವ್ಯಕ್ತಿತ್ವದ ಅಳತೆ ಸಿಗಲಿಲ್ಲ. ಅಕ್ರೂರ ಯಾದವಕುಲದ ಉತ್ಥಾನದ ದಿನಗಳನ್ನು ಹೇಗೋ ಹಾಗೆಯೇ ಅದರ ಪರ್ಯಾವಸಾನದ ದಿನಗಳನ್ನೂ ಕಂಡ. ಅಧಿಕಾರ, ಹಣ ತರುವ ಜವಾಬ್ದಾರಿಯನ್ನೆಂತೋ ಅಂತೆಯೇ ಮದ, ದರ್ಪ, ಅಹಂಕಾರದ ಚರಮ ಬಿಂದುವನ್ನು ಕೂಡ ಕಂಡವನು ಅಕ್ರೂರ. ಯಕ್ಷಗಾನದ ಹಿನ್ನೆಲೆಯೂ ಇರುವ ಕನ್ನಡ ವಿದ್ವಾಂಸರಾದ ಕಾದಂಬರಿಕಾರರು ಇಡಿಯ ಕೃಷ್ಣಾವತಾರದ ಕತೆಯನ್ನು ಅಕ್ರೂರನ ಕಣ್ಣಿನಿಂದ ಕಾಣಿಸುವ ವಿಶಿಷ್ಟ ಪ್ರಯೋಗ ಮಾಡಿದ್ದಾರೆ.