ನಮ್ಮ ಜೀವನವೇ ಒಂದು ಕುರುಕ್ಷೇತ್ರ. ಎಲ್ಲ ಮಾನವರೂ ಅರ್ಜುನನಂತೆ ಬಾಹ್ಯ ಶತ್ರುವಿನೊಂದಿಗೆ ಯುದ್ಧಮಾಡದೇ ಇದ್ದರೂ, ಬೇರೆ ಬೇರೆ ಕಾರ್ಯಕ್ಷೇತ್ರಗಳಲ್ಲಿ ನಿರತರಾಗಿರುವಾಗ ಅರ್ಜುನನ ಮನಸ್ಸಿನಲ್ಲಿ ಯಾವ ಪ್ರಶ್ನೆಗಳೆದ್ದವೋ, ಅವನು ಯಾವ ದುಃಖಕ್ಕೆ ಈಡಾದನೋ, ಅವನು ಯಾವ ಧರ್ಮಸಂಕಟಕ್ಕೆ ಒಳಗಾದನೋ, ಅದನ್ನು ನಾವೆಲ್ಲ ಒಂದಲ್ಲ ಒಂದು ದಿನ ಅನುಭವಿಸುವೆವು. ಶ್ರೀಕೃಷ್ಣ ಪಾರ್ಥನಿಗೆ ಮಾತ್ರ ಸಾರಥಿಯಲ್ಲ. ಎಲ್ಲ ಜೀವರ ರಥಕ್ಕೆ ಸಾರಥಿ ಅವನು. ಅವನನ್ನು ನಂಬಿ ನಮ್ಮ ಜೀವನ ರಥವನ್ನು ಮುಂದುವರಿಸಿದರೆ ಅವನು ನಮ್ಮನ್ನು ಸಂಶಯಗಳಿಂದ ಪರಿಹರಿಸಿ ಕಷ್ಟನಷ್ಟಗಳ ಕೋಟಲೆಯಿಂದ ಮೇಲೆತ್ತಿ ಶಾಶ್ವತ ಸಚ್ಚಿದಾನಂದವನ್ನು ನೀಡುವೆನೆಂದು ಭರವಸೆ ಕೊಟ್ಟಿರುವನು. ಶ್ರೀಕೃಷ್ಣ ಇಡೀ ಮಾನವಕೋಟಿಗೆ ಎಲ್ಲಾ ಕಾಲಕ್ಕೂ ಎಲ್ಲಾ ದೇಶಕ್ಕೂ ಕೊಟ್ಟ ಭರವಸೆಯನ್ನೊಳಗೊಂಡಿದೆ ಶ್ರೀಮದ್ಭಗವದ್ಗೀತಾ.
Note: This is also a reference book for Ayodhya champs Bhagavad Gita Exam general category.