ಕೆಲವರು ಸ್ವಯಂನಿರ್ಮಿತರು ಇದ್ದಾರು. ಅವರಿಗೂ ಸುತ್ತಲಿನ ವ್ಯಕ್ತಿಗಳು, ಪರಿಸರ ಇತ್ಯಾದಿಗಳು ಪೂರಕವೇ ಇರುವುದು ಅವಶ್ಯ. ವಿರೋಧದ ಕೆಚ್ಚಿನಿಂದ ತಯಾರಾಗುವಾಗ ಕೂಡಾ ಸ್ವಯಂನಿರ್ಮಿತರಿಗೆ ಹಲವರ ಸಹಾಯ ಮತ್ತು ಪೂರಕ ವಾತಾವರಣ ಇದ್ದೇ ಇರುತ್ತದೆ. ಇಂಥ ಕೆಚ್ಚು ಭರಿಸುವ ಪರಕೀಯ ದುರುಳರ ಕ್ರೂರಪ್ರಭುತ್ವದ ಅಟ್ಟಹಾಸ ಮತ್ತು ಎಂಥ ಕೆಚ್ಚಿನ ಸನ್ನಿವೇಶಕ್ಕೂ ಏನೂ ನಡೆದೇ ಇಲ್ಲವೇನೋ ಎಂಬAತೆ ಶಾಂತವಾಗಿ ಸ್ಪಂದಿಸುವ ಸಮಾಜದ ಹೀನಸ್ಥಿತಿ - ಇವೆರಡು ಅತಿಗಳ ಸಂಗಮಸAದರ್ಭದಲ್ಲಿ ಜೀಜಾಬಾಯಿಯೂ ಉಗಮಿಸಿದಳು ಮತ್ತವಳ ಹೊಟ್ಟೆಯಲ್ಲಿ ಶಿವಾಜಿಯೂ ಉದಯಿಸಿದ.