'ಮಕ್ಕಳ ಸ್ಕೂಲ್ ಮನೇಲಲ್ವೆ?' ಎಂಬೊಂದು ಮಾತಿದೆ. ಶಿಕ್ಷಣ ಎಂದರೆ ಶಾಲೆ, ಕಾಲೇಜು, ಯೂನಿವರ್ಸಿಟಿ, ಕಪ್ಪುಗುಚ್ಚಿನ ಟೋಪಿ, ಸರ್ಟಿಫಿಕೇಟು ಎಂಬ ಸಿದ್ಧಮಾದರಿಯೊಂದು ನಮ್ಮ ಕಣ್ಮುಂದೆ ನಿಲ್ಲುತ್ತದೆ. ಆದರೆ ನಿಜವಾದ ಶಿಕ್ಷಣ ಎಂದರೇನು? ಅದರ ಮೂಲಭೂತ ಅಂಶಗಳೇನು? ಮಕ್ಕಳಿಗೆ ನಾವು ನಿಜಕ್ಕೂ ಕಲಿಸಬೇಕಿರುವುದೇನು? ಕಲಿಕೆಯ ಪ್ರಕ್ರಿಯೆ ಹೇಗೆ ನಡೆಯಬೇಕು? ಈ ಎಲ್ಲ ವಿಚಾರಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ ಬೀಜರೂಪದಲ್ಲಿ ಸಂಗ್ರಹಮಾಡಿ ಕೊಟ್ಟಿರುವ ಕೃತಿ "ಮಕ್ಕಳ ಶಿಕ್ಷಣ". ಇದು ಕೇವಲ ಓದಿ ಕೆಳಗಿಡುವ ಪುಸ್ತಕವಲ್ಲ, ಓದಿ ಧ್ಯಾನಿಸಬೇಕಾದ ಪುಸ್ತಕ!