ಶ್ರೀ ಶ್ರೀಧರ ಸ್ವಾಮಿಗಳು ನಿಜಕ್ಕೂ ದಂತಕಥೆ. ಅದೆಷ್ಟು ಪವಾಡಗಳನ್ನು ಮಾಡಿದರೋ, ಎಲ್ಲಾ ಶಕ್ತಿಯನ್ನೂ ತಮ್ಮ ಕಮಂಡಲದೊಳಗಿನ ತೀರ್ಥದಲ್ಲಿಯೇ ಇಟ್ಟುಕೊಂಡಿದ್ದರೋ ಏನೋ! ಕಾಯಿಲೆಯಿಂದ ಮುಕ್ತರಾದವರು, ಬಡತನದಿಂದ ಮೇಲೆ ಬಂದವರು, ಅಜ್ಞಾನದ ಕೂಪದಿಂದ ಮೇಲೆದ್ದವರು, ಕ್ರೂರತನ ಬಿಟ್ಟು ಕರುಣಾಮಯಿಗಳಾದವರು ಅದೆಷ್ಟು ಸಾವಿರ ಮಂದಿಯೋ. ಗುರು ಭಗವಾನರು ಎಲ್ಲರನ್ನೂ ಕೈ ಹಿಡಿದು ಕಾಪಾಡಿದರು. ಪರಮತವನ್ನು ಗೌರವಿಸುವುದರೊಂದಿಗೆ, ಸ್ವಧರ್ಮವನ್ನು ಎತ್ತಿ ಹಿಡಿದರು.ಸ್ವಾಮಿಗಳ ಜೀವನದಲ್ಲಿ ಹಿರಿಯರಿಗೆ ಮಾತ್ರವಲ್ಲದೆ ಮಕ್ಕಳಿಗೂ ಪಾಠವಿದೆ.