Ayodhya Publications Pvt Ltd
Muttajjiya Paakshale
Muttajjiya Paakshale
Couldn't load pickup availability
ಮುತ್ತಜ್ಜಿಯ ಪಾಕಶಾಲೆ, ಅಯೋಧ್ಯಾ ಪ್ರಕಾಶನದ ೧೫ನೆಯ ಪ್ರಕಟಿತ ಕೃತಿ. ಸುಮಾರು ೬ ದಶಕಗಳ ಹಿಂದೆ ಸರಸ್ವತಮ್ಮ ಎಂಬವರು ಬರೆದಿಟ್ಟ ಅಡುಗೆ ರೆಸಿಪಿಗಳ ಸಂಗ್ರಹ ಇದು. ಮೂಲತಃ ತಮಿಳುನಾಡಿನವರಾದ, ವಿವಾಹವಾಗಿ ಕೋಲಾರದಲ್ಲಿ ನೆಲೆಸಿದ ಸರಸ್ವತಮ್ಮ ಬಹುಮುಖಪ್ರತಿಭೆ. ತುಂಬಿತುಳುಕುವ ಜೀವನೋತ್ಸಾಹವಿದ್ದ ಗಟ್ಟಿಗಿತ್ತಿ. ಅವರು ಮಾಡುತ್ತಿದ್ದ ಅಡುಗೆ-ತಿಂಡಿ ಇಡೀ ಕುಟುಂಬದ ಫೇವರಿಟ್. ಕುಟುಂಬದ ಚಿಕ್ಕಮಕ್ಕಳು ಈ ಕೋಲಾರಜ್ಜಿಯ ಕೈರುಚಿಯನ್ನು ಸವಿಯಲೆಂದೇ ಬೇಸಗೆ ರಜೆಗಳನ್ನು ಎದುರುನೋಡುತ್ತಿದ್ದರು. ಸರಸ್ವತಮ್ಮನವರು ತಮ್ಮ ಮಕ್ಕಳ ಕೈಯಲ್ಲಿ ಬರೆಸಿಟ್ಟ ರೆಸಿಪಿ ಪುಸ್ತಕ, ೬೦ ವರ್ಷಗಳ ನಂತರ ಇದೀಗ ಪುಸ್ತಕರೂಪ ಕಾಣುತ್ತಿದೆ. ಪಲ್ಯ, ಗೊಜ್ಜು, ಅನ್ನದ ವೈವಿಧ್ಯ, ಸಾರು-ಸಾಂಬಾರು, ಅಡುಗೆ ಪುಡಿಗಳು, ಖಾರದ ತಿನಿಸು, ಸಿಹಿಭಕ್ಷಗಳು... ಹೀಗೆ ಯಾವೊಂದನ್ನೂ ಬಿಡದೆ ಷಡ್ರಸಗಳ ಭೂರಿಭೋಜನವನ್ನು ಓದುಗ ಇಲ್ಲಿ ಸವಿಯಬಹುದು.
Other Details
Details | Value |
---|---|
Author(s) | Saraswathamma |
Hard_Paperback | Paperback |
ISBN | 978-81-948893-8-0 |
Publication | Ayodhya Publications Pvt Ltd |
Size | 5.5" X 8.5" |
Pages | 84 |
