Skip to product information
1 of 1

Ayodhya Publications Pvt Ltd

Naraadhamara Naduve

Naraadhamara Naduve

Regular price Rs. 60.00
Regular price Sale price Rs. 60.00
Sale Sold out

Language version

ಮಲಯಾಳಂ ಲೇಖಕ ಎಸ್. ಮಹಾದೇವನ್ ತಂಬಿಯವರ ಕಾದಂಬರಿಯನ್ನು ಡಾ. ಮೀನಾಕ್ಷಿ ರಾಮಚಂದ್ರ ಕನ್ನಡಕ್ಕೆ ತಂದಿದ್ದಾರೆ. ಗಾತ್ರದ ದೃಷ್ಟಿಯಿಂದ ಇದು ಸಣ್ಣ ಕೃತಿ. ಆದರೆ ಇದಕ್ಕೊಂದು ಐತಿಹಾಸಿಕ ಮಹತ್ವವಿದೆ. "ಕಾಶ್ಮೀರ್ ಫೈಲ್ಸ್"ನಂಥ ಸಿನೆಮಗಳು ತೆರೆಕಾಣುವುದಕ್ಕೆ ದಶಕದಷ್ಟು ಮೊದಲೇ ಮಲಯಾಳಂನಲ್ಲಿ ಪ್ರಕಟವಾಗಿ ಕನ್ನಡದಲ್ಲಿ ಭಾಷಾಂತರವಾಗಿದ್ದ ಕೃತಿ ಇದು. ಕಾಶ್ಮೀರ ಹೇಗೆ ನಮ್ಮ ಕೈತಪ್ಪುತ್ತಹೋಯಿತು ಎಂಬುದನ್ನು ಕೆಲವೇ ಕೆಲವು ಪುಟಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಲೇಖಕರು ಇಲ್ಲಿ ವಿವರಿಸಿದ್ದಾರೆ. ಹೇಳಬೇಕಾದ್ದೆಲ್ಲವೂ ಇಲ್ಲಿ ಸೂತ್ರರೂಪದಲ್ಲಿ ಬಂದುಹೋಗಿವೆ. ಇಲ್ಲಿ ಮೂರ್ನಾಲ್ಕು ಸಾಲುಗಳಲ್ಲಿ ಬಂದುಹೋಗಿರುವ ಹಿಂಸೆಯ ವಿವರಗಳನ್ನೇ ಬೇಕಿದ್ದರೆ ಒಂದಿಡೀ ಪುಸ್ತಕವಾಗಿ ಬರೆಯಬಹುದು. ಅಷ್ಟು ಸಾಂದ್ರವಾಗಿದೆ ಇಲ್ಲಿನ ಭಾಷೆ, ಕಥೆ.
ಇತ್ತೀಚೆಗೆ ಮಾಜಿ ಕಾಂಗ್ರೆಸ್ಸಿಗ ಗುಲಾಂ ನಬಿ ಆಜಾದ್ "ಕಾಶ್ಮೀರದಲ್ಲಿರುವ ಮುಸಲ್ಮಾನರೆಲ್ಲ ಮೂಲತಃ ಹಿಂದುಗಳೇ" ಎಂಬ ಮಾತು ಹೇಳಿದ್ದಾರೆ. ವೃದ್ಧನಾರೀ ಪತಿವ್ರತಾ ಎಂಬಂತಾಗಿದೆ! ಜೀವನವೆಲ್ಲ ಸುಳ್ಳು ಹೇಳಿ, ಇದೀಗ ಇಳಿವಯಸ್ಸಲ್ಲಿ ನಿಜ ಉಸುರಿದರೆ ಪ್ರಯೋಜನ ಏನು? ಆಜಾದ್ "ಕಾಶ್ಮೀರದಲ್ಲಿದ್ದವರೆಲ್ಲ ಭಾರತೀಯರೇ. ಹೊರಗಿನಿಂದ ಯಾರೂ ಬರಲಿಲ್ಲ" ಎಂಬ ಸುಳ್ಳನ್ನೂ ಆ ಮಾತಿನೊಂದಿಗೆ ಸೇರಿಸಿದ್ದಾರೆ. ಕಾಶ್ಮೀರವನ್ನು ನರಕ ಮಾಡಲು ಪಾಕಿಸ್ತಾನ, ಅಫಘಾನಿಸ್ತಾನಗಳಿಂದ ಸಾವಿರ-ಲಕ್ಷ ಸಂಖ್ಯೆಯಲ್ಲಿ ಹೊರಗಿನವರು ಬಂದು ತುಂಬಿಕೊಂಡರು; ಕಾಶ್ಮೀರಿ ಪಂಡಿತರನ್ನು ಈ ಪರಕೀಯರು ಇನ್ನಿಲ್ಲದಂತೆ ಕಾಡಿ ಒಕ್ಕಲೆಬ್ಬಿಸಿದರು; ಆಗ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರಕಾರವಾಗಲೀ ಕಾಶ್ಮೀರದಲ್ಲಿದ್ದ ಸ್ಥಳೀಯ ಸರಕಾರವಾಗಲೀ ಪಂಡಿತಜನಾಂಗದ ಪರವಾಗಿ ಒಂದಕ್ಷರದ ಬೆಂಬಲವನ್ನೂ ಸೂಚಿಸಲಿಲ್ಲ ಎಂಬುದು ಇತಿಹಾಸದ ಸತ್ಯ. ಕಾಶ್ಮೀರದ ಮಣ್ಣಿನಲ್ಲಿ ಲಕ್ಷಾಂತರ ಹಿಂದುಗಳ ಮಾರಣಹೋಮದ ನೋವಿನ ಕತೆಗಳಿವೆ. ಹಿಂದುಗಳ ಹೆಣಗಳ ಮೇಲೆ ಮಹಲುಗಳನ್ನು ಕಟ್ಟಿಕೊಂಡ ಇಲ್ಲಿನ ಮತಾಂಧರಿಗೆ ಪಶ್ಚಾತ್ತಾಪದ ಲವಲೇಶವೂ ಇಲ್ಲವೆಂಬುದು ರಾಷ್ಟ್ರೀಯ ದುರಂತಗಳಲ್ಲೊಂದು.

View full details

Other Details

Details Value
Author(s) Dr. Meenakshi Ramachandra
Hard_Paperback Paperback
ISBN 9789391852627
Publication Ayodhya Publications Pvt Ltd
Size 5.5" X 8.5"
Pages 44