ನಮ್ಮ ಪುರಾಣ-ಇತಿಹಾಸದ ಪುಟಗಳನ್ನು ಒಂದಷ್ಟು
ತಮ್ಮದೇ ನೋಟದಲ್ಲಿ ನೋಡುವವರಿದ್ದಾರೆ. ಅಂಥ ಕೆಲವರಿಗೆ
ರಾವಣ ದುರ್ಯೋಧನ ಮಹಿಷಾದಿಗಳು
ನಾಯಕರಾಗುತ್ತಾರೆ. ತಮ್ಮೊಳಗಿನ ರಾವಣತ್ವಕ್ಕೆ ಇತಿಹಾಸದ
ರಾವಣನ ಸಮರ್ಥನೆ. ಮತ್ತು ಧರ್ಮದ ಹೆಸರಿನಲ್ಲಿ
ನಡೆಯುತ್ತದೆ ಈ ಸಮರ್ಥನೆ. ಧರ್ಮಾಧರ್ಮಗಳು
ಒಬ್ಬನೊಳಗೇ ಹೀಗೂ ಇರಬಲ್ಲದೆಂಬುದಕ್ಕೆ ನಮ್ಮಲ್ಲಿಯ
ಸಾಹಿತಿಗಳೂ ಪುಡಾರಿಗಳೂ ಇದೀಗ ಹೀಗೆ ಸಾಕ್ಷಿಯಾಗಿದ್ದಾರೆ.
ಇಲ್ಲಿ ಮತ್ತೂ ಒಂದು ಸಾಧ್ಯತೆ ಇದೆ ನೋಡಿ. ಅದು;
ಧರ್ಮಿಷ್ಠನನ್ನು ಅಧರ್ಮಿಯೆಂದು ಗುರುತಿಸುವುದು
ಮತ್ತು ಅಧರ್ಮಿಯನ್ನು ಧರ್ಮಿಷ್ಠನೆಂದು
ಗುರುತಿಸುವುದು. ಪ್ರತಿಯೊಬ್ಬನೂ ತನ್ನನ್ನು
ಧರ್ಮಿಷ್ಠನೆಂದೇ ಗುರುತಿಸುವ ಮತ್ತು ತನ್ನ
ವಿರೋಧಿಯನ್ನು ಅಧರ್ಮಿಯೆಂದು ಗುರುತಿಸುವ ಒಂದು
ಪರಿ ಇದೀಗ ಅನುಭವಕ್ಕೆ ಬರುತ್ತಿದೆ.
ಕೌರವನು ಸ್ವಭಾವತಃ ದುಷ್ಟನೇ ಆದರೂ ಅಧರ್ಮವನ್ನು
ಬಿಡಲಾಗದು ಎನ್ನುವ ಆತನ ಮಾತಲ್ಲಿರುವುದು
ಅಸಹಾಯಕತೆ. ಧರ್ಮದ ಕುರಿತ ಆತನ ಇಂಥ
ಅಸಹಾಯಕತೆಗಿAತ ಅಧರ್ಮದ ಕುರಿತ ಆಧುನಿಕರ
ಅಪ್ರಾಮಾಣಿಕತೆ ಹೆಚ್ಚು ಅಪಾಯಕಾರಿ.